Asianet Suvarna News Asianet Suvarna News

Astro Tips : ಜೀವನಕ್ಕೆ ನೆಮ್ಮದಿ ತರುತ್ತೆ ಅಡುಗೆ ಮನೆಯಲ್ಲಿರೋ ಕಾವಲಿ!

ಅಡುಗೆ ಮನೆಯಲ್ಲಿರುವ ತವಾ ಬರೀ ರೊಟ್ಟಿ, ದೋಸೆ ಮಾಡೋಕೆ ಮಾತ್ರವಲ್ಲ. ಇದು ನಮ್ಮ ಜೀವನದ ಜೊತೆ ನಂಟು ಹೊಂದಿದೆ. ತವಾದ ಕೆಲ ಉಪಾಯಗಳು ಭವಿಷ್ಯದಲ್ಲಿ ಸುಖಕರ ಜೀವನ ನಡೆಸಲು ನೆರವಾಗುತ್ತದೆ. 
 

Griddle Astro Remedies For Home Stress
Author
First Published Apr 1, 2023, 4:29 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ, ವಾಸ್ತು ಶಾಸ್ತ್ರದಲ್ಲಿ ಮಾತ್ರವಲ್ಲ ವಿಜ್ಞಾನದಲ್ಲೂ ಅಡುಗೆ ಮನೆಗೆ ಮಹತ್ವದ ಸ್ಥಾನವಿದೆ. ಅಡುಗೆ ಮನೆ ಕೇವಲ ಆಹಾರ ತಯಾರಿಸುವ ಸ್ಥಳವಲ್ಲ. ತಯಾರಾಗುವ ಆಹಾರ ನಮ್ಮ ಆರೋಗ್ಯ ವೃದ್ಧಿಸಬೇಕು ಅಂದ್ರೆ ಅಲ್ಲಿನ ಶುದ್ಧತೆ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಒಬ್ಬ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಲು ಆತ ಸೇವಿಸುವ ಆಹಾರದ ಜೊತೆಗೆ ಆತನ ಅಡುಗೆ ಮನೆ ಹೇಗಿದೆ ಎಂಬುದು ಕೂಡ ಮಹತ್ವಪಡೆಯುತ್ತದೆ. 

ಅಡುಗೆ (Cooking) ಮನೆ ಚಿಕ್ಕ ಔಷಧಾಲಯವೂ ಹೌದು. ಅಲ್ಲಿರುವ ವಸ್ತುಗಳನ್ನು ಬಳಸಿ ಅನೇಕ ರೋಗ (Disease) ಗಳನ್ನು ನಾವು ಗುಣಪಡಿಸಬಹುದು. ಹಾಗೆಯೇ ಅಡುಗೆ ಮನೆಯಲ್ಲಿರುವ ಕೆಲ ವಸ್ತುಗಳು ವಾಸ್ತು ದೋಷ ನಿವಾರಣೆಗೆ ಸಹಕಾರಿಯಾಗುತ್ತದೆ. ನಮ್ಮ ಮನೆಯ ಸಣ್ಣಪುಟ್ಟ ವಾಸ್ತು (Vastu) ದೋಷಗಳನ್ನು ಬಗೆಹರಿಸುವ ಶಕ್ತಿ ಅಡುಗೆ ಮನೆಯಲ್ಲಿರುವ ಕೆಲ ವಸ್ತುಗಳಿಗಿದೆ. ನಾವಿಂದು ಅಡುಗೆ ಮನೆಯಲ್ಲಿರುವ ತವಾ ಬಳಸಿ ನಾವು ಮನೆಯ ಸಂತೋಷ (Happiness) ವನ್ನು ಹೇಗೆ ವೃದ್ಧಿಸಬಹುದು ಹಾಗೆ ಮನೆಯ ಪ್ರಗತಿಗೆ ಇದು ಹೇಗೆ ದಾರಿಯಾಗುತ್ತದೆ ಎಂಬುದನ್ನು ನಿಮಗೆ ಹೇಳ್ತೇವೆ. 

Chanakya Niti: ಪೋಷಕರು ಈ ತಪ್ಪು ಮಾಡಿದ್ರೆ ಮಗುವಿಗೆ ಶತ್ರುಗಳಾಗ್ತಾರೆ!

ಮನೆಯಲ್ಲಿ ನೆಮ್ಮದಿ ಬೇಕೆಂದ್ರೆ ಹೀಗೆ ಮಾಡಿ : ಮನೆಯ ಉದ್ವಿಗ್ನತೆ ಅಥವಾ ಕ್ಲೇಶವನ್ನು ಹೋಗಲಾಡಿಸಲು ಪ್ರತಿ ರಾತ್ರಿ ಮಲಗುವ ಮೊದಲು, ಅಡುಗೆಮನೆಯಲ್ಲಿ ಇರುವ ತವಾಗೆ ಅರಿಶಿನವನ್ನು ಹಾಕಿ ಮಲಗಿ. ಹೀಗೆ ಮಾಡಿದ್ರೆ ಕುಟುಂಬಸ್ಥರ ಮಧ್ಯೆ ಇರುವ ಕ್ಲೇಶ ಕಡಿಮೆಯಾಗುತ್ತದೆ.

ಈ ತಪ್ಪು ಮಾಡ್ಬೇಡಿ : ಮನೆಯ ಇರುವ ತವಾವನ್ನು ತಲೆಕೆಳಗಾಗಿ ಇಡಬೇಡಿ. ನೀವು ಹೀಗೆ ಮಾಡಿದ್ರೆ ಮನೆಯಲ್ಲಿ ಗಲಾಟೆ, ಜಗಳ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಒಂದ್ವೇಳೆ ತಲೆಕೆಳಗಾಗಿ ಇಟ್ಟರೆ ಅದ್ರ ಮೇಲೆ ಬಟ್ಟೆ ಮುಚ್ಚಿಡಿ.

