Asianet Suvarna News Asianet Suvarna News

ಯಾವ ದೇವರಿಗೆ ಯಾವ ಹೂವಿನ ಅರ್ಚನೆ ಅಚ್ಚುಮೆಚ್ಚು? ಅರ್ಚಿಸಿದರೆ ಹೆಚ್ಚು ಪ್ರಿಯ?

ಎಲ್ಲ ದೇವರಿಗೂ ಎಲ್ಲ ಹೂಗಳೂ ಪ್ರಿಯವಲ್ಲ. ಹಾಗೇ ನಾವು ಪೂಜಿಸುವಾಗ ಅವರಿಗೆ ಪ್ರಿಯವಾದ ಹೂಗಳನ್ನು ಅರ್ಚಿಸಿದರೆ ಆ ದೇವರು ಪ್ರಸನ್ನರಾಗುತ್ತಾರೆ. ಅವು ಯಾವುವು ತಿಳಿಯೋಣ.

Each god like specific flowers and colors in Hindu religion
Author
Bengaluru, First Published Apr 25, 2021, 3:38 PM IST

ದೇವರ ಪೂಜೆಯಲ್ಲಿ ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿವೆ. ಮನೆಯಲ್ಲಿಯೇ ಆಗಲಿ, ದೇವಸ್ಥಾನಗಳಲ್ಲಿಯೇ ಆಗಲಿ, ಪೂಜೆಯಲ್ಲಿ ಹಲವು ವಿಧದ ಹೂವುಗಳನ್ನು ಅರ್ಪಿಸಲಾಗುತ್ತದೆ. ಪೂಜೆಯ ಬಳಿಕ ಪ್ರಸಾದದ ರೂಪದಲ್ಲಿ ಹೂವುಗಳ ಪಕಳೆಗಳನ್ನೂ ನೀಡಲಾಗುತ್ತದೆ. ಹೂವುಗಳು ಭಕ್ತ ಮತ್ತು ದೇವರ ನಡುವಿನ ಸಂವಹನ ಮಾಧ್ಯಮ ಎಂದೂ ಭಾವಿಸಲಾಗುತ್ತದೆ. ಲಕ್ಷ್ಮಿ ಸರಸ್ವತಿ ಮೊದಲಾದ ದೇವತೆಯರನ್ನು ಕಮಲದ ಹೂವಿನಲ್ಲಿ ಕುಳಿತಿರುವಂತೆಯೇ ಕವಿಗಳು ಮತ್ತು ಚಿತ್ರಕಾರರು ವರ್ಣಿಸಿದ್ದಾರೆ. ಹಿಂದೂ ಪೂಜೆಯ ವಿಧಿ ವಿಧಾನಗಳಲ್ಲಿ ದೇವಾಲಯದ ಪವಿತ್ರ ವಾತಾವರಣದಲ್ಲಿ ಹೂವುಗಳ ಸುವಾಸನೆ ಭಕ್ತರ ಪರವಶತೆಯನ್ನು ಹೆಚ್ಚಿಸುತ್ತದೆ.

ಹೂವುಗಳನ್ನು ದೇವರಿಗೆ ಕಾಣಿಕೆಯ ರೂಪದಲ್ಲಿ ಅರ್ಪಿಸಿದಾಗ ಹೊರಹೊಮ್ಮುವ ಧನಾತ್ಮಕ ಶಕ್ತಿ ನೆರೆದವರಲ್ಲಿ ಹಾಗೂ ಸುತ್ತಲ ವಾತಾವರಣದಲ್ಲಿ ದೈವಿಕ ಶಕ್ತಿಯನ್ನು ಮೂಡಿಸುತ್ತದೆ. ಸದಾ ಆಗಸವನ್ನು ನೋಡುವ ಹೂವುಗಳು ಆಗಸದಿಂದ ಧನಾತ್ಮಕ ಶಕ್ತಿಯನ್ನು ಸೆಳೆದು ಕೆಳಮುಖವಾಗಿರುವ ಪಕಳೆಗಳ ಮೂಲಕ ನೆಲದಲ್ಲಿ ಅಡ್ಡಲಾಗಿ ಪ್ರವಹಿಸುವಂತೆ ಮಾಡುತ್ತವೆ. ವಿವಿಧ ದೇವರುಗಳಿಗೆ ವಿವಿಧ ಹೂವುಗಳಿಂದ ಪೂಜೆ ಸಲ್ಲಿಸುವುದು ಶ್ರೇಯಸ್ಕರ ಎಂಬ ಭಾವನೆ ಮತ್ತು ನಂಬಿಕೆಯಿದೆ. ಯಾವ ದೇವರಿಗೆ ಯಾವ ಹೂವಿನ ಮೂಲಕ ಪೂಜೆ ಸಲ್ಲಿಸಿದರೆ ಹೆಚ್ಚು ಫಲಕಾರಿ ಎಂಬುದನ್ನು ತಿಳಿಯೋಣ.

Each god like specific flowers and colors in Hindu religion

ಶಿವ
ಶಿವ ಅಥವಾ ಈಶ್ವರನಿಗೆ ಬಿಲ್ವಪತ್ರೆ ಅತ್ಯಂತ ಇಷ್ಟವಾದ ಎಲೆಗಳು ಎಂದು ಶಿವನ ಭಕ್ತರು ನಂಬುತ್ತಾರೆ. ಇದರ ಹೊರತಾಗಿ ತುಂಬೆ ಹೂವು, ನೇರಳೆ ಆರ್ಕಿಡ್ ಅಥವಾ ಮಂದಾರ ಪುಷ್ಪವೂ ಶಿವನಿಗೆ ಇಷ್ಟವಾಗಿದ್ದು ಈ ಹೂವುಗಳನ್ನು ಶಿವಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರ ಜೊತೆಗೇ ಸಂಪಿಗೆ ಮತ್ತು ಕಿರೀಟ ಹೂ ಸಹಾ ಶಿವನ ಅನುಗ್ರಹ ಪಡೆಯಲು ನೆರವಾಗುವ ಹೂವುಗಳಾಗಿವೆ.

ದೇಹಕ್ಕೆ ದಾಳಿ ಮಾಡುವ ಅದೃಶ್ಯ ವೈರಿಗಳನ್ನು ಎದುರಿಸಲು ಆದಿತ್ಯ ಹೃದಯ ...

ಪಾರ್ವತಿ ದೇವಿ
ಈಶ್ವರನ ಪತ್ನಿ ಪಾರ್ವತೀದೇವಿಗೆ ಸಲ್ಲಿಸುವ ವಿಶೇಷ ಪಾರ್ಥನೆಯಾದ ಲಲಿತಾ ಸಹಸ್ರನಾಮದಲ್ಲಿ ಹಲವು ಹೂವುಗಳನ್ನು ಉಲ್ಲೇಖಿಸಲಾಗಿದೆ. ಕದಂಬ ವನ ಪಾರ್ವತಿಗೆ ಹೆಚ್ಚು ಇಷ್ಟವೆಂದು ಹಲವೆಡೆ ತಿಳಿಸಲಾಗಿದ್ದು ಇದೇ ಕಾರಣಕ್ಕೆ ಆಕೆಗೆ ಕದಂಬವನವಾಸಿನಿ ಎಂಬ ಹೆಸರೂ ಇದೆ. ಈ ವನದಲ್ಲಿ ಸಿಗುತ್ತದೆ ಎಂಬ ಕಾರಣದಿಂದ ಕದಂಬ ಹೂ, ಸಂಪಿಗೆ, ದಾಸವಾಳ, ಕೆಂಡಸಂಪಿಗೆ, ಮಲ್ಲಿಗೆ ಮೊದಲಾದ ಹೂವುಗಳನ್ನು ಪಾರ್ವತಿ ದೇವಿಯ ಪೂಜೆಯಲ್ಲಿ ಬಳಸಲಾಗುತ್ತದೆ.

ದುರ್ಗೆ
ಕಾಳಿಯ ಅವತಾರವಾದ ದುರ್ಗಾಮಾತೆಯ ಪೂಜೆಯಲ್ಲಿ ಸಾಮಾನ್ಯವಾಗಿ ಕೆಂಪು ಬಣ್ಣದ ಹೂವುಗಳನ್ನೇ ಬಳಸಲಾಗುತ್ತದೆ. ದಾಸವಾಳ, ಗುಡ್ಡೆ ಹೂ (ಕಿಸ್ಕಾರ ಅಥವಾ ಕೇಪಳ), ಕಣಗಿಲ ಮೊದಲಾದ ಕೆಂಪು ಹೂವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಮನೆಯ ಮೆಟ್ಟಿಲ ವಾಸ್ತು ಕಡೆಗಣಿಸಬೇಡಿ, ಇದರ ಹಿಂದೆದೆ ಯಶಸ್ಸಿನ ಗುಟ್ಟು ...
 

ಲಕ್ಷ್ಮಿ
ಲಕ್ಷ್ಮಿ ದೇವತೆಗೆ ಕಮಲದ ಹೂವು ಅತಿ ಹೆಚ್ಚು ಇಷ್ಟವಾದ ಹೂವಾಗಿದ್ದು ಲಕ್ಷ್ಮೀಪೂಜೆಯಲ್ಲಿ ಕಮಲವನ್ನೇ ಹೆಚ್ಚು ಉಪಯೋಗಿಸಲಾಗುತ್ತದೆ. ಇನ್ನುಳಿದಂತೆ ಕೇದಿಗೆ, ಸಂಪಿಗೆ, ಸೇವಂತಿಗೆ, ಗೊಂಡೆ ಹೂವುಗಳು ಸಹಾ ಪೂಜೆಗೆ ಅರ್ಹವಾಗಿವೆ.

ಸುಬ್ರಹ್ಮಣ್ಯ
ಕಮಲ ಮತ್ತು ಕಣಗಿಲೆ ಹೂವುಗಳು ಸುಬ್ರಹ್ಮಣ್ಯನ ಪೂಜೆಗೆ ಅತಿ ಅರ್ಹವಾದ ಹೂವುಗಳಾಗಿವೆ.

ಈ ರಾಶಿಗೆ ಶನಿ ಸಾಡೇಸಾತ್‌ನಿಂದ ಮುಕ್ತಿ... ಅಂತಿಮ ಚರಣದಲ್ಲಿದ್ದಾನೆ ಶನಿದೇವ ...

ಸರಸ್ವತಿ
ಸರಸ್ವತಿ ದೇವಿಯನ್ನು ವಿದ್ಯಾದೇವತೆ ಎಂದು ನಂಬಲಾಗಿದ್ದು ಬಿಳಿಯ ಕಮಲದ ಹೂವು ಅತಿ ಹೆಚ್ಚು ಪ್ರಿಯ ಎಂದು ಭಕ್ತರು ನಂಬುತ್ತಾರೆ. ಅಂತೆಯೇ ಬಿಳಿಕಮಲ ಹಾಗೂ ಪಾರಿಜಾತ ಹೂವುಗಳನ್ನು ಸರಸ್ವತಿ ಪೂಜೆಯಲ್ಲಿ ಹೆಚ್ಚು ಬಳಸಲಾಗುತ್ತದೆ.

ಹನುಮಂತ
ಹನುಮಂತನಿಗೆ ಸಲ್ಲಿಸುವ ಪೂಜೆಯಲ್ಲಿ ತುಳಸಿ ಎಲೆಗಳು ಮತ್ತು ಅಡಿಕೆಯ ಹಿಂಗಾರದ ಹೂವಿನ ಹಾರವನ್ನು ಅರ್ಪಿಸಲಾಗುತ್ತದೆ. ಈ ಹೂವುಗಳನ್ನು ಪೂಜೆಯಲ್ಲಿ ಅರ್ಪಿಸುವ ಮೂಲಕ ವಿವಿಧ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು.

Each god like specific flowers and colors in Hindu religion

ಗಣಪತಿ
ಗಣಪತಿ ದೇವರಿಗೆ ಗರಿಕೆ ಇಷ್ಟ. ಹಾಗೆಯೇ ಬಿಳಿಯ ಹೂಗಳನ್ನು ವಿನಾಯಕ ಇಷ್ಟಪಡುತ್ತಾನೆ. ನೇರಳೆ ಬಣ್ಣದ ಹೂಗಳನ್ನೂ ಅರ್ಪಿಸಬಹುದು.

Follow Us:
Download App:
  • android
  • ios