ಮಹಾಕುಂಭ ಮೇಳದಲ್ಲಿ ಸುದ್ದಿಯಾಗಿದ್ದ 'ಸುಂದರ ಸಾಧ್ವಿ' ಹರ್ಷ ರಿಚಾರಿಯಾ, ಬಾಬಾ ಬಾಗೇಶ್ವರ್‌ಗೆ ಮದುವೆ ಪ್ರಸ್ತಾಪ ಮಾಡಿದ ವೈರಲ್ ವಿಡಿಯೋ ನಕಲಿ ಎಂದು ತಿಳಿದುಬಂದಿದೆ. ಹಳೆಯ ವಿಡಿಯೋದಲ್ಲಿ ಹರ್ಷ ಫೋಟೋ ಎಡಿಟ್ ಮಾಡಿ, ಬಾಗೇಶ್ವರ್‌ಗೆ ಪ್ರಪೋಸ್ ಮಾಡಿದಂತೆ ತೋರಿಸಲಾಗಿದೆ. ನೆಟ್ಟಿಗರು ಈ ಕೃತ್ಯವನ್ನು ಖಂಡಿಸಿ, ಹರ್ಷರ ಹೆಸರು ಹಾಳು ಮಾಡಲು ಯತ್ನಿಸಲಾಗಿದೆ ಎಂದಿದ್ದಾರೆ.
ಪ್ರಯಾಗ್ ರಾಜ್ (Prayag Raj) ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ (Mahakumbha Mela) ಸಾಕಷ್ಟು ವಿಷ್ಯಕ್ಕೆ ಚರ್ಚೆಯಲ್ಲಿದೆ. ಅನೇಕ ಸನ್ಯಾಸಿ, ಸಾಧ್ವಿಗಳು ಮಹಾ ಕುಂಭ ಮೇಳದಲ್ಲಿ ಗಮನ ಸೆಳೆದಿದ್ದಾರೆ. ಕೆಲ ಸಾಧುಗಳ ವಿವಾದ ಕೂಡ ಚರ್ಚೆಯಲ್ಲಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಬಾಬಾ ಬಾಗೇಶ್ವರ್ (Baba Bageshwar) ಅವರ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಬಾಬಾ ಬಾಗೇಶ್ವರ್ ಅವರಿಗೆ ಪ್ರಪೋಸ್ ಮಾಡಿದ್ದು, ಅದಕ್ಕೆ ಬಾಬಾ ಪ್ರತಿಕ್ರಿಯೆ ನೀಡ್ತಿದ್ದಾರೆ. ಬಾಬಾ ಬಾಗೇಶ್ವರ್ ಅವರಿಗೆ ಮದುವೆ ಪ್ರಪೋಸ್ ಮಾಡಿದ್ದು ಸಾಧ್ವಿ ಹರ್ಷ ರಿಚಾರಿಯಾ (Harsha Richaria) ಎನ್ನಲಾಗ್ತಿದೆ.
ಉತ್ತರಾಖಂಡ ಹರ್ಷಾ ರಿಚಾರಿಯಾ, ಮಹಾ ಕುಂಭ ಮೇಳದಲ್ಲಿ ಸುಂದರ ಸಾಧ್ವಿ ಎನ್ನುವ ಹೆಸರು ಪಡೆದಿದ್ದಾರೆ. ರಥದ ಮೇಲೆ ಕುಳಿತಿದ್ದ ಅವರು ಯುಟ್ಯೂಬರ್ ಗಮನ ಸೆಳೆದಿದ್ದರು. ಅವರ ಸಂದರ್ಶನದ ನಂತ್ರ ಹರ್ಷ ಸುದ್ದಿಗೆ ಬಂದಿದ್ದರು. ಚಿಕ್ಕ ವಯಸ್ಸಿನ, ಸುಂದರ ಮಹಿಳೆ ಸಾಧ್ವಿ ಹೇಗಾದ್ರೂ ಎನ್ನುವ ಪ್ರಶ್ನೆ ಮೂಡಿತ್ತು. ಕೊನೆಯಲ್ಲಿ ಹರ್ಷ ಸಾಧ್ವಿಯಲ್ಲ, ಅವರು ನಿರೂಪಕಿ ಹಾಗೂ ಮಾಡೆಲ್ ಎಂಬ ವಿಷ್ಯ ಜನರಿಗೆ ತಿಳಿದಿದೆ. ಅಖಾರದ ನಿಯಮದಂತೆ ಅವರು ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಧರ್ಮ ದೀಕ್ಷೆ ಪಡೆದಿದ್ದರು. ಹರ್ಷ ಸನ್ಯಾಸಿಯಲ್ಲ, ಅವರ ಮದುವೆಗೆ ತಯಾರಿ ನಡೆದಿದೆ ಎಂದು ಹರ್ಷ ಪಾಲಕರು ಹೇಳಿಕೆ ನೀಡಿದ್ದರು. ಈ ಮಧ್ಯೆ ಈಗ ಹರ್ಷ ರಿಚಾರಿಯಾ, ಬಾಬಾ ಬಾಗೇಶ್ವರ್ ಅವರಿಗೆ ಪ್ರಪೋಸ್ ಮಾಡಿದ್ದಾರೆ ಎಂಬ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.
ವೈರಲ್ ಸಾಧ್ವಿ ತೆಗೆದುಕೊಂಡಿದ್ದು ಮಂತ್ರ ದೀಕ್ಷೆ ! ತಪ್ಪು ಮಾಡಿಲ್ವ ಸುಂದರಿ ಹರ್ಷ ರಿಚಾರಿಯಾ?
