Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ಗುಣದಲ್ಲಿ ಬದಲಾದರೆ, ಡಿಕೆಶಿ ಸಿಎಂ ಆಗ್ತಾರೆ: ಖ್ಯಾತ ಜ್ಯೋತಷಿ ದ್ವಾರಕಾನಾಥ್!

ಚಿಕ್ಕಮಗಳೂರಿನ ದತ್ತಪೀಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಖ್ಯಾತ ಜ್ಯೋತಿಷಿ ದ್ವಾರಕಾನಾಥ್  ಸದ್ಯಕ್ಕೆ ಕಾಂಗ್ರೆಸ್ ಸರ್ಕಾರ ಬೀಳಲ್ಲ ಎಂದಿದ್ದಾರೆ. ನಗರದ ದತ್ತಪೀಠದಲ್ಲಿಗ  ಮಾತನಾಡಿದ ಅವರು ದತ್ತಪೀಠದ ದತ್ತಾತ್ರೇಯರ ಜಾಗದಲ್ಲಿ ಹೇಳುತ್ತೇನೆ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎಂದರು.

congress government not fall modi will become pm again rajaguru dwarkanaths future prediction suh
Author
First Published Dec 26, 2023, 3:42 PM IST

ಚಿಕ್ಕಮಗಳೂರಿನಲ್ಲಿ ದತ್ತಪೀಠದಲ್ಲಿ ದತ್ತಜಯಂತಿಯ ಸಂಭ್ರಮ ಮನೆ ಮಾಡಿತ್ತು , ಇಂದು ದತ್ತಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಪಡೆದಿದ್ದು. ರಾಜ್ಯದ ವಿವಿಧ ಜಿಲ್ಲೆಗಳಿಂದ ದತ್ತಮಾಲಾಧಾರಿಗಳು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದು ದತ್ತ ಪಾದುಕೆ ದರ್ಶನ ಪಡೆದಿದ್ದಾರೆ.

ಚಿಕ್ಕಮಗಳೂರಿನ ದತ್ತಪೀಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಖ್ಯಾತ ಜ್ಯೋತಿಷಿ ದ್ವಾರಕಾನಾಥ್  ಸದ್ಯಕ್ಕೆ ಕಾಂಗ್ರೆಸ್ ಸರ್ಕಾರ ಬೀಳಲ್ಲ ಎಂದಿದ್ದಾರೆ. ನಗರದ ದತ್ತಪೀಠದಲ್ಲಿಗ  ಮಾತನಾಡಿದ ಅವರು ದತ್ತಪೀಠದ ದತ್ತಾತ್ರೇಯರ ಜಾಗದಲ್ಲಿ ಹೇಳುತ್ತೇನೆ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎಂದರು. ಸಿಎಂ ಸಿದ್ದರಾಮಯ್ಯವರಿಗೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಆದರೆ, ಗುಣದಲ್ಲಿ ಬದಲಾವಣೆ ಮಾಡಿಕೊಂಡರೆ ಡಿಕೆಶಿ ಸಿಎಂ ಆಗುತ್ತಾರೆ. ಡಿಕೆಶಿಗೆ ಮುಂದೊಂದು ದಿನ ಸಿಎಂ ಆಗಲಿದ್ದು,  ರಾಜ್ಯವನ್ನ ಆಳುವ ದಿನ ಬರಲಿದೆ.ಅಕ್ಕಿ ಹಾಕಿದ ತಕ್ಷಣ ಅನ್ನ ಆಗಲ್ಲ, ಇದು ಹಾಗೇನೆ ಎಂದು ರಾಜ್ಯದ ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ.

ಹಾಗೇ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ. ಅವರು ಪ್ರಧಾನಿ ಆಗುವುದನ್ನ ತಪ್ಪಿಸಲು ಯಾರಿಂದಲೂ ಆಗಲ್ಲ.  2024ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಪಕ್ಷ ಅಧಿಕಾರಕ್ಕೆ ಬರಲಿದೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಜ್ಯೋತಿಷಿ ರಾಜಗುರು ದ್ವಾರಕಾನಾಥ್ ಹೇಳಿಕೆ ನೀಡಿದ್ದಾರೆ.

ಇನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ದತ್ತಜಯಂತಿ ನಡೆಸಲಾಗಿದ್ದು, ವಿಪಕ್ಷ ನಾಯಕ ಆರ್‌.ಅಶೋಕ್‌ ಜತೆ ಹಲವು ಗಣ್ಯರು ದತ್ತ ಮಾಲೆ ಹಾಕಿದ್ದರು. ಅದಲ್ಲದೆ ದತ್ತ ಜಯಂತಿ ಅಂಗವಾಗಿ ಮಾಜಿ ಶಾಸಕ ಸಿ.ಟಿ.ರವಿ, ದೊಡ್ಡಬಳ್ಳಾಪುರದ ಶಾಸಕ ಧೀರಜ್ ಮುನಿರಾಜು ಮತ್ತಿತರರು ಇಂದು ಚಿಕ್ಕಮಗಳೂರು ನಗರದಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಪಡಿ ಸಂಗ್ರಹಿಸಿದರು.
 

Follow Us:
Download App:
  • android
  • ios