ದೇವರ ಸ್ವರೂಪ ಬಯಲಾಯಿತು, ಸಂಶೋಧಕರಿಂದ ಬಹಿರಂಗವಾಯ್ತು ಫೋಟೋ!
ದೇವರ ಆಕಾರ, ರೂಪದ ಬಗ್ಗೆ ಸದಾ ಚರ್ಚೆಯಾಗ್ತಿರುತ್ತದೆ. ನಾವು ನಂಬಿರುವ ದೇವರ ಬಗ್ಗೆ ನಮ್ಮದೇ ಒಂದು ಕಲ್ಪನೆ ಇದೆ. ಈ ಎಲ್ಲ ಕಲ್ಪನೆಗೆ ಆಕಾರ ನೀಡುವ ಪ್ರಯತ್ನವನ್ನು ಸಂಶೋಧಕರು ಮಾಡಿದ್ದಾರೆ.
ವಿಶ್ವದಲ್ಲಿ ಅನೇಕ ಧರ್ಮ, ಪಂಗಡದ ಜನರಿದ್ದಾರೆ. ಒಂದೊಂದು ಧರ್ಮದವರು ತಮ್ಮದೇ ದೇವರುಗಳನ್ನು ಹೊಂದಿದ್ದಾರೆ. ತಮ್ಮದೇ ಕಲ್ಪನೆಯಲ್ಲಿ ದೇವರನ್ನು ಕಲ್ಪಿಸಿಕೊಂಡು, ಅದಕ್ಕೆ ತಕ್ಕಂತೆ ಮೂರ್ತಿ, ಚಿತ್ರಗಳನ್ನು ಬಿಡಿಸಿ ಪೂಜೆ, ಪ್ರಾರ್ಥನೆ ಮಾಡ್ತಾರೆ. ಪ್ರತಿಯೊಂದು ದೇವರು ಬೇರೆ ಬೇರೆ ಬಣ್ಣ, ರೂಪ, ಆಕಾರದಲ್ಲಿರೋದನ್ನು ನೀವು ನೋಡ್ಬಹುದು. ಹಿಂದೂ ಧರ್ಮದಲ್ಲಿ ದೇವಾನುದೇವತೆಗಳ ಸಂಖ್ಯೆ ಹೆಚ್ಚಿದೆ. ಅದೇನೇ ಇರಲಿ, ವಾಸ್ತವವಾಗಿ ನಾವು ನಂಬಿರುವ ರಾಮ, ಸೀತೆ, ಕೃಷ್ಣ, ಈಶ್ವರ, ಗಣಪತಿ, ಯೇಸು, ಅಲ್ಲಾ ಇದೇ ಆಕಾರದಲ್ಲಿದ್ದಾರಾ ಎಂಬ ಪ್ರಶ್ನೆ ಜನರನ್ನು ಕಾಡೋದಿದೆ.
ದೇವರು (God) ಎಲ್ಲೆಲ್ಲೂ ಇದ್ದಾನೆ ಎಂದು ನಂಬುವ ಜನರು, ಎಲ್ಲ ವಸ್ತು, ಜನರಲ್ಲಿ ದೇವರನ್ನು ಕಾಣುವ ಪ್ರಯತ್ನ ನಡೆಸ್ತಾರೆ. ಅದೇ ದೇವರು ಗುಡಿ, ಚರ್ಚ್, ಮಸೀದಿಯಲ್ಲಿ ಮಾತ್ರ ಇದ್ದಾನೆ ಎಂದು ನಂಬುವು ಜನರು ಅಲ್ಲಿಗೇ ಹೋಗಿ ಪ್ರಾರ್ಥನೆ (Prayer) ಸಲ್ಲಿಸುತ್ತಾರೆ. ದೇವರು ಎಲ್ಲಿದ್ದಾನೆ ಎನ್ನುವ ಜೊತೆಗೆ ಹೇಗಿದ್ದಾನೆ ಎಂಬುದು ದೊಡ್ಡ ಪ್ರಶ್ನೆ.