ವೈರಲ್ ವಿಡಿಯೋದಲ್ಲಿ ಬಾಬಾ ಬಾಗೇಶ್ವರ್ ಅವರನ್ನು ಕಾಣ್ಬಹುದು. ಅವರು ವಿಡಿಯೋ ಕೆಳಗೆ ಬಂದಿರುವ ಕಮೆಂಟ್ ಓದುತ್ತಿದ್ದಾರೆ. ನನಗೆ ಒಂದು ವಿಚಿತ್ರ ಕಮೆಂಟ್ ಬಂದಿದೆ. ನನಗೆ ಹುಡುಗಿಯೊಬ್ಬರು ಮದುವೆ ಪ್ರಪೋಸ್ ಮಾಡಿದ್ದಾರೆ ಎನ್ನುವ ಬಾಗೇಶ್ವರ್, ಬಾಲಾಜಿ ಕನಸಿನಲ್ಲಿ ಬಂದಿದ್ದರು, ನಾನು ನಿಮ್ಮ ಜೊತೆ ಮದುವೆ ಖಚಿತ ಎಂದು ಭಾವಿಸಲೇ ಎಂದು ಬರೆಯಲಾಗಿದೆ ಎನ್ನುತ್ತಾರೆ. ಜೊತೆಗೆ ಈ ಕಮೆಂಟ್ ಗೆ ಬಾಗೇಶ್ವರ್ ಪ್ರತಿಕ್ರಿಯೆ ನೀಡ್ತಾರೆ. ಸಹೋದರಿ ಇದನ್ನು ಹಗುರವಾಗಿ ತೆಗೆದುಕೊಳ್ಳಿ. ರಾಖಿಯನ್ನು ಸಿದ್ಧವಾಗಿಟ್ಟುಕೊಳ್ಳಿ. ರಕ್ಷಾ ಬಂಧನಕ್ಕೆ ಬನ್ನಿ. ನಿಮಗೆ ಸ್ವಾಗತವಿದೆ. ಪ್ರಮಾಣೀಕರಿಸಿದ ಚಾನೆಲ್ ನಲ್ಲಿ ಇಂಥ ಕಮೆಂಟ್ ಮಾಡಲು ನಿಮಗೆ ನಾಚಿಕೆ ಆಗೋದಿಲ್ವಾ, ಮದುವೆ ಆಗ್ಲೇ ಬೇಕು ಅಂದ್ರೆ ನಾವು ಯುಟ್ಯೂಬ್ ನಲ್ಲಿ ಆಗೋದಿಲ್ಲ, ತಾಯಿ ಆಜ್ಞೆಯಂತೆ ಆಗ್ತೇವೆ ಎಂದು ಬಾಗೇಶ್ವರ್ ಹೇಳಿದ್ದಾರೆ.
ನಾಚಿಕೆ ಆಗಬೇಕು ಈ ಜನಕ್ಕೆ.., ಕಣ್ಣೀರಿಡುತ್ತಲೇ ಕುಂಭಮೇಳದಿಂದ ಹೊರಬಂದ ಸುಂದರಿ ಸಾಧ್ವಿ ಹರ್ಷ ರಿಚಾರಿಯಾ!
ಈ ವಿಡಿಯೋ ಕೆಳಗೆ ಹರ್ಷ ಫೋಟೋಗಳನ್ನು ಎಡಿಟ್ ಮಾಡಿ, ಇದು ಹರ್ಷ ರಿಚಾರಿಯಾ ಕಮೆಂಟ್ ಎನ್ನುವಂತೆ ಬಿಂಬಿಸಲಾಗಿದೆ. ಆದ್ರೆ ವಿಡಿಯೋ ನೋಡಿದ ಬಳಕೆದಾರರು ಇದನ್ನು ಖಂಡಿಸಿದ್ದಾರೆ. ಹಾಗೆಯೇ ಇದು ಹಳೆ ವಿಡಿಯೋ, ಬಾಗೇಶ್ವರ್ ತುಂಬಾ ದಿನಗಳ ಹಿಂದೆಯೇ ಈ ಕಮೆಂಟ್ ಬಗ್ಗೆ ಮಾತನಾಡಿದ್ದರು. ಈಗ ಹರ್ಷ ಹೆಸರನ್ನು ತರಲಾಗ್ತಿದೆ. ಇಂಥ ವಿಡಿಯೋ ಮಾಡಿ, ವೈರಲ್ ಆಗೋದನ್ನು ಬಿಟ್ಟು ಬಿಡಿ, ಇದನ್ನು ಮೊದಲು ಡಿಲೀಟ್ ಮಾಡಿ ಎಂದು ಬಳಕೆದಾರರು ಹೇಳಿದ್ದಾರೆ. ಹರ್ಷ ತುಂಬಾ ಒಳ್ಳೆಯವರು. ಅವರು ಇಂಥ ಕೆಲಸ ಮಾಡೋದಿಲ್ಲ. ಅವರ ಹೆಸರಿಗೆ ಮಸಿ ಬಳಿಯಲು ನೆಟ್ಟಿಗರು ಇಂಥ ಕೆಲಸಕ್ಕೆ ಇಳಿದಿದ್ದಾರೆಂದು ಬಳಕೆದಾರರು ಹೇಳಿದ್ದಾರೆ. ಮಹಾ ಕುಂಭ ಮೇಳದಲ್ಲಿ ಧರ್ಮ, ಸಾಧು – ಸಂತರಿಗೆ ಗೌರವ ನೀಡುವ ಬದಲು ಅಪಮಾನ ಮಾಡಲಾಗ್ತಿದೆ ಎಂದು ಬಳಕೆದಾರರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
