Chanakya Niti: ಸ್ತ್ರೀಯರೇ, ಕಾಮುಕ ಪುರುಷರನ್ನು ಹೀಗೆ ಗುರುತಿಸಿ!
ಆಚಾರ್ಯ ಚಾಣಕ್ಯರ ನೀತಿಯಲ್ಲಿ ಕೆಟ್ಟ ಪುರುಷರ ಗುಣಲಕ್ಷಣಗಳನ್ನು ವಿವರಿಸಲಾಗಿದೆ. ಮಹಿಳೆಯರು ತಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಪುರುಷರಿಂದ ದೂರವಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಕಾಮುಕ ಗಂಡಸರನ್ನು ಗುರುತಿಸುವ ಕೆಲವು ಲಕ್ಷಣಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಪ್ರಾಚೀನ ಭಾರತದ ಮಹಾನ್ ವಿದ್ವಾಂಸ ಆಚಾರ್ಯ ಚಾಣಕ್ಯ ತನ್ನ ನೀತಿಯಲ್ಲಿ ಹಲವು ವಿಚಾರಧಾರೆಗಳ ಹೇಳಿದ್ದಾರೆ. ಚಾಣಕ್ಯ ನೀತಿಯು ಕ್ರಿಸ್ತಪೂರ್ವದವರಾಗಿರಬಹುದು, ಆದರೆ ಇಂದಿಗೂ ಅವರ ನೀತಿಯು 100% ಪ್ರಸ್ತುತವಾಗಿದೆ. ಅವರ ಮಾತುಗಳು, ಮಾರ್ಗಸೂಚಿಗಳು ನಿಜ ಜೀವನದಲ್ಲಿ ಪ್ರಸ್ತುತವಾಗಿವೆ ಮತ್ತು ಭವಿಷ್ಯದಲ್ಲಿಯೂ ಹಾಗೆಯೇ ಉಳಿಯುತ್ತವೆ. ಅವರು ಜೀವನದ ಅನೇಕ ಅಂಶಗಳು ಮತ್ತು ಅವನ್ನು ಪಾಲಿಸುವ ವಿಧಾನವನ್ನೂ ತಿಳಿಸಿದ್ದಾರೆ. ಯಾವೆಲ್ಲಾ ಮಾರ್ಗವನ್ನು ನೀವು ಅನುಸರಿಸಿದರೆ ಉತ್ತಮ ಜೀವನ ನಿಮ್ಮದಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಹಾಗೇ ಕೆಲವೊಮ್ಮೆ ಕೆಟ್ಟವರೊಂದಿಗೆ ನಾವು ಮುಖಾಮುಖಿಯಾಗಬಹುದು. ಉತ್ತಮ ಪುರುಷರಿಗೆ ಕೆಟ್ಟ ಸ್ತ್ರೀಯರೂ, ಕೆಟ್ಟ ಪುರುಷರಿಗೆ ಉತ್ತಮ ಸ್ತ್ರೀಯರೂ ಸಿಗಬಹುದು. ಹೇಗೆ ಕೆಟ್ಟ ಮಹಿಳೆಯರಿಂದ ಪುರುಷ ದೂರವಿರಬೇಕೋ, ಹಾಗೆಯೇ ಕೆಟ್ಟ ಪುರುಷರಿಂದ ಮಹಿಳೆಯೂ ದೂರವಿರಬೇಕು ಎನ್ನುತ್ತಾನೆ ಚಾಣಕ್ಯ. ಆದರೆ ಅಂಥ ಕಾಮುಕ ಗಂಡಸರನ್ನು ಗುರುತಿಸುವುದು ಹೇಗೆ? ಅದು ಇಲ್ಲಿದೆ. ಇವುಗಳನ್ನು ಗಮನಿಸಿ.
ಹೊಂಚು ಹಾಕುವವನು: ಮನೆಯಲ್ಲಿ ಪತಿ, ತಂದೆ- ತಾಯಿ ಅಥವಾ ಬೇರೆ ಯಾರೂ ಇಲ್ಲದ ವೇಳೆಯನ್ನು ಗಮನಿಸಿಕೊಂಡು, ಸದಾ ಅದೇ ವೇಳೆಯಲ್ಲಿ ಬರುವವನು. ಈತ ಯಾವುದೋ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದಾನೆ ಎಂದು ಅರ್ಥ ಮಾಡಿಕೊಳ್ಳಬೇಕು.
ದೇಹದ ತುಂಬಾ ಕಣ್ಣಾಡಿಸುವವನು: ಇಂಥವರ ಅನುಭವ ಹೆಣ್ಣುಮಕ್ಕಳಿಗೆ ಆಗಿಯೇ ಇರುತ್ತದೆ. ಇವರು ಯಾವ ಹೆಣ್ಣು ಸಿಕ್ಕಿದರೂ ಅವರ ದೇಹದ ಮೇಲೆಲ್ಲ ಅಸಹ್ಯವಾಗಿ ಕಣ್ಣಾಡಿಸುತ್ತಿರುತ್ತಾರೆ. ಹೆಚ್ಚಾಗಿ ಎದೆಯ ಭಾಗವನ್ನು ದಿಟ್ಟಿಸುತ್ತಾರೆ. ಇವರು ಕಾಮುಕರು. ಮೊದಲ ಅವಕಾಶಕ್ಕಾಗಿ ಹೊಂಚು ಹಾಕುತ್ತಾರೆ.
