Asianet Suvarna News Asianet Suvarna News

ಗಂಡನ ನಪುಂಸಕತೆಯೂ ಹೆಂಡ್ತಿ ಜಾತಕದಿಂದ ಕಂಡು ಹಿಡೀಬಹುದಾ?

ಹುಟ್ಟಿದಾಗಲೇ ಜಾತಕದಲ್ಲಿ ಹುಟ್ಟಿದ ಸಮಯ, ನಕ್ಷತ್ರ, ರಾಶಿಗೆ ಅನುಗುಣವಾಗಿ ಮನುಷ್ಯನ ಗುಣ, ವ್ಯಕ್ತಿತ್ವ, ಬದುಕು ಎಲ್ಲವೂ ರಿಫ್ಲೆಕ್ಟ್ ಆಗುತ್ತೆ. ಮದುವೆಯಾದ ಮೇಲೂ ಹೆಂಡ್ತಿ ಜಾತಕ ನೋಡಿಯೇ ಪತಿರಾಯ ಎಂಥವನೆಂದು ಹೇಳಬಹುದು. ಜಾತಕ ಹೇಗಿದ್ದರೆ, ಏನರ್ಥ?

How husband nature can predict by women horoscope astrology
Author
Bengaluru, First Published Feb 8, 2020, 6:21 PM IST

ಜಾತಕ ನೋಡಿ ಮನುಷ್ಯನ ಗುಣ, ಅವಗುಣಗಳು, ವ್ಯಕ್ತಿತ್ವ, ಅದೃಷ್ಟ, ನತದೃಷ್ಟ ಹೇಗಿರುತ್ತೆ ಎಂಬುದನ್ನು ತಿಳಿದು ಕೊಳ್ಳಬಹುದು.ಆದರೆ, ಹೆಣ್ಣಿನ ಜಾತಕ ನೋಡಿಯೇ ಆಕೆಯ ಗಂಡನೂ ಎಂಥ ಅದೃಷ್ಟವಂತ, ಯಾವ ಸ್ವಭಾವದವನೆಂದು ಕಂಡು ಹಿಡಿಯಬಹುದು. ಯಾವ ಮನೆಯಲ್ಲಿ ಏನಿದ್ದರೆ, ಮಹಿಳೆಯ ಗಂಡನ ವ್ಯಕ್ತಿತ್ವ, ಅವನ ಭವಿಷ್ಯ ಗೊತ್ತಾಗುತ್ತಾ?
 
- ಮಹಳೆಯರ ಜನ್ಮ ಲಗ್ನದಿಂದಾಗಲೀ, ಚಂದ್ರ ಲಗ್ನದಿಂದಾಗಲೀ ಸಪ್ತಮ ರಾಶಿಯಲ್ಲಿ ಗ್ರಹಗಳು ಇಲ್ಲವೇ ಸಪ್ತಮವು ಬಲಹೀನವಾಗಿ ಶುಭಗ್ರಹಗಳ ದೃಷ್ಟಿಯೂ ಇರುವುದಿಲ್ಲ. ಆದರೂ, ಆಕೆಯ ಗಂಡ ಯಾವುದೇ ಪ್ರಯೋಜನಕ್ಕೆ ಬಾರದವನಾಗುತ್ತಾನೆ.
- ನಾರಿ ಜಾತಕದಲ್ಲಿ ಏಳನೇ ಹಾಗೂ ಎಂಟನೇ ಮನೆಗಳು ಪಾಪಿಗಳಿಂದ ಕೂಡಿದ್ದರೆ ಅಥವಾ ಪಾಪ ಗ್ರಹಗಳ ದೃಷ್ಟಿಗೊಳಗಾಗಿದ್ದರೆ, ದಾಂಪತ್ಯದಲ್ಲಿ ನಷ್ಟವಾಗುತ್ತದೆ. ಶನಿ, ಬುಧರು ಸಪ್ತಮದಲ್ಲಿದ್ದರೆ ಇವರು ವಿಧುರ ಗಂಡನನ್ನು ಕೈ ಹಿಡಿಯುತ್ತಾರೆ.

ಜನ್ಮ ರಾಶಿಯಿಂದ ಗೊತ್ತಾಗುತ್ತೆ ಸಾಯೋದು ಹೇಗೆ ಅಂತ?

