ರಾಣಿ ಡಯನಾ ಸಾವು, ಕೋವಿಡ್ ಆಗಮನದ ಭವಿಷ್ಯವನ್ನು ನಿಖರವಾಗಿ ಹೇಳಿ ಭಾರಿ ಸಂಚಲನ ಸೃಷ್ಟಿಸಿದ್ದ ಜ್ಯೋತಿಷಿ ಇದೀಗ 2025ರ ಜುಲೈ ತಿಂಗಳಲ್ಲಿ ನಡೆಬಹುದಾದ ಅತೀ ದೊಡ್ಡಗಂಡಾಂತರದ ಭವಿಷ್ಯ ನುಡಿದಿದ್ದಾರೆ. ಏನದು ಜುಲೈ 2025ರ ಭವಿಷ್ಯ?
ಟೋಕಿಯೋ(ಏ.04) ಕಾಡ್ಗಿಚ್ಚು, ಪ್ರವಾಹ, ಭೂಕಂಪ ಸೇರಿದಂತೆ ಹಲವು ಪ್ರಾಕೃತಿಕ ವಿಕೋಪಗಳು ಸಂಭವಿಸಿದೆ. ಪ್ರತಿ ದಿನ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ. ಇದರ ನಡುವೆ ಖ್ಯಾತ ಜ್ಯೋತಿಷಿ ನುಡಿದ ಭವಿಷ್ಯ ಮತ್ತೆ ಭಯದ ವಾತಾವರಣ ನಿರ್ಮಾಣ ಮಾಡಿದೆ.ರಾಣಿ ಡಯಾನಾ ಸಾವು, ಕೋವಿಡ್ ಆಗಮನ ಸೇರಿದಂತೆ ಹಲವು ಭವಿಷ್ಯವನ್ನು ನಿಖರವಾಗಿ ಹೇಳಿದ ಜಪಾನ್‌ನ ಜ್ಯೋತಿಷಿ ರ್ಯೋ ಟಾಟ್ಸುಕಿ ಇದೀಗ 2025ರ ಜುಲೈ ತಿಂಗಳಲ್ಲಿ ನಡೆಯಬಹುದಾದ ಘಟನೆ ಕುರಿತ ಭವಿಷ್ಯ ನುಡಿದಿದ್ದಾರೆ. 2025ರ ಜುಲೈ ತಿಂಗಳಲ್ಲಿ ಸುನಾಮಿ ಅಬ್ಬರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ಒಂದು ಪ್ರದೇಶಕ್ಕೆ ಸೀಮಿತವಾದ ಸುನಾಮಿಯಲ್ಲ ಎಂದಿದ್ದಾರೆ.
ಎಲ್ಲೆಲ್ಲಿ ಸುನಾಮಿ?
ರ್ಯೋ ಟಾಟ್ಸುಕಿ ಹೇಳಿದ ಭವಿಷ್ಯದ ಪ್ರಕಾರ 2025ರ ಜುಲೈ ತಿಂಗಳಳಲ್ಲಿ ಅತೀ ದೊಡ್ಡ ಸುನಾಮಿ ಎದುರಾಗಲಿದೆ. ಇದು 2011ರಲ್ಲಿ ಜಪಾನ್ ಕಂಡ ಸುನಾಮಿಗಿಂತ 3 ಪಟ್ಟೂ ದೊಡ್ಡದಾಗಿರಲಿದೆ. ಜಪಾನ್, ಫಿಲಿಪೈನ್ಸ್, ತೈವಾನ್, ಇಂಡೋನೇಷಿಯಾ ಸೇರಿದಂತೆ ಹಲವು ಕಡಲ ತೀರ ಪ್ರದೇಶಗಳಿಗೆ ಇದು ಅಪ್ಪಳಿಸಲಿದೆ. ಇದು ಅಪಾರ ನಾಶಕ್ಕೆ ಕಾರಣವಾಗಲಿದೆ ಎಂದು ರ್ಯೋ ಟಾಟ್ಸುಕಿ ಹೇಳಿದ್ದಾರೆ.
ಇಂದಿನಿಂದ 3 ದಿನ ಮಳೆ; ಈ ಭಾಗದಲ್ಲಿ ಯೆಲ್ಲೋ ಅಲರ್ಟ್; ಮನೆಯಿಂದ ಹೊರ ಹೋಗುವಾಗ ಕೈಯಲ್ಲಿರಲಿ ಛತ್ರಿ!
ಜುಲೈ 2025ಕ್ಕೂ ಮುನ್ನವೇ ಈಗಾಗಲೇ ಸುನಾಮಿ ಭೀತಿ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಥಾಯ್ಲೆಂಡ್ ಹಾಗೂ ಬ್ಯಾಂಕಾಕ್‌ನಲ್ಲಿ ಈಗಾಗಲೇ ಭೂಕಂಪನವಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಭವಿಷ್ಯ ಜನರ ನೆಮ್ಮದಿ ಕೆಡಿಸಿದೆ.
ರ್ಯೋ ಟಾಟ್ಸುಕಿ ಹಿಂದೆ ನುಡಿದ ಭವಿಷ್ಯ
ರ್ಯೋ ಟಾಟ್ಸುಕಿ ಬೀಳುತ್ತಿದ್ದ ಕನಸು ಕೆಲ ದಿನಗಳಲ್ಲಿ ನಿಜವಾಗುತ್ತಿತ್ತು. ಹೀಗಾಗಿ ತಾವು ಕಂಡ ಕನಸುಗಳನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳಲು ಆರಂಭಿಸಿದ್ದರು. 1997ರಲ್ಲಿ ಬರೆದ ಡೈರಿಯಲ್ಲಿದ್ದ ಹಲವು ಭವಿಷ್ಯಗಳು ನಿಜವಾಗಿದೆ. 1999ಲ್ಲಿ ಈ ಡೈರಿ ಆಧರಿಸಿ ಮಂಗಾ ಅನ್ನೋ ಪುಸ್ತಕವೂ ಬಿಡುಗಡೆಯಾಗಿದೆ. ಆಗಸ್ಟ್ 31, 1992ರಲ್ಲಿ ರ್ಯೋ ಟಾಟ್ಸುಕಿ ರಾಣಿ ಡಯಾನಾ ಕುರಿತು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ನುಡಿದ 5 ವರ್ಷಗಳ ಬಳಿಕ ಆಗಸ್ಟ್ 31, 1997ರಲ್ಲಿ ಡಯಾನ ನಿಧನರಾಗಿದ್ದರು.
ಕೋವಿಡ್ ಕುರಿತು ತಮ್ಮ ಡೈರಿಯಲ್ಲಿ ಬರೆದ ಸ್ಫೋಟಕ ಮಾಹಿತಿ 2020ರಲ್ಲಿ ನಿಜವಾಗಿತ್ತು. 1997-1999ರ ಸುಮಾರಿನಲ್ಲಿ ಬರೆದ ಡೈರಿಯಲ್ಲಿ ಈ ಸ್ಫೋಟಕ ಭವಿಷ್ಯ ಉಲ್ಲೇಖಿಸಲಾಗಿತ್ತು. ಮುಂದಿನ 25 ವರ್ಷದಲ್ಲಿ ಯಾರೂ ಕೇಳಿದರ ವೈರಸ್ ಅಪ್ಪಳಿಸಲಿದೆ. ಇದು ಎಪ್ರಿಲ್ ತಿಂಗಳಲ್ಲಿ ಮತ್ತಷ್ಟು ರೌದ್ರರೂಪ ತಾಳಲಿದೆ. ಇದೈ ವೈರಸ್ 10 ವರ್ಷಗಳ ಬಳಿಕ ಮತ್ತೆ ಬರಲಿದೆ ಎಂದೂ ಎಚ್ಚರಿಸಿದ್ದಾರೆ. ರ್ಯೋ ಟಾಟ್ಸುಕಿ ನುಡಿದಂತೆ 2020ರಲ್ಲಿ ಕೋವಿಡ್ ಅಪ್ಪಳಿಸಿತ್ತು. ಏಪ್ರಿಲ್ ತಿಂಗಳಲ್ಲಿ ತೀವ್ರ ರೂಪ ತಾಳಿತ್ತು.
ರ್ಯೋ ಟಾಟ್ಸುಕಿ ನುಡಿದ ಬಹುತೇಕ ಭವಿಷ್ಯಗಳು ನಿಜವಾಗಿದೆ.ಇದರ ನಡುವೆ ಸುನಾಮಿ ಎಚ್ಚರಿಕೆ ನೀಡಿದ್ದಾರೆ. ಸದ್ಯ ಒಂದಲ್ಲ ಒಂದು ಭಾಗದಲ್ಲಿ ಎದುರಾಗುತ್ತಿರುವ ಪ್ರಾಕೃತಿಕ ವಿಕೋಪಗಳ ಆಧಾರದಲ್ಲಿ ನೋಡಿದರೆ ರ್ಯೋ ಟಾಟ್ಸುಕಿ ಹೇಳಿದ ಈ ಭವಿಷ್ಯದ ಕುರಿತು ಚರ್ಚೆ ಜೋರಾಗುತ್ತಿದೆ. ನಿಜವಾಗುತ್ತಾ, ಅಥವಾ ಸುಳ್ಳಾಗುತ್ತಾ? ಪ್ರಮಾಣ ಕಡಿಮೆ ಇರುತ್ತಾ ಅನ್ನೋ ಚರ್ಚೆಗಳು ನಡೆಯುತ್ತಿದೆ.
