Asianet Suvarna News Asianet Suvarna News

ಗಂಡ ಹೆಂಡ್ತಿ ರೊಮ್ಯಾಂಟಿಕ್ ಆಗಿರ್ಬೇಕು ಅಂದ್ರೆ ಬೆಳಗ್ಗೆ ಹೀಗೆ ಮಾಡಿ ಅಂತಾರೆ ಚಾಣಾಕ್ಯ!

ಚಾಣಾಕ್ಯ ನೀತಿ ಶಾಸ್ತ್ರದಲ್ಲಿ ಬದುಕಿನ ಎಲ್ಲ ಸಂಗತಿಗಳ ಒಳಿತು ಕೆಡುಕುಗಳ ಬಗ್ಗೆ ಹೇಳಿದ್ದಾರೆ. ಗಂಡ ಹೆಂಡತಿ ಸಂಬಂಧ ಚೆನ್ನಾಗಿರಬೇಕು ಅಂದರೆ ಏನೆಲ್ಲ ಮಾಡ್ಬೇಕು ಅನ್ನೋದನ್ನೂ ಚಾಣಾಕ್ಯ ಇಲ್ಲಿ ಹೇಳಿದ್ದಾರೆ.

chanakya sutas for happy married life
Author
First Published Jul 29, 2023, 3:41 PM IST

ಚಾಣಕ್ಯ 'ನೀತಿಶಾಸ್ತ್ರ' ಬರೆದ ಮಹಾ ಮೇಧಾವಿ. ವಿಷ್ಣುಗುಪ್ತ ಎಂಬುದು ಇವರ ಮೂಲ ಹೆಸರು. ತಕ್ಷಶಿಲೆಯ ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಈ ವ್ಯಕ್ತಿ. ಕುರೂಪ ದೇಹ, ಬುದ್ಧಿವಂತ ಮನಸ್ಸು ಆಚಾರ್ಯ ಚಾಣಾಕ್ಯರನ್ನು ಜನ ಭಿನ್ನವಾಗಿ ಗುರುತಿಸುವ ಹಾಗೆ ಮಾಡಿತು. ಕೆಲವರು ಆತ ಬ್ರಹ್ಮಚಾರಿ ಅನ್ನುತ್ತಾರೆ. ಇನ್ನೂ ಕೆಲವರ ಪ್ರಕಾರ ಆತನಿಗೆ ಸುಶೀಲೆಯಾದ ಪತ್ನಿ ಇದ್ದಳು. ಆದರೆ ಆಕೆ ಸೌಂದರ್ಯವತಿಯಲ್ಲ. ಪತ್ನಿಯ ಬಗ್ಗೆ ತನ್ನದೇ ನಿಲುವುದು ಹೊಂದಿದ್ದ ಚಾಣಕ್ಯ ಅಂಥಾ ಗುಣ ಸಂಪನ್ನೆ ಹುಡುಗಿಯನ್ನೇ ಹುಡುಕಿ ವಿವಾಹವಾದ ಎನ್ನುವ ಕಥೆ ಇದೆ. ಇಂತಿಪ್ಪ ಚಾಣಾಕ್ಯರು ಹೆಣ್ಮಕ್ಕಳ ಬಗ್ಗೆ ಸಾಕಷ್ಟು ಬಾರಿ ನೆಗೆಟಿವ್ ಮಾತುಗಳನ್ನು ಹೇಳುವುದು ಇಂದಿನ ಆಧುನಿಕ ಹೆಣ್ಣುಮಕ್ಕಳಿಗೆ ಕೊಂಚ ಇರಿಸುಮುರಿಸು ಉಂಟಾಗಬಹುದು. ಅವರ ಮಾತು ಸರಿಯಾ ತಪ್ಪಾ ಅನ್ನುವ ಚರ್ಚೆ ಇಲ್ಲಿ ಬೇಡ. ಆದರೆ ಇವರು ದಾಂಪತ್ಯದ ಬಗ್ಗೆ ಏನೂ ಹೇಳಿಲ್ಲ ಅನ್ನುವುದು ಹಲವರ ವಾದ.

