ಮೀನದಲ್ಲಿ ಗುರು; ಮೂರು ರಾಶಿಗಳಿಗೆ ರಾಜಹಂಸ ಯೋಗ!

ಇಂದು ವಿಶೇಷ ದಿನ. ಶುಕ್ರ ಗ್ರಹವು ಮೀನದಿಂದ ಮೇಷಕ್ಕೆ ಪ್ರವೇಶಿಸುತ್ತಿದೆ. ಇದೇ ಸಂದರ್ಭದಲ್ಲಿ ಗುರು ಗ್ರಹವು ತನ್ನದೇ ರಾಶಿಯಾದ ಮೀನದಲ್ಲಿ ಇರಲಿದೆ.  ಇದರಿಂದ ಕೆಲ ರಾಶಿಗಳಿಗೆ ಹಂಸ ಯೋಗ ಪ್ರಾರಂಭವಾಗುತ್ತಿದೆ. 

Jupiter in Pisces hans yog in 3 zodiac sign from 23 May 2022 skr

ಜ್ಯೋತಿಷ್ಯದ ಪ್ರಕಾರ ಯಾವಾಗ ಗ್ರಹ(Planet)ವೊಂದು ತನ್ನ ಪಥ ಬದಲಿಸಿದರೂ ಅದರಿಂದ ಮಾನವನ ಜೀವನದ ಮೇಲೆ ಪರಿಣಾಮಗಳು ನೇರವಾಗಿ ಉಂಟಾಗುತ್ತವೆ. ಇದರೊಂದಿಗೆ ಗ್ರಹಗಳ ಚಲನೆಯು ಕೆಲ ವ್ಯಕ್ತಿಗಳಿಗೆ ರಾಜ ಯೋಗ(Raj yog)ವನ್ನೂ ತರುತ್ತವೆ. ಇಂದು, ಮೇ 23ರಂದು ಶುಕ್ರ ಗ್ರಹ(Venus)ವು ಮೀನ(Pisces)ವನ್ನು ಬಿಟ್ಟು ಮೇಷಕ್ಕೆ ಪ್ರವೇಶಿಸುತ್ತಿದೆ. ಇದೇ ಸಂದರ್ಭದಲ್ಲಿ ದೇವರೆಲ್ಲರ ಗುರು ಎನಿಸಿಕೊಂಡಿರುವ ಗುರು(Jupiter) ಗ್ರಹವು ತನ್ನದೇ ರಾಶಿಯಾದ ಮೀನದಲ್ಲಿ ಕುಳಿತಿದ್ದು, 23ರಂದು ಅತ್ಯಂತ ಶುಭ ಸ್ಥಾನಕ್ಕೆ ಬರುತ್ತಿದ್ದಾನೆ. 

ಒಂದು ವೇಳೆ ಗುರುವು ವ್ಯಕ್ತಿಯ ಜಾತಕದ ಕೇಂದ್ರ ಭಾಗದಲ್ಲಿದ್ದರೆ ಅಂದರೆ ನಾಲ್ಕನೇ, ಏಳನೇ, ಹತ್ತನೇ ಮತ್ತು ಅವನ ಸ್ವಂತ ರಾಶಿಯಾದ ಮೀನ, ಧನು ಅಥವಾ ಅವನ ಉಚ್ಛ ರಾಶಿಯಾದ ಕರ್ಕಾಟಕದಲ್ಲಿ ಲಗ್ನದಲ್ಲಿದ್ದರೆ, ಹಂಸ ಯೋಗ(Hans Yoga)ವು ರೂಪುಗೊಳ್ಳುತ್ತದೆ. ಈ ಯೋಗದ ರಚನೆಯು 3 ರಾಶಿಚಕ್ರ ಚಿಹ್ನೆಗಳ ಜನರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಈ ರಾಶಿಚಕ್ರದ ಚಿಹ್ನೆ(Zodiac signs)ಗಳು ಯಾವುವು ಎಂದು ತಿಳಿಯೋಣ.
 
