ಹೀಗಿರಲಿದೆ ಕಿಯಾರಾ ಅದ್ವಾನಿ- ಸಿದ್ಧಾರ್ಥ್ ಮಲ್ಹೋತ್ರಾ ವೈವಾಹಿಕ ಜೀವನ

ಕಿಯಾರಾ ಅದ್ವಾನಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮಧ್ಯೆ ಲವ್ವು ಪವ್ವು, ಡೇಟಿಂಗು, ರಿಲೇಶನ್‌ಶಿಪ್ಪು ಅಂತ ಸುದ್ದಿಗಳು ಸುನಾಮಿಯಂತೆ ಹರಿದಾಡುತ್ತಿವೆ. ಆದರೆ, ಈ ಜೋಡಿ ಮಾತ್ರ ಈ ಬಗ್ಗೆ ಖಚಿತಪಡಿಸಿಲ್ಲ. ಆದ್ರೂ ಇವರೇನಾದ್ರೂ ವಿವಾಹವಾದ್ರೆ ಭವಿಷ್ಯದ ಜೀವನ ಹೇಗಿರಲಿದೆ ಎಂದು ಊಹಿಸಿದ್ದಾರೆ ಸೆಲೆಬ್ರಿಟಿ ಜ್ಯೋತಿಷಿಗಳು. 

Celeb astrologer predicts future of Kiara Advani and Sidharth Malhotra skr

2021ರಲ್ಲಿ ಶೇರ್‌ಷಾ(Shershaah) ಚಿತ್ರದಲ್ಲಿ ಒಟ್ಟಿಗೇ ಕೆಲಸ ಮಾಡಿದಾಗಿಂದಲೂ ಕಿಯಾರಾ ಅದ್ವಾನಿ(Kaira Advani) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ(Sidharth Malhotra) ನಡುವೆ ಏನೋ ಇದೆ ಎಂಬ ಗುಸುಗುಸು ಹರಿದಾಡುತ್ತಲೇ ಇದೆ. ಇತ್ತೀಚೆಗೆ ಹೆಲೋ! ಹಾಲ್ ಆಫ್ ಫೇಮ್ಸ್ ಅವಾರ್ಡ್ಸ್ 2022ನಲ್ಲಿ ಕೂಡಾ ಇಬ್ಬರೂ ಭಾಗವಹಿಸಿದ್ದರು. ಆಗ ಸಿದ್ಧಾರ್ಥ್ ಕಿಯಾರಾ ರಡೆ ನೋಡಿ ಮಾಡಿದ ಕೈ ಸನ್ನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆ ಸನ್ನೆ ಬಹಳ ಮುದ್ದಾಗಿತ್ತು, ಈ ಜೋಡಿ ಮುದ್ದಾಗಿದೆ, ಇವರು ಜೊತೆಯಾದರೆ ಚೆನ್ನಾಗಿರುತ್ತದೆ ಎಂದು ಮಾತನಾಡುತ್ತಿದ್ದಾರೆ. ತಮ್ಮಿಬ್ಬರ ಸಂಬಂಧದ ಬಗ್ಗೆ ಸಿದ್ಧಾರ್ಥ್ ಹಾಗೂ ಕಿಯಾರಾ ಎಲ್ಲಿಯೂ ತುಟಿ ಬಿಚ್ಚಿಲ್ಲವಾದರೂ ಆ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹರಿದಾಡುತ್ತಿರುವ ಈ ಸಂದರ್ಭದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಅವರ ವೈವಾಹಿಕ ಭವಿಷ್ಯದ ಬಗ್ಗೆ ಲೆಕ್ಕ ಹಾಕಿ ಹೇಳಿದ್ದಾರೆ. ಹಾಗಾದ್ರೆ ಈ ಸುಂದರ ಜೋಡಿ ಒಂದಾದ್ರೆ ಭವಿಷ್ಯ ಹೇಗಿರುತ್ತೆ ನೋಡೋಣ. 

ವೈವಾಹಿಕ ಜೀವನ
'ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅದ್ವಾನಿಯ ಸಂಬಂಧ ಬಹಳ ಪ್ರಾಕ್ಟಿಕಲ್ ಆಗಿರುತ್ತದೆ. ಅವರಿಬ್ಬರೂ ಸಂಬಂಧ(relationship)ದಲ