ಪತಿ ಪತ್ನಿ ನಡುವೆ ಕಲಹ ತಂದಿಡೋ ಅಶುಭ ಯೋಗಗಳು! ಪರಿಹಾರವಿಲ್ಲಿದೆ..
ಪತಿ ಪತ್ನಿ ನಡುವೆ ಬರೀ ಜಗಳನಾ? ನೆಮ್ಮದಿಯೇ ಇಲ್ಲವಾಗಿದ್ಯಾ? ಜಾತಕದಲ್ಲಿರುವ ಈ ಅಶುಭ ಯೋಗಗಳಿಂದಾಗಿ ಇಂಥ ಫಲ ಸಿಗುತ್ತಿರಬಹುದು.. ಇದಕ್ಕೆ ಜ್ಯೋತಿಷ್ಯ ಪರಿಹಾರಗಳನ್ನು ಟ್ರೈ ಮಾಡಿ ನೋಡಿ..
ಗಂಡ ಹೆಂಡತಿ ಜಗಳಕ್ಕೆ ಹಲವು ಕಾರಣಗಳಿರಬಹುದು. ಆದರೆ, ಅವೆಲ್ಲ ವಿಧಿಲಿಖಿತವಾಗಿರಬಹುದು. ಜಾತಕದ ಯೋಗಗಳಿಂದಾಗಿ ಜಗಳಗಳು ಹೆಚ್ಚುತ್ತಿದ್ದು, ಮೇಲ್ನೋಟಕ್ಕೆ ಬೇರೆಯೇ ಕಾರಣಗಳು ಕಂಡುಬರಬಹುದು. ಹೌದು, ಪತಿ ಇಲ್ಲವೇ ಪತ್ನಿಯ ಜಾತಕದಲ್ಲಿದ್ದಿರಬಹುದಾದ ಅಶುಭ ಯೋಗಗಳಿಂದಾಗಿ ಪತಿ-ಪತ್ನಿಯರ ನಡುವೆ ಪರಸ್ಪರ ತಿಳುವಳಿಕೆ ಮತ್ತು ಸಾಮರಸ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಮಂಗಳವು ನೀಚ ಅಥವಾ ಅಶುಭ ಸ್ಥಿತರಾಗಿದ್ದರೆ ಮತ್ತು ಅದು ಏಳನೇ ಮತ್ತು ಐದನೇ ಮನೆಗೆ ಸಂಬಂಧಿಸಿದ್ದರೆ ಅಂತಹ ವ್ಯಕ್ತಿಯು ತನ್ನ ಜೀವನ ಸಂಗಾತಿಯೊಂದಿಗೆ ಕೆಟ್ಟ ಸಂಬಂಧವನ್ನು ಹೊಂದಿರುತ್ತಾನೆ. ಇದರೊಂದಿಗೆ, ಜಾತಕದ ಏಳನೇ ಮನೆಯಲ್ಲಿ ಶನಿ ಅಥವಾ ರಾಹು ಗ್ರಹಗಳು ದುರ್ಬಲವಾಗಿದ್ದರೆ, ಆ ವ್ಯಕ್ತಿಯು ಜೀವನ ಸಂಗಾತಿಯೊಂದಿಗೆ ವೈರಾಗ್ಯವನ್ನು ಹೊಂದಿರುತ್ತಾನೆ. ಇನ್ನು ಕೆಲವು ಇಂಥ ಅಶುಭ ಯೋಗಗಳು(inauspecious yogas) ಮತ್ತು ಅವುಗಳ ಪರಿಹಾರಗಳ ಬಗ್ಗೆ ತಿಳಿಯೋಣ.
ಜಾತಕದಲ್ಲಿ ಈ ಅಶುಭ ಯೋಗಗಳಿಂದಾಗಿ ಜಗಳಗಳು ಉಂಟಾಗುತ್ತವೆ..
1. ಮದುವೆಗೆ ಮೊದಲು, ವಧು ಮತ್ತು ವರನ ಗುಣಗಳ ಹೊಂದಾಣಿಕೆ ನೋಡಬೇಕು. ಈ ಗುಣಮಟ್ಟದ ಹೊಂದಾಣಿಕೆಯಲ್ಲಿ ದೋಷವಿದ್ದರೆ, ಮಲಗುವ ಕೋಣೆಯಲ್ಲಿ ಜಗಳಗಳು ನಡೆಯುತ್ತವೆ. ಉದಾಹರಣೆಗೆ ಗಣದೋಷ, ಭಕೂಟ ದೋಷ, ನಾಡಿದೋಷ, ದ್ವಿದ್ವಾದಶ ದೋಷಗಳಿದ್ದರೆ ಮದುವೆಯ ನಂತರ ಅಶಾಂತಿ ಉಂಟಾಗುವ ಸಾಧ್ಯತೆಗಳಿವೆ. ಅದಕ್ಕೇ ಜಾತಕ ಹೊಂದಾಣಿಕೆಯ ನಂತರವೇ ಮದುವೆ ಮಾಡಬೇಕು.
2. ವರನ ಜಾತಕದಲ್ಲಿ ಮಂಗಲ ದೋಷವಿದ್ದರೆ ಹಾಗೂ ವಧುವಿನ ಜಾತಕದಲ್ಲಿ ಅಂಥ ದೋಷವಿಲ್ಲದಿದ್ದರೆ ಮದುವೆಯ ನಂತರ ಇಬ್ಬರ ನಡುವೆ ಜಗಳಗಳು(Husband wife fight) ನಡೆಯುತ್ತವೆ. ಅದಕ್ಕೇ ಮಾಂಗಲಿಕ ಹುಡುಗನಿಗೆ ಕುಜದೋಷವಿರುವ ಹುಡುಗಿಯನ್ನೇ ಹುಡುಕಿ ವಿವಾಹ ನೆರವೇರಿಸಬೇಕು..
Makar Sankranti 2023; ಮೋದಿ ಶೇರ್ ಮಾಡಿದ ಗಾಳಿಪಟ ಉತ್ಸವದ ವರ್ಣಮಯ ಫೋಟೋಗಳು
3. ಜಾತಕದಲ್ಲಿ ಗುರು ಅಥವಾ ಶುಕ್ರನು ದುರ್ಬಲನಾಗಿದ್ದರೆ ಮತ್ತು ಅವರ ಸಂಬಂಧವು ಏಳನೇ ಮನೆಯೊಂದಿಗೆ ರೂಪುಗೊಳ್ಳುತ್ತಿದ್ದರೆ, ಆಗ ಪತಿ-ಪತ್ನಿಯರ ನಡುವೆ ವೈಮನಸ್ಸು ಉಂಟಾಗುತ್ತದೆ.
4. ಏಳನೇ ಮನೆಯ ಅಧಿಪತಿ ಜಾತಕದಲ್ಲಿ ಆರನೇ, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿದ್ದರೆ, ಆಗ ಜಗಳಗಳು ಹೆಚ್ಚು.
5. ಮತ್ತೊಂದೆಡೆ, ನವಮಾಂಸ ಕುಂಡಲಿಯಲ್ಲಿ, ಗ್ರಹವು ನೀಚ ಲಗ್ನದಲ್ಲಿ ಅಥವಾ ಏಳನೇ ಮನೆಯಲ್ಲಿ ಸ್ಥಿತರಿದ್ದರೂ ಸಹ, ಪತಿ ಪತ್ನಿಯ ನಡುವೆ ಸಾಮರಸ್ಯದ ಕೊರತೆ ಇರುತ್ತದೆ. ಅಲ್ಲದೆ ಸಣ್ಣ ಪುಟ್ಟ ವಿಷಯಗಳಿಗೂ ಜಗಳಗಳು ನಡೆಯುತ್ತವೆ.
6. ಮತ್ತೊಂದೆಡೆ, ವ್ಯಕ್ತಿಯ ಜಾತಕದಲ್ಲಿ ರಾಹು ಮತ್ತು ಚಂದ್ರನು ನೀಚ ಸ್ಥಾನದಲ್ಲಿ ಸ್ಥಿತರಿದ್ದರೆ, ಇದರೊಂದಿಗೆ, ಅವರ ಸಂಬಂಧವು ಏಳನೇ ಮನೆಯಲ್ಲಿ ರೂಪುಗೊಂಡಿದ್ದರೆ, ಒಬ್ಬ ವ್ಯಕ್ತಿಯು ಜೀವನ ಸಂಗಾತಿಯನ್ನು ಅನುಮಾನಿಸುತ್ತಾನೆ, ಇದರಿಂದಾಗಿ ಪರಸ್ಪರರ ನಡುವೆ ಉದ್ವಿಗ್ನತೆ ಉಂಟಾಗುತ್ತದೆ.
ದಾರಿಯಲ್ಲಿ ಈ ವಸ್ತುಗಳು ಕಂಡರೆ ತಪ್ಪಿಯೂ ಮುಟ್ಟಬೇಡಿ, ಮೆಟ್ಟಬೇಡಿ..
ಈ ಜ್ಯೋತಿಷ್ಯ ಪರಿಹಾರವನ್ನು ಮಾಡಿ(remedies)
- ಸೋಮವಾರದಂದು ಗಂಡ-ಹೆಂಡತಿ ಶಿವ ಪಾರ್ವತಿಯನ್ನು ಪೂಜಿಸಬೇಕು.
- ಮಂಗಳ ಗ್ರಹದ ಕಾರಣದಿಂದ ಪತಿ- ಪತ್ನಿಯರಲ್ಲಿ ಕಲಹ ಉಂಟಾದರೆ ಮಂಗಳ ದಾನ ಮಾಡಬೇಕು. ಇದರೊಂದಿಗೆ ಮಂಗಳವಾರ ಹನುಮಂತನಿಗೆ ಸಿಂಧೂರ ವಸ್ತ್ರವನ್ನು ಅರ್ಪಿಸಬೇಕು. ಲಡ್ಡೂಗಳನ್ನು ಅರ್ಪಿಸಬೇಕು.
- ಗುರುಗ್ರಹದ ಪರಿಹಾರವನ್ನು ಪ್ರತಿ ಗುರುವಾರ ಮಾಡಬೇಕು. ಗುರು ಗ್ರಹದ ನಿಮಿತ್ತ ಬೇಳೆ ಕಾಳುಗಳನ್ನು ದಾನ ಮಾಡಿ. ಬಾಳೆ ಗಿಡಕ್ಕೆ ಪೂಜೆ ಮಾಡಿ. ಇದರೊಂದಿಗೆ ಪ್ರತಿ ದಿನ ಹಣೆಗೆ ಅರಿಶಿನವನ್ನು ಹಚ್ಚಿ.
- ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸಲು, ಪ್ರತಿ ಶುಕ್ರವಾರ ದೇವಸ್ಥಾನಕ್ಕೆ ಹೋಗಿ ವಿಷ್ಣು ಮತ್ತು ಲಕ್ಷ್ಮಿಯ ದರ್ಶನ ಮಾಡಬೇಕು.
- ಪತಿ ಪತ್ನಿಯರು ಪ್ರತಿ ಶುಕ್ರವಾರ ಮುತ್ತೈದೆಯನ್ನು ಮನೆಗೆ ಕರೆಸಿ ಬಾಗೀನ ನೀಡಿ ಅವರಿಂದ ಆಶೀರ್ವಾದ ಪಡೆಯಬೇಕು.