Asianet Suvarna News Asianet Suvarna News

ದಶಕಗಳ ಬಳಿಕ ಕೋಟೆನಾಡಿನ ಅಧಿದೇವತೆಗೆ ಬಂಗಾರದ ಮುಖ ಪದ್ಮ, ಸಂಭ್ರಮವನ್ನು ಕಣ್ತುಂಬಿಕೊಂಡ‌ ಸಾವಿರಾರು ಭಕ್ತರು

ಮದ್ಯ ಕರ್ನಾಟಕದ ಭಕ್ತರ ಆರಾಧ್ಯದೈವ ಎನಿಸಿರುವ ಏಕನಾಥೇಶ್ವರಿಯು ಕೋಟೆನಾಡಿನ ದೇವತೆಯರಲ್ಲಿ ಹಿರಿಯಕ್ಕನ ಸ್ಥಾನದಲ್ಲಿದ್ದಾರೆ. ಹೀಗಾಗಿ ಹಲವು ವರ್ಷಗಳ ಬಳಿಕ  ನಡೆದ ಏಕನಾಥೇಶ್ವರಿಯ ಉಯ್ಯಾಲೆ ಉತ್ಸವದಲ್ಲಿ‌ ಸಾವಿರಾರು ಜನ,ಭಕ್ತರು ಭಾಗಿಯಾಗಿದ್ರು.

chitradurga ekanatheshwari devi festival gow
Author
First Published Dec 8, 2022, 8:09 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಡಿ.8): ಆಕೆ ಐತಿಹಾಸಿಕ ಹಿನ್ನಲೆಯುಳ್ಳ ಶಕ್ತಿದೇವತೆ. ಮಧ್ಯ ಕರ್ನಾಟಕ ಕೋಟೆನಾಡಿನ ಜನರ ಆರಾಧ್ಯ ದೇವತೆ. ನೂರಾರು ವರ್ಷಗಳ ಬಳಿಕ ನಡೆದ ಆಕೆಯ ಉಯ್ಯಾಲೆ‌ ಉತ್ಸವ ಹಾಗೂ ಒಂದು ಕೋಟಿ ರೂಪಾಯಿ ಮೌಲ್ಯದ ಬಂಗಾರದ‌ ಮುಖ ಪದ್ಮ ಲೋಕಾರ್ಪಣೆಯ ಮೆರವಣಿಗೆಯಲ್ಲಿ ಕೋಟೆನಾಡಿನ 18 ದೇವತೆಯರು ಸಾಕ್ಷಿಯಾಗಿದ್ರು. ದೇವತೆಯನ್ನು‌ಉಯ್ಯಾಲೆಯಲ್ಲಿ ಕೂರಿಸಿ ತೂಗುತ್ತಿರೊ ಭಕ್ತರು. ಭಕ್ತರಿಗೆ‌‌ ದರ್ಶನ ನೀಡಲು ಬೆಟ್ಟದ ಮೇಲಿಂದ ಇಳಿದು ಬಂದ ಅಧಿದೇವತೆ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದಲ್ಲಿ. ಹೌದು,  ಮದ್ಯ ಕರ್ನಾಟಕದ ಭಕ್ತರ ಆರಾಧ್ಯದೈವ ಎನಿಸಿರುವ ಏಕನಾಥೇಶ್ವರಿಯು ಕೋಟೆನಾಡಿನ ದೇವತೆಯರಲ್ಲಿ ಹಿರಿಯಕ್ಕನ ಸ್ಥಾನದಲ್ಲಿದ್ದಾರೆ. ಈ ದೇವತೆಯು ಭಕ್ತರ ಬದುಕಿಗೆ ಬೆಳಕಾಗಿದ್ದಾಳೆ. ಯಾವುದೇ ಕೆಲಸ ಕಾರ್ಯ,ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹೊಸ ವ್ಯಾಪಾರ, ವಹಿವಾಟು ಆರಂಭಿಸಬೇಕಾದ್ರು ಈ ದೇವತೆಯ ದರ್ಶನದ ಬಳಿಕವೇ ಮುಂದಿನ ನಿರ್ಧಾರ‌ಕೈಗೊಳ್ಳುವ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.‌ ಆದ್ರೆ ಪಾಳೆಗಾರರ ಕಾಲದಲ್ಲಿ ನೂರಾರು ವರ್ಷಗಳ ಹಿಂದೆ ಪಂಚಲೋಹದಿಂದ ನಿರ್ಮಾಣ‌ಮಾಡಲಾಗಿದ್ದ ಏಕನಾಥೇಶ್ವರಿಯ  ಮುಖಪದ್ಮ ತುಂಬಾ ಹಳೆಯದಾಗಿತ್ತು.