ಆದರೆ ಚಾಣಕ್ಯ ಸ್ನಾನ ಬಗ್ಗೆ ಹೇಳುತ್ತಾ ಮೈಥುನದ ಬಳಿಕ ಸ್ನಾನ ಮಾಡಬೇಕು ಎನ್ನುತ್ತಾರೆ. 'ತೈಲಭಂಗೇ ಚಿತದುಮೇ ಮೈಥುನೇ ಕ್ಷೌರಕರ್ಮಣಿ । ತಾವದ್ ಭವತಿ ಚಂಡದಲ್ಲಿ ಚಚರೇತ್ ನ ಯಾವತ್ ಸ್ನಾನ' ಎನ್ನುವುದು ಅವರ ಪ್ರಸಿದ್ಧ ಶ್ಲೋಕ. ಇದರಲ್ಲಿ ತೈಲಹಚ್ಚಿ ಸ್ನಾನ ಮಾಡುವುದು ಉತ್ತಮ, ಮೈಥುನದ ಬಳಿಕ ಸ್ನೇಹ ಮಾಡಿದರೆ ಕ್ಷೇಮ. ಕ್ಷೌರದ ಬಳಿಕ, ಸ್ಮಶಾನಕ್ಕೆ ಹೋಗಿ ಬಂದ ನಂತರ ಸ್ನಾನ ಮಾಡಬೇಕು ಅನ್ನುವ ಅರ್ಥದಲ್ಲಿ ಹೇಳಿದ್ದಾರೆ. ಇದು ವೈಜ್ಞಾನಿಕವಾಗಿಯೂ ತಳ್ಳಿಹಾಕುವಂಥಾ ಮಾತಲ್ಲ ಅನ್ನೋದನ್ನಿಲ್ಲಿ ಮನಗಾಣಬೇಕು.

ಗಂಡ ಹೌದು, ಹಾಗಂಥ ಈ ಸತ್ಯವನ್ನೆಲ್ಲ ಅವನ ಹತ್ರ ಹೇಳೋದೇನೂ ಬೇಡ ಅಂತಾನೆ ಚಾಣಕ್ಯ!

ಆಚಾರ್ಯ ಚಾಣಕ್ಯರು ವೈವಾಹಿಕ ಜೀವನ ಸುಖಕರವಾಗಿರಲು ಹಲವು ಸಲಹೆಗಳನ್ನು ನೀಡಿದ್ದಾರೆ. ಇವರು ನೀಡಿದ ಕೆಲವು ಸೂಚನೆಗಳನ್ನು ಪಾಲಿಸುವುದರಿಂದ ಪತಿ-ಪತ್ನಿಯರ ನಡುವೆ ಸಾಮರಸ್ಯ ಮೂಡುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಧನಾತ್ಮಕ ಶಕ್ತಿ ನಮ್ಮನ್ನು ಸುತ್ತುವರೆದಿದ್ದು, ಜೀವನವು ಸಂತೋಷದಾಯಕವಾಗಿರುತ್ತದೆ. ನಮ್ಮ ವೈವಾಹಿಕ ಜೀವನವು ಪ್ರತಿದಿನ, ಪ್ರತಿ ಕ್ಷಣ ಸಂತೋಷವಾಗಿರಲು ಈ ಸಲಹೆಗಳನ್ನು ಪಾಲಿಸಬೇಕು.

ಚಾಣಕ್ಯರ ಪ್ರಕಾರ, ಹೆಣ್ಣುಮಕ್ಕಳು ಬೆಳಿಗ್ಗೆ ಬೇಗನೆ ಎದ್ದು ತನ್ನ ಪತಿಯೊಂದಿಗೆ ಕೆಲವು ಕೆಲಸಗಳನ್ನು ಮಾಡಿದರೆ, ಅವರ ಸಂಬಂಧವು ತುಂಬಾ ಗಟ್ಟಿಯಾಗುತ್ತದೆ. ಜೀವನದಲ್ಲಿ ಸಮೃದ್ಧಿ ಮತ್ತು ಅದೃಷ್ಟ ತುಂಬಿರುತ್ತದೆ.

