Asianet Suvarna News Asianet Suvarna News

Numerology:ಜನ್ಮಸಂಖ್ಯೆ 1ಕ್ಕೆ ಎಲ್ಲ ಕಾರ್ಯಗಳಲ್ಲೂ ಯಶಸ್ಸು

ಜನವರಿ 1,  2023 ಭಾನುವಾರ ನಿಮ್ಮ ಜನ್ಮಸಂಖ್ಯೆಗೆ ಈ ದಿನ ಹೇಗಿರಲಿದೆ? ಸಂಖ್ಯಾ ಭವಿಷ್ಯವು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ.

Daily Numerology predictions of January 1st 2023 in Kannada
Author
First Published Jan 1, 2023, 7:00 AM IST | Last Updated Jan 1, 2023, 7:00 AM IST

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28ರಂದು ಜನಿಸಿದ ಜನರು)
ಹೊಸ ವರ್ಷದ ಮೊದಲ ದಿನ ಯಾವುದೇ ಕಾರ್ಯ ಕೈಗೊಂಡರೂ ಯಶಸ್ಸು ಸಿಗಲಿದೆ. ಕೋಪದಿಂದ ಆಡಿದ ಮಾತಿನಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ. ಕೌಟುಂಬಿಕ ಕಲಹದ ಕಾರಣ ಒಡಹುಟ್ಟಿದವರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಮೂಡಬಹುದು. ಸಮಸ್ಯೆಯನ್ನು ಶಾಂತಿ ಹಾಗೂ ಸಹನೆಯಿಂದ ಪರಿಹರಿಸಿಕೊಳ್ಳಿ. ಮಾತಿನಲ್ಲಿ ಕಾಲಹರಣ ಮಾಡದೆ ನಿಮ್ಮ ಗುರಿ ಮೇಲೆ ಗಮನ ಕೇಂದ್ರೀಕರಿಸಿ. 

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ಹಿರಿಯರ ಸಲಹೆಯಿಂದ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ. ಕೆಲವು ಅನಗತ್ಯ ವೆಚ್ಚಗಳು ಎದುರಾಗಬಹುದು. ಯಾವುದೇ ಕೆಲಸ ಮಾಡುವಾಗಲೂ ಶಾಂತವಾಗಿರಿ.  ಪರಿಸ್ಥಿತಿಯನ್ನು ನಿಮ್ಮ ಲಾಭಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಸಿಗಲಿವೆ, ಸಮರ್ಪಕವಾಗಿ ಬಳಸಿಕೊಳ್ಳಿ. 

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಅನೇಕ ಸಮಯದಿಂದ ನೆನೆಗುದಿಗೆ ಬಿದ್ದಿರುವ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ದುಃಖದ ಘಟನೆ ನಿಮ್ಮನ್ನು ಭಾವನಾತ್ಮಕವಾಗಿ ದುರ್ಬಲಗೊಳಿಸುತ್ತದೆ. ಯಾವುದೇ ರೀತಿಯ ವಿವಾದ ಹಾಗೂ ಚರ್ಚೆಗಳಿಂದ ದೂರವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ಮೂಡಲಿದೆ.

ಕಿಚನ್‌ನಲ್ಲಿರೋ ಈ ಮಸಾಲೆ 2023ರಲ್ಲಿ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತೆ

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಇನ್ನೊಬ್ಬರ ಮೇಲೆ ಅವಲಂಬಿತರಾಗುವ ಬದಲು ನಿಮ್ಮ ಕೆಲಸಗಳನ್ನು ನೀವೇ ಮಾಡಿಕೊಳ್ಳಿ. ಇನ್ನೊಬ್ಬರ ಒಳ್ಳೆಯ ಗುಣಗಳನ್ನು ಗುರುತಿಸಿ, ಪ್ರಶಂಸೆ ನೀಡಿ. ಇಂದು ಯಾರಿಗೂ ಸಾಲ ನೀಡಬೇಡಿ. ಸಾಲ ನೀಡಿದ್ರೆ ಹಿಂತಿರುಗಿ ಬರುವುದಿಲ್ಲ. ಮಕ್ಕಳಿಗೆ ಸೂಕ್ತವಾದ ನೆರವು ನೀಡಿ. ಯಾರೊಂದಿಗೂ ಮನಸ್ಸು ಮುರಿದುಕೊಳ್ಳಬೇಡಿ. ಏಕೆಂದ್ರೆ ಅದರಿಂದ ನಿಮ್ಮ ಮನಸ್ಸಿನ ನೆಮ್ಮದಿ ಹಾಳಾಗಲಿದೆ. 