ಪಶ್ಚಿಮ ಬಂಗಾಳದಲ್ಲಿ ಧಾರ್ಮಿಕ ಸಾಮರಸ್ಯ,ಮುಸ್ಲಿಂ ಶಿಲ್ಪಿಗಳಿಂದ ಅಯೋಧ್ಯೆ ದೇವಸ್ಥಾನಕ್ಕೆ ರಾಮನ ಪ್ರತಿಮೆ
ಈಗ ಸಂಶೋಧಕ (Researcher) ರು ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಈಶ್ವರ, ರಾಮ, ಕೃಷ್ಣನ ರೂಪವನ್ನಲ್ಲ. ಅವರು ಏಸುವಿನ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಜೀಸಸ್ ಹೇಗಿದ್ದರು, ಹೇಗಿದ್ದಾರೆ, ಅವರ ಚರ್ಮದ ಬಣ್ಣ ಹೇಗಿದೆ, ಎತ್ತರ ಎಷ್ಟು ಎನ್ನುವ ಬಗ್ಗೆ ಕ್ರಿಶ್ಚಿಯನ್ ಧರ್ಮದಲ್ಲಿ ಬಹಳ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಇದೀಗ ಸಂಶೋಧಕರು ಅಮೆರಿಕದ ಜನರ ಕಲ್ಪನೆಗೆ ಹೊಂದಿಕೆಯಾಗುವ ಅವರ ದೇವರ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಹೊಸ ತಂತ್ರವನ್ನು ಬಳಸಿ, ಚಾಪೆಲ್ ಹಿಲ್‌ನಲ್ಲಿರುವ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ಮನಶ್ಶಾಸ್ತ್ರಜ್ಞರು ಯೇಸುವಿನ ಮುಖ ರಚಿಸಿದ್ದಾರೆ. ಅಮೆರಿಕದ ಜನರ ಮನಸ್ಸಿನಲ್ಲಿ ದೇವರ ಚಿತ್ರ ಹೇಗಿದೆ ಎಂಬುದನ್ನು ಇದು ಹೇಳುತ್ತದೆ. 511 ಕ್ರಿಶ್ಚಿಯನ್ನರಿಗೆ ವಿಭಿನ್ನ ಅಭಿವ್ಯಕ್ತಿಗಳು ಮತ್ತು ಗುಣಲಕ್ಷಣಗಳೊಂದಿಗೆ ನೂರಾರು ಜೋಡಿ ಮುಖಗಳನ್ನು ತೋರಿಸಲಾಗಿದೆ. ಇವೆರಡರಲ್ಲಿ ಯಾವ ಚಿತ್ರ ಯೇಸುವನ್ನು ಹೋಲುತ್ತದೆ ಎಂದು ಪ್ರಶ್ನೆ ಮಾಡಲಾಗಿದೆ. ಆಯ್ದ ಚಿತ್ರಗಳನ್ನು ಸಂಯೋಜಿಸಲಾಯ್ತು. ಸರಾಸರಿ ಅಮೇರಿಕನ್ ಕ್ರಿಶ್ಚಿಯನ್, ದೇವರನ್ನು ಹೇಗೆ ಕಲ್ಪಿಸಿಕೊಳ್ಳುತ್ತಾನೆ ಎಂಬುದನ್ನು ಇದು ಪ್ರತಿನಿಧಿಸುತ್ತದೆ.
