ಈ ಜನ್ಮರಾಶಿಯವರಿಗೆ EQ ತುಂಬಾ ಹೆಚ್ಚು, ಮೆಚ್ಚಿದರೆ ಹಚ್ಚಿಕೊಳ್ತಾರೆ!

ಭಾವುಕವಾಗಿ ಸ್ಪಂದಿಸುವ ರಾಶಿಗಳಿವು. ನೋವನ್ನು ಖುಷಿಯನ್ನು ಸದಾ ಹೊರಹಾಕುವ ಈ ರಾಶಿಯವರು ಒಬ್ಬರಿಗೆ ಕನೆಕ್ಟ್ ಆದ್ರು ಅಂದ್ರೆ ಮುಗೀತು, ಮುಂದೆ ಕರಡಿಪ್ರೀತಿನೇ.

High emotional quotient level for aeries Taurus zodiac signs bni

ಹನ್ನೆರಡು ರಾಶಿಗಳಲ್ಲಿ ಕೆಲವು ರಾಶಿಯವರು ರಫ್‌ ಆಂಡ್‌ ಟಫ್.‌ ಇನ್ನು ಕೆಲವರು ಕನ್ನಿಂಗ್‌. ಮತ್ತೆ ಕೆಲವರು ಕಟು, ಕೆಲವರು ಗಂಭೀರ. ಇನ್ನು ಕೆಲವರು ಎಮೋಷನಲ್‌ ಕೋಶಿಯೆಂಟ್‌ ಅಥವಾ ಭಾವನಾತ್ಮಕತೆ ಸೂಚ್ಯಂಕ (Emotional Quotient) ಹೆಚ್ಚು ಹೊಂದಿರುವವರು. ಜತೆಗೆ ಇರುವವರಿಗೆ ಥಟ್ಟನೆ ಸ್ಪಂದಿಸುತ್ತಾರೆ; ಮಾತು ಮಾತಿಗೂ ಭಾವುಕರಾಗುತ್ತಾರೆ. ಸ್ನೇಹಿತರ ಅಗತ್ಯಗಳಿಗೆ ಒದಗುತ್ತಾರೆ ಇತ್ಯಾದಿ ಇವರ ಗುಣ. ಹಾಗಿದ್ದರೆ ಇವರ್ಯಾರು? ಬನ್ನಿ ನೋಡೋಣ.

ಮೇಷ (Aries) ರಾಶಿ
ಈ ರಾಶಿಯ ಜನರು ಬುದ್ಧಿವಂತರು ಹಾಗೂ ಭಾವುಕರಾಗಿರುತ್ತಾರೆ. ಜನರೊಂದಿಗೆ ತ್ವರಿತವಾಗಿ ಬೆರೆಯುವ ಅವರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ಪಡೆಯದಿದ್ದಾಗ ನಿರಾಶೆಗೊಳ್ಳುತ್ತಾರೆ. ಆಗ ಅವರು ಹಲವು ದಿನಗಳ ಕಾಲ ಈ ಆಲೋಚನೆಯಲ್ಲಿ ಕಳೆದುಹೋಗುತ್ತಾರೆ. ಒತ್ತಡಕ್ಕೆ ಬಲಿಯಾಗುತ್ತಲೇ ಇರುತ್ತಾರೆ. ಅವರು ತಾರ್ಕಿಕ ಮತ್ತು ಪ್ರಾಯೋಗಿಕ ಸಂಗತಿಗಳನ್ನು ಬಯಸುತ್ತಾರೆ. ಅವರು ನಿಮಗೆ ಸಲಹೆ ನೀಡುತ್ತಾರೆ ಮತ್ತು ಏನು ಮಾಡಬೇಕೆಂದು ನಿಖರವಾಗಿ ನಿಮಗೆ ತಿಳಿಸುತ್ತಾರೆ. ಆದರೆ ನೀವು ಅವರ ಮಾತನ್ನು ಕೇಳದಿದ್ದರೆ ಅವರು ತಾಳ್ಮೆ ಕಳೆದುಕೊಳ್ಳುತ್ತಾರೆ ಮತ್ತು ಹೊರಟು ಹೋಗುತ್ತಾರೆ.

