ಭಾಗ್ಯಶಾಲಿ ಹುಡುಗಿಯರಲ್ಲಿ ಇರುತ್ತೆ ಈ ಚಿಹ್ನೆಗಳು!

ಭವಿಷ್ಯದ ವಿಷಯಗಳನ್ನು ತಿಳಿದುಕೊಳ್ಳಲು ಹಲವು ಶಾಸ್ತ್ರಗಳಿವೆ. ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾದ ಸಾಮುದ್ರಿಕ ಶಾಸ್ತ್ರದ ಪ್ರಕಾರ ಮನುಷ್ಯನ ಶರೀರದ ಮೇಲಿರುವ ಚಿಹ್ನೆ ಮತ್ತು ಮಚ್ಚೆಗಳಿಂದ ಗುಣ, ಸ್ವಭಾವ ಮತ್ತು ಅದೃಷ್ಟದ ಬಗ್ಗೆ ಹಲವು ವಿಚಾರಗಳನ್ನು ತಿಳಿಯಬಹುದಾಗಿದೆ. ಅದರಲ್ಲೂ ಆ ಚಿಹ್ನೆ ಮತ್ತು ಮಚ್ಚೆಯು ನೀಡುವ ಸಂಕೇತ ಪುರುಷ ಮತ್ತು ಮಹಿಳೆಯರಿಗೆ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಸ್ತ್ರೀಯರಿಗೆ ಈ ಕೆಲವು ಚಿಹ್ನೆ ಅಥವಾ ಮಚ್ಚೆಗಳಿದ್ದರೆ ಅವರು ಹೆಚ್ಚು ಭಾಗ್ಯಶಾಲಿ ಮತ್ತು ಅದೃಷ್ಟವಂತರೆಂದು ಹೇಳಲಾಗುತ್ತದೆ. ಆ ಬಗ್ಗೆ ಇಲ್ಲಿ ತಿಳಿಯೋಣ.

Fortunate girls have these signs and moles in their body

ಸ್ತ್ರೀ ಎಂದರೆ ಲಕ್ಷ್ಮೀ ಸ್ವರೂಪ. ಹೆಣ್ಣು ಮಗು ಜನಿಸಿದರೆ ಮನೆಗೆ ಲಕ್ಷ್ಮೀ ಬಂದಂತೆ ಎನ್ನುತ್ತಾರೆ. ಸ್ತ್ರೀ ಲಕ್ಷ್ಮೀಯ ರೂಪ, ಮನೆಗೆ ಮಂಗಳವನ್ನುಂಟು ಮಾಡುವವಳು ಎಂದೆಲ್ಲ ಹೇಳುವುದುಂಟು. ಪುರಾಣ ಕಾಲದಿಂದಲೂ ಹೆಣ್ಣಿಗೆ ವಿಶೇಷವಾದ ಸ್ಥಾನಮಾನವಿದೆ. ಅದರಲ್ಲೂ ರೂಪ, ಲಕ್ಷಣ, ಮಚ್ಚೆ, ಕೆಲವು ಚಿಹ್ನೆ ಇವುಗಳನ್ನು ಗಮನಿಸಿಯೇ ಹುಡುಗಿ ಭಾಗ್ಯಶಾಲಿ ಮತ್ತು ಅದೃಷ್ಟವಂತೆ ಎಂಬುದನ್ನು ಹೇಳುತ್ತಾರೆ.

ಈ ಹುಡುಗಿಯರು ಹುಟ್ಟಿದ ಮನೆಗೆ ಅದೃಷ್ಟ ತಂದರೆ, ಮದುವೆಯ ನಂತರ ಗಂಡನ ಮನೆಗೂ ಕೀರ್ತಿ ತರುತ್ತಾರೆ. ಹುಡುಗಿಯರು ತಮ್ಮ ಶರೀರದ ಮೇಲೆ ಈ ಕೆಲವು ಚಿಹ್ನೆಗಳನ್ನು ಹೊಂದಿದ್ದರೆ ಹೆಚ್ಚು ಭಾಗ್ಯಶಾಲಿಗಳೆಂದು ಹೇಳಲಾಗುತ್ತದೆ. ಪತಿಯ ಸಂತೋಷ, ಸುಖಗಳಿಗೆ ಹೆಚ್ಚು ಗಮನ ಕೊಡುವುದಲ್ಲದೆ, ಮನೆಯವರ ನೆಮ್ಮದಿ ಮತ್ತು ಖುಷಿಯ ಬಗ್ಗೆಯೂ ಕಾಳಜಿ ಹೊಂದಿರುತ್ತಾರೆ ಎನ್ನುತ್ತದೆ ಸಾಮುದ್ರಿಕಾ ಶಾಸ್ತ್ರ. ಇಂತಹ ಚಿಹ್ನೆಗಳು ಯಾವುದು? ಆ ಚಿಹ್ನೆಗಳು ಏನು ಹೇಳುತ್ತವೆ? ಎಂಬುದನ್ನು ತಿಳಿಯೋಣ.

ಇದನ್ನು ಓದಿ: ಕನಸಿನಲ್ಲಿ ಹಣ್ಣುಗಳ ಕಂಡರೆ ನಿಮಗೆಂಥ ಅದೃಷ್ಟ ಗೊತ್ತಾ..!? 

ಮೂಗಿನ ಮೇಲಿರುವ ಮಚ್ಚೆ ಭಾಗ್ಯದ ಸಂಕೇತ
ಹುಡುಗಿಯರ ಮೂಗಿನ ಸುತ್ತಮುತ್ತ ಮಚ್ಚೆ ಇದ್ದರೆ ಅಂಥವರು ಎಲ್ಲ ಸುಖಗಳನ್ನು ಹೊಂದುತ್ತಾರೆ. ಈ ಮಚ್ಚೆ ಧನ ಸಂಪತ್ತನ್ನು ಹೊಂದುವ ಸಂಕೇತ ಸಹ ಆಗಿದೆ.


ಅಂಗಾಲಿನಲ್ಲಿ ಚಕ್ರ ಅಂಥವಾ ಶಂಖದ ಚಿಹ್ನೆ
ಕೆಲವು ಸ್ತ್ರೀಯರ ಅಂಗಾಲಿನಲ್ಲಿ ಕಮಲ, ಚಕ್ರ ಅಥವಾ ಶಂಖದ ಚಿಹ್ನೆ ಇರುತ್ತದೆ. ಇಂಥವರು ಹೆಚ್ಚು ಭಾಗ್ಯಶಾಲಿಯಾಗಿರುತ್ತಾರೆ. ಇಷ್ಟೇ ಅಲ್ಲದೆ, ಇವರು ಕುಟುಂಬಕ್ಕೆ ಹೆಚ್ಚು ಕೀರ್ತಿಯನ್ನು ತರುತ್ತಾರೆ.
Fortunate girls have these signs and moles in their body
ನಾಭಿಯ ಕೆಳಗೆ ಮಚ್ಚೆ ಇದ್ದರೆ
ಹೊಕ್ಕಳಿನ ಕೆಳಗಡೆ ಮಚ್ಚೆಯನ್ನು ಹೊಂದಿರುವ ಸ್ತ್ರೀಯರು ಕುಟುಂಬಕ್ಕೆ ಹೆಚ್ಚು ಭಾಗ್ಯವನ್ನು ತರುತ್ತಾರೆ ಎನ್ನುತ್ತದೆ ಸಾಮುದ್ರಿಕಾ ಶಾಸ್ತ್ರ. ಈ ಮಚ್ಚೆಯು ಸುಖ ಮತ್ತು ಸಂಪನ್ನತೆಯ ಪ್ರತೀಕವಾಗಿದೆ ಎಂಬುದಾಗಿ ಹೇಳುತ್ತಾರೆ.

ಇದನ್ನು ಓದಿ: ಈ ರಾಶಿಗಳಿಗೆ ಜೀವನಪೂರ್ತಿ ಶನಿದೇವರ ಕೃಪೆ ಇರುತ್ತದೆ!. 

ಹಣೆಯ ಮೇಲಿರುವ ಮಚ್ಚೆ
ಸ್ತ್ರೀಯರ ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ ಅಂಥವರು ಸೌಭಾಗ್ಯಶಾಲಿಯಾಗಿರುತ್ತಾರೆ. ಇವರನ್ನು ವಿವಾಹವಾಗುವವರು ಜೀವನಪೂರ್ತಿ ಸಂತೋಷದಿಂದಿರುತ್ತಾರೆ.

Fortunate girls have these signs and moles in their body

ತ್ರಿಕೋನದ ಚಿಹ್ನೆ
ಯಾವ ಹುಡುಗಿಯ ಅಂಗಾಲಿನಲ್ಲಿ ತ್ರಿಕೋನದ ಚಿಹ್ನೆ ಇರುತ್ತದೆಯೋ ಅವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಮತ್ತು ಗ್ರಹಿಸುವ ಶಕ್ತಿ ಇವರಲ್ಲಿ ಹೆಚ್ಚಿರುತ್ತದೆ. ಇಂಥವರು ಮನೆಯವರನ್ನು ಖುಷಿಯ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಕಷ್ಟದ ಸಂದರ್ಭದಲ್ಲಿ ಮನೆಯವರ ಸಹಾಯಕ್ಕೆ ನಿಲ್ಲುತ್ತಾರೆ. ಅದರಿಂದ ಹೊರಬರುವ ಚಾಣಾಕ್ಷತೆಯನ್ನು ತೋರುತ್ತಾರೆ. ಬುದ್ಧಿವಂತಿಕೆ ಮತ್ತು ಧೈರ್ಯ ಇವರ ಅದೃಷ್ಟದ ಜೊತೆಗಿರುತ್ತದೆ. 

ಕೆನ್ನೆಯ ಎಡಭಾಗದಲ್ಲಿರುವ ಮಚ್ಚೆ
ಸ್ತ್ರೀಯರ ಕೆನ್ನೆಯ ಎಡಭಾಗದಲ್ಲಿ ಮಚ್ಚೆ ಇದ್ದರೆ ರುಚಿ ಪ್ರಿಯರಾಗಿರುತ್ತಾರೆ. ಎಲ್ಲ ತರಹದ ಅಡುಗೆಯನ್ನು ಮಾಡಬಲ್ಲವರಾಗಿರುತ್ತಾರೆ. ರುಚಿಯಾದ ಅಡುಗೆಯನ್ನು ಮಾಡಿ ಕುಟುಂಬದವರ ಮನಸ್ಸನ್ನು ಗೆಲ್ಲುವ ಇವರು ಅದೃಷ್ಟವಂತರಾಗಿರುತ್ತಾರೆ.

ಶರೀರದ ಮೇಲಿರುವ ಮಚ್ಚೆ
ಸ್ತ್ರೀಯರಿಗೆ ಎಡಭಾಗದಲ್ಲಿ ಹೆಚ್ಚು ಮಚ್ಚೆ ಇದ್ದರೆ ಅವರು ತುಂಬಾ ಭಾಗ್ಯಶಾಲಿಯಾಗಿರುತ್ತಾರೆ ಎನ್ನುತ್ತದೆ ಸಾಮುದ್ರಿಕಾ ಶಾಸ್ತ್ರ. ಇವರು ಕುಟುಂಬಕ್ಕೆ ಅದೃಷ್ಟವನ್ನು ತರುತ್ತಾರೆ, ಅಷ್ಟೇ ಅಲ್ಲದೆ ಈ ಹುಡುಗಿಯರು ವೈವಾಹಿಕ ಜೀವನದ ಪ್ರತಿ ಹಂತದಲ್ಲೂ ಪತಿಯನ್ನು ಸಂತೋಷವಾಗಿಡುವಲ್ಲಿ ಯಶಸ್ಸನ್ನು ಪಡೆಯುತ್ತಾರೆ.

ಇದನ್ನು ಓದಿ: ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಹುಬ್ಬುಗಳ ಮಧ್ಯೆ, ತಲೆಯಲ್ಲಿ ಮಚ್ಚೆ ಇದ್ದರೆ..?
ಹುಬ್ಬುಗಳ ಮಧ್ಯದಲ್ಲಿ ಮಚ್ಚೆ ಇರುವ ಹುಡುಗಿಯರು ಸೌಭಾಗ್ಯಶಾಲಿಗಳು ಮತ್ತು ಇದು ಬುದ್ಧಿವಂತಿಕೆಯ ಸಂಕೇತವೂ ಆಗಿರುತ್ತದೆ. ಇನ್ನು ತಲೆಯಲ್ಲಿ ಮಚ್ಚೆ ಹೊಂದಿರುವ ಸ್ತ್ರೀಯರು ಇತರರಿಗೆ ಮಾದರಿಯಾಗಿರುತ್ತಾರೆ. ಇವರು ಅದೃಷ್ಟವಂತರಾಗಿರುತ್ತಾರೆ.

ಕಿವಿಯ ಮೇಲೆ ಮಚ್ಚೆ ಹೊಂದಿದ್ದರೆ ಭಾಗ್ಯಶಾಲಿಗಳು
ಸ್ತ್ರೀಯರಿಗೆ ಕಿವಿಯ ಮೇಲೆ ಮಚ್ಚೆ ಇದ್ದರೆ ಹೆಚ್ಚು ಅದೃಷ್ಟಶಾಲಿಗಳು, ಬುದ್ಧಿವಂತರು ಮತ್ತು ಬೇಗ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಭಾವದವರಾಗಿರುತ್ತಾರೆ. ಎಡಗಿವಿಯ ಮೇಲಿರುವ ಮಚ್ಚೆಯು ಉತ್ತಮ ವೈವಾಹಿಕ ಜೀವನದ ಸಂಕೇತವಾಗಿದೆ.

Latest Videos
Follow Us:
Download App:
  • android
  • ios