Chandra Grahanದ ದಿನ ಈ 8 ತಪ್ಪುಗಳನ್ನು ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ!
ವರ್ಷದ ಮೊದಲ ಚಂದ್ರಗ್ರಹಣಕ್ಕೆ 3 ದಿನ ಬಾಕಿ ಇದೆ. ಈ ದಿನ ನೀವು ಸಾಕಷ್ಟು ಕೆಲಸಗಳಿಂದ ದೂರವಿರಲು ಎಚ್ಚರ ವಹಿಸಬೇಕು. ಇಲ್ಲದಿದ್ದಲ್ಲಿ ಚಂದ್ರನ ದೋಷದಿಂದಾಗಿ ಸಾಕಷ್ಟು ಸಮಸ್ಯೆ ಮೈ ಮೇಲೆಳೆದುಕೊಂಡಂತಾಗುತ್ತದೆ.
ಗ್ರಹಗಳ ಬದಲಾವಣೆಯು ಮನುಷ್ಯ ಜೀವನದ ಮೇಲೆ ಅಗಾಧ ಪರಿಣಾಮ ಬೀರುತ್ತದೆ ಎಂಬುದು ಗೊತ್ತೇ ಇದೆ. ಅದಕ್ಕೇ ಅಲ್ಲವೇ, ಹಣೆಬರಹಕ್ಕೆ ಗ್ರಹಚಾರ ಎನ್ನುವುದು. ಇನ್ನು ಈ ಗ್ರಹಗಳಿಗೆ ಗ್ರಹಣ ಹಿಡಿದರೆ ಅದೊಂದು ದೊಡ್ಡ ಖಗೋಳ ವಿದ್ಯಮಾನವಷ್ಟೇ ಅಲ್ಲ, ಜ್ಯೋತಿಷ್ಯದಲ್ಲೂ ಅದು ದೊಡ್ಡ ಪರಿಣಾಮ ಬೀರುವುದನ್ನು ಕಂಡುಕೊಳ್ಳಲಾಗಿದೆ. ಜ್ಯೋತಿಷ್ಯದಲ್ಲಿ ಗ್ರಹಣವನ್ನು ಶುಭವೆಂದು ಪರಿಗಣಿಸುವುದಿಲ್ಲ.
ವರ್ಷದ ಮೊದಲ ಚಂದ್ರಗ್ರಹಣಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇವೆ. ಹೌದು, 2023ರ ಮೊದಲ ಚಂದ್ರಗ್ರಹಣವು ಮೇ 5ರಂದು ಸಂಭವಿಸಲಿದೆ. ಮೇ 5 ರ ರಾತ್ರಿ 8:44ರಿಂದ ಪ್ರಾರಂಭವಾಗುತ್ತದೆ ಮತ್ತು ಮೇ 6, 2023 ರಂದು 1:00 ರವರೆಗೆ ಇರುತ್ತದೆ. ಇದರ ಒಟ್ಟು ಅವಧಿ ಸುಮಾರು 4 ಗಂಟೆ 15 ನಿಮಿಷ ಇರುತ್ತದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ.
ಚಂದ್ರಗ್ರಹಣದ ಸಮಯದಲ್ಲಿ ನೀವು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳಿವೆ. ಇಲ್ಲದಿದ್ದಲ್ಲಿ ತಪ್ಪುಗಳು ನಿಮಗೆ ಬಹಳಷ್ಟು ತೊಂದರೆಗಳನ್ನು ತರಬಹುದು ಮತ್ತು ಸಂತೋಷಕ್ಕೆ ಹಾನಿ ಮಾಡಬಹುದು. ಚಂದ್ರಗ್ರಹಣ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು ಯಾವೆಲ್ಲ ನೋಡೋಣ.
ಗರ್ಭಿಣಿಯರು ಎಚ್ಚರ!
ಈ ವರ್ಷ ಚಂದ್ರಗ್ರಹಣದ ಸಮಯದಲ್ಲಿ ಜನರು, ವಿಶೇಷವಾಗಿ ಗರ್ಭಿಣಿಯರು ಬಹಳ ಜಾಗರೂಕರಾಗಿರಬೇಕು ಎಂದು ಶಾಸ್ತ್ರಜ್ಞರು ಹೇಳಿದ್ದಾರೆ. ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬಾರದು ಮತ್ತು ಗ್ರಹಣದ ಸಮಯದಲ್ಲಿ ಯಾವುದೇ ಆಹಾರವನ್ನು ಸೇವಿಸಬಾರದು. ಅವರು ಸಂಪೂರ್ಣ ಗ್ರಹಣ ಅವಧಿಯಲ್ಲಿ ತರಕಾರಿಗಳನ್ನು ಕತ್ತರಿಸಲು ಚಾಕು ಅಥವಾ ಬೇರೆ ಯಾವುದೇ ಶಾರ್ಪ್ ವಸ್ತುಗಳನ್ನು ಬಳಸಬಾರದು.
