ಜುಲೈ 5ರಂದು ನಡೆಯಲಿರುವುದು ಈ ವರ್ಷದ ಮೂರನೇ ಚಂದ್ರಗ್ರಹಣ. ಸಾಮಾನ್ಯವಾಗಿ ಚಂದ್ರಗ್ರಹಣಗಳು, ಆ ಹೊತ್ತಿಗೆ ರಾತ್ರಿ ಎಲ್ಲಿರುತ್ತದೋ ಅಲ್ಲೆಲ್ಲ ಆಕಾಶ ಶುಭ್ರವಾಗಿದ್ದಲ್ಲಿ ಮೋಡಗಳಿಲ್ಲದೆ ಇದ್ದಲ್ಲಿ ಕಾಣಿಸುತ್ತವೆ. ಕೆಲವೆಡೆ ಮಾತ್ರವೇ ಪೂರ್ತಿ ಚಂದ್ರಗ್ರಹಣ ಕಾಣಿಸಬಹುದು. ಇನ್ನು ಕೆಲವೆಡೆ ಚಂದ್ರಗ್ರಹಣದ ಹೊತ್ತಿಗೆ ಚಂದ್ರ ಮೂಡಬಹುದು ಅಥವಾ ಮುಳುಗಬಹುದು.

ಕಳೆದ ಭಾನುವಾರ ಸಾಕಷ್ಟು ಪರಿಣಾಮಕಾರಿ ಖಗ್ರಾಸ ಸೂರ್ಯಗ್ರಹಣ ನಡೆಯಿತು, ಭಾರತದಲ್ಲಿ ಇದು ಪೂರ್ತಿಯಾಗಿ ಗೋಚರವಾಗಲಿಲ್ಲ. ಆದರೂ ಇದು ಮಹಾ ಪರಿಮಕಾರಿ ಗ್ರಹಣವಾಗಿತ್ತು. ಜುಲೈ 5ರಂದು ನಡೆಯಲಿರುವ ಚಂದ್ರಗ್ರಹಣ ಕೂಡ ಭಾರತದಲ್ಲಿ ಕಾಣಿಸುವುದಿಲ್ಲ. ಯಾಕೆಂದರೆ ಗ್ರಹಣ ಘಟಿಸುವ ಹೊತ್ತಿಗೆ ಚಂದ್ರ ನಮ್ಮ ದೇಶದ ದಿಗಂತದಿಂಧ ಆಚೆಗೆ ಇರುತ್ತಾನೆ. ಭಾರತದ ಕಾಲಮಾನ ಜುಲೈ 5ರಂದು ಮುಂಜಾನೆ 8.30ರಿಂದ 11.30ರವರೆಗೆ 2 ಗಂಟೆ 45 ನಿಮಿಷಗಳ ಕಾಲ ಇದು ನಡೆಯುತ್ತದೆ.

ನಾಲ್ಕು ಖಂಡಗಳಲ್ಲಿ ಈ ಗ್ರಹಣ ಕಾಣಿಸುತ್ತದೆ- ಲ್ಯಾಟಿನ್‌ ಅಮೆರಿಕ ದೇಶಗಳಲ್ಲಿ, ಮೆಕ್ಸಿಕೋ, ಕ್ಯೂಬಾ, ಅಮೆರಿಕ, ಕೆರಿಬಿಯನ್‌ ದ್ವೀಪಗಳು, ಕೆನಡಾ, ಉತ್ತರ ಅಮೆರಿಕಗಳಲ್ಲಿ ಕಾಣಿಸುತ್ತದೆ. ಹೆಚ್ಚಿನ ಆಫ್ರಿಕಾ ಖಂಡದ ದೇಶಗಳಲ್ಲಿ ಇದು ಕಾಣಬಲ್ಲದು. ಉತ್ತರ ಯುರೋಪಿನ ದೇಶಗಳಾದ ಬ್ರಿಟನ್‌, ಸ್ಪೇನ್‌, ಪೋರ್ಚುಗಲ್‌, ಫ್ರಾನ್ಸ್, ಜರ್ಮನಿ, ಇಟಲಿ ಇನ್ನಿತರ ದೇಶಗಳು ಇದನ್ನು ಕಾಣಬಲ್ಲವು.

ರಕ್ತಚಂದಿರ ಗ್ರಹಣ ಅಥವಾ ಬ್ಲಡ್‌ಮೂನ್‌ ಎಕ್ಲಿಪ್ಸ್‌ ಅಪರೂಪವಾಗಿ ಘಟಿಸುವಂಥದು. ಗ್ರಹಣದ ಸಂದರ್ಭದಲ್ಲಿ ಚಂದ್ರ ಪೂರ್ತಿಯಾಗಿ ಅಥವಾ ಭಾಗಶಃ ರಕ್ತಗೆಂಪು ಬಣ್ಣಕ್ಕೆ ತಿರುಗುವುದರಿಂದ ಆ ಹೆಸರು ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಹೀಗಾಗಿದೆ. ಈ ವರ್ಷ ಹಾಗೂ ೨೦೨೫ರ ನಡುವೆ ಕೇವಲ ಐದು ಇಂಥ ಗ್ರಹಣಗಳು ನಡೆಯಲಿವೆಯಂತೆ. ಚಂದಿರನ ಜತೆಗೆ ರಕ್ತದ ಹೆಸರೂ ಜೋಡಿಸಿಕೊಂಡಿರುವುದರಿಂದ ಶ್ರೀಸಾಮಾನ್ಯರಿಗೆ ಭಯವಾಗುತ್ತದೆ ಅಷ್ಟೇ.

