ಗಾಯತ್ರಿ ಮಂತ್ರ ಪಠಣ, ಹನುಮಾನ್ ಚಾಲೀಸಾ ಪಠಣ ಜೀವನ ಹಾಗೂ ಸುತ್ತು ಮುತ್ತ ಪಾಸಿಟಿವಿ ತುಂಬುತ್ತದೆ. ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಲು ನೆರವಾಗುತ್ತದೆ ಅನ್ನೋದಕ್ಕೆ ಹಲವು ಉದಾಹರಣೆಗಳಿವೆ. ಇದೀಗ ಅಮೆರಿಕದ ಪ್ರತಿಷ್ಠಿತ ವಿದ್ಯಾವಿದ್ಯಾಲಯದ ಪ್ರವೇಶಾತಿಗೂ ಹುನುಮಾನ್ ಚಾಲೀಸಾ ಪಠಣ ನೆರವಾಗಿರುವ ವಿಶೇಷ ಘಟನೆಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ ಕಾರ್ಯನಿರ್ವಹಾಕ ನಿರ್ದೇಶಕ ಹೇಳಿದ್ದಾರೆ.
ನವದೆಹಲಿ(ಜು.01) ಹನುಮಾನ್ ಚಾಲೀಸಾ ಪಠಣದಿಂದ ಹಲವು ಸಂಕಷ್ಟಗಳು ನಿವಾರಣೆಯಾಗಲಿದೆ ಅನ್ನೋ ಮಾತಿಗೆ ಪುಷ್ಠಿ ನೀಡುವ ಹಲವು ಘಟನೆಗಳಿವೆ. ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲದ ಪ್ರವೇಶಾತಿಗೆ ಇದೇ ಹನುಮಾನ್ ಚಾಲೀಸಾ ಪಠಣ ನೆರವಾಗಿರುವ ವಿಶೇಷ ಘಟನೆ ಬಹಿರಂಗಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಕಾರ್ಯನಿರ್ವಹಾಕ ನಿರ್ದೇಶಕ ಹಾಗೂ ಭಾರತದ ಮಾಜಿ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಈ ಘಟನೆಯನ್ನು ವಿವರಿಸಿದ್ದಾರೆ.ಹನುಮಾನ್ ಚಾಲೀಸ ಪಠಣದಿಂದ ವಿದ್ಯಾರ್ಥಿಯೊಬ್ಬನಿಗೆ ಅಮೆರಿಕ ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆಯಲು ಸಾಧ್ಯವಾಗಿದೆ ಎಂದು ಕಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದಾರೆ.
2 ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿಗೆ ಅರ್ಜಿ ಹಾಕಿದ್ದ ವಿದ್ಯಾರ್ಥಿಗೆ ನಿರಾಸೆಯಾಗಿತ್ತು. ಎರಡೂ ವಿಶ್ವವಿದ್ಯಾಲಯ ವಿದ್ಯಾರ್ಥಿಯ ಅರ್ಜಿಯನ್ನು ವೈಟ್‌ಲಿಸ್ಟ್‌ನಲ್ಲಿ ಇಡಲಾಗಿತ್ತು. ವಿದ್ಯಾರ್ಥಿಯ ಪೋಷಕರ ಮಾತಿನ ಪ್ರಕಾರ ಎರಡೂ ವಿಶ್ವವಿದ್ಯಾಲಯಗಳು ಅರ್ಜಿಯನ್ನು ಬಹುತೇಕ ತಿರಸ್ಕರಿಸಿತ್ತು. ಈ ವೇಳೆ ವಿದ್ಯಾರ್ಥಿ ಹಾಗೂ ಆತನ ಪೋಷಕರಿಗೆ ಹನುಮಾನ್ ಚಾಲೀಸಾ ಪಠಣ ಮಾಡುವಂತೆ ನಾನು ಸಲಹೆ ನೀಡಿದ್ದೆ. ಇದರಂತೆ ವಿದ್ಯಾರ್ಥಿ ಹಾಗೂ ಆತನ ತಂದೆ ಪ್ರತಿ ದಿನ ಹನುಮಾನ್ ಚಾಲೀಸಾ ಪಠಣ ಮಾಡಿದ್ದಾರೆ. ಕೆಲವೇ ತಿಂಗಳಲ್ಲಿ ವಿದ್ಯಾರ್ಥಿ ಎರಡೂ ವಿಶ್ವವಿದ್ಯಾಲಯದಲ್ಲಿ ಆಯ್ಕೆಯಾಗುವ ಮೂಲಕ ಅಚ್ಚರಿ ನಡೆದಿತ್ತು ಎಂದು ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದಾರೆ.
Astrology Tips: ಹನುಮಾನ್ ಚಾಲೀಸಾ ಪಠಣ ವೇಳೆ ಈ ವಿಷ್ಯ ನೆನಪಿರಲಿ
ಕೆಲವರಿಗೆ ಈ ಮಾತುಗಳಿಂದ ಗೊಂದಲಗಳಾಗುವುದು ಸಹಜ. ಕಾರಣ ಉತ್ತಮ ಪ್ರತಿಭೆ, ವಿದ್ಯಾಭ್ಯಾಸವಿದ್ದರೆ ಅವಕಾಶ ಸಿಗುತ್ತದೆ ಎಂದು ಹೇಳುತ್ತಾರೆ. ಇಲ್ಲಿ ಜ್ಞಾನ ಹಾಗೂ ನಂಬಿಕೆಯೊಳಗೆ ಸಣ್ಣ ಗೊಂದಲ ಸೃಷ್ಟಿಯಾಗುತ್ತದೆ. ಹೀಗಾಗಿ ಎರಡನೇ ಟ್ವೀಟ್ ಮೂಲಕ ಉದಾಹರಣೆ ಸಮೇತವಾಗಿ ಕೃಷ್ಣಮೂರ್ತಿ ವಿವರಿಸಿದ್ದಾರೆ. ನಾನು ಯಾವುದೇ ಪರೀಕ್ಷೆ ಬರೆಯುವಾಗ ಅಥವಾ ಯಾವುದೇ ಸವಾಲು ನಿಭಾಯಿಸುವಾಗ ಅದಕ್ಕೆ ಸಂಪೂರ್ಣ ತಯಾರಿ ಮಾಡಿಕೊಳ್ಳುತ್ತೇನೆ. ಕಠಿಣ ಪರಿಶ್ರಮ ಪಡುತ್ತೇನೆ. ಇದರಿಂದ ಪರಿಸ್ಥಿತಿ ಸಂಪೂರ್ಣ ನನ್ನ ನಿಯಂತ್ರಣದಲ್ಲಿರುತ್ತದೆ. ನನ್ನ ಪರೀಕ್ಷೆ ಅಥವಾ ಕೆಲಸ ಮುಗಿದ ಬಳಿಕ ನನ್ನ ಕೈಯಲ್ಲಿ ಏನೂ ಇರುವುದಿಲ್ಲ.ಎಲ್ಲವೂ ದೇವರ ಕೃಪೆಯಂತೆ ನಡೆಯುತ್ತದೆ. ಈ ವೇಳೆ ದೇವರ ಪ್ರಾರ್ಥನೆ, ಪಠಣಗಳು ನೆರವಾಗುತ್ತದೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.
