Asianet Suvarna News Asianet Suvarna News

Numerology:ಜನ್ಮಸಂಖ್ಯೆ 6ಕ್ಕೆ ಇಂದು ಎಲ್ಲ ಕೆಲಸಗಳಲ್ಲೂ ಯಶಸ್ಸು

ನವೆಂಬರ್ 22nd 2022 ಮಂಗಳವಾರ ನಿಮ್ಮ ಜನ್ಮಸಂಖ್ಯೆಗೆ ಈ ದಿನ ಹೇಗಿರಲಿದೆ? ಸಂಖ್ಯಾ ಭವಿಷ್ಯವು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ. 
 

Daily Numerology predictions of November 22nd 2022 in Kannada
Author
First Published Nov 22, 2022, 7:00 AM IST | Last Updated Nov 22, 2022, 7:00 AM IST

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28ರಂದು ಜನಿಸಿದ ಜನರು)
ಮನೆ ನಿರ್ವಹಣೆ ಹಾಗೂ ಅಲಂಕಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವ ಮೂಲಕ ಕುಟುಂಬ ಸದಸ್ಯರೊಂದಿಗೆ ಖುಷಿಯ ಕ್ಷಣಗಳನ್ನು ಅನುಭವಿಸುತ್ತೀರಿ. ಯಾವುದೇ ವೈಯಕ್ತಿಕ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ. ಇದ್ರಿಂದ ಯಾವುದೇ ರೀತಿಯ ತಪ್ಪುಗಳು ಘಟಿಸೋದಿಲ್ಲ. ಸಮಯಕ್ಕೆ ಸರಿಯಾಗಿ ನಿಮ್ಮ ವರ್ತನೆಗಳನ್ನು ಬದಲಾಯಿಸಿಕೊಳ್ಳುವುದು ಅಗತ್ಯ. ಉದ್ಯಮದಲ್ಲಿ ಯಶಸ್ಸು ಸಿಗಲು ಕಠಿಣ ಪರಿಶ್ರಮ ಬೇಕು.. 

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ಕಠಿಣ ಪರಿಸ್ಥಿತಿಯಲ್ಲೂ ನಿಮ್ಮ ಕೆಲಸ-ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ. ಬಂಧುಗಳ ಸಹಕಾರದಿಂದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಸಮಸ್ಯೆ ಎದುರಾದಾಗ ಇನ್ನೊಬ್ಬರನ್ನು ದೂರುವ ಬದಲು ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸಿ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳು ಅಡೆತಡೆ ಅನುಭವಿಸುವ ಸಾಧ್ಯತೆ. ಉದ್ಯಮದಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಮನೆಯಲ್ಲಿನ ವಾತಾವರಣ ಸಂತಸದಾಯಕ ಹಾಗೂ ನೆಮ್ಮದಿಯಿಂದ ಕೂಡಿರುತ್ತದೆ. 

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಯಾವುದೇ ಪ್ರಮುಖ ವಿಚಾರಕ್ಕೆ ಸಂಬಂಧಿಸಿ ಗೊಂದಲ ಉಂಟಾದರೆ ಆತ್ಮೀಯರ ಜೊತೆ ಚರ್ಚಿಸಿ. ನಿಮಗೆ ಸಮರ್ಪಕವಾದ ಸಲಹೆ ಸಿಗಲಿದೆ. ಸಮಯ ನಿಮಗೆ ಬೆಂಬಲವಾಗಿ ಇರಲಿದೆ. ಸಮಯ ನಿರ್ವಹಣೆ ಕೂಡ ನಿಮ್ಮ ಕ್ಷಮತೆಯನ್ನು ಅವಲಂಬಿಸಿದೆ ಎಂಬುದನ್ನು ಮರೆಯಬೇಡಿ. ವೈಯಕ್ತಿಕ ಚಟುವಟಿಕೆಗಳಲ್ಲಿ ಬ್ಯುಸಿ ಆಗಿದ್ದೀರಿ ಎಂಬ ನೆಪ ಮುಂದಿಟ್ಟುಕೊಂಡು ಬಂಧುಗಳನ್ನು ನಿರ್ಲಕ್ಷಿಸಬೇಡಿ. ಫೋನ್ ಹಾಗೂ ಇಂಟರ್ನೆಟ್ ಮೂಲಕ ಪ್ರತಿಯೊಬ್ಬರ ಜೊತೆ ಸಂಪರ್ಕದಲ್ಲಿರಿ. 

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಕೆಲವು ಸಮಯದಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಗುವ ಮೂಲಕ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆಸ್ತಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಂದರೆ ಎದುರಾಗಲಿದೆ. ನಿಮ್ಮ ಪ್ರತಿಭೆ ಹಾಗೂ ವರ್ತನೆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ. ಹಣಕಾಸಿನ ವಿಚಾರದಲ್ಲಿ ಬಜೆಟ್ ಗೆ ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ. ಧ್ಯಾನ ಹಾಗೂ ಆಧ್ಯಾತ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ.

ದೇವರ ಫೋಟೋಗೆ ಪೂಜಿಸುತ್ತೀರೋ, ಮೂರ್ತಿಗೋ? ವ್ಯತ್ಯಾಸವೇನು ತಿಳ್ಕೊಳ್ಳಿ

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ಸಮಾಜ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಕೊಡುಗೆ ನೀಡುತ್ತೀರಿ. ಇದ್ರಿಂದ ಸಮಾಜದಲ್ಲಿ ನಿಮಗೆ ಹೆಚ್ಚಿನ ಮನ್ನಣೆ ಸಿಗಲಿದೆ. ಮನೆಯ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುತ್ತೀರಿ. ಕುಟುಂಬ ಸದಸ್ಯರೊಂದಿಗೆ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಖುಷಿ ಸಿಗಲಿದೆ. ಯಾವುದೇ ಕೆಲಸ ಕೈಗೊಳ್ಳುವ ಮುನ್ನ ಆ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರೋದು ಅಗತ್ಯ. ಅನುಭವದ ಕೊರತೆಯಿಂದ ಕೆಲವು ಕೆಲಸಗಳು ಅಪೂರ್ಣವಾಗುತ್ತವೆ. 

