Asianet Suvarna News Asianet Suvarna News

ನಿಮ್ಮ ಜೋಡಿ ಹೊಂದಿ ಬಾಳುತ್ತದಾ? ನಿರ್ಧರಿಸುವುದು ಹೇಗೆ?

ಮದುವೆಯಾದ ಮೇಲೆ ನಿಮ್ಮ ಜೋಡಿ ಚೆನ್ನಾಗಿ ಹೊಂದಿಕೊಳ್ಳುತ್ತದಾ ಇಲ್ಲವಾ ಅಂತ ನಿರ್ದರಿಸಲು ಜ್ಯೋತಿಷಿಗಳು ಅನುಸರಿಸುವ ಲೆಕ್ಕಾಚಾರ ಇಲ್ಲಿದೆ ನೋಡಿ.

Do your couple live long how do you predict
Author
Bengaluru, First Published Apr 17, 2021, 3:59 PM IST

ಮದುವೆಯಾಗುವಾಗ ನಿಮ್ಮ ಪುರೋಹಿತರು ಅಥವಾ ಜ್ಯೋತಿಷಿಗಳು ನಿಮ್ಮ ರಾಶಿ- ನಕ್ಷತ್ರಗಳನ್ನು ಲೆಕ್ಕಿಸಿ ಜಾತಕ ಹೊಂದಾಣಿಕೆ ನೋಡಿಕೊಂಡು ನಿಮ್ಮ ದಾಂಪತ್ಯ ಹೇಗಿರುತ್ತದೆ ಎಂಬುದನ್ನು ತರ್ಕಿಸುತ್ತಾರೆ. ಅದನ್ನು ನೀವೇ ಮಾಡಬಹುದು. ಹೇಗೆ ಗೊತ್ತೆ?
ನಿಮ್ಮ ಹುಟ್ಟಿದ ನಕ್ಷತ್ರ ಮತ್ತು ರಾಶಿಯನ್ನು ಮೊದಲು ತಿಳಿದುಕೊಳ್ಳಿ. ನಂತರ ಯಾವ ನಕ್ಷತ್ರಕ್ಕೆ ಯಾವ ಗಣ ಎಂಬುದನ್ನು ತಿಳಿದುಕೊಳ್ಳಿ. ಗಣಗಳು ಹೀಗಿರುತ್ತವೆ:

ದೇವಗಣ : ಅಶ್ವಿನಿ, ಮೃಗಶಿರಾ, ಆರ್ದ್ರ, ಪುಷ್ಯ, ಪುನರ್ವಸು, ಹಸ್ತಾ, ಸ್ವಾತಿ, ಅನುರಾಧ, ಶ್ರವಣ, ರೇವತಿ. 
ಮನುಷ್ಯಗಣ: ಭರಣಿ, ರೋಹಿಣಿ, ಪೂರ್ವ ಫಾಲ್ಗುಣಿ, ಉತ್ತರ ಪಾಲ್ಗುಣಿ, ಪೂರ್ವಾಷಾಢ, ಉತ್ತರಾಷಾಢ, ಪೂರ್ವ ಭದ್ರ, ಉತ್ತರ ಭದ್ರ.
ರಾಕ್ಷಸಗಣ: ಕೃತಿಕಾ, ಅಶ್ಲೇಷ, ಮಾಘ, ಚೈತ್ರ, ವಿಶಾಖ, ಜ್ಯೇಷ್ಠ, ಮೂಲ, ಧನಿಷ್ಠ, ಶತಾಭಿಷ 

Do your couple live long how do you predict

ಮೃದು ಹಾಗೂ ಸೌಮ್ಯ ನಕ್ಷತ್ರಗಳು
ಮೃಗಶಿರಾ, ಚೈತ್ರ, ಅನುರಾಧಾ ಮತ್ತು ರೇವತಿ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಸ್ವಭಾವದಲ್ಲಿ ಸೌಮ್ಯ ಹಾಗೂ ಮೃದುವಾಗಿರುತ್ತಾರೆ, ಆರ್ಥಿಕವಾಗಿ ಸಬಲರಾಗಿರುತ್ತಾರೆ. ಕಲಿಕೆಯಲ್ಲಿ ಆಸಕ್ತಿ, ಸಾಮಾಜಿಕ ಕಳಕಳಿ, ಇಂದ್ರೀಯ ಸುಖ ಬಯಸುವವರು, ಈವೆಂಟ್ ಮ್ಯಾನೇಜ್ಮೆಂಟ್ ಎಂದರೆ ಇವರಿಗೆ ಇಷ್ಟ, ಹೊಸ ಬಟ್ಟೆ ಧರಿಸುವುದು, ಮದುವೆಗಾಗಿ ಓಡಾಡುವುದು, ಕಲಾತ್ಮಕ ವಿಷಯಗಳು, ಕೃಷಿ ಮತ್ತು ಪ್ರಯಾಣಗಳು ಇವರಿಗೆ ಶುಭ ಲಾಭ ತರುತ್ತದೆ.