ಹೇಗೆ ಮೂಡಿಬಂದಿದೆ ಚಿತ್ರ? : ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಸಿದ್ಧವಾದ ಯೇಸು ಮುಖವು ಸಾಮಾನ್ಯಕ್ಕಿಂತ ಹೆಚ್ಚು ಸ್ತ್ರೀಯನ್ನು ಹೋಲುತ್ತದೆ. ಹಾಗೆಯೇ ತಾರುಣ್ಯದಿಂದ ಕೂಡಿದೆ ಎಂಬುದು ಫೋಟೋ ನೋಡಿದ್ರೆ ಅರ್ಥವಾಗುತ್ತದೆ. ಅಧ್ಯಯನದಲ್ಲಿ ಪಾಲ್ಗೊಂಡವರ ಮನಸ್ಥಿತಿ : ಇದರಲ್ಲಿ ಪಾಲ್ಗೊಂಡಿದ್ದ ಜನರು ಭಿನ್ನವಾಗಿದ್ದರು. ಕೆಲವರು ರಾಜಕೀಯ ದೃಷ್ಟಿಕೋನಕ್ಕೆ ಪ್ರಭಾವಿತರಾಗಿದ್ದರು. ಹೆಚ್ಚು ಸಂಪ್ರದಾಯವಾದಿ ಜನರು ದೇವರನ್ನು ಶಕ್ತಿಶಾಲಿ ಎಂದು ನಂಬಿದ್ದರು. ಅದೇ ಉದಾರವಾದಿಗಳು ದೇವರನ್ನು ಸ್ತ್ರೀ ಸ್ವಭಾವ ಮತ್ತು ಪ್ರೀತಿ ತುಂಬಿದ ವ್ಯಕ್ತಿ ಎಂದು ನಂಬಿದ್ದರು.
ಹೊಸ ವರ್ಷದಲ್ಲಿ ಈ ರಾಶಿಗೆ ಕೋಟ್ಯಾಧಿಪತಿ ಯೋಗ, ಲಕ್ ಅಂದ್ರೆ ಇವರದ್ದೇ
ಈ ಅಧ್ಯಯನದಲ್ಲಿ ಮಾನವನ ಮನೋವಿಜ್ಞಾನದ ಬಗ್ಗೆಯೂ ಅಧ್ಯಯನ ನಡೆದಿದೆ. ಜನರು ತಮ್ಮ ಕಲ್ಪನೆಯಲ್ಲಿರುವ ದೇವರ ಫೋಟೋ ಆಯ್ಕೆ ಮಾಡುವ ಸಮಯದಲ್ಲಿ ತಮಗೆ ಹೆಚ್ಚು ಹೋಲುವ ಫೋಟೋವನ್ನು ಆಯ್ಕೆ ಮಾಡಿದ್ದರು. ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜನರು ದೇವರನ್ನು ಕಲ್ಪಿಸಿಕೊಳ್ಳುವ ದೃಷ್ಟಿ ಅವರ ಸ್ವಭಾವ ಹಾಗೂ ವಯಸ್ಸನ್ನು ಕೂಡ ಅವಲಂಭಿಸಿತ್ತು. ಹೆಚ್ಚು ವಯಸ್ಸಾದ ಜನರು ವಯಸ್ಸಾದ ದೇವರ ಕಲ್ಪನೆಯಲ್ಲಿದ್ದರೆ, ಆಕರ್ಷಕ ವ್ಯಕ್ತಿತ್ವವುಳ್ಳ ಜನರು ತಮ್ಮಂತೆ ಆಕರ್ಷಕ ದೇವರ ಕಲ್ಪನೆಯಲ್ಲಿದ್ದರು. ಜನರು ತಮ್ಮ ನಂಬಿಕೆಗಳು ಮತ್ತು ಗುಣಗಳನ್ನು ಇತರರ ಮೇಲೆ ಹೇರುತ್ತಾರೆ ಎಂಬುದು ಈ ಅಧ್ಯಯನದಿಂದ ಪತ್ತೆಯಾಗಿದೆ. ಜನರು ತಮ್ಮಂತೆ ಯೋಚಿಸುವ ದೇವರನ್ನು ಮಾತ್ರವಲ್ಲ ತಮ್ಮಂತೆ ಕಾಣುವ ದೇವರನ್ನು ನಂಬುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.