ವೃಷಭ (Taurus) ರಾಶಿ
ಈ ರಾಶಿಯ ಜನರು ತುಂಬಾ ಸೂಕ್ಷ್ಮ (Sensitive) ಮತ್ತು ಭಾವನಾತ್ಮಕರಾಗಿರುತ್ತಾರೆ (Emotional). ಅವರು ಸುಳ್ಳು, ಕಪಟ, ಮೋಸವನ್ನು ಸಹಿಸುವುದಿಲ್ಲ. ಯಾವುದೇ ಸಂಬಂಧವನ್ನು ಹೃದಯದಿಂದ ಆಲೋಚಿಸುತ್ತಾರೆ. ಇದೇ ಕಾರಣದಿಂದ ಸುಲಭವಾಗಿ ಇತರರಿಂದ ಮೋಸ ಹೋಗುತ್ತಾರೆ. ವಿಪರೀತ ಭಾವುಕರಾಗಿರುವುದು ಅವರಿಗೆ ನೋವು ಅತಿ ಹೆಚ್ಚು. ಮೇಷ ರಾಶಿಯವರು ಕೊಂಚ ನೋವಾದ್ರೂ ಬೇಗನೇ ಅಳುತ್ತಾರೆ. ಈ ರಾಶಿಯವರು ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡುವುದು ಬಹಳ ಕಷ್ಟಕರವಾದ ಕೆಲಸ. ಏನಾದರೂ ಅಸಮಾಧಾನವಿದ್ದರೆ ಪ್ರತಿಯೊಬ್ಬರನ್ನೂ ತ್ವರಿತವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ತಮ್ಮ ಭಾವನೆಗಳನ್ನು ಮರೆಮಾಡಲು ಶ್ರಮಿಸಿದರೂ ಗೊತ್ತಾಗುತ್ತದೆ.

Tarot Readings: ಸಮಸ್ಯೆ ಬಗೆಹರಿಯಬೇಕೆಂದರೆ ದೃಷ್ಟಿಕೋನ ಬದಲಿಸಿ ನೋಡಲು ಈ ರಾಶಿಗೆ ಸಲಹೆ

ಕನ್ಯಾ (Virgo) ರಾಶಿ
ಈ ರಾಶಿಯ ಜನರು ತುಂಬಾ ಭಾವುಕರಾಗಿರುತ್ತಾರೆ. (Emotional) ಇತರರನ್ನು ನೋಡಿಕೊಳ್ಳುವುದರಲ್ಲಿ, ಅವರನ್ನು ಪ್ರೀತಿಸುವುದರಲ್ಲಿ ಅವರಿಗೆ ಸರಿಸಾಟಿಯಿಲ್ಲ. ಯಾರದೇ ದುಃಖದಲ್ಲಿ ಅವರು ದುಃಖಪಡುವುದು ಸಹಜ. ಭಾವನಾತ್ಮಕವಾಗಿ, ಅವರು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಸುಲಭವಾಗಿ ಸ್ವಾರ್ಥಿಗಳಿಗೆ(Selfishness) ಬಲಿಯಾಗುತ್ತಾರೆ. ಎಂದಿಗೂ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ತಮ್ಮನ್ನು ನೋಯಿಸುವವರ ವಿರುದ್ಧ ಹೋರಾಡಲು ಅವರು ತಮ್ಮ ಭಾವನಾತ್ಮಕ ಬುದ್ಧಿವಂತಿಕೆಯನ್ನು ಬಳಸುತ್ತಾರೆ.

ಕುಂಭ (Aquarius) ರಾಶಿ
ಸಿಕ್ಕಾಪಟ್ಟೆ ಮೂಡಿಗಳಾದ ಇವರು ಯಾರನ್ನೇ ಆಗಲಿ ಬಹುಬೇಗ ನಂಬುತ್ತಾರೆ. ಅಲ್ಪ ಸ್ನೇಹಿತರನ್ನು(Friends) ಹೊಂದಿರುವ ಇವರು ಅವರ ನಡುವಳಿಕೆಯಲ್ಲಿ ಮೋಸವಾದಾಗ ನಿರಾಶರಾಗುತ್ತಾರೆ. ಸಣ್ಣ ವಿಚಾರಕ್ಕೂ ನಿರಾಶೆ ಹೊಂದುವರ ಇವರು ಅಳಲು ಹಿಂಜರಿಕೆಯೇ ತೋರುವುದಿಲ್ಲ. ಅವರು ತಮ್ಮದೇ ಆದ ಪ್ರಪಂಚದಲ್ಲಿ ಬದುಕುತ್ತಿರುತ್ತಾರೆ. ಅಲ್ಲಿ ಅವರು ತಮ್ಮೊಳಗೆ ಶಾಂತಿಯನ್ನು(peace) ಕಂಡುಕೊಳ್ಳುತ್ತಾರೆ. ಅವರು ದೂರದಲ್ಲಿರುವಾಗ ಸಂತೋಷವಾಗಿರುತ್ತಾರೆ ಮತ್ತು ಇತರರೊಂದಿಗೆ ಬೆರೆಯಲು ಅಥವಾ ಆಳವಾಗಿ ಮಾತನಾಡಲು ಒತ್ತಾಯಿಸುವುದಿಲ್ಲ.