ತುಂಬಾ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವವನು: ಈತ ಲೈಂಗಿಕ ಕಾಮಕ್ಕೆ ಆದ್ಯತೆ ನೀಡುವ ಪುರುಷ. ಇತರ ಮಹಿಳೆಯರನ್ನು ಕಾಮಿಸುವ ಗಂಡಸು, ನಿತ್ಯ ಹೊಸ ಹೊಸ ಮಹಿಳೆಯರೊಂದಿಗೆ ಸಂಬಂಧವನ್ನು ಮಾಡಲು ಬಯಸುವ ಗಂಡಸರಿಂದ ಮಹಿಳೆ ದೂರವಿರಬೇಕು. ಇಂಥವರಿಂದ ನೆಮ್ಮದಿಯಿಲ್ಲ. ಜೊತೆಗೆ ಲೈಂಗಿಕ ಕಾಯಿಲೆಯೂ ಹರಡಬಹುದು.
ವಿಲಾಸಿ ಪುರುಷ: ದುಬಾರಿ ಬಟ್ಟೆಗಳನ್ನು ಧರಿಸುವ, ವಿಲಾಸಿ ವಾಹನಗಳನ್ನು ಖರೀದಿಸುವ ಮತ್ತ ಓಡಿಸಲು ಇಷ್ಟಪಡುವ, ಶೃಂಗಾರಕ್ಕೆ ಹೆಚ್ಚು ಗಮನ ನೀಡುವ ಪುರುಷ ಬೇಡ. ಇಂತಹ ಪುರುಷರ ಲೈಂಗಿಕ ಹಸಿವು ಎಂದಿಗೂ ಕೊನೆಗೊಳ್ಳುವುದಿಲ್ಲ, ಬದಲಿಗೆ ಅದು ಹೆಚ್ಚುತ್ತಲೇ ಇರುತ್ತದೆ. ಅಂತಹ ಪುರುಷರು ಒಂದಕ್ಕಿಂತ ಹೆಚ್ಚು ಮಹಿಳೆಯರೊಂದಿಗೆ ಸಂಬಂಧವನ್ನು ಹೊಂದಿರುತ್ತಾರೆ. ಇವರ ಹಸಿವನ್ನು ನಿಮ್ಮಿಂದ ನೀಗುವುದಲ್ಲ. ಅವರು ಬಹುಬೇಗ ಇನ್ನೊಂದು ಹೆಣ್ಣನ್ನು ಹುಡುಕಿ ಹೋಗುತ್ತಾರೆ. ಅದಕ್ಕಾಗಿಯೇ ಮಹಿಳೆಯರು ಅಂತಹ ಪುರುಷರನ್ನು ಗುರುತಿಸಬೇಕು. ಏಕೆಂದರೆ ಅಂತಹ ಪುರುಷರು ಲೈಂಗಿಕ ಕಾಮಕ್ಕಾಗಿ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ. ನಿಮ್ಮ ದೇಹವು ಅವರಿಗೆ ಪ್ರಿಯವಾಗಿರುತ್ತದೆ ಮತ್ತು ನಿಮ್ಮ ದೇಹವು ಅವರಿಗೆ ಬೇಸರವಾದಾಗ, ಅವರು ತಮ್ಮ ಕಾಮವನ್ನು ಬೇರೆಲ್ಲಿಯೋ ಪೂರೈಸುತ್ತಾರೆ.
ಚಾಣಕ್ಯ ನೀತಿ; ಈ ಮೂವರು ಹಾವಿಗಿಂತಲೂ ವಿಷಕಾರಿ, ಎಂದಿಗೂ ಅವರ ಬಳಿ ಸಹಾಯ ಕೇಳಬೇಡಿ
ಕೇಳುವುದಕ್ಕೆ ಮೊದಲೇ ಸಾಲ ಕೊಡುವವನು: ಇವನು ನಿಮಗೆ ಬೇಕಾದಷ್ಟು ಹಣ. ಉಡುಗೊರೆ ಎಲ್ಲವನ್ನೂ ನೀವು ಕೇಳುವ ಮೊದಲೇ ತಂದುಕೊಡುತ್ತಿರುತ್ತಾನೆ. ಇವರು ಕೂಡ ಕಾಮಕ್ಕಾಗಿ ಹೊಂಚು ಹಾಕುತ್ತಾರೆ. ಇಂಥವರ ಉದ್ದೇಶ ಚೆನ್ನಾಗಿದೆಯಾ ಎಂದು ಪರೀಕ್ಷಿಸಿಕೊಳ್ಳಬೇಕು. ಮದುವೆಯಾಗುವ ಉದ್ದೇಶವೂ ಇವರದಾಗಿರಬಹುದು. ಅಥವಾ ಬರಿಯ ಕಾಮವೂ ಇರಬಹುದು.
ಪತ್ನಿಯನ್ನು ದೂರುತ್ತಿರುವವನು: ನಿಮ್ಮ ಮುಂದೆ ತನ್ನ ಪತ್ನಿಯನ್ನು ಸದಾ ದೂರುತ್ತಿರುವವನು ಅಪಾಯಕಾರಿ. ಆಕೆಯಿಂದ ತನಗೆ ಯಾವುದೇ ಸುಖವಿಲ್ಲ, ಆಕೆಯಿಂದ ನೆಮ್ಮದಿ ಹಾಳಾಗುತ್ತಿದೆ, ನೀನು ಹತ್ತಿರವಿದ್ದಾಗ ಆನಂದವಾಗಿರುತ್ತೇನೆ ಎಂದೆಲ್ಲ ಹೇಳುವವನು ನಿಮ್ಮೊಂದಿಗೆ ಮಿಲನಕ್ಕಾಗಿ ಹೊಂಚು ಹಾಕುತ್ತಿದ್ದಾನೆ ಎಂದರ್ಥ.
Baba Vanga: 2043ರಲ್ಲಿ ಮುಸ್ಲಿಂ ಆಳ್ವಿಕೆ! ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯನುಡಿ?