ಸಣ್ಣ ಸೌಂಡ್ ಬರುತ್ತಿದ್ದರೆ ಕೇಳಲೂ ಇಂಪು, ಮನೆಗೂ ಕಂಪು ಈ ವಿಂಡ್ ಬೆಲ್‌!

ಮನೆಯಲ್ಲಿ ಅಂದ ಹೆಚ್ಚಿಸಲೆಂದು ಬಾಗಿಲಿನ ಎರಡೂ ಬದಿಗಳಲ್ಲಿ ಗಾಳಿಯಲ್ಲಿ(Wind) ಸದ್ದು  ಮಾಡುವ ಬೆಲ್(Bell) ಗೊಂಚಲನ್ನು ನೇತು ಹಾಕಲಾಗುತ್ತದೆ. ಇನ್ನು ಕೆಲವರು ಇದನ್ನು ಮನೆಯ ಮುಂದೆ ನೇತು ಹಾಕುತ್ತಾರೆ. ಗಾಳಿ ಬಂದಾಗ ಅಲ್ಲಾಡಿದಾಗ ಗಂಟೆಯಂತೆ, ಬೆಲ್ ಬಾರಿಸಿದಂತೆ ಶಬ್ದ ಬರುತ್ತದೆ.

Hanging Wind Bell at Home and its Importance

ಅದೃಷ್ಟ ಮತ್ತು ಅದನ್ನು ಆಹ್ವಾನಿಸುವ ವಿಧಾನಗಳು ಹಲವು. ಅದೃಷ್ಟ ಮನೆಗೆ ಬರುತ್ತೆ ಎಂದರೆ ಯಾರು ತಾನೆ ಬಿಡುತ್ತಾರೆ. ಎರಡೂ ಕೈಗಳಲ್ಲೂ ಕರೆದುಕೊಂಡು ಬರುತ್ತಾರೆ. ಹೀಗಿರುವ ಮನೆಯ ಅಂದ ಚೆಂದಕ್ಕೆAದು(Home Decoration), ಸೌಂದರ್ಯ(Beauty) ಹೆಚ್ಚಿಸಲೆಂದು ಮನೆಯಲ್ಲಿ ವಿಂಡ್ ಬೆಲ್(Wind Bell) ನೇತು ಹಾಕುವುದನ್ನು ಈಗೀಗ ಹೆಚ್ಚಾಗಿದೆ. ಇದನ್ನು ವಿಂಡ್‌ಚೈಮ್ ಎಂದು ಕರೆಯುತ್ತಾರೆ. ಫೆಂಗ್ ಶೂಯಿಯ ಕಠಿಣ ಕೆಲಸ ಮಾಡುವ ಪರಿಹಾರಗಳಲ್ಲಿ ಇದೂ ಸಹ ಒಂದು. ಇದು ಅದೃಷ್ಟ ಮತ್ತು ಸಕಾರಾತ್ಮಕತೆಯನ್ನು(Positive Vibes) ತರುತ್ತದೆ ಎಂದು ನಂಬಲಾಗುತ್ತದೆ. ಅಲ್ಲದೆ ವಾಸ್ತುವಿನಲ್ಲೂ ಪ್ರಾಮುಖ್ಯತೆ ಪಡೆದಿದ್ದು ವಾಸ್ತು ದೋಷಗಳನ್ನು(Vaastu Dosha) ಸರಿಪಡಿಸಲು ಸಹಾಯ ಮಾಡುತ್ತದೆ. 

ವಿಂಡ್‌ಬೆಲ್ ಗಾಳಿ ಶಬ್ದ ಮಾಡುವುದರಿಂದ ಆಹ್ಲಾದಕರ ಮತ್ತು ಶಾಂತ ಸಂಗೀತವನ್ನು(Silent Music) ನೀಡುತ್ತದೆ. ಅದೃಷ್ಟದ ಈ ಚಿಹ್ನೆಯು ಸಾಮರಸ್ಯವನ್ನು ತರುತ್ತದೆ. ಅದಾಗ್ಯೂ ವಿಂಡ್‌ಚೈಮ್‌ಗಳನ್ನು ಸರಿಯಾದ ದಿಕ್ಕಿನಲ್ಲಿ(DIrection) ನೇತುಹಾಕುವುದು ಅದರಿಂದ ಉತ್ತಮ ಪ್ರಯೋಕನಗಳನ್ನು ಪಡೆಯಲು ಅಷ್ಟೇ ಮುಖ್ಯ.

ವಿಂಡ್‌ಚೈಮ್‌ಗಳನ್ನು ನೇತುಹಾಕುವ ಮೊದಲು ಈ ಅಂಶಗಳು ನೆನಪಿನಲ್ಲಿರಲಿ. 
ವಿಂಡ್‌ಚೈಮ್ ಅನ್ನು ವಿವಿಧ ರೀತಿಯ ವಸ್ತುಗಳಿಂದ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸೆರಾಮಿಕ್(Ceramic), ಲೋಹ(Metal), ಗಾಜು(Glass) ಅಥವಾ ಮರದಿಂದ(Wooden) ಮಾಡಿದ ಚೈನ್‌ಗಳು ಸಿಗುತ್ತಿವೆ. ಆದರೆ ಈ ಎಲ್ಲಾ ವಸ್ತುಗಳು ಒಂದೇ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಏಕೆಂದರೆ ಇವು ವಿಭಿನ್ನ ವಸ್ತುಗಳಾಗಿದ್ದು ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಗಾಗಿ ಒಬ್ಬರ ಆಕಾಂಕ್ಷೆಗಳು ಮತ್ತು ಕನಸುಗಳಿಗೆ(Dream) ಅನುಗುಣವಾಗಿ ವಿಂಡ್‌ಚೈಮ್‌ಗಳನ್ನು ಆರಿಸುವುದು ಸೂಕ್ತವಾಗಿದೆ. ಅಲ್ಲದೆ ಇವುಗಳನ್ನು ನೇತುಹಾಕುವ ಸ್ಥಳವು ವಸ್ತುಗಳಿಂದ ವಸ್ತುಗಳಿಗೆ ಬದಲಾಗುತ್ತದೆ.

Vastu tips: ನೆಗೆಟಿವಿಟಿ ದೂರಮಾಡೋಕೆ ಇಲ್ಲಿದೆ ಸಿಂಪಲ್ ಸೂತ್ರ...

ಮರದಿಂದ ಮಾಡಿದ ವಿಂಡ್ ಬೆಲ್‌ಗಳನ್ನು ಪೂರ್ವ(East), ದಕ್ಷಿಣ(South) ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಿಸಬೇಕು ಮತ್ತು ಲೋಹದಿಂದ ಮಾಡಿದವುಗಳನ್ನು ಪಶ್ಚಿಮ(West), ಉತ್ತರದಲ್ಲಿ(North) ಇಡಬೇಕು. ಹಾಗೆಯೇ ಸೆರಾಮಿಕ್ ಅಥವಾ ಗಾಜಿನ ಚೈನ್‌ಗಳು ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ನೇತು ಹಾಕಬೇಕು.

ಟೊಳ್ಳು ರಾಡ್‌ಗಳ ವಿಂಡ್‌ಚೈನ್
ವಿAಡ್‌ಚೈನ್‌ನಲ್ಲಿ ಹಲವು ವಿಧಗಳಲ್ಲಿ ಕಾಣಬಹುದು. ಅದರಲ್ಲೂ ಟೊಳ್ಳಾದ ಅಥವಾ ಘನವಾದ ವಿಂಡ್ ಬೆಲ್ ಎರಡನ್ನೂ ಸಮಾನವಾಗಿದ್ದು, ಎರಡೂ ಉತ್ತಮವೆಂದು ಪರಿಗಣಿಸಲಾಗುತ್ತದೆ. ಅದಾಗ್ಯೂ ವೃತ್ತಿಜೀವನದಂತಹ(Working Life) ನಿರ್ದಿಷ್ಟ ಪ್ರದೇಶ ಅಥವಾ ಡೊಮೇನ್‌ಗಾಗಿ ಇದನ್ನು ಬಳಸುತ್ತಿದ್ದರೆ, ಟೊಳ್ಳಾದ ರಾಡ್‌ಗಳು ಸಾರ್ವತ್ರಿಕ ಶಕ್ತಿಯನ್ನು ಎತ್ತುವುದರಿಂದ ಇದಕ್ಕೆ ಆದ್ಯತೆ ನೀಡುವುದು ಒಳ್ಳೆಯದು.

ರಾಡ್ ಸಂಖ್ಯೆಯು ಮುಖ್ಯ
1. ವಿಂಡ್ ಬೆಲ್ ಮನೆಯಲ್ಲಿ ಇರಿಸುವಾಗ ರಾಡ್‌ಗಳ ಸಂಖ್ಯೆಯೂ ಮುಖ್ಯವಾಗಿರುತ್ತದೆ. ನೀವು ಅದನ್ನು ಎಲ್ಲಿ ಇಡಲು ಬಯಸುತ್ತೀರಿ(Place) ಮತ್ತು ಎಲ್ಲಿ ನೇತು ಹಾಕಲು ಇಚ್ಛಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆಗ್ನೇಯ ಮೂಲೆಯಲ್ಲಿರುವಂತೆ ನೀವು ಆಯ್ಕೆ ಮಾಡುವ ರಾಡ್‌ಗಳ ಸಂಖ್ಯೆಯು ನೇತುಹಾಕಲು ಬಯಸುವ ಪ್ರದೇಶಕ್ಕೆ ಅನುಗುಣವಾಗಿರಬೇಕು. ನಾಲ್ಕು ಕೋಲುಗಳಿರುವ ವಿಂಡ್ ಬೆಲ್‌ಗಳನ್ನು ನಾಲ್ಕು ಆಗ್ನೇಯ ಸಂಖ್ಯೆ ಎಂದು ಬಳಸಬೇಕು.

2. ವೃತ್ತಿಜೀವನದಲ್ಲಿ ಅವಕಾಶಗಳನ್ನು(Chances) ಆಹ್ವಾನಿಸಲು ನೀವು ಬಯಸಿದ್ದಲ್ಲಿ ವಿಂಡ್ ಬೆಲ್‌ಗಳಿಗೆ ಸಿಂಗಲ್(Single) ಅಥವಾ ಆರು ಟೊಳ್ಳಾದ ರಾಡ್‌ಗಳನ್ನು ಹೊಂದಿರುವ ಬೆಲ್ ಅನ್ನು ನೇತುಹಾಕಬೇಕು. ಇದನ್ನು ಮನೆಯ ಉತ್ತರ ದಿಕ್ಕಿಗೆ ನೇತು ಹಾಕಬೇಕು.

3. ಉತ್ತಮ ಆರೋಗ್ಯಕ್ಕಾಗಿ(Health) ಮತ್ತು ಕುಟುಂಬ ಸಂಬAಧಗಳನ್ನು ನಿರ್ಮಿಸಲು, ಮೂರು ಸರಳುಗಳನ್ನು ಹೊಂದಿರುವ ಬಿದಿರು(Bamboo) ಅಥವಾ ಮರದ ದಿಮ್ಮಿಗಳ ಚೈನ್ ಅನ್ನು ಪೂರ್ವ ದಿಕ್ಕಿನಲ್ಲಿ ನೇತುಹಾಕಬೇಕು.

4. ಸಂಪತ್ತು(Wealth) ಮತ್ತು ಸಮೃದ್ಧಿ(Prosperity) ಬಯಸುವವರು ಬಿದಿರು ಅಥವಾ ಮರದಿಂದ ಮಾಡಿದ ವಿಂಡ್ ಬೆಲ್‌ಗಳನ್ನು ದಕ್ಷಿಣ ದಿಕ್ಕಿನಲ್ಲಿ, ರಾಡ್‌ಗಳನ್ನು ಹೊಂದಿದ್ದರೆ ಅದನ್ನೂ ದಕ್ಷಿಣ ದಿಕ್ಕಿನಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಸಂಪತ್ತನ್ನು ಆಹ್ವಾನಿಸಲು ಮೀನು(Fish) ಅಥವಾ ನೀರಿನ ಥೀಮ್‌ಗಳೊಂದಿಗೆ(Water Theme) ವಿಂಡ್ ಬೆಲ್‌ಗಳನ್ನು ನೇತುಹಾಕುವುದು ಸಹ ಉತ್ತಮ ಆಯ್ಕೆಯಾಗಿದೆ.

5. ಖ್ಯಾತಿಯನ್ನು ಪಡೆಯಲು ಅಥವಾ ಗುರುತಿಸಲು, ಮೂರು, ನಾಲ್ಕು ಅಥವಾ ಒಂಬತ್ತು ರಾಡ್‌ಗಳಿರುವ ಬಿದಿರು, ಮರದ ಅಥವಾ ಲೋಹದ ವಿಂಡ್‌ಬೆಲ್‌ಗಳನ್ನು ದಕ್ಷಿಣ(South) ದಿಕ್ಕಿನಲ್ಲಿ ಇಡಬೇಕು. ಅದಾಗ್ಯೂ, ಒಂಬತ್ತು ರಾಡ್‌ಗಳನ್ನು ಹೊಂದಿರುವುದನ್ನು ಈ ಉದ್ದೇಶಕ್ಕಾಗಿ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.

6. ಮಕ್ಕಳಿಗೆ ಹಾಗೂ ಅವರ ಸೃಜನಶೀಲತೆಯ ಬೆಳವಣಿಗೆಗೆ ಆರು ಅಥವಾ ಏಳು ರಾಡ್‌ಗಳಿರುವ ಲೋಹದ ವಿಂಡ್ ಬೆಲ್‌ಗಳನ್ನು ಪಶ್ಚಿಮದಲ್ಲಿ(West) ಇರಿಸುವುದು ಉತ್ತಮವೆಂದು ಹೇಳಲಾಗುತ್ತದೆ.

Dining Hallಗೆ ತಪ್ಪಿಯೂ ಈ ಬಣ್ಣ ಬಳಸ್ಬೇಡಿ.. ಆರೋಗ್ಯ ಹಾಳಾಗುತ್ತೆ

ವಾಸ್ತು ದೋಷಗಳು
ಟಾಯ್ಲೆಟ್(Toilet) ಅಥವಾ ಸಮಸ್ಯೆಯ ಪ್ರದೇಶಗಳಂತಹ ತೊಂದರೆಗಳನ್ನು ನಿವಾರಿಸಲು ಲೋಹದ ವಿಂಡ್ ಚೈನ್‌ಗಳನ್ನು(Metal) ನೇತುಹಾಕುವುದು ಒಳ್ಳೆಯದು. ಮರದ ಚೈಮ್‌ಗಳನ್ನು ಈಶಾನ್ಯ ಅಥವಾ ನೈಋತ್ಯ ಮೂಲೆಯಲ್ಲಿ ಇರಿಸಬೇಕು ಮತ್ತು ಲೋಹದ ಚೈನ್‌ಗಳನ್ನು ಪೂರ್ವ(East) ಅಥವಾ ಆಗ್ನೇಯ ಮೂಲೆಯಲ್ಲಿ ನೇತುಹಾಕಬೇಕು. ಅದಾಗ್ಯೂ, ಯಾವುದೇ ಬಾಧೆ ಅಥವಾ ವಾಸ್ತು ದೋಷವಿದ್ದರೆ ಗಾಜು(Glass) ಅಥವಾ ಸೆರಾಮಿಕ್(Ceramic) ಚೈನ್‌ಗಳನ್ನು ಉತ್ತರದಲ್ಲಿ ನೇತುಹಾಕಬೇಕು.

ವಿಂಡ್‌ಚೈನ್ ನೇತು ಹಾಕುವ ಮೊದಲು ಈ ವಿಷಯ ನೆನಪಿನಲ್ಲಿರಲಿ
1. ಕುಳಿತುಕೊಳ್ಳುವ, ತಿನ್ನುವ, ಕೆಲಸ ಮಾಡುವ ಅಥವಾ ಮಲಗುವ ಸ್ಥಳದಲ್ಲಿ ವಿಂಡ್ ಬೆಲ್ ಅನ್ನು ಎಂದಿಗೂ ನೇತುಹಾಕಬೇಡಿ. ಹಾಗೂ ನೀವು ನೇರವಾಗಿ ಅದರ ಕೆಳಗಿರುವಂತಹ ಸ್ಥಳದಲ್ಲಿ ನೇತುಹಾಕಬೇಡಿ.
2. ಬಾಗಿಲಿಗೆ ಅಥವಾ ನಿಮಗೆ ತಾಗುವಂತಹ ರೀತಿಯಲ್ಲಿ ಗಾಳಿಯ ಚೈನ್‌ಗಳನ್ನು ಎಂದಿಗೂ ಬಾಗಿಲಿನ(Door) ಮೇಲೆ ನೇತುಹಾಕಬೇಡಿ.
3. ವಿಶೇಷವಾಗಿ ಮರಗಳ ವಿಂಡ್ ಚೈನ್‌ಗಳನ್ನು ನೇತು ಹಾಕಬಾರದು ಮರದ ಹೊರತಾಗಿ ಇತರೆ ವಸ್ತುಗಳಿಂದ ಮಾಡಿದ್ದರೆ ಎರಡಕ್ಕಿಂತ ಹೆಚ್ಚು ಬಾಗಿಲುಗಳನ್ನು ಹೊಂದಿರುವ ಪ್ರದೇಶದಲ್ಲಿ ಸರಳ ರೇಖೆಯಲ್ಲಿ ಚೈನ್‌ಗಳನ್ನು ನೈಋತ್ಯ ದಿಕ್ಕಿನಲ್ಲಿ ನೇತು ಹಾಕಬಹುದು. ಟೊಳ್ಳಾದ ರಾಡ್‌ಗಳೊಂದಿಗೆ ಪಗೋಡಾ(Pagoda) ಆಕಾರದ ಚೈನ್‌ಗಳು ಶಕ್ತಿವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ.

Latest Videos
Follow Us:
Download App:
  • android
  • ios