Asianet Suvarna News Asianet Suvarna News

ಬಾಗಲಕೋಟೆಯಲ್ಲಿ ಅದ್ಧೂರಿ ದಸರಾ ಉತ್ಸವಕ್ಕೆ ನಿರ್ಧಾರ: 9 ದಿನವೂ 9 ವಿಶೇಷ ಕಾರ್ಯಕ್ರಮ

ಕಳೆದ 4 ವರ್ಷಗಳಿಂದ ನಗರದ ಇನ್ಟಟಿಟ್ಯೂಟ್​ ಆಪ್​ ಮಂಜಿರಮ್‌ ಹಾಗೂ ದ್ಯೋತಾ ಇವೆಂಟ್​ ಮ್ಯಾನೇಜಮೆಂಟ್​ ಇವರ ಸಹಯೋಗದಲ್ಲಿ ನಡೆಯುತ್ತಿರುವ ದಸರಾ ಉತ್ಸವ 

Decision for Grand Dasara Festival in Bagalkot grg
Author
Bengaluru, First Published Aug 26, 2022, 10:45 PM IST

ವರದಿ:  ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಆ.26):   ಬಾರಿಯ ದಸರಾ ಉತ್ಸವವನ್ನ ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ನಡೆಸಲು ಉದ್ದೇಶಿಸಿದ್ದು, ಹೀಗಾಗಿ ಒಂದು ತಿಂಗಳ ಮೊದಲೇ ಎಲ್ಲ ತಯಾರಿ ನಡೆಸಲಾಗುತ್ತಿದ್ದು, ಇದರಲ್ಲಿ 9 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಇದರಲ್ಲಿ ದಾಂಡಿಯಾ ಸಹಿತ ನಾಡಿನ ಸಂಪ್ರದಾಯಿಕ ಮನರಂಜನಾ ಕಾರ್ಯಕ್ರಮಗಳು, ವಸ್ತು ಪ್ರದರ್ಶನಗಳು ಮತ್ತು ಮಾರಾಟ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಂಜೀರಮ್​ ಸಂಸ್ಥೆಯ ಸದಸ್ಯೆ ವಿಂದ್ಯಾ ಸರದೇಸಾಯಿ ಹೇಳಿದರು. 

ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕಳೆದ 4 ವರ್ಷಗಳಿಂದ ನಗರದ ಇನ್ಟಟಿಟ್ಯೂಟ್​ ಆಪ್​ ಮಂಜಿರಮ್‌ ಹಾಗೂ ದ್ಯೋತಾ ಇವೆಂಟ್​ ಮ್ಯಾನೇಜಮೆಂಟ್​ ಇವರ ಸಹಯೋಗದಲ್ಲಿ ದಸರಾ ಉತ್ಸವವನ್ನ ಸೆ.27ರಿಂದ ನಿರಂತರ ವಿಭಿನ್ನ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತಿದೆ ಎಂದರು. 

ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಮೊದಲು, ಈ ವಿಷಯ ನೆನಪಿರಲಿ!

ನವರಾತ್ರಿ ಸಂಭ್ರಮಕ್ಕೆ ಸಾಕ್ಷಿಯಾಗಲಿರುವ ಮುಳುಗಡೆ ನಗರಿ

ಹೌದು. ಬಾಗಲಕೋಟೆ ಪಟ್ಟಣ ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆ ಆಗಿ ಹೋಗಿದ್ದರಿಂದ ಹಳೇ ಬಾಗಲಕೋಟೆ ಪಟ್ಟಣ, ವಿದ್ಯಾಗಿರಿ, ನವನಗರ ಹೀಗೆ ಮೂರು ಭಾಗಗಳಾಗಿ ಹರಿದು ಹಂಚಿ ಹೋಗಿದೆ. ಹೀಗಾಗಿ ಸಾಂಪ್ರದಾಯಿಕ ಹಬ್ಬಗಳನ್ನ ಆಚರಿಸುವ ಜನ ಬೇರೆ ಬೇರೆ ಕಡೆಗೆ ವಾಸ ಮಾಡಲಾರಂಭಿಸಿದರು. ಇದರಿಂದ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ನವನಗರದ ಆಯಾ ಸೆಕ್ಟರ್​ನಲ್ಲಿಯೇ ದಾಂಡಿಯಾ ನೃತ್ಯಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಾ ಬರ್ತಿವೆ. ಆದರೆ ಇದೀಗ ಮಂಜೀರಮ್​ ಸಂಸ್ಥೆಯು ಎಲ್ಲರನ್ನೂ ಒಂದೇ ವೇದಿಕೆಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದು, ಹೀಗಾಗಿ ನಗರದ ಕಾಳಿದಾಸ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆಯನ್ನ ನಿರ್ಮಿಸಿ ಅದರಲ್ಲಿ ಎಲ್ಲರನ್ನ ಒಗ್ಗೂಡಿಸಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಇಡೀ ಬಾಗಲಕೋಟೆ ದಸರಾ ಹಬ್ಬವನ್ನ ಒಂದೇ ಕಡೆಗೆ ಆಚರಿಸುವ ಉದ್ದೇಶವನ್ನ ಹೊಂದಲಾಗಿದೆ ಎಂದು ಮಂಜೀರಮ್​ ಸಂಸ್ಥೆಯ ಅಧ್ಯಕ್ಷ ದರ್ಶನ ಹೇಳಿದ್ದಾರೆ. 