ಬೆಳಗ್ಗೆ ಪತಿ-ಪತ್ನಿ ಒಟ್ಟಿಗೆ ಯೋಗ ಮಾಡಿದರೆ ಇಬ್ಬರೂ ಆರೋಗ್ಯವಾಗಿರುತ್ತಾರೆ. ನಿಮ್ಮ ದೇಹ ಮತ್ತು ಆರೋಗ್ಯ ಎಂದೆಂದಿಗೂ ಉತ್ತಮವಾಗಿರುತ್ತದೆ. ಮನಸ್ಸು ಕೂಡ ಶಾಂತವಾಗಿರುತ್ತದೆ. ಇದು ನಿಮ್ಮ ಸುತ್ತಲೂ ಧನಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದರಿಂದಾಗಿ ದಂಪತಿಗಳ ನಡುವೆ ಯಾವುದೇ ಜಗಳಗಳು ಇರುವುದಿಲ್ಲ. ಇದು ನಿಮ್ಮ ದಿನವನ್ನು ಉತ್ತಮವಾಗಿ ಆರಂಭಿಸಲು ಸಹಾಯ ಮಾಡುತ್ತದೆ. ಇಬ್ಬರೂ ಸೇರಿ ಯೋಗ ಮಾಡಿದರೆ ಮಾನಸಿಕವಾಗಿ ಸದೃಢರಾಗುತ್ತಾರೆ.

ಪತಿ-ಪತ್ನಿ ಪ್ರೀತಿಯಿಂದ ದಿನವನ್ನು ಆರಂಭಿಸಿದರೆ ಇಡೀ ದಿನ ಲವಲವಿಕೆಯಿಂದ ಇರುತ್ತದೆ. ದಿನವಿಡೀ ಚೈತನ್ಯ ತುಂಬಿರುತ್ತದೆ. ಹೆಚ್ಚಿನ ಶಕ್ತಿಯಿಂದ ಎಲ್ಲವನ್ನೂ ಮಾಡಬಹುದು. ಬೆಳಿಗ್ಗೆ ಗಂಡ ಹೆಂಡತಿ ಹೇಗಿರುತ್ತಾರೆ ಎಂಬುದರ ಮೇಲೆ ಇಡೀ ದಿನದ ಪರಿಣಾಮ ಅವಲಂಬಿಸಿರುತ್ತದೆ. ಇದು ಸಂಬಂಧದಲ್ಲಿ ಪ್ರೀತಿ ಮತ್ತು ವಿಶ್ವಾಸ ಹೆಚ್ಚಲು ಕಾರಣವಾಗುತ್ತದೆ.

Mythological Story: ನಾರದನನ್ನು ಹೆಣ್ಣಾಗಿಸಿ ವಿಷ್ಣು ಕುಚೋದ್ಯ ಮಾಡಿದ್ದೇಕೆ?

ದೇವರ ಆಶೀರ್ವಾದದೊಂದಿಗೆ ದಿನವನ್ನು ಪ್ರಾರಂಭಿಸುವುದು ಉತ್ತಮ. ಪೂಜೆಯೊಂದಿಗೆ ದಿನವನ್ನು ಪ್ರಾರಂಭಿಸುವುದು ಮಂಗಳಕರ. ಇದು ನಿಮ್ಮ ದಿನವನ್ನು ಉತ್ತಮವಾಗಿ ಆರಂಭಿಸಲು ನೆರವಾಗುತ್ತದೆ. ಆ ಮೂಲಕ ನಿಮ್ಮ ದೇಹದಲ್ಲಿ ಧನಾತ್ಮಕ ಶಕ್ತಿ ಹರಿಯುತ್ತದೆ. ಹಾಗಾಗಿ ಪತಿ ಪತ್ನಿಯರು ಮುಂಜಾನೆಯೇ ದೇವರ ಪೂಜೆ ಮಾಡಬೇಕು. ಇದು ಜೀವನದಲ್ಲಿ ಅದೃಷ್ಟವನ್ನು ತರುತ್ತದೆ.

Follow Us:
Download App:
  • android
  • ios