ಯುಗಾದಿಯಿಂದ ಹನುಮ ಜಯಂತಿವರೆಗೆ- Aprilನ ಹಬ್ಬ ಹರಿದಿನಗಳಿವು..

ಹಿಂದೂ ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಬಹಳಷ್ಟು ಪ್ರಮುಖ ಹಬ್ಬಹರಿದಿನಗಳಿವೆ. ಈಗಾಗಲೇ ಯುಗಾದಿಯಿಂದ ಆರಂಭವಾಗಿರುವ ಹಬ್ಬದ ಸಂಭ್ರಮ ಸರಣಿಯಲ್ಲಿ ಮುಂದುವರಿಯಲಿವೆ.

From Ugadi to Rama Navami check out the April festival calendar skr

ಚೈತ್ರ ಮಾಸ ಎಂದರೇ ಪ್ರಕೃತಿಯು ಹಬ್ಬದಂತೆ ಸಂಭ್ರಮಿಸುತ್ತದೆ. ಎಲೆ ಚಿಗುರುಗಳು, ಕಾಯಿ ಪೀಚುಗಳು, ಹೂವು ಹಣ್ಣುಗಳು ಎಲ್ಲೆಡೆ ಮರಗಿಡಗಳಲ್ಲಿ ತುಂಬಿ ಪ್ರಕೃತಿ ವರ್ಣಮಯವಾಗಿದೆ. ಕೇವಲ ಪ್ರಕೃತಿಯಷ್ಟೇ ಅಲ್ಲ, ನಮಗೂ ಈ ತಿಂಗಳ ಸಂಭ್ರಮ, ಸಡಗರಕ್ಕೆ ಕಾರಣಗಳು ಹಲವಿವೆ. ಈ ತಿಂಗಳು ಯುಗಾದಿಯ ಸಂಭ್ರಮಾಚರಣೆಯಿಂದಲೇ ಆರಂಭವಾಗಿದೆ. ಇದೇ ಅಲ್ಲದೆ ದೇಶಾದ್ಯಂತ ಈ ಚೈತ್ರ ಮಾಸವು ಹತ್ತು ಹಲವಾರು ಹಬ್ಬ ಹರಿದಿನಗಳ ಸಂಭ್ರಮಾಚರಣೆಗೆ ಸಾಕ್ಷಿಯಾಗಲಿದೆ. ಚೈತ್ರ ನವರಾತ್ರಿಯಿಂದ ಹಿಡಿದು ರಾಮನವಮಿ(Ram Navami)ವರೆಗೂ, ಯುಗಾದಿಯಿಂದ ಹನುಮಾನ್ ಜಯಂತಿಯವರೆಗೂ ಈ ಮಾಸದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ. ಏಪ್ರಿಲ್ ಹಬ್ಬದ ಕ್ಯಾಲೆಂಡರ್(April 2022 festival calendar) ನೋಡೋಣ ಬನ್ನಿ. 

ಚೈತ್ರ ಮಾಸವು ಹಿಂದೂ ವರ್ಷದ ಮೊದಲ ತಿಂಗಳಾಗಿದ್ದು, ದೇಶಾದ್ಯಂತ ಹಲವು ಪ್ರಮುಖ ಆಚರಣೆಗಳನ್ನು ಈ ಮಾಸದಲ್ಲಿ ಕಾಣಬಹುದಾಗಿದೆ. 

ಚೈತ್ರ ನವರಾತ್ರಿ(Chaitra Navratri)
ಈಗಾಗಲೇ ಹೊಸ ವರ್ಷ ಅಂದರೆ ಯುಗಾದಿಯನ್ನು ಏ.2ರಂದು ಕರ್ನಾಟಕ(Karnataka), ಆಂಧ್ರಪ್ರದೇಶ, ತೆಲಂಗಾಣದ ಜನತೆ ಆಚರಿಸಿದರೆ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ನಿನ್ನೆ ಗುಡಿ ಪಡ್ವಾ(Gudi Padwa) ಆಚರಿಸಿದರು. ಆಸಕ್ತಿಕರ ವಿಷಯವೆಂದರೆ, ಇದೇ ದಿನ ಸಿಂಧಿಗಳು ತಮ್ಮ ದೇವರಾದ ಝುಲೇಲಾಲ್ ಜಯಂತಿ ಆಚರಿಸಿದರು. ಅದೂ ಅಲ್ಲದೆ, ಈ ದಿನ 9 ದಿನಗಳ ಅವಧಿಯ ಚೈತ್ರ ನವರಾತ್ರಿ ಆರಂಭವಾಯಿತು. ತಾಯಿ ದುರ್ಗೆಯನ್ನು ಆರಾಧಿಸುವ ಈ ನವರಾತ್ರಿ ಪಶ್ಚಿಮ ಬಂಗಾಳದಲ್ಲಿ ಜೋರು. ಇಷ್ಟೇ ಅಲ್ಲದೆ, ರಾಮನವಮಿ ಕೂಡಾ ಏ.2ರಿಂದ ಆರಂಭವಾಗಿದೆ. 