ವಾಸ್ತು ಟಿಪ್ಸ್: ಮನೆಯಲ್ಲಿ ಗುಬ್ಬಚ್ಚಿ ಗೂಡಿದ್ದರೆ ಅದೃಷ್ಟ ಖುಲಾಯಿಸುತ್ತೆ ...

ಚುರುಕಾದ ನಕ್ಷತ್ರಗಳು
ಅಶ್ವಿನಿ, ಪುಷ್ಯ ಮತ್ತು ಹಸ್ತಾ ನಕ್ಷತ್ರಗಳು ಒಳ್ಳೆಯ ನಕ್ಷತ್ರಗಳಾಗಿದ್ದು ಕ್ರೀಡೆ, ಐಷಾರಾಮಿ ಜೀವನ ಪ್ರಿಯರು, ಕ್ರಿಯಾಶೀಲರು, ಚಿಕಿತ್ಸಾ ನೈಪುಣ್ಯರು, ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವವರು, ಲೇವಾದೇವಿ ವ್ಯವಹಾರ, ಪೂಜೆ, ಹವನ ಮಾಡಿಸುವವರು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುವವರು, ಪ್ರಯಾಣ ಪ್ರಿಯರೂ ಆಗಿರುತ್ತಾರೆ.

ಘೋರ ನಕ್ಷತ್ರಗಳು
ಆರ್ದ್ರ, ಆಶ್ಲೇಷ, ಜ್ಯೇಷ್ಠ ಮತ್ತು ಮೂಲ ನಕ್ಷತ್ರಗಳು ಯುದ್ಧದಲ್ಲಿ ಗೆಲುವು ತರುವ ನಕ್ಷತ್ರಗಳಾಗಿವೆ. ಇವು ಭೂತ ಪ್ರೇತಗಳ ಪ್ರತಿನಿಧಿಗಳು, ಜೈಲಿಗೆ ಹೋಗುವುದು, ಬೇರೆಯಾಗುವುದು, ತಡೆಯೊಡ್ಡುವುದು, ಮುರಿದು ಹಾಕುವುದು ಇವುಗಳ ಗುಣ.

ಚಲನಶೀಲ ನಕ್ಷತ್ರಗಳು
ಪುನರ್ವಸು, ಸ್ವಾತಿ, ಶ್ರವಣ, ಧನಿಷ್ಠ ಮತ್ತು ಶತಾಭಿಷಾ ಚಲನಶೀಲ ನಕ್ಷತ್ರಗಳಾಗಿವೆ. ಇವು ಕ್ಷಿಪ್ರವಾಗಿ ಚಲಿಸಬಲ್ಲ ನಕ್ಷತ್ರಗಳು. ಕಿರು ಪ್ರವಾಸ, ಸರಕು ಸಾಗಣೆ, ತೋಟಗಾರಿಕೆ, ಸಾಮಾಜಿಕ ಚಿಂತನೆ ಯಾವುದೇ ವಿಷಯದಲ್ಲಿ ಕ್ಷಿಪ್ರ ಸಾಧನೆ ಮಾಡಲು ಈ ನಕ್ಷತ್ರಗಳು ಕಾರಣವಾಗುತ್ತವೆ.

ದೇವರ ತೀರ್ಥ ತೆಗೆದುಕೊಳ್ಳಲೂ ರೀತಿ ನೀತಿ ಇವೆ, ಏನವು? ...

ದುಷ್ಟ ನಕ್ಷತ್ರಗಳು
ಭರಣಿ, ಮಾಘ, ಪೂರ್ವ ಫಲ್ಗುಣಿ, ಪೂರ್ವಾಷಾಢ ಮತ್ತು ಪೂರ್ವ ಭಾದ್ರಪದ ನಕ್ಷತ್ರಗಳು ದುಷ್ಕೃತ್ಯಗಳಿಗೆ, ಯಾರನ್ನಾದರೂ ಮೋಸಗೊಳಿಸಲು ಅಥವಾ ಸಂಘರ್ಷಗಳಿಗೆ ಸೂಕ್ತವಾಗಿವೆ. ಈ ನಕ್ಷತ್ರಗಳು ಕೆಡವಲು, ಬೆಂಕಿ ಹಚ್ಚಲು ಅಥವಾ ಯಾವುದೇ ವಿನಾಶದ ಕಾರ್ಯಗಳಿಗೆ ಹಾಗೂ ಶತ್ರುಗಳ ನಾಶಕ್ಕೆ ಸಹ ಹಿಂಜರಿಯುವುದಿಲ್ಲ. ಕೃತಿಕಾ ಮತ್ತು ವಿಶಾಖ ಮಿಶ್ರ ನಕ್ಷತ್ರಗಳಾಗಿದ್ದು, ದಿನಗೂಲಿಗಳಾಗಿರುತ್ತಾರೆ.

ಮೇಲೆ ಹೇಳಿದ ಗುಣಗಳು ಈ ನಕ್ಷತ್ರದಲ್ಲಿ ಜನಿಸಿದ ಮನುಷ್ಯರಿಗೆ ಇರುತ್ತವೆ ಎಂದು ತಿಳಿಯಬಾರದು. ಆದರೆ ನಕ್ಷತ್ರಗಳ ಸ್ವಭಾವ ಹೀಗೆ ಇರುತ್ತದೆ ಎಂದು ತಿಳಿಯಬೇಕು. 

ಭೂಮಿ ಹೇಗೆ ಸರ್ವನಾಶ ಆಗುತ್ತೆ? ನಿಮಗೆ ಇದು ಗೊತ್ತೆ? ...

ನಕ್ಷತ್ರ ಹೊಂದಾಣಿಕೆ
ಮದುವೆಯಾಗುವ ಜೋಡಿಗಳ ನಕ್ಷತ್ರ ಹೊಂದಾಣಿಕೆ ಆಗಲೇಬೇಕು. ಇದನ್ನು ಗಣಗಳ ಸಂಖ್ಯೆಯಿಂದ ನೋಡಲಾಗುತ್ತದೆ. ಎರಡೂ ಜೋಡಿಗಳ ಗಣಗಳನ್ನು ಕೂಡಿ ಎಷ್ಟು ಸಂಖ್ಯೆ ಬರುತ್ತದೆ ಎನ್ನುವುದರ ಮೇಲೆ ಅವರು ಭವಿಷ್ಯದಲ್ಲಿ ಚೆನ್ನಾಗಿರುತ್ತಾರಾ ಎಂದು ನೋಡಬಹುದು. ಇದಲ್ಲದೆ ಗುಣಗಳ ಹೊಂದಾಣಿಕೆಯನ್ನು ನೋಡುವುದರ ಮೂಲಕವೂ ಜೋಡಿಗಳ ಭವಿಷ್ಯ ನಿರ್ಧರಿಸಬಹುದು.
ಗುಣಗಳ ಲೆಕ್ಕಾಚಾರ: ಪ್ರತೀ ನಕ್ಷತ್ರವೂ ತನ್ನದೇ ಆದ ಗುಣಗಳನ್ನು ಹೊಂದಿರುತ್ತದೆ. ಜಾತಕದಲ್ಲಿ ಅದನ್ನು ಹೇಳಲಾಗುತ್ತದೆ. ಆ ಗುಣಗಳಲ್ಲಿ ಒಂಬತ್ತು ಹೊಂದಾಣಿಕೆಯಾಗಬೇಕು. ಪ್ರತಿ ಗುಣವು ನಾಲ್ಕು ಸಂಖ್ಯೆಗಳಂತೆ 36 ಸಂಖ್ಯೆಗಳಾಗುತ್ತವೆ. ಅವು ಯಶಸ್ವಿಯಾಗಿ ಹೊಂದಾಣಿಕೆಯಾದರೆ ಆ ಜೋಡಿ ಮದುವೆಯಾಗಲು ಸೂಕ್ತ.
18 ಗುಣಗಳು ಹೊಂದಾಣಿಕೆಯಾದರೆ ಆ ಮದುವೆ ಒಳ್ಳೆಯದು ಎನ್ನುತ್ತಾರೆ. ಕೆಲವು ಸಾರಿ ಅದಕ್ಕಿಂತ ಹೆಚ್ಚು ಗಣಗಳ ಹೊಂದಾಣಿಕೆಯಾಗುತ್ತದೆ. ಅದು ಉನ್ನತ ಜೋಡಿ ಎಂದು ಪರಿಗಣಿಸಲಾಗುತ್ತದೆ. ದೇವಗಣವು ಮನುಷ್ಯ ಮತ್ತು ರಾಕ್ಷಸ ಗುಣಕ್ಕೆ ಹೊಂದಾಣಿಕೆಯಾಗುತ್ತದೆ. ಮನುಷ್ಯ ಗಣವು ತನ್ನ ಹಾಗೂ ರಾಕ್ಷಸ ಗಣಕ್ಕೆ ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ ಈ ರೀತಿ ಜೋಡಿಯನ್ನು ವಿವಾಹಕ್ಕೆ ಯೋಗ್ಯವಲ್ಲ ಎಂದು ಪರಿಗಣಿಸಲಾಗುತ್ತದೆ.
 

Follow Us:
Download App:
  • android
  • ios