- ಸ್ತ್ರೀಯರ ಸಪ್ತಮ ರಾಶಿಯಲ್ಲಿ ಬುಧ ಶನಿಗಳಿದ್ದರೆ, ಅಂಥ ಮಹಿಳೆಯರ ಪತಿ ನಪುಂಕರಾಗುತ್ತಾನೆ.
- ದುರ್ಬಲನೂ ಪೀಡಿತನೂ ಆದ ಶುಕ್ರನು ನಾರಿ ಜಾತಕದಲ್ಲಿ ಏಳನೇ ಮನೆಯಲ್ಲಿದ್ದರೆ ಗಂಡ ನಪುಂಸಕನಾಗುತ್ತಾನೆ. ಸಪ್ತಮದ ಅಧಿಪತಿ ಅಥವಾ ಶುಕ್ರ ರಾಹುವಿನ ಸಂಗಡ ಅಥವಾ ಕೇತುವಿನ ಸಂಗಡವಿದ್ದು, ಪಾಪವೀಕ್ಷಿತನಾಗಿದ್ದರೆ ಇವರ ಗಂಡ ವ್ಯಭಿಚಾರಿಯಾಗುತ್ತಾನೆ.
- ಕುಂಡಲಿಯಲ್ಲಿ ಲಗ್ನ ಅಥವಾ ಚಂದ್ರ ರಾಶಿಯಿಂದ ಸಪ್ತಮ ಸ್ಥಾನಗಳು ಚರ ರಾಶಿಗಳಾದರೆ, ಆ ಸ್ತ್ರೀಯರ ಪತಿ ಅಲೆಮಾರಿಯೂ, ಸ್ಥಿರ ರಾಶಿಯಾಗಿದ್ದರೆ ಒಂದೇ ಸ್ಥಳದಲ್ಲಿ ನಿಲ್ಲತಕ್ಕವನೂ, ದ್ವಿ ಸ್ವಭಾವ ರಾಶಿಯಾದರೆ ಕೆಲವು ಸಮಯ ವೃತಾ ಅಲೆದಾಡುವವನೂ, ಮತ್ತೆ ಕೆಲವರು ಸ್ಥಿರವಾಗಿ ನಿಲ್ಲುವವರೂ ಆಗಿರುತ್ತಾನೆ.
- ಲಗ್ನದಿಂದ, ಶುಕ್ರನಿರುವ ಸಪ್ತಮದ ಅಧಿಪತಿಯು ಬಲಯುತವಾಗಿ ಸಪ್ತಮದಲ್ಲಿದ್ದರೆ, ಸಪ್ತಮವು ಬಲಿಷ್ಠ ಗ್ರಹಗಳ ಸಂಬಂಧ ಹೊಂದಿದ್ದರೆ ಅಂಥವರ ಪತಿಯರು ಪತ್ನಿಯೊಂದಿಗೇ ಕೊನೆಯುಸಿರೆಳೆಯುತ್ತಾರೆ.
- ಮಹಿಳೆಯರ ಜನ್ಮರಾಶಿಯಿಂದ ಅಥವಾ ಜನ್ಮ ಲಗ್ನದಿಂದ ಸಪ್ತಮ ರಾಶಿಯಲ್ಲಿ ಪಾಪಗ್ರಹ ವೀಕ್ಷಿತನಾದ ರವಿ ಇದ್ದರೆ, ಅಂಥವರು ಗಂಡನಿಂದ ಬಿಡುಗಡೆ ಹೊಂದುತ್ತಾರೆ.
- ಸಪ್ತಮ ಭಾವದಲ್ಲಿ ಶುಭಾಶುಭ ಗ್ರಹಗಳಿದ್ದರೆ, ಮೊದಲನೇಯ ಗಂಡನನ್ನು ಬಿಟ್ಟು ಎರಡನೇ ಮದುವೆಯಾಗುತ್ತಾರೆ.
- ಸಪ್ತಮದಲ್ಲಿ ದುರ್ಬಲ ಪಾಪಗ್ರಹಗಳಿದ್ದು, ಶುಭಗ್ರಹಗಳ ದೃಷ್ಟಿ ಇದ್ದರೆ, ಅಂಥವರು ಪತಿಯನ್ನು ತ್ಯಜಿಸುತ್ತಾರೆ.
- ಸಪ್ತಮವು ಪಾಪ ರಾಶಿಯಾಗಿ ಶನಿಯುತನಾಗಿದ್ದವರ ಪತಿ ಬೇಗ ಮರಣ ಹೊಂದುತ್ತಾರೆ.

ರೂಪವತಿ, ಗುಣವತಿ ಆಗಿರೋ ಸ್ತ್ರೀ ಜಾತಕ ಹೇಗಿರುತ್ತೆ?