ಮಿಥುನ ರಾಶಿ(Gemini): ನಿಮ್ಮ ಜಾತಕ(horoscope)ದಲ್ಲಿ ಗುರು ಗ್ರಹವು ಹತ್ತನೇ ಮನೆಯಲ್ಲಿ ಸ್ಥಿತರಾಗಿರುವುದರಿಂದ ನಿಮ್ಮ ಜಾತಕದಲ್ಲಿ ಹಂಸ ಎಂಬ ರಾಜಯೋಗವು ರೂಪುಗೊಳ್ಳುತ್ತಿದೆ. ಆದ್ದರಿಂದ, ಈ ಅವಧಿಯಲ್ಲಿ ನೀವು ಬಹಳ ಶಕ್ತಿಯನ್ನು ಪಡೆಯಬಹುದು. ಗುರುವು ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ನೀಡಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಅದೇ ಸಮಯದಲ್ಲಿ, ಕೆಲಸ ಮಾಡುತ್ತಿರುವವರು, ಬಡ್ತಿ(promotion) ಅಥವಾ ಇನ್ಕ್ರಿಮೆಂಟ್ ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದಲ್ಲಿ ಬದಲಾವಣೆಯಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯವು ಅನುಕೂಲಕರವಾಗಿರುತ್ತದೆ.

ಶುಕ್ರ ಗೋಚಾರ 2022: ಮೇ 23ರಿಂದ ಈ ರಾಶಿಗಳ ಅದೃಷ್ಟದ ದಿನಗಳು ಶುರು

ಕನ್ಯಾ ರಾಶಿ(Virgo): ಗುರುವು ನಿಮ್ಮ ರಾಶಿಯ ಏಳನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇದನ್ನು ವೈವಾಹಿಕ ಜೀವನ(married life) ಮತ್ತು ಪಾಲುದಾರಿಕೆಯ ಮನೆ ಎಂದು ಕರೆಯಲಾಗುತ್ತದೆ. ಗುರುವಿನ ಈ ನಡೆಯಿಂದಾಗಿ ನಿಮ್ಮ ಜಾತಕದಲ್ಲಿ ಹಂಸ ಎಂಬ ರಾಜಯೋಗವು ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ನೀವು ಪಡೆಯಬಹುದು. ಅಲ್ಲದೆ, ಪಾಲುದಾರಿಕೆ ಕೆಲಸದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಅಥವಾ ನೀವು ಪಾಲುದಾರಿಕೆ ಕೆಲಸವನ್ನು ಮಾಡಲು ಬಯಸಿದರೆ, ಈ ಸಮಯದಲ್ಲಿ ಪ್ರಾರಂಭಿಸಬಹುದು. ಮತ್ತೊಂದೆಡೆ, ಅವಿವಾಹಿತರು ಈ ಸಮಯದಲ್ಲಿ ಮದುವೆಯ ಪ್ರಸ್ತಾಪವನ್ನು ಪಡೆಯಬಹುದು.

ಈ 5 ರಾಶಿಯವರಿಗೆ ಮದುವೆ ಬಗ್ಗೆ ಆಸಕ್ತಿ ಅಷ್ಟಕ್ಕಷ್ಟೇ!

ಧನು ರಾಶಿ(Sagittarius): ಗುರು ಗ್ರಹವು ನಿಮ್ಮ ರಾಶಿಯ ನಾಲ್ಕನೇ ಮನೆಯಲ್ಲಿ ಸಾಗುತ್ತಿದೆ, ಇದು ಸಂತೋಷ ಮತ್ತು ತಾಯಿಯ ಸ್ಥಾನ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ನೀವು ತಾಯಿ(mother)ಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅಲ್ಲದೆ, ನೀವು ತಾಯಿಯ ಸಹಾಯದಿಂದ ಹಣವನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ಭೌತಿಕ ಆನಂದವನ್ನು ಸಹ ಪಡೆಯುತ್ತೀರಿ. ಇದರೊಂದಿಗೆ ಈ ರಾಶಿಯ ಜನರು ಈ ಸಮಯದಲ್ಲಿ ವಾಹನಗಳು, ಭೂಮಿ, ಕಟ್ಟಡಗಳು ಇತ್ಯಾದಿಗಳನ್ನು ಖರೀದಿಸುವ ಸಂಭಾವ್ಯತೆ ಜಾಸ್ತಿ ಇದೆ. ಶನಿಯ ಸಾಡೇಸಾತಿಯಿಂದಲೂ ನಿಮಗೆ ಮುಕ್ತಿ ಸಿಕ್ಕಿದೆ. ಆದ್ದರಿಂದ ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios