Asianet Suvarna News Asianet Suvarna News

Astrology Tips: ಮಕ್ಕಳಿಗೆ ಗಣಿತ ಬರ್ತಿಲ್ವಾ? ಈ ಉಪಾಯ ಮಾಡಿ

ಬೇರೆಲ್ಲ ಸಬ್ಜೆಕ್ಟ್ ನಲ್ಲಿ ನೂರಕ್ಕೆ ನೂರು ಅಂಕ ತೆಗೆದುಕೊಳ್ಳುವ ಮಕ್ಕಳು ಗಣಿತವೆಂದ್ರೆ ದೂರ ಓಡೋದಿದೆ. ಎಷ್ಟೇ ಮಾಡಿದ್ರೂ ಮ್ಯಾಥ್ಸ್ ತಲೆಗೆ ಹತ್ತಲ್ಲ ಎನ್ನುವ ಮಕ್ಕಳು ನಿಮ್ಮವರಾಗಿದ್ರೆ ಅದಕ್ಕೊಂದು ಟಿಪ್ಸ್ ಇದೆ. 
 

If Your Kid Is Weak In Math Or Studies Then Do Mercury Remedies To Cure Them roo
Author
First Published Oct 13, 2023, 1:10 PM IST

ಮಕ್ಕಳ ಪರೀಕ್ಷೆ ಹತ್ತಿರ ಬರ್ತಿದ್ದಂತೆ ಪಾಲಕರಿಗೆ ತಲೆನೋವು ಶುರುವಾಗುತ್ತದೆ. ಈಗ ಹೇಳಿಕೊಟ್ಟ ಉತ್ತರವನ್ನು ಮಗು ಮರೆತಿರುತ್ತದೆ. ಅದೆಷ್ಟೇ ತಿದ್ದಿ ಹೇಳಿ, ಅದೆಷ್ಟೆ ಬೈದು ಹೇಳಿ ಕೆಲ ಮಕ್ಕಳಿಗೆ ಗಣಿತ ತಲೆಯಲ್ಲಿ ನಿಲ್ಲೋದಿಲ್ಲ. ಇನ್ನು ಕೆಲ ಮಕ್ಕಳಿಗೆ ಓದಿದ್ದು ಅರೆ ಕ್ಷಣದಲ್ಲಿ ಮರೆತಿರುತ್ತದೆ. ಮಕ್ಕಳಿಗೆ ಯಾವುದೂ ನೆನಪಿನಲ್ಲಿರೋದಿಲ್ಲ, ಹೆಚ್ಚಿನ ಅಂಕಪಡೆಯುತ್ತಿಲ್ಲ ಎಂದ ಮಾತ್ರಕ್ಕೆ ಮಕ್ಕಳು ದಡ್ಡರು ಎಂದಲ್ಲ. ಇದಕ್ಕೆಲ್ಲ ಕಾರಣ ಅವರ ಜಾತಕದಲ್ಲಿರುವ ದೋಷ. 

ಜಾತಕ (Horoscope) ವನ್ನು ನಾವು ಕನ್ನಡಿ ಎನ್ನಬಹುದು. ಅದು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ಇಂದು – ನಾಳೆಗಳನ್ನು ಪ್ರತಿಬಿಂಬಿಸುತ್ತದೆ. ಜಾತಕದಲ್ಲಿ ಎಲ್ಲ ಗ್ರಹ (Planet) ಗಳು ಸರಿಯಾದ ಸ್ಥಾನದಲ್ಲಿದ್ದರೆ ಯಾವುದೇ ಸಮಸ್ಯೆ ಕಾಡುವುದಿಲ್ಲ. ಮಕ್ಕಳು ಹೇಳಿದ್ದನ್ನು ನೆನಪಿಟ್ಟುಕೊಳ್ಳುವುದಲ್ಲದೆ, ಎಲ್ಲ ಮಕ್ಕಳಿಗಿಂತ ಹೆಚ್ಚು ಬುದ್ಧವಂತರಂತೆ ವರ್ತಿಸುತ್ತಾರೆ. ಅದೇ ಜಾತಕದಲ್ಲಿ ಗ್ರಹಗಳ ದೋಷವಿದ್ದಾಗ ಸಮಸ್ಯೆ ಶುರುವಾಗುತ್ತದೆ. ಅದ್ರಲ್ಲೂ ಬುಧ (Mercury) ಗ್ರಹ ಸರಿಯಾದ ಸ್ಥಾನದಲ್ಲಿಲ್ಲವೆಂದ್ರೆ ಮಕ್ಕಳು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸಲು ಶುರು ಮಾಡುತ್ತಾರೆ. 

ಕನಸಿನಲ್ಲಿ ಆನೆ ಕಾಣಿಸಿಕೊಂಡರೆ ಸಂಪತ್ತು ಗ್ಯಾರೆಂಟಿ,ಬೇಗನೇ ಶ್ರೀಮಂತರಾಗುತ್ತೀರಿ..!

ಜ್ಯೋತಿಷ್ಯದಲ್ಲಿ  ಬುಧ ಗ್ರಹವನ್ನು ದೇವರುಗಳ ಸಂದೇಶವಾಹಕ ಎಂದು ಪರಿಗಣಿಸಲಾಗುತ್ತದೆ. ಬುಧವು ಸೂರ್ಯನಿಗೆ ಹತ್ತಿರದ ಗ್ರಹವಾಗಿದೆ. ಭಾರತೀಯ ಸಂಪ್ರದಾಯದಲ್ಲಿ, ಬುಧ ಗ್ರಹವು ಬುದ್ಧಿವಂತಿಕೆಯ ಪೂರೈಕೆದಾರ ಎಂದು ಹೇಳಲಾಗುತ್ತದೆ. ಈ ಗ್ರಹವು ವ್ಯಕ್ತಿಯ ತಾರ್ಕಿಕ ಶಕ್ತಿಗೆ ಸಂಬಂಧಿಸಿದೆ. ಬುಧವು ನಿಮ್ಮ ಬುದ್ಧಿವಂತಿಕೆ ಅಥವಾ ಮನಸ್ಸಿನ ಅಂಶವಾಗಿದೆ. ಜಾತಕದಲ್ಲಿ ಬುಧ ಗ್ರಹವು ದುರ್ಬಲವಾಗಿದ್ದಾಗ, ಬುದ್ಧಿವಂತಿಕೆ ದುರ್ಬಲವಾಗುತ್ತದೆ ಅಥವಾ ಸ್ಮರಣಶಕ್ತಿ ದುರ್ಬಲವಾಗುತ್ತದೆ. ಯಾವುದೇ ವ್ಯಕ್ತಿ ಗಣಿತದಲ್ಲಿ ಹಿಂದಿದ್ದಾನೆ, ಲೆಕ್ಕ ಮಾಡುವ ಸಾಮರ್ಥ್ಯ ಕಡಿಮೆ ಇದೆ ಎಂದಾದ್ರೆ ಆತನ ಜಾತಕದಲ್ಲಿ ಬುಧ ದುರ್ಬಲವಾಗಿದ್ದಾನೆ ಎಂದೇ ಅರ್ಥ ಮಾಡಿಕೊಳ್ಳಿ. 

ಸೂರ್ಯ ಚಂದ್ರ ಒಂದೇ ರಾಶಿಯಲ್ಲಿ ,ಈ ರಾಶಿಯವರಿಗೆ ಭಾರೀ ಅದೃಷ್ಟ

ಗಣಿತ, ಕಾಮರ್ಸ್ ಅಥವಾ ಸಂಖ್ಯಾತ್ಮಕ ಲೆಕ್ಕಾಚಾರಕ್ಕೆ ಬುಧನನ್ನು ಮಹತ್ವ ಅಂಶವೆಂದು ಪರಿಗಣಿಸಲಾಗುತ್ತದೆ. ಬುಧ ಮತ್ತು ಚಂದ್ರ ಎರಡೂ ಗ್ರಹಗಳ ದುರ್ಬಲ ಸ್ಥಾನದಿಂದಾಗಿ  ನಿಮ್ಮ ಮಗು ಅಧ್ಯಯನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆಗ ಮಕ್ಕಳಿಗೆ ಗಣಿತದ ಸೂತ್ರಗಳು ನೆನಪಿಲ್ಲ ಉಳಿಯುವುದಿಲ್ಲ. ಗಣಿತದ ಪರಿಹಾರ ಏನೆಂದು ಅರ್ಥವಾಗುವುದಿಲ್ಲ. ಒಂದ್ವೇಳೆ ನಿಮ್ಮ ಮಗುವೂ ಈ ಎಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನೀವು ಮೊದಲು ಅವರ ಬುಧಗ್ರಹವನ್ನು ಬಲಗೊಳಿಸುವ ಪ್ರಯತ್ನ ನಡೆಸಬೇಕು. ಬುಧ ನೀಚ ಸ್ಥಾನದಲ್ಲಿದ್ದರೆ ವ್ಯಕ್ತಿಯ ಜೀವನದ ಮೇಲೆ ಇನ್ನೂ ಅನೇಕ ಅಶುಭ ಪರಿಣಾಮ ಉಂಟಾಗುತ್ತದೆ.  

ಗಣಿತ, ವಿದ್ಯೆ ಮಾತ್ರವಲ್ಲ, ಜಾತಕದಲ್ಲಿ ಬುಧ ದೋಷವಿರುವ ವ್ಯಕ್ತಿಯ  ಮಾತನಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದಾಗಿ ಅವರು ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ವ್ಯಕ್ತಿ ವಿಶ್ವಾಸ ಕಳೆದುಕೊಳ್ಳುತ್ತಾನೆ. ಇತರರಿಗೆ ತನ್ನನ್ನು ಹೋಲಿಸಿಕೊಂಡು, ತನ್ನನ್ನು ತಾನೇ ಕಡಿಮೆ ಎಂದು ಅಂದಾಜು ಮಾಡಲು ಪ್ರಾರಂಭಿಸುತ್ತಾನೆ. ಬುಧ ದೋಷದಿಂದ ಚರ್ಮ ರೋಗಗಳೂ ಬರಬಹುದು.

 ಬುಧ ಗ್ರಹ ಬಲಗೊಳ್ಳಲು ಏನು ಮಾಡಬೇಕು? : 
• ಬುಧವಾರದಂದು ಗಣೇಶನ ಮಂತ್ರಗಳನ್ನು ಪಠಿಸಿ.
• ವಿದ್ಯೆಯನ್ನು ಪಡೆಯಲು ಬಯಸುವ ಮಂತ್ರವಾದ ʻವಿದ್ಯಾರ್ಥಿ ಲಭತೇ ವಿದ್ಯಾಂ, ಧನಾರ್ಥಿ ಲಭತೇ ಧನಂ, ಪುತ್ರಾರ್ಥಿ ಲಭತೇ ಪುತ್ರಾನ್ ಮೋಕ್ಷಾರ್ಥಿ ಲಭತೇ ಗತಿಮ್  ಮಂತ್ರ ಜಪಿಸಿ.
• ಹಸಿರು ತರಕಾರಿಗಳು, ಹಸಿರು ಬೇಳೆಕಾಳುಗಳು ಮುಂತಾದ ಹಸಿರು ವಸ್ತುಗಳನ್ನು ಬುಧವಾರ ದಾನ ಮಾಡಿ.
•  ಮನೆಯ ಮುಂದೆ ವಿಶಾಲ ಎಲೆಯ ಮರಗಳನ್ನು ನೆಡುವುದ್ರಿಂದ ನೀವು ಬುಧನಿಗೆ ಸಂಬಂಧಿಸಿದ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ನೀವು ಮಾವು, ಅಶೋಕ, ಆಲದ ಮರವನ್ನು ನೆಡಬಹುದು.
• ಬುಧ ದೋಷವನ್ನು ತೊಡೆದುಹಾಕಲು ಪಚ್ಚೆ ಅಥವಾ ಮಾರ್ಗಜ ರತ್ನವನ್ನು ಧರಿಸಬೇಕು. ಅವುಗಳನ್ನು ಧರಿಸುವ ಮೊದಲು, ಸರಿಯಾಗಿ ಪೂಜೆ ಮಾಡಿ ಧರಿಸಲು ಮರೆಯಬಾರದು. 

Follow Us:
Download App:
  • android
  • ios