ಬ್ಲಡ್‌ಮೂನ್‌ ಅಥವಾ ರಕ್ತಚಂದಿರ ಎಂಬುದು ವೈಜ್ಞಾನಿಕ ಹೆಸರೇನಲ್ಲ. ಗ್ರಹಣದ ವೇಳೆ ವಾತಾವರಣದಲ್ಲಿ ಉಂಟಾಗುವ ಬದಲಾವಣೆಯಿಂದ ಆ ಹೆಸರು ಉಂಟಾಗುತ್ತದೆ. ಈ ಗ್ರಹಣದ ಸಮಯದಲ್ಲಿ ಸೂರ್ಯನಿಂದ ಉಂಟಾಗುವ ಭೂಮಿಯ ನೆರಳಿನ ಪ್ರದೇಶಕ್ಕೆ ಚಂದ್ರ ಬರುತ್ತಾನೆ. ಪರಿಣಾಮ ಚಂದ್ರ ಸೂರ್ಯನಿಂದ ಮರೆಯಾದರೂ, ಸೂರ್ಯನ ಬೆಳಕಿನ ಒಂದು ಭಾಗ ಚಂದ್ರನನ್ನು ಮುಟ್ಟುತ್ತದೆ. ಚಂದ್ರ ಗ್ರಹದ ಧೂಳುಮಯವಾದ ಅಂಚುಗಳ ಮೇಲೆ ಸೂರ್ಯನ ಬೆಳಕು ಬಿದ್ದು, ಪ್ರತಿಫಲಿಸುತ್ತದೆ. ಇದರಿಂದ ಸೂರ್ಯನ ಅತಿಕೆಂಪು ಕಿರಣಗಳು ಚಂದ್ರನನ್ನು ಮುಟ್ಟುತ್ತವೆ. ಇದನ್ನು ರೇಯ್ಲೀ ಸ್ಟಾಟರಿಂಗ್‌, ರೇಯ್ಲೀ ಪರಿಣಾಮ ಅಥವಾ ರೇಯ್ಲೀ ಸಿಂಚನ ಎಂದು ಕರೆಯುತ್ತಾರೆ. ಸೂರ್ಯೋದಯ ಹಾಗೂ ಸೂರ್ಯಾಸ್ತಗಳ ವೇಳೆ ಕಾಣೂವ ಸೂರ್ಯನ ಬಣ್ಣಬಣ್ಣದ ಬೆಳಕಿನ ಎಫೆಕ್ಟ್‌ಗೂ ಇದೇ ಕಾರಣ.

ಈ ಸಂಕೇತಗಳು ಗೋಚರಿಸಿದರೆ ದೇವರ ಕೃಪೆ ನಿಮ್ಮಮೇಲಾಗಿದೆ ಎಂದರ್ಥ! 

ಈ ಸಂದರ್ಭದಲ್ಲಿ ಭೂಮಿಯ ಮೇಲಿನಿಂದ ಚಂದ್ರನನ್ನು ನೋಡುವುದಕ್ಕಿಂತಲೂ, ಚಂದ್ರನ ಮೇಲೆ ನಿಂತು ಭೂಮಿಯನ್ನು ನೋಡಿದರೆ, ಭೂಮಿ ರಕ್ತದಲ್ಲಿ ಮೀಯುತ್ತಿರುವಂತೆ ಕಾಣಿಸುತ್ತದತೆ! ಹಾಗೆಂದು ಅಮೆರಿಕದ ಬಾಹ್ಯಾಕಾಶ ಸಂಶ್ಥೆ ನಾಸಾ ವಿವರಿಸಿದೆ. ಈ ಸಂದರ್ಭದಲ್ಲಿ ಚಂದ್ರನ ಮೇಲೆ ಜೀವಿಗಳಿದ್ದಿದ್ದರೆ ಅದನ್ನು ರಕ್ತಭೂಮಿ ಗ್ರಹಣ ಎನ್ನುತ್ತಿದ್ದರೇನೋ.

ಕೆಲವೊಮ್ಮೆ ವಾತಾವರಣದಲ್ಲಿ ಇರುವ ದೂಳು, ಹೊಗೆ ಇತ್ಯಾದಿಗಳಿಂದಾಗಿಯೂ ಚಂದ್ರ ರಕ್ತವರ್ಣದವನಾಗಿ ಕಾಣುವುದುಂಟು. ಇದಕ್ಕೂ ರಕ್ತಗ್ರಹಣಕ್ಕೂ ಸಂಬಂಧವಿಲ್ಲ.

ಆಷಾಢ ಶುಕ್ರವಾರ ಹೀಗ್ ಮಾಡಿದರೆ ಮನೆಯಲ್ಲಿ ಐಶ್ವರ್ಯ ತುಂಬಿ ತುಳುಕುತ್ತೆ 

ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಭೂಮಿಯ ಎರಡು ನೆರಳುಗಳು ಉಂಟಾಗುತ್ತವೆ. ಗಾಢನೆರಳು (ನುಂಬ್ರಾ) ಮತ್ತು ಮಂದ ನೆರಳು (ಪೆನುಂಬ್ರಾ). ಗಾಢ ನರಳಿನ ಪ್ರದೇಶದಲ್ಲಿ ಚಂದ್ರ ಇದ್ದರೆ ಆಗ ರಕ್ತಗ್ರಹಣ ಉಂಟಾಗುತ್ತೆ. ಪೆನುಂಬ್ರಾ ಪ್ರದೇಶದಲ್ಲಿದ್ದರೆ ಖಂಡಗ್ರಾಸ ಗ್ರಹಣ ಉಂಟಾಗುತ್ತೆ.

ಶಿವನ ದಯೆ ನಿಮಗಾಗಬೇಕೆಂದರೆ ಶಿವ ಪುರಾಣದ ಈ ಮಾತುಗಳ ಪಾಲಿಸಿ!