ಹೀಗಾಗಿ ದೇವಿಯ  ಭಕ್ತರು ಆ‌ ಮುಖಪದ್ಮವನ್ನು  ಬದಲಿಸಲು ಹಲವು ದಶಕಗಳಿಂದ ಯತ್ನಿಸಿದ್ರೂ ಸಾದ್ಯವಾಗಿರಲಿಲ್ಲ. ಹೀಗಾಗಿ, ಸಾರ್ವಜನಿಕರಿಂದ ಒಂದು ಕೋಟಿ‌ ರೂಪಾಯಿ ಸಂಗ್ರಹಿಸಿ  ಬಂಗಾರದ ಮುಖಪದ್ಮ,ಡೈಮಂಡ್ ನಲ್ಲಿ ನಿರ್ಮಾಣವಾದ ವೀಭೂತಿ ಹಾಗು ದೇವತೆಯ ಕಿವಿಯೋಲೆಯನ್ನು  ಇಂದು ಲೋಕಾರ್ಪಣೆ ಮಾಡಿದರು. ಈ ವೇಳೆ ಏಳುಸುತ್ತಿನ ಕೋಟೆಯಲ್ಲಿ  ಹಲವು ವರ್ಷಗಳ ಬಳಿಕ  ನಡೆದ ಏಕನಾಥೇಶ್ವರಿಯ ಉಯ್ಯಾಲೆ ಉತ್ಸವದಲ್ಲಿ‌ ಸಾವಿರಾರು ಜನ,ಭಕ್ತರು ಭಾಗಿಯಾಗಿದ್ರು. ಅವರ ಇಷ್ಟಾರ್ಥ ಸಿದ್ದಿಗಾಗಿ ದೇವಿಯ ಉಯ್ಯಾಲೆಯನ್ನು ತೂಗಿ ಭಕ್ತಿ ಭಾವದಲಿ ಮಿಂದೆದ್ದರು.

ಮನೆಯಿಂದ ಹೊರಡುವಾಗ ಗೋಮಾತೆಯ ದರ್ಶನ ಮಾಡಿದರೆ ಹೋದ ಕೆಲಸ ಆಯ್ತೆಂದೇ ಅರ್ಥ!

ಇನ್ನು ಸತತ ಮೂರು ದಿನಗಳಿಂದ ನಡೆಯುತ್ತಿರುವ ಏಕನಾಥೇಶ್ವರಿಯ ಬಂಗಾರದ ಮುಖಪದ್ಮ ಲೋಕಾರ್ಪಣೆ ಕಾರ್ಯಕ್ರಮದ ಮೆರವಣಿಗೆ ಇಂದು ದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಮೆರವಣಿಗೆಯಲ್ಲಿ ಕೋಟೆನಾಡಿನ ಐತಿಹಾಸಿಕ ಹಿನ್ನೆಲೆಯುಳ್ಳ ದೇವತೆಯರಾದ ಬರಗೇರಮ್ಮ, ತಿಪ್ಪಿನಘಟ್ಟಮ್ಮ ಹಾಗು ಉಚ್ಚಂಗಿಯಲ್ಲಮ್ಮ ಸೇರಿದಂತೆ 18 ದೇವತೆಯರು ಶಕ್ತಿದೇವತೆಯೊಂದಿಗೆ‌ ಹೆಜ್ಜೆ ಹಾಕಿದ್ದೂ,ತುಂಭಾ ವಿಶೇಷವಾಗಿತ್ತು.ಆ ದೃಶ್ಯ ನೋಡಿದ್ದೇ ನಮ್ಮ ಪುಣ್ಯವೆಂದು  ನೆರೆದಿದ್ದ ಭಕ್ತರು ಸಂತಸ‌ದಿಂದ ಸಂಭ್ರಮಿಸಿದರು.

Shukra Gochar 2022: ವರ್ಷಾಂತ್ಯಕ್ಕೆ ಮುನ್ನ ಎರಡು ಬಾರಿ ಶುಕ್ರ ಗೋಚಾರ, ಈ ರಾಶಿಗಳಿಗೆ

ಒಟ್ಟಾರೆ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ದೇವತೆಯ ಮುಖಪದ್ಮ ಬದಲಾವಣೆಯ ಭಕ್ತರ ಕನಸು  ನನಸಾಗಿದೆ.ಕೋಟೆನಾಡಿನ ಏಕನಾಥೇಶ್ವರಿಯು ಬಂಗಾರದ ಮುಖಪದ್ಮ ಲೋಕಾರ್ಪಣೆ‌ ಯಶಸ್ವಿಯಾಗಿ ನೆರವೇರಿದೆ. ಹೀಗಾಗಿ ಕೋಟೆನಾಡಿನ ಅಧಿದೇವತೆಯ ಭಕ್ತರಲ್ಲಿ ಈ ಉತ್ಸವ ನವೊಲ್ಲಾಸ ಮೂಡಿಸಿದೆ.

Follow Us:
Download App:
  • android
  • ios