- ಜಾತಕದಲ್ಲಿ ಪಾಪಗ್ರಹಗಳು ಏಳರಲ್ಲೋ, ಎಂಟರಲ್ಲೋ ಇದ್ದು ಶುಭಗ್ರಹಗಳು ಒಂಬತ್ತನೆಯ ಮನೆಯಲ್ಲಿದ್ದರೆ ಸುಖಮಯ ದಾಂಪತ್ಯ ಹೊಂದುತ್ತಾರೆ. 
- ಗುರು ಬಲಿಷ್ಠವಾಗಿದ್ದವರ ಮಹಿಳೆಯರ ಪತಿಯರು ದೃಢ ಚಿತ್ತನಾಗಿರುತ್ತಾನೆ.
- ಸ್ತ್ರೀಯರ ಲಗ್ನದಿಂದ, ಚಂದ್ರ ಲಗ್ನದಿಂದ ಏಳನೇ ಮನೆಯ ಅಧಿಪತಿಗಳು ರಾಹುಪೀಡಿತನಾಗಿದ್ದರೆ, ಲಗ್ನದಿಂದ ಸಪ್ತಮದ ಅಧಿಪತಿಯು ಹನ್ನೊಂದರಲ್ಲಿ ರಾಹು ಸಮೇತನಾಗಿದ್ದರೆ, ಅಂಥವರ ಗಂಡಂದಿರಿಗೆ ಇನ್ನೊಬ್ಬಳು ವಿವಾಹಿತ ಪತ್ನಿಯೂ ಇರುತ್ತಾಳೆ.
- ಸಪ್ತಮ ಸ್ಥಾನದಲ್ಲಿ ಪಾಪ ದೃಷ್ಟಿಯನ್ನು ಹೊಂದಿದ ಶನಿ ಇದ್ದರೆ, ಅವರಿಗೆ ಮದುವೆಯ ಯೋಗವೇ ಬರುವುದಿಲ್ಲ. 
- ಜಾತಕದಲ್ಲಿ ಎಂಟರಲ್ಲಿ ಏಳರ ಅಧಿಪತಿಯಾದ ಕುಜ ಇರುವುದು, ಇದಕ್ಕೆ ರಾಹುವಿನ ಬಂಧವಿದ್ದು, ಶನಿಯ ದೃಷ್ಟಿ ಬಿದ್ದರೆ, ಇವರ ಪತಿಯು ಮದುವೆಯಾದ ಕೆಲವೇ ವರ್ಷಗಳಲ್ಲಿ ಸಾವಿಗೀಡಾಗುತ್ತಾರೆ.
- ಸಪ್ತಮ ಸ್ಥಾನದಲ್ಲಿ ಪಾಪ ವೀಕ್ಷಿತನಾದ ಕುಜನಿರುವ ಸ್ತ್ರೀ ಬಾಲ್ಯದಲ್ಲಿಯೇ ಗಂಡನನ್ನು ಕಳೆದುಕೊಂಡು, ವಿಧವೆಯಾಗುವಳು.
- ಹೆಣ್ಣಿನ ಜಾತಕದಲ್ಲಿ ದ್ವಿಸ್ವಭಾವ ರಾಶಿಯಲ್ಲಿ ಚಂದ್ರ ದ್ವಿಸ್ವಭಾವ ರಾಶಿಯಾದ ಏಳನೇಯ ಮನೆಯಲ್ಲಿ ನಾಲ್ಕು ಗ್ರಹಗಳಿರುವುದು, ಕಾರಕ ಶುಕ್ರನು ಏಳರಲ್ಲಿದ್ದು ಚಂದ್ರನಿಂದ ಏಳನೇಯ ಹನ್ನೊಂದನೆಯ ಮನೆಗಳಿಗೆ ಸಂಬಂಧ ಉಂಟಾದರೆ ಅಂಥ ಹೆಣ್ಣು ಮಕ್ಕಳ ಗಂಡ ತೀರಿ ಹೋಗಿ, ಸ್ತ್ರೀ ಮತ್ತೊಂದು ವಿವಾಹ ಬಂಧನದಲ್ಲಿ ಬಂಧಿತರಾಗುವುದು ಸಾಮಾನ್ಯ.

ಯಾವ ದೇವರನ್ನು ಪೂಜಿಸಿದರೆ ಬಯಸಿದ ಫಲ ಸಿಗುತ್ತೆ?

Follow Us:
Download App:
  • android
  • ios