ಮೀನ (Pisces) ರಾಶಿ
ಈ ರಾಶಿಯ ಜನರು ತುಂಬಾ ಭಾವನಾತ್ಮಕ ಮತ್ತು ಸೂಕ್ಷ್ಮ ಸ್ವಭಾವದವರು. ಇವರು ಸುಳ್ಳುಗಾರರು ಮತ್ತು ಮೋಸಗಾರರನ್ನು ಇಷ್ಟಪಡುವುದಿಲ್ಲ. ಬದಲಾಗಿ, ತಮಗೆ ಮೋಸ ಮಾಡುವವರ ಬಗ್ಗೆ ಅವರು ಬೇಗನೆ ನಿರಾಶೆಗೊಳ್ಳುತ್ತಾರೆ. ಅದರಿಂದ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈ ರಾಶಿ ಚಿಹ್ನೆಯಡಿ ಜನಿಸಿದವರು ವಿಷಯಗಳನ್ನು ಆಳವಾಗಿ ಮತ್ತು ತೀವ್ರವಾದ ಮಟ್ಟದಲ್ಲಿ ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತದೆ. ಉದಾರ, ದಯೆ ಗುಣ ಹೊಂದಿರುವ ಈ ರಾಶಿಯವರು ತಮ್ಮ ಸುತ್ತಲಿನ ಪ್ರತಿಯೊಬ್ಬರ ಭಾವನೆಗಳ ಬಗ್ಗೆ ಕಾಳಜಿ(Caring) ವಹಿಸುತ್ತಾರೆ.

ಮಿಥುನ (Gemini) ರಾಶಿ
ಇವರ ಭಾವನಾತ್ಮಕ ಬುದ್ಧಿವಂತಿಕೆ(Emotional intelligence) ಉನ್ನತ ಮಟ್ಟದಲ್ಲಿರುತ್ತದೆ. ಮಿಥುನ ರಾಶಿಯವರು ಒಂದು ಕಾರ್ಯ ಅಥವಾ ನಿರ್ಧಾರದಲ್ಲಿ ವಿಫಲವಾದರೆ, ಆ ಚಿಂತೆಯಿಂದ ಬೇಗನೆ ಹೊರ ಬರುತ್ತಾರೆ. ಅವರ ಆದ್ಯತೆಗಳು ಏನೆಂದು ಅವರಿಗೆ ತಿಳಿದಿರುತ್ತದೆ. ಆದ್ದರಿಂದ, ಅವರು ತಮ್ಮ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ನನಸಾಗಿಸಲು ಪ್ರಯತ್ನಗಳನ್ನು ಬಿಡುವುದಿಲ್ಲ. ಬಹಳಷ್ಟು ವಿಶ್ಲೇಷಿಸುತ್ತಾರೆ ಮತ್ತು ಪ್ರತಿ ಆಲೋಚನೆಯನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾರೆ. ಮೇಲ್ನೋಟದಲ್ಲಿ ಹೆಚ್ಚು ಕಠಿಣವಾಗಿ ಕಾಣುತ್ತಾರೆ. ಆದರೂ, ವಾಸ್ತವದಲ್ಲಿ, ಅವರು ಹೆಚ್ಚು ಸೂಕ್ಷ್ಮವಾಗಿರುತ್ತಾರೆ.

Weekly Love Horoscope: ಸ್ವತಃ ಕೈಯಾರೆ ಪ್ರೇಮಜೀವನ ಹಾಳು ಮಾಡಿಕೊಳ್ಳುವ ಮಿಥುನ!

Latest Videos
Follow Us:
Download App:
  • android
  • ios