ಸಂಕಷ್ಟ ದೂರ ಮಾಡುತ್ತೆ ತವಾದ ಈ ಉಪಾಯ : ಕುಟುಂಬದಲ್ಲಿ ನೆಮ್ಮದಿ ಮುಖ್ಯ. ಸದಾ ಒಂದಿಲ್ಲೊಂದು ಸಮಸ್ಯೆ ನಿಮ್ಮನ್ನು ಸಂಕಷ್ಟಕ್ಕೆ ನೂಕುತ್ತಿದೆ ಎಂದಾದ್ರೆ ನೀವು ರಾತ್ರಿ ಮಲಗುವ ಮೊದಲು ತವಾ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು. 

ಧಾರ್ಮಿಕ ನಂಬಿಕೆ ಪ್ರಕಾರ ಹನುಮಾನ್ ಜಯಂತಿ ಅನ್ನಬಾರದೇಕೆ?

ತವಾ ಮೇಲೆ ಹಸಿ ಹಾಲು ಹಾಕಿ : ನೀವು ರೊಟ್ಟೆ ತಯಾರಿಸಲು ತವಾವನ್ನು ಬಿಸಿ ಮಾಡುವ ಸಮಯದಲ್ಲಿ ತವಾ ಮೇಲೆ ಹಸಿ ಹಾಲನ್ನು ಹಾಕಿ. ನಂತ್ರ ರೊಟ್ಟಿ ಬೇಯಿಸಲು ಶುರು ಮಾಡಿ. ಹೀಗೆ ಮಾಡಿದ್ರೆ ನಿಮ್ಮ ಮನೆಯ ಎಲ್ಲ ಸಮಸ್ಯೆ ದೂರವಾಗುತ್ತದೆ. 

ಕಪ್ಪು ದಾರ ಬಳಸಿ : ಎಷ್ಟೇ ಮಾಡಿದ್ರೂ ಮನೆಯಲ್ಲಿ ಉದ್ವಿಗ್ನ ವಾತಾವರಣ ಕಡಿಮೆಯಾಗ್ತಿಲ್ಲ ಎನ್ನುವವರು ತವಾದ ಹಿಡಿಕೆಗೆ ಕಪ್ಪು ದಾರವನ್ನು ಕಟ್ಟಬೇಕು. ಪ್ರತಿ ವಾರ ಈ ದಾರವನ್ನು ಬದಲಾಯಿಸಲು ಮರೆಯಬೇಡಿ. ಒಂದೇ ದಾರವಿದ್ರೆ ಮತ್ತೆ ಸಮಸ್ಯೆ ಶುರುವಾಗಬಹುದು. 

ನವಜಾತ ಶಿಶುವಿನ ಪಾದ ಸ್ಪರ್ಶ : ಮನೆಯಲ್ಲಿ ಸುಖ, ಶಾಂತಿ, ಸಂತೋಷ ನೆಲೆಸಿರಬೇಕೆಂದು ಎಲ್ಲರೂ ಬಯಸ್ತಾರೆ. ಕೆಲವೊಮ್ಮೆ ಎಷ್ಟೇ ಪ್ರಯತ್ನದ ನಂತ್ರವೂ ಶಾಂತಿ ಸಿಗೋದಿಲ್ಲ. ಆ ಸಮಯದಲ್ಲಿ ನೀವು ನವಜಾತ ಶಿಶುವಿನ ಪಾದವನ್ನು ತಣ್ಣನೆಯ ತವಾಕ್ಕೆ ಸ್ಪರ್ಶಿಸಿ. ನಂತ್ರ ತವಾ ಮೇಲೆ ರೊಟ್ಟಿ ಬೇಯಿಸಿ.

ಇಂಥ ತವಾ ಬಳಸಬೇಡಿ : ಮನೆಯಲ್ಲಿ ಮುರಿದ, ಹಾಳಾದ ತವಾ ಇದ್ದರೆ ಅದನ್ನು ಬಳಸಬೇಡಿ. ಅದನ್ನು ಮನೆಯಲ್ಲಿ ಇಡುವುದು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಹಾಗಾಗಿ ಹಿಡಿಕೆ ಮುರಿದಿದ್ರೂ ಅದನ್ನು ಬದಲಿಸಿ.

ನೆಮ್ಮದಿ ಜೀವನಕ್ಕೆ ಹೀಗೂ ಮಾಡ್ಬಹುದು : ನೀವು ತವಾ ಮೇಲೆ ಮಣ್ಣಿನ ದೀಪವನ್ನು ಉಜ್ಜಬೇಕು. ಆಗ ತವಾ ಮೇಲೆ ಮಣ್ಣು ಕುಳಿತುಕೊಳ್ಳುತ್ತದೆ. ಆ ಮಣ್ಣನ್ನು ತೆಗೆದು ಒಂದು ಕಪ್ಪು ಕಾಗದದ ಮೇಲೆ ಹಾಕಿ ಅದನ್ನು ದೂರದ ನಿರ್ಜನ ಪ್ರದೇಶದಲ್ಲಿ ಎಸೆದು ಬರಬೇಕು. ಇದ್ರಿಂದ ನೀವು ಲಾಭ ನೋಡ್ಬಹುದು. 
 

Follow Us:
Download App:
  • android
  • ios