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ಬಹಳ ದಿನಗಳಿಂದ ಮನಸ್ಸಿನಲ್ಲಿ ಮೂಡಿದ್ದ ಯೋಜನೆಯನ್ನು ಇಂದು ಕಾರ್ಯರೂಪಕ್ಕೆ ತರಲಿದ್ದೀರಿ. ಆಲಸ್ಯದ ಕಾರಣದಿಂದ ಯಾವುದೇ ಕೆಲಸವನ್ನು ನಿರ್ಲಕ್ಷ್ಯಿಸಬೇಡಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು.  ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಉದ್ಯಮವನ್ನು ಮುನ್ನಡೆಸಿ.

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ನಿಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಇಂದು ಸೂಕ್ತವಾದ ವೇದಿಕೆ ಸಿಗಲಿದೆ. ಸ್ವ ಪ್ರತಿಭೆಯಿಂದ ಕೆಲಸ-ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ನಿತ್ಯದ ಕೆಲಸ ಕಾರ್ಯಗಳು ನಿಮ್ಮ ಭೌತಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿವೆ. ಸಕಾರಾತ್ಮಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಹಿರಿಯರಿಂದ ಸೂಕ್ತ ಸಹಕಾರ ಹಾಗೂ ಮಾರ್ಗದರ್ಶನ ಸಿಗಲಿದೆ.

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ಹೊಸತನಕ್ಕೆ ತೆರೆದುಕೊಳ್ಳುತ್ತೀರಿ. ಹೊಸ ವರ್ಷದ ಮೊದಲ ದಿನ ಹೊಸ ಕೆಲಸಕ್ಕೆ ಚಾಲನೆ ನೀಡುತ್ತೀರಿ. ಪ್ರಭಾವಿ ಜನರ ಸಂಪರ್ಕದಿಂದ ಲಾಭ ಹಾಗೂ ಗೌರವ. ಇಂಥ ವ್ಯಕ್ತಿಗಳ ಜೊತೆಗೆ ಸಮಯ ಕಳೆಯೋದ್ರಿಂದ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ನಿಮ್ಮ ಗೌರವ ಹೆಚ್ಚಲಿದೆ. ಕೆಲವು ಸ್ನೇಹಿತರು ನಿಮಗೆ ತೊಂದರೆಯುಂಟು ಮಾಡುವ ಸಾಧ್ಯತೆ. ಹೀಗಾಗಿ ಅವರ ಮಾತುಗಳಲ್ಲಿ ನಂಬಿಕೆಯಿಡಬೇಡಿ. 

ತಿರುಪತಿ ಗರ್ಭಗುಡಿ ಮುಚ್ಚಲ್ಲ: ಮುಖ್ಯ ಅರ್ಚಕ ಸ್ಪಷ್ಟನೆ

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಭವಿಷ್ಯದ ಬಗ್ಗೆ ಸುಂದರ ಕನಸು ಕಾಣುತ್ತೀರಿ. ಹೊಸ ಯೋಜನೆಗೆ ಚಾಲನೆ ನೀಡುತ್ತೀರಿ. ಜನರ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮುನ್ನಡೆದರೆ ನಿಮಗೆ ಯಶಸ್ಸು ಖಚಿತ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ನಕಾರಾತ್ಮಕ ವ್ಯಕ್ತಿತ್ವದ ಕೆಲವು ಜನರು ನಿಮಗೆ ತೊಂದರೆಯುಂಟು ಮಾಡಲಿದ್ದಾರೆ. ಮನೆಯ ಹಿರಿಯರ ಮಾತುಗಳಿಗೆ ಗಮನ ಕೊಡಿ. 

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ಹಲವು ಸಮಯದಿಂದ ನೆನೆಗುದಿಗೆ ಬಿದ್ದಿರುವ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ವಿಶೇಷ ವ್ಯಕ್ತಿ ಅಥವಾ ಗೆಳೆಯನ ಭೇಟಿಯಿಂದ ಖುಷಿ. ಅವ್ಯಕ್ತ ಭಯ  ಕಾಡಿದರೂ ದೈವಬಲದಿಂದ ನೀವು ಅಂದಕೊಂಡ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕೆಲಸದ ಸ್ಥಳದಲ್ಲಿ ಉನ್ನತಾಧಿಕಾರಿಗಳು ಹಾಗೂ ಅನುಭವಿ ಜನರ ನೆರವು ದೊರೆಯಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. 

Latest Videos
Follow Us:
Download App:
  • android
  • ios