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ನಿಮ್ಮ ಗ್ರಹಗತಿಗಳು ಇಂದು ನಿಮಗೆ ಪೂರಕವಾಗಿರಲಿವೆ. ಆತ್ಮವಿಶ್ವಾಸ ಹೆಚ್ಚಲಿದೆ. ಪ್ರಯತ್ನದ ಮೂಲಕ ನೀವು ಬಯಸಿದ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಆದರೆ ಪ್ರಯತ್ನ ಪಡುವುದು ಅಗತ್ಯ. ಮಕ್ಕಳ ಚಟುವಟಿಕೆಗಳಿಗೆ ನೆರವು ನೀಡುವುದರಿಂದ ನಿಮಗೆ ಖುಷಿ ಸಿಗಲಿದೆ. ಇತರ ವ್ಯಕ್ತಿಗಳ ಕೆಲಸ-ಕಾರ್ಯಗಳಲ್ಲಿ ಬೆಂಬಲ ನೀಡಿ. ಯಾವುದೇ ವಿಷಯದ ಬಗ್ಗೆ ನಿರ್ಣಯ ಕೈಗೊಳ್ಳುವ ಮುನ್ನ ಕುಟುಂಬ ಸದಸ್ಯರ ಜೊತೆಗೆ ಸಮಾಲೋಚನೆ ನಡೆಸಿ. 

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ವಿಶೇಷ ವ್ಯಕ್ತಿಯ ನೆರವಿನೊಂದಿಗೆ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಿ. ನಿಮ್ಮ ಆಸಕ್ತಿಯ ವಿಷಯಗಳಲ್ಲಿ ಸಮಯ ಕಳೆಯಿರಿ. ಇದ್ರಿಂದ ನಿಮಗೆ ಆಧ್ಯಾತ್ಮಿಕ ಹಾಗೂ ಮಾನಸಿಕ ನೆಮ್ಮದಿ ಸಿಗಲಿದೆ. ಮನೆ ಬಳಕೆಗೆ ಅಗತ್ಯವಾದ ವಸ್ತುಗಳ ಆನ್ ಲೈನ್ ಶಾಪಿಂಗ್ ನಿಂದ ಹೆಚ್ಚಿನ ಹಣ ವ್ಯಯವಾಗಲಿದೆ. ಉದ್ಯಮಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳು ಪೂರ್ಣಗೊಳ್ಳಲಿವೆ. 

ಬಂಗಾರ ಇಡೋಕೆ, ಧರಿಸಲು ಇಲ್ಲಿವೆ ವಾಸ್ತು ಟಿಪ್ಸ್

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಅನುಭವಿ ಹಾಗೂ ಹಿರಿಯ ವ್ಯಕ್ತಿಗಳ ಜೊತೆಗೆ ಸಮಯ ಕಳೆಯೋದ್ರಿಂದ ನಿಮ್ಮ ಆಲೋಚನೆಗಳಲ್ಲಿ ಸಕಾರಾತ್ಮಕ ವಿಚಾರಗಳು ಮೂಡಲಿವೆ. ಕಷ್ಟಕರ ಸನ್ನಿವೇಶಗಳಿಗೆ ನೀವು ಬೇಗ ಹೊಂದಿಕೊಳ್ಳುತ್ತೀರಿ. ಸಂಬಂಧದಲ್ಲಿ ಒಂದಿಷ್ಟು ವೈಮನಸ್ಸು ಕಾಣಿಸಲಿದೆ. ನೆರೆಹೊರೆಯವರ ಜೊತೆಗೆ ಯಾವುದೇ ವಾಗ್ವಾದದಲ್ಲಿ ತೊಡಗಬೇಡಿ. ಉದ್ಯಮದಲ್ಲಿ ಯಾವುದೇ ರೀತಿಯ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. 

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ಸಮಯಕ್ಕೆ ಸರಿಯಾಗಿ ನಿಮ್ಮ ನಿತ್ಯದ ಕೆಲಸ-ಕಾರ್ಯಗಳಲ್ಲಿ ಬದಲಾವಣೆ ಮಾಡಿಕೊಳ್ಳಿ. ವೃತ್ತಿ ಜೀವನದಲ್ಲಿ ಯುವಕರಿಗೆ ಯಶಸ್ಸು ಸಿಗಲಿದೆ. ಅಶುಭ ಸುದ್ದಿಯಿಂದ ಮನಸ್ಸಿಗೆ ಬೇಸರ. ಹಣದ ವಿಷಯದಲ್ಲಿ ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಧಾರ್ಮಿಕ  ಕಾರ್ಯಗಳಲ್ಲಿ ಸಮಯ ಕಳೆಯಿರಿ. ಪತಿ ಹಾಗೂ ಪತ್ನಿ ನಡುವೆ ಉತ್ತಮ ಬಾಂಧವ್ಯ. ದಿಢೀರ್ ಆಗಿ ಎದುರಾಗುವ ಸಮಸ್ಯೆಯಿಂದ ಒತ್ತಡ ಹಾಗೂ ಆತಂಕ. 

Latest Videos
Follow Us:
Download App:
  • android
  • ios