Numerology: ಈ ದಿನಾಂಕದಂದು ಹುಟ್ಟಿದ ಮಕ್ಕಳು ತಂದೆಗೆ ಅದೃಷ್ಟ ತರುತ್ತಾರೆ!
ಮಕ್ಕಳು ಹೆತ್ತವರ ಪಾಲಿಗೆ ಯಾವಾಗಲೂ ಅದೃಷ್ಟವೇ.. ಆದರೆ, ಸಂಖ್ಯಾಶಾಸ್ತ್ರದ ಪ್ರಕಾರ ಕೆಲ ದಿನಾಂಕದಂದು ಜನಿಸಿದ ಮಕ್ಕಳು ತಂದೆಗೆ ತುಂಬಾ ಅದೃಷ್ಟ ತರುತ್ತಾರೆ. ಏಕೆಂದರೆ ಕುಬೇರನ ಕೃಪೆ ಅವರ ಮೇಲಿರುತ್ತದೆ.
ಸಂಖ್ಯಾಶಾಸ್ತ್ರದಲ್ಲಿ, ಯಾವುದೇ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಭವಿಷ್ಯವಾಣಿಗಳನ್ನು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕವು ಅವನ ಇಡೀ ಜೀವನ ಮತ್ತು ಸ್ವಭಾವದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಪ್ರತಿಯೊಬ್ಬ ವ್ಯಕ್ತಿಗೆ ಅವನ ಜನ್ಮ ದಿನಾಂಕದ ಸಂಖ್ಯೆ ತುಂಬಾ ವಿಶೇಷವಾಗಿದೆ. ಅಷ್ಟೇ ಅಲ್ಲ, ಅನೇಕರು ಈ ಸಂಖ್ಯೆಯನ್ನು ತಮ್ಮ ಅದೃಷ್ಟ ಸಂಖ್ಯೆ ಎಂದೂ ಪರಿಗಣಿಸುತ್ತಾರೆ. ಇಂದು ಸಂಖ್ಯಾಶಾಸ್ತ್ರದಲ್ಲಿ ತಂದೆಗೆ ಅದೃಷ್ಟವೆಂದು ಪರಿಗಣಿಸುವ ಮಕ್ಕಳು ಯಾವ ದಿನಾಂಕದಲ್ಲಿ ಜನಿಸಿರುತ್ತಾರೆ ನೋಡೋಣ.
ಈ ಜನ್ಮ ದಿನಾಂಕಗಳನ್ನು ಹೊಂದಿರುವ ಮಕ್ಕಳನ್ನು ತಂದೆಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಕುಬೇರನ ಕೃಪೆ ಅವರ ಮೇಲಿರುತ್ತದೆ. ಅವರಿದ್ದಲ್ಲಿ ಸಂಪತ್ತಿನ ಕೊರತೆ ಬರದು. ಅಂಥವರು ಯಾವ ದಿನಾಂಕದಲ್ಲಿ ಜನಿಸಿರುತ್ತಾರೆ ತಿಳೀಬೇಕಾ?
ರಾಡಿಕ್ಸ್ 7 ಇರುವವರು ಅದೃಷ್ಟವಂತರು
7, 16 ಮತ್ತು 25ರ ಜನ್ಮ ದಿನಾಂಕಗಳನ್ನು ರಾಡಿಕ್ಸ್ 7 ಎಂದು ಪರಿಗಣಿಸಲಾಗುತ್ತದೆ. ಈ ರಾಡಿಕ್ಸ್‌ನ ಮಕ್ಕಳನ್ನು ಅದೃಷ್ಟದಲ್ಲಿ ಶ್ರೀಮಂತರು ಎಂದು ಪರಿಗಣಿಸಲಾಗುತ್ತದೆ. ಏನನ್ನೂ ಸಾಧಿಸಲು ಅವರು ಕಷ್ಟಪಡಬೇಕಾಗಿಲ್ಲ. ಅವರು ಶ್ರಮಶೀಲರು ಮತ್ತು ಬುದ್ಧಿವಂತರು. ತಮ್ಮ ತೀಕ್ಷ್ಣ ಬುದ್ಧಿಶಕ್ತಿಯಿಂದಾಗಿ ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಅವರು ಮುಕ್ತ ಮನಸ್ಸಿನವರು. ತಮ್ಮ ಜೀವನವನ್ನು ಮುಕ್ತವಾಗಿ ಕಳೆಯುವವರು. ಈ ಮೂಲಾಂಕದ ಜನರು ತಾವು ಹೇಳಬೇಕಾದ ವಿಷಯವನ್ನು ಇತರರ ಮುಂದೆ ದೃಢವಾಗಿ ಇಡುತ್ತಾರೆ ಮತ್ತು ಏನನ್ನು ಹೇಳಲೂ ಹಿಂಜರಿಯುವುದಿಲ್ಲ. ಅವರು ಬಹಳ ಸ್ಪಷ್ಟ ಮನಸ್ಸಿನವರು. ಕೆಲವೊಮ್ಮೆ ಅವರು ತಮ್ಮ ದೃಷ್ಟಿಕೋನವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದರಿಂದ ಇತರರಿಂದ ಕೋಪ ಮತ್ತು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಇದೇ ಗುಣವು ಅವರಿಗೆ ಲಾಭಕಾರಿಯಾಗುತ್ತದೆ. ಯಶಸ್ಸನ್ನು ತಂದುಕೊಡುತ್ತದೆ.
ಕುಟುಂಬ ಸದಸ್ಯರಿಗೆ ಅದೃಷ್ಟ(Luck)
ರಾಡಿಕ್ಸ್ 7ರ ಸ್ಥಳೀಯರನ್ನು ಅವರ ತಂದೆಗೆ ಬಹಳ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಒಮ್ಮೆ ಅವರು ಕೆಲಸವನ್ನು ಮಾಡಲು ಯೋಚಿಸಿದರೆ, ಅದರಲ್ಲಿ ಯಶಸ್ಸ(Success)ನ್ನು ಪಡೆದ ನಂತರವೇ ವಿಶ್ರಾಂತಿಯ ಬಗ್ಗೆ ಯೋಚಿಸುವುದು. ಅವರು ಕುಟುಂಬದ ಸದಸ್ಯರಿಂದಲೂ ಅಪಾರ ಪ್ರೀತಿಯನ್ನು ಪಡೆಯುತ್ತಾರೆ. ಅವರು ಸ್ವಭಾವತಃ ಸರಳ ಮತ್ತು ಹೃದಯದಲ್ಲಿ ಶುದ್ಧರಾಗಿದ್ದಾರೆ. ಅವರ ಸ್ವಭಾವದಿಂದ, ಯಾರ ಹೃದಯವನ್ನು ಬೇಕಾದರೂ ಗೆಲ್ಲುತ್ತಾರೆ. ಅವರು ಸಮಾಜದಲ್ಲಿ ವಿಭಿನ್ನವಾದ ಗುರುತನ್ನು ಹೊಂದುತ್ತಾರೆ.
ಹಣಕಾಸಿನ ಸ್ಥಿತಿ ಉತ್ತಮ
7 ಮೂಲಾಂಕ(Radix) ಹೊಂದಿರುವ ಜನರ ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿ ಉತ್ತಮವಾಗಿರುತ್ತದೆ. ಅವರಲ್ಲಿ ಹಣ ಮತ್ತು ಆಹಾರಕ್ಕೆ ಎಂದಿಗೂ ಕೊರತೆ ಇರುವುದಿಲ್ಲ. ಅವರ ಜೀವನವು ಎಲ್ಲಾ ಸೌಕರ್ಯಗಳಿಂದ ಕೂಡಿರುತ್ತದೆ. ಅವರು ಹೆಚ್ಚು ಹಣವನ್ನು ಖರ್ಚು ಮಾಡುವುದಿಲ್ಲ. ಹಾಗಂತ ಅವರು ಜಿಪುಣರು ಎಂದಲ್ಲ. ಅವರು ಅನುಪಯುಕ್ತ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡಲು ಇಷ್ಟ ಪಡುವುದಿಲ್ಲ.
ರಾಡಿಕ್ಸ್ 7 ರ ಸಾಮಾಜಿಕ ಜೀವನ ಮತ್ತು ವೃತ್ತಿ
ಈ ರಾಡಿಕ್ಸ್‌ನ ಜನರು ಕೆಲವೇ ಸ್ನೇಹಿತರನ್ನು ಹೊಂದಿರುತ್ತಾರೆ. ಅವರ ಜೀವನದಲ್ಲಿ ಸೌಕರ್ಯಗಳ ಕೊರತೆ ಇರುವುದಿಲ್ಲ. ಅವರು ತೀಕ್ಷ್ಣವಾದ ಬುದ್ಧಿಶಕ್ತಿಯಿಂದ ಶ್ರೀಮಂತರಾಗಿದ್ದಾರೆ ಮತ್ತು ಅವರ ಬುದ್ಧಿವಂತಿಕೆಯಿಂದ ಸಾಕಷ್ಟು ಹಣವನ್ನು ಗಳಿಸುತ್ತಾರೆ. ರಾಡಿಕ್ಸ್ ಸಂಖ್ಯೆ ಏಳು ಹೊಂದಿರುವ ಜನರು ಐದು ಮತ್ತು ಆರು ರಾಡಿಕ್ಸ್ ಹೊಂದಿರುವವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಈ ಜನರು ಉತ್ತಮ ಬರಹಗಾರರು(Writers), ವೈದ್ಯರು(doctors), ನ್ಯಾಯಾಧೀಶರು, ಜ್ಯೋತಿಷಿಗಳು ಮತ್ತು ಸರ್ಕಾರಿ ಅಧಿಕಾರಿಗಳಾಗಬಹುದು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.