ಗೌರಿ ಪೂಜಾ(Gauri Puja)
ಏಪ್ರಿಲ್ ನಾಲ್ಕರಂದು ದೇಶದ ಹಲವೆಡೆ ಗೌರಿ ಪೂಜೆ ಹಾಗೂ ಗಂಗೌರ್ ಹಬ್ಬ ಆಚರಿಸಲಾಗುತ್ತದೆ. 

ರಾಮನವಮಿ(Ram Navami)
ಶ್ರೀ ರಾಮ ಹುಟ್ಟಿದ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ವಿಷ್ಣುವಿನ ಏಳನೇ ಅವತಾರವಾದ ರಾಮನು ಚೈತ್ರ ಶುಕ್ಲ ನವಮಿಯಂದು ಜನಿಸಿದನು. ಹಾಗಾಗಿ, ಪ್ರತಿ ವರ್ಷ ಈ ದಿನ ರಾಮನವಮಿ ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 10ರಂದು ರಾಮನವಮಿ ಇದೆ. ನವಮಿ ಎಂದರೆ ಒಂಬತ್ತು ದಿನಗಳು. ಹಾಗಾಗಿ, ಈ ಒಂಬತ್ತರಲ್ಲಿ ಮೊದಲ ದಿನ ಯುಗಾದಿಯಿಂದಲೇ ಆರಂಭವಾಗಿದೆ. 

Uttara Kannada: ಉಪಯೋಗಿಸಿದ ವಸ್ತುಗಳನ್ನು ಮಾರಿಕಾಂಬೆಗೆ ಹರಕೆಯಾಗಿ ಸಲ್ಲಿಸುವ ಪದ್ಧತಿ

ಕಮದ ಏಕಾದಶಿ ಮತ್ತು ವರುದಿನಿ ಏಕಾದಶಿ
ಪಕ್ಷದ 11ನೇ ದಿನವನ್ನು ವಿಷ್ಣು(Lord Vishnu)ವಿನ ಭಕ್ತರು ಏಕಾದಶಿ ಎಂದು ಉಪವಾಸ ಆಚರಿಸಿ ವಿಷ್ಣು ಪೂಜೆಯಲ್ಲಿ ತೊಡಗುತ್ತಾರೆ. ಚೈತ್ರ ಶುಕ್ಲ ಪಕ್ಷದಲ್ಲಿ ಕಮದ ಏಕಾದಶಿ ಇದ್ದರೆ, ಕೃಷ್ಣ ಪಕ್ಷದಲ್ಲಿ ವರುದಿನಿ ಏಕಾದಶಿ ಇದೆ. ಇವೆರಡೂ ಏಕಾದಶಿಗಳು ಕ್ರಮವಾಗಿ ಏಪ್ರಿಲ್ 12 ಹಾಗೂ 26ರಂದು ಬರಲಿವೆ. 

ಪ್ರದೋಶ ವ್ರತ(Pradosh Vrat)
ಶಿವಭಕ್ತರು ಪ್ರತಿ ಪಕ್ಷದ ತ್ರಯೋದಶಿ ತಿಥಿಯಂದು ಪ್ರದೋಶ ವ್ರತ ಎಂದು ಉಪವಾಸ ಆಚರಿಸುತ್ತಾರೆ. ಪ್ರದೋಶ ಕಾಲದಲ್ಲಿ ಶಿವಪೂಜೆ ನಡೆಸಿದ ಬಳಿಕ ಉಪವಾಸ ಕೈ ಬಿಡಲಾಗುತ್ತದೆ. ಈ ಮಾಸದಲ್ಲಿ ಏಪ್ರಿಲ್ 14 ಹಾಗೂ ಏಪ್ರಿಲ್ 28ರಂದು ಪ್ರದೋಶ ವ್ರತ ಆಚರಿಸಲಾಗುತ್ತದೆ. 

