ಈ 3 ರಾಶಿ ಹುಡುಗಿಯರದು ಆಕರ್ಷಕ ವ್ಯಕ್ತಿತ್ವ.... ಇವರಿಗೆ ಆಗ್ತಾರೆ ಎಲ್ಲರೂ ಫಿದಾ..!!
ಪ್ರತಿ ರಾಶಿಯ ವ್ಯಕ್ತಿತ್ವ ಗುಣಗಳು ವಿಭಿನ್ನವಾಗಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಯ ಹುಡುಗಿಯರ ವ್ಯಕ್ತಿತ್ವ ಆಕರ್ಷಕವಾಗಿರುತ್ತದೆ. ಎಲ್ಲೇ ಹೋದರೂ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ಇತರರ ಮನಸ್ಸನ್ನು ಗೆಲ್ಲುವ ಕಲೆ ಇವರಿಗೆ ತಿಳಿದಿರುತ್ತದೆ. ಆ ಮೂರು ರಾಶಿಗಳ ಬಗ್ಗೆ ತಿಳಿಯೋಣ...
ರಾಶಿ ಚಕ್ರಗಳು ಹನ್ನೆರಡು. ಪ್ರತಿ ರಾಶಿಯವರ ಸ್ವಭಾವಗಳು ಬೇರೆ ಬೇರೆ. ಒಂದೇ ದಿನ ಜನಿಸಿದರೂ ರಾಶಿ ಭಿನ್ನವಾಗಿರುತ್ತವೆ. ಕೆಲವರದು ಅಗ್ನಿ ತತ್ವ ರಾಶಿಯಾದರೆ ಇನ್ನು ಕೆಲವು ರಾಶಿಯವರದ್ದು ವಾಯು ಮತ್ತು ಜಲ ತತ್ವ ರಾಶಿ ಆಗಿರುತ್ತದೆ. ಹಾಗಾಗಿ ಆಯಾ ತತ್ವಗಳಿಗೆ ತಕ್ಕಂತೆ ಗುಣಸ್ವಭಾವಗಳು ಆಧರಿಸಿರುತ್ತವೆ. ಅಷ್ಟೇ ಅಲ್ಲದೆ ಪ್ರತಿ ರಾಶಿಯ ಗುಣಗಳು ಆಯಾ ರಾಶಿಯ ಅಧಿಪತಿ ಗ್ರಹಗಳ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಗ್ರಹ, ರಾಶಿ, ನಕ್ಷತ್ರಗಳ ಪ್ರಭಾವದಿಂದ ವ್ಯಕ್ತಿಯಿಂದ ವ್ಯಕ್ತಿಗೆ ರೂಪ, ಸ್ವಭಾವ, ಗುಣ, ವ್ಯಕ್ತಿತ್ವಗಳಲ್ಲಿ ಅನೇಕ ವ್ಯತ್ಯಾಸಗಳಿರುತ್ತವೆ.
ರಾಶಿ ನಕ್ಷತ್ರಗಳನ್ನು ಆಧರಿಸಿ ವ್ಯಕ್ತಿಯ ಉದ್ಯೋಗ, ವಿವಾಹ ಇನ್ನಿತರ ಅಂಶಗಳ ಬಗ್ಗೆ ತಿಳಿಯಬಹುದು. ಹಾಗೆಯೆ ಕೆಲವು ರಾಶಿಯವರ ವ್ಯಕ್ತಿತ್ವ ಅತ್ಯಂತ ಆಕರ್ಷಕವಾಗಿರುತ್ತದೆ. ಇತರರು ಇವರೆಡೆಗೆ ಬಹು ಬೇಗ ಆಕರ್ಷಿತರಾಗುತ್ತಾರೆ. ಅಂತಹ ಕೆಲವು ರಾಶಿಯ ಹುಡುಗಿಯರ ಬಗ್ಗೆ ತಿಳಿಯೋಣ...
ಇದನ್ನು ಓದಿ: ಹುಡುಗಿಯರ ಹಸ್ತದಲ್ಲಿ ಈ ರೇಖೆಗಳಿದ್ದರೆ ಯಶಸ್ಸು ಖಚಿತ..!
ಈ ಮೂರು ರಾಶಿಯ ಹುಡುಗಿಯರ ವ್ಯಕ್ತಿತ್ವ ಅತ್ಯಂತ ಆಕರ್ಷಕವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಮಿಥುನ ಸಿಂಹ ಮತ್ತು ತುಲಾ ರಾಶಿಯ ಹುಡುಗಿಯರು ಅತ್ಯಂತ ಆಕರ್ಷಕವಾಗಿರುವುದಲ್ಲದೇ, ಇವರ ವ್ಯಕ್ತಿತ್ವ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ.
ಮಿಥುನ ರಾಶಿ:
ಜ್ಯೋತಿಷ್ಯಶಾಸ್ತ್ರದ ಅನುಸಾರ ಈ ರಾಶಿಯ ಅನುಸಾರ ಈ ರಾಶಿಯವರು ಉತ್ತಮ ವಾಗ್ಮಿಗಳಾಗಿರುತ್ತಾರೆ. ಈ ಮಿಥುನ ರಾಶಿಯವರ ವ್ಯಕ್ತಿತ್ವ ಸಹ ಅತ್ಯಂತ ಆಕರ್ಷಕವಾಗಿರುತ್ತದೆ. ಈ ರಾಶಿಯ ಹುಡುಗಿಯರು ವ್ಯಕ್ತಿತ್ವವು ವಿಭಿನ್ನ ಮತ್ತು ಆಕರ್ಷಕ. ಇವರ ಮಾತನಾಡುವ ಶೈಲಿ ವಿಭಿನ್ನವಾಗಿರುತ್ತದೆ. ಇದು ಇತರರು ಇವರತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡುತ್ತದೆ. ಈ ರಾಶಿಯ ಹುಡುಗಿಯರು ಕೆಲಸ ಕಾರ್ಯಗಳಿಂದ ಹೋದ ಕಡೆಗಳಲ್ಲೆಲ್ಲ ತಮ್ಮ ಛಾಪನ್ನು ಮೂಡಿಸುವಲ್ಲಿ ಸಕ್ಷಮರಾಗಿರುತ್ತಾರೆ. ಅತ್ಯಂತ ಉತ್ಸಾಹ ಮತ್ತು ನಗುಮೊಗದ ವ್ಯಕ್ತಿಗಳು ಇವರಾಗಿರುತ್ತಾರೆ. ಹಾಗಾಗಿ ಇತರರನ್ನು ಇಂಪ್ರೆಸ್ ಮಾಡಲು ಹೆಚ್ಚು ಪರಿಶ್ರಮ ಪಡುವ ಅಗತ್ಯ ಈ ರಾಶಿಯ ಹುಡುಗಿಯರಿಗೆ ಇರುವುದಿಲ್ಲ. ಇವರ ಆಕರ್ಷಕ ವ್ಯಕ್ತಿತ್ವ ಇವರ ಕೆಲಸವನ್ನು ಸುಲಭ ಮಾಡಿಕೊಡುತ್ತದೆ.
ಇದನ್ನು ಓದಿ: ನಿಮ್ಮ ಪಾದಾಂಕಕ್ಕೆ ಹೊಂದುವ ಉದ್ಯೋಗ ಕ್ಷೇತ್ರಗಳಿವು..
ಸಿಂಹ ರಾಶಿ:
ಸೂರ್ಯ ಗ್ರಹದ ಅಧಿಪತ್ಯವಿರುವ ಸಿಂಹ ರಾಶಿಯ ಹುಡುಗಿಯರು ಅತ್ಯಂತ ಜವಾಬ್ದಾರಿ ಉಳ್ಳವರಾಗಿರುತ್ತಾರೆ. ಪ್ರಭಾವಶಾಲಿ ವ್ಯಕ್ತಿತ್ವ ಸಿಂಹ ರಾಶಿಯ ಹುಡುಗಿಯರದ್ದು ಆಗಿರುತ್ತದೆ. ಮನೆ ಅಥವಾ ಕಚೇರಿ ಯಾವುದೇ ಆಗಿರಲಿ ಇವರ ಮಾತನ್ನು ಕೇಳಲು ಎಲ್ಲರೂ ಇಷ್ಟಪಡುತ್ತಾರೆ. ಅಂಥ ಆಕರ್ಷಕ ಸ್ವಭಾವ ಇವರದ್ದಾಗಿರುತ್ತದೆ. ಸೂರ್ಯಗ್ರಹದ ತೇಜಸ್ಸಿನ ಪ್ರಭಾವದಿಂದ ಉತ್ತಮ ನೇತೃತ್ವದ ಕ್ಷಮತೆಯನ್ನು ಈ ರಾಶಿಯವರು ಹೊಂದಿರುತ್ತಾರೆ.
ಇವರ ವ್ಯಕ್ತಿತ್ವ ವಿಭಿನ್ನವಾಗಿರುವ ಕಾರಣ ಇತರರು ಇವರ ಮಾತಿನ ಶೈಲಿಗೆ ಮಾರು ಹೋಗುತ್ತಾರೆ. ಹುಡುಗರು ಈ ರಾಶಿಯ ಹುಡುಗಿಯರ ವ್ಯಕ್ತಿತ್ವಕ್ಕೆ ಬೇಗ ಆಕರ್ಷಿತರಾಗುತ್ತಾರೆ ಎಂದು ಹೇಳಲಾಗುತ್ತದೆ. ಹಾಗಂತ ಈ ರಾಶಿಯ ಹುಡುಗಿಯರನ್ನು ಇಂಪ್ರೆಸ್ ಮಾಡುವುದು ತುಸು ಕಷ್ಟದ ಕೆಲಸವೇ ಆಗಿರುತ್ತದೆ. ಈ ರಾಶಿಯ ಹುಡುಗಿಯರು ತಮಗಾಗಿ ಪ್ರಾಮಾಣಿಕ ಮತ್ತು ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುವ ಸಂಗಾತಿಯನ್ನು ಬಯಸುತ್ತಾರೆ.
ಇದನ್ನು ಓದಿ: ಶರೀರದ ಭಾಗಗಳು ಅದುರುತ್ತಿದ್ದರೆ ಶುಭವೋ..? ಅಶುಭವೋ.. ?
ತುಲಾ ರಾಶಿ:
ಈ ರಾಶಿಯ ಹುಡುಗಿಯರು ಸ್ಟೈಲ್ ವಿಭಿನ್ನವಾಗಿರುತ್ತದೆ. ಇತರರ ಮನಸ್ಸನ್ನು ಸುಲಭವಾಗಿ ಗೆಲ್ಲುವ ಕಲೆ ಇವರಿಗೆ ತಿಳಿದಿರುತ್ತದೆ. ತುಲಾ ರಾಶಿಯ ಹುಡುಗಿಯರ ಮಾತಿಗೆ, ಯಾರನ್ನು ಬೇಕಾದರೂ ಇಂಪ್ರೆಸ್ ಮಾಡುವ ತಾಕತ್ತಿರುತ್ತದೆ. ಇತರರು ಈ ರಾಶಿಯ ಹುಡುಗಿಯರ ವ್ಯಕ್ತಿತ್ವಕ್ಕೆ ಬೇಗ ಆಕರ್ಷಿತರಾಗುತ್ತಾರೆ. ಇವರಿಗೆ ಸ್ನೇಹಿತರು ಅನೇಕರಿರುತ್ತಾರೆ. ಹುಡುಗರು ಈ ರಾಶಿಯ ಹುಡುಗಿಯರಿಗೆ ಬೇಗ ಮನಸ್ಸು ಕೊಟ್ಟು ಬಿಡುತ್ತಾರೆ. ತುಲಾ ರಾಶಿಯ ಹುಡುಗಿಯರು ಹೋದ ಕಡೆಗೆಲ್ಲ ತಮ್ಮ ಛಾಪನ್ನು ಮೂಡಿಸುತ್ತಾರೆ.