12 ರಾಶಿಗಳ ಮೇಲೆ Chandra Grahan 2023ರ ಪರಿಣಾಮ ಹೇಗಿರುತ್ತದೆ?
ಈ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ
1. ಶಾಸ್ತ್ರಗಳ ಪ್ರಕಾರ ಚಂದ್ರಗ್ರಹಣದ ಸಮಯದಲ್ಲಿ ಕೋಪದಿಂದ ದೂರವಿರಬೇಕು. ಗ್ರಹಣದ ಸಮಯದಲ್ಲಿ ನೀವು ಯಾರೊಂದಿಗಾದರೂ ಕೋಪಗೊಂಡರೆ, ಮುಂಬರುವ 15 ದಿನಗಳು ನಿಮಗೆ ಬಹಳಷ್ಟು ತೊಂದರೆಗಳನ್ನು ತರುತ್ತವೆ.
2. ಗ್ರಹಣದ ಅವಧಿಯಲ್ಲಿ ಯಾವುದೇ ನಿರ್ಜನ ಭೂಮಿ ಅಥವಾ ಸ್ಮಶಾನದ ಕಡೆಗೆ ಹೋಗುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ನಿಮ್ಮ ಜೀವನದ ಎಲ್ಲಾ ಸಂತೋಷಗಳು ಶಾಶ್ವತವಾಗಿ ದೂರವಾಗುತ್ತವೆ.
3. ಗ್ರಹಣದ ಸಮಯದಲ್ಲಿ, ಪತಿ ಮತ್ತು ಹೆಂಡತಿ ಯಾವುದೇ ರೀತಿಯ ದೈಹಿಕ ಸಂಬಂಧಗಳನ್ನು ಹೊಂದಬಾರದು. ಹಾಗೊಂದು ವೇಳೆ ಮಾಡಿದರೆ ಅವರ ವೈವಾಹಿಕ ಜೀವನದಿಂದ ಸಂತೋಷವು ನಾಶವಾಗುತ್ತದೆ.
4.ಗ್ರಹಣಕ್ಕೆ ಒಂಬತ್ತು ಗಂಟೆಗಳ ಮೊದಲು ಬೇಯಿಸಿದ ಆಹಾರವನ್ನು ಸೇವಿಸಬಾರದು ಎಂದು ನಂಬಲಾಗಿದೆ. ಚಂದ್ರನ ಚಕ್ರಗಳು ಮಾನವ ದೇಹದ ಮೇಲೆ ಕೆಲವು ಶಕ್ತಿಯುತ ಪರಿಣಾಮಗಳನ್ನು ಬೀರುತ್ತವೆ ಮತ್ತು ಆದ್ದರಿಂದ ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸದಂತೆ ಸೂಚಿಸಲಾಗುತ್ತದೆ. ಆ ಸಮಯದ ನಕಾರಾತ್ಮಕತೆಯಿಂದಾಗಿ ಹೊಟ್ಟೆಯೊಳಗಿನ ಆಹಾರವು ಋಣಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಅನಾರೋಗ್ಯಕರ ಲಕ್ಷಣಗಳಿಗೆ ಕಾರಣವಾಗುತ್ತದೆ. ತುಳಸಿ ಎಲೆಗಳನ್ನು ಚಂದ್ರನಲ್ಲಿ ಗ್ರಹಣ ಇರುವವರೆಗೆ ಆಹಾರ ಪದಾರ್ಥಗಳಲ್ಲಿ ಹಾಕಬೇಕು.
5. ಸಾಧ್ಯವಾದರೆ, ಗ್ರಹಣದ ಸಮಯದಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು.
Chandra Grahan 2023: ಗ್ರಹಣ ಕಾಲದಲ್ಲೂ ಈ ದೇವಾಲಯದ ಬಾಗಿಲು ಮುಚ್ಚೋದಿಲ್ಲ! ಕಾರಣವೇನು?
6.ಗ್ರಹಣ ಕಾಲದಲ್ಲಿ ಯಾವುದೇ ಪ್ರಮುಖ ವ್ಯವಹಾರಗಳೊಂದಿಗೆ ಮುಂದುವರಿಯುವುದನ್ನು ತಪ್ಪಿಸಬೇಕು.
7. ಈ ಸಮಯದಲ್ಲಿ ದೇವರಿಗೆ ಯಾವುದೇ ಭೋಜನವನ್ನು ಅರ್ಪಿಸಬಾರದು.
8. ಗ್ರಹಣ ಸಮಯದಲ್ಲಿ ಎಣ್ಣೆ ಮಸಾಜ್ ಮಾಡುವುದನ್ನು ತಪ್ಪಿಸಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.