ಆಧುನಿಕ ಭರಾಟೆ ನಡುವೆಯೂ ನಿಲ್ಲದ ದಸರಾ ಗೊಂಬೆ ಹಬ್ಬ

ನವರಾತ್ರಿ ಎಂದರೆ ಈಗೀಗ ದಿನಕ್ಕೊಂದು ಬಣ್ಣದ ಉಡುಗೆ ತೊಡುವ ಹಾಗೂ ಇತರೆ ಚಟುವಟಿಕೆಗಳ ಹೊಸ ಸ್ಪರ್ಶ ನೀಡಲಾಗಿದೆ. ಮೊದಲೆಲ್ಲ ದಸರಾ ಬಂದಿತೆಂದರೆ ಮನೆ ಮನೆಯಲ್ಲಿ ಗೊಂಬೆಗಳ ಕೂರಿಸಲಾಗುತ್ತಿತ್ತು. ಕಾಲ ಕ್ರಮೇಣ ಈ ಗೊಂಬೆಗಳ ಹಬ್ಬ ಮರೆಯಾದರೂ ಚಿತ್ರದುರ್ಗದ ಕೆಲವು ಮನೆಗಳಲ್ಲಿ ಈಗಲೂ ಈ ಆಚರಣೆಗಳು ನಡೆಯುತ್ತಿವೆ. ಈ ಹಬ್ಬದಲ್ಲಿ ಗೊಂಬೆಗಳನ್ನು ಕೂರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

Dasara Gombe is a festival that does not stop in spite of modern culture rav

ಚಿತ್ರದುರ್ಗ (ಅ.2) : ನವರಾತ್ರಿ ಎಂದರೆ ಈಗೀಗ ದಿನಕ್ಕೊಂದು ಬಣ್ಣದ ಉಡುಗೆ ತೊಡುವ ಹಾಗೂ ಇತರೆ ಚಟುವಟಿಕೆಗಳ ಹೊಸ ಸ್ಪರ್ಶ ನೀಡಲಾಗಿದೆ. ಮೊದಲೆಲ್ಲ ದಸರಾ ಬಂದಿತೆಂದರೆ ಮನೆ ಮನೆಯಲ್ಲಿ ಗೊಂಬೆಗಳ ಕೂರಿಸಲಾಗುತ್ತಿತ್ತು. ಕಾಲ ಕ್ರಮೇಣ ಈ ಗೊಂಬೆಗಳ ಹಬ್ಬ ಮರೆಯಾದರೂ ಚಿತ್ರದುರ್ಗದ ಕೆಲವು ಮನೆಗಳಲ್ಲಿ ಈಗಲೂ ಈ ಆಚರಣೆಗಳು ನಡೆಯುತ್ತಿವೆ. ಈ ಹಬ್ಬದಲ್ಲಿ ಗೊಂಬೆಗಳನ್ನು ಕೂರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

Navratri 2022 Day 7: ಅಕ್ಷರಾಭ್ಯಾಸಕ್ಕೆ ಸುದಿನ ಸರಸ್ವತಿ ಪೂಜೆಯ ದಿನ..

ತಲಾತರದಿಂದ ಮನೆಯಲ್ಲಿ ಗೊಂಬೆಯನ್ನು ಕೂರಿಸುತ್ತಾ ಬಂದ ಇಂತದೊಂದು ಮನೆ ಚಿಕ್ಕಪೇಟೆಯಲ್ಲಿದೆ. ನಗರದ ಚಿಕ್ಕಪೇಟೆಯ ಬಸವಣ್ಣ ದೇವಾಲಯದ ಹಿಂಭಾಗದಲ್ಲಿನ ಬಿಜೆಪಿ ಮಾಧ್ಯಮ ಸಂಚಾಲಕ ವಂಸತರವರ ಮನೆಯಲ್ಲಿ ಹಿಂದಿನಿಂದಲೂ ಗೊಂಬೆಗಳನ್ನು ಕೂರಿಸುತ್ತಾ ಬರಲಾಗಿದೆ. ಇಲ್ಲಿ ಚನ್ನಪಟ್ಟಣ, ತಿರುಪತಿ, ಮೈಸೂರು, ಶ್ರವಣ ಬೆಳಗೊಳ, ತಂಜಾವೂರ್‌, ಕೃಷ್ಣಗಿರಿ, ತಮಿಳುನಾಡು, ಗೋವಾ ಉಡುಪಿ ಸೇರಿದಂತೆ ಬೇರೆ ಕಡೆಗಳಿಂದ ತರಲಾದ ವಿವಿಧ ರೀತಿಯ ಗೊಂಬೆಗಳನ್ನು ಸಾಲಾಗಿ ಜೋಡಿಸಿಟ್ಟು ನೋಡುಗರ ಕಣ್ಮನ ಬೆರಗುಗೊಳಿಸಲಾಗಿದೆ.

ಮಹಾಲಕ್ಷ್ಮೀ, ಸೂರ್ಯ, ಗಾಂಧೀಜಿ, ದಸರಾ ಗೊಂಬೆಗಳು, ಸಾಯಿಬಾಬಾ, ರಾಧಾಕೃಷ್ಣ, ಗೋಪಾಲ ಕೃಷ್ಣ, ಗಣಪತಿ, ಗಂಗೆ, ಸೂರ್ಯನ ಪತ್ನಿಯರಾದ ಸನ್ನದೇವಿ, ಛಾಯಾದೇವಿ, ಮತ್ಸ ಕನ್ಯೆ, ಸಾಮಂತರಾಜರು, ವಿವಿಧ ರೀತಿಯ ಪೇಟಗಳು, ವಿವೇಕಾನಂದರು, ಏಸುಕಿಸ್ತ ಸೇರಿದಂತೆ ಪುರಾತನ ಕಾಲದಿಂದ ಬಂದÜ ವಿವಿಧ ರೀತಿಯ ಗೊಂಬೆಗಳನ್ನು ಆಕರ್ಷಕವಾಗಿ ಕೂರಿಸಿದ್ದಾರೆ. ನವರಾತ್ರಿಯಲ್ಲಿ ಪ್ರತಿನಿತ್ಯ ಶ್ರೀದೇವಿಯ ಪಾರಾಯಣ ನಡೆಯುತ್ತದೆ.

ಈ ಕುರಿತು ಮಾಹಿತಿ ನೀಡಿದ ವಸಂತ್‌, ನಮ್ಮ ಅಜ್ಜಿಯ ಕಾಲದಿಂದಲೂ ದಸರಾ ಬೊಂಬೆ ಪ್ರದರ್ಶನ ಮಾಡಿಕೊಂಡು ಬರಲಾಗಿದಿದೆ. ನಾವು ಪ್ರವಾಸಕ್ಕೆ ಹೋದಾಗ ಸಿಗುವ ವಿಶೇಷ ಗೊಂಬೆ ತಂದು ಸಂಗ್ರಹಿಸಿ, ನವರಾತ್ರಿಯಲ್ಲಿ ಕೂರಿಸಲಾಗುತ್ತದೆ. ಮನೆಯವರು ಸಂಭ್ರಮದಿಂದ ಆಚರಿಸಿಕೊಂಡು ಬಂದಿದ್ದಾರೆ ಎಂದರು.

ಉಚ್ಚಿಲ ದಸರಾ ವಿಶೇಷ: ಏಕಕಾಲದಲ್ಲಿ ನೂರು ವೀಣೆಗಳ‌ ಝೇಂಕಾರ

Latest Videos
Follow Us:
Download App:
  • android
  • ios