9 ದಿನವೂ 9 ವಿಶೇಷ ಕಾರ್ಯಕ್ರಮ

ಈ ಬಾರಿಯ ಬಾಗಲಕೋಟೆ ದಸರಾ ಉತ್ಸವ ರಂಗೇರಲಿದ್ದು, 9 ದಿನಗಳ ಕಾಲ ನಡೆಯೋ ದಸರಾ ಉತ್ಸವದಲ್ಲಿ 9 ವಿಶೇಷ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣವಾದರೆ ಮತ್ತೊಂದೆಡೆ ಅದೇ ಸ್ಥಳದಲ್ಲಿ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಮುಖ್ಯವಾಗಿ 9 ದಿನಗಳ ಕಾಲ ನಡೆಯೋ ಕಾರ್ಯಕ್ರಮಗಳಲ್ಲಿ ಚಲನಚಿತ್ರಗಳಲ್ಲಿ ವಿಶೇಷ ಕಾರ್ಯ ನಿರ್ವಹಣೆ ಮಾಡಿದ ಕಲಾವಿದರು, ರಾಷ್ಟ್ರೀಯ ಚಿತ್ರಕಲಾವಿರು, ಕಿರುತೆರೆ ಕಲಾವಿದರು, ವಿವಿಧ ಕಲಾ ಕ್ಷೇತ್ರಗಳಲ್ಲಿ ಸಾಧಕರು ಹಾಗೂ ರಾಜಕೀಯ ಗಣ್ಯರು ಸಹ ಸಾಕ್ಷಿಯಾಗಲಿದ್ದಾರೆ. 

ಗಣೇಶ ಚತುರ್ಥಿ ಹಬ್ಬಕ್ಕೆ ಮನೆಯನ್ನು ಈ ರೀತಿ ಸುಂದರವಾಗಿ ಅಲಂಕರಿಸಿ

ದಸರಾ ಹಬ್ಬದ ಜೊತೆಗೆ ಕಣ್ಮನ ಸೆಳೆಯಲಿರೋ ಎಕ್ಸಪೋ

ಇನ್ನು ಈ ಬಾರಿಯ ದಸರಾ ಹಬ್ಬದ ಸಂಭ್ರಮ ಬಾಗಲಕೋಟೆಯಲ್ಲಿ ಕೇವಲ ಹಬ್ಬವಾಗಿರದೇ ವಿಶೇಷ ನೃತ್ಯಗಳು, ವಸ್ತುಪ್ರದರ್ಶನ ಮತ್ತು ಮಾರಾಟ ಸೇರಿದಂತೆ ವಿವಿಧ ಎಕ್ಸಪೋಗಳಿಗೂ ಸಾಕ್ಷಿಯಾಗಲಿದೆ. ಕಳೆದ 4 ವರ್ಷಗಳಿಂದ ಮಂಜೀರಮ್​ ಸಂಸ್ಥೆ ದಸರಾ ಉತ್ಸವ ಹಮ್ಮಿಕೊಂಡು ಬಂದಿದ್ದು, ಆದ್ರೆ ಈ ಬಾರಿ ವಿಶೇಷ ಆಚರಣೆಗೆ ಮುಂದಾಗಿದೆ. ದಸರಾ ಹಬ್ಬದ ವೇದಿಕೆಯೊಂದಿಗೆ ಅಟೋ ಎಕ್ಸಪೋ, ಹೋಂ ಅಪ್ಲೈನ್ಸಸ್​ ಎಕ್ಸಪೋ, ಹುಡ್​ಜೋನ್​, ಕಲ್ಚರಲ್​ ಆಕ್ಟಿವಿಟೀಸ್​, ಕಿಡ್ಸ್​ ಪ್ಲೇಝೋನ್​, ಆಬ್ಜಕ್ಟಿವ್ ಡಿಸ್​ಪೇ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮೇಳ ಸಹ ಈ ಬಾರಿ ಗಮನ ಸೆಳೆಯಲಿದೆ ಎಂದು ರವಿ ಕುಮಟಗಿ ತಿಳಿಸಿದ್ದಾರೆ. 

ಒಟ್ಟಿನಲ್ಲಿ ಈ ಬಾರಿ ಬಾಗಲಕೋಟೆ ದಸರಾ ಉತ್ಸವಕ್ಕೆ ಒಂದು ತಿಂಗಳ ಮೊದಲೇ ಸಿದ್ಧತೆ ಆರಂಭಗೊಂಡಿದ್ದು, ವಿವಿಧ ರಾಷ್ಟ್ರೀಯ ಕಲಾವಿದರು, ರಾಜ್ಯ ಕಲಾವಿದರು, ವಿವಿಧ ಕ್ಷೇತ್ರಗಳ ಸಾಧಕರ ಉಪಸ್ಥಿತಿಯೊಂದಿಗೆ 9 ದಿನಗಳ ಕಾಲ ಗಮನ ಸೆಳೆಯಲಿದೆ.
 

Follow Us:
Download App:
  • android
  • ios