ಮೇಷ ಸಂಕ್ರಾಂತಿ(Mesha Sankranti)
ಸೂರ್ಯನು ಏಪ್ರಿಲ್ 14ರಂದು ಮೀನ ರಾಶಿಯಿಂದ ಮೇಷ ರಾಶಿಗೆ ಕಾಲಿಡಲಿದ್ದಾನೆ. ಈ ದಿನದಂದು ಪಂಜಾಬ್ ಜನರು ಬೈಸಾಕಿ, ತಮಿಳುನಾಡು ಜನತೆ ಪುತಾಂಡು ಹಾಗೂ ಅಸ್ಸಾಮಿನ ಜನತೆ ಬೋಹಾಗ್ ಬಿಹು ಎಂದು ಎಲ್ಲರೂ ಹೊಸ ವರ್ಷವೆಂದು ಆಚರಿಸುತ್ತಾರೆ. ಹಿಂದೂ ಸೂರ್ಯ ಕ್ಯಾಲೆಂಡರ್‌ನ ಮೊದಲ ದಿನ ಇದಾಗಿದೆ. ಏ.15ರಂದು ಪಶ್ಚಿಮ ಬಂದಾಗಳದಲ್ಲಿ ವಿಷ್ಣು ಕನಿ ಎಂದು ಹೊಸ ವರ್ಷ ಆಚರಿಸುತ್ತಾರೆ. 

Personality Analysis: ಈ ಚಿತ್ರದಲ್ಲಿ ನಿಮಗೇನು ಕಾಣುತ್ತದೆಂಬುದು ನಿಮ್ಮ ಜಾತಕವನ್ನೇ ಬಿಚ್ಚಿಡುತ್ತದೆ!

ಗುಡ್ ಫ್ರೈಡೇ(Good Friday)
ಈ ದಿನ ಕ್ರಿಶ್ಚಿಯನ್ನರು ಜೀಸಸ್ ಕ್ರೈಸ್ಟ್‌ನ್ನು ಮೊಳೆಗೆ ಹೊಡೆದ ದಿನವಾಗಿ ನೆನಪಿಸಿಕೊಳ್ಳುತ್ತಾರೆ. ಏಪ್ರಿಲ್ 15ರಂದು ಗುಡ್ ಫ್ರೈಡೇ ಆಚರಣೆ ಇರಲಿದೆ. 

ಹನುಮಾನ್ ಜಯಂತಿ(Hanuman Jayanti)
ಚೈತ್ರ ಮಾಸದ ಹುಣ್ಣಿಮೆಯ ದಿನವನ್ನು ಆಂಜನೇಯ ಹುಟ್ಟಿದ ದಿನವಾಗಿ ಆಚರಿಸಲಾಗುತ್ತದೆ. ಏ.16ರಂದು ಈ ಬಾರಿ ಹನುಮಾನ್ ಜಯಂತಿ ಇದೆ. 

ವಿಕಟ ಸಂಕಷ್ಟಿ ಚತುರ್ಥಿ(Vikata Sankashti Chaturthi)
ಗಣೇಶನ ಭಕ್ತರು ಚೈತ್ರ ಮಾಸ, ಕೃಷ್ಣ ಪಕ್ಷದ ಚತುರ್ಥಿಯಂದು, ಅಂದರೆ, ಏ.19ರಂದು ವಿಕಟ ಸಂಕಷ್ಟಿ ಚತುರ್ಥಿ ಆಚರಿಸುತ್ತಾರೆ. ಇಂದು ಉಪವಾಸ ಆಚರಿಸಿ, ಚಂದ್ರನನ್ನು ನೋಡಿದ ಮೇಲೆ ಆಹಾರ ಸೇವಿಸುತ್ತಾರೆ. 
 

Latest Videos
Follow Us:
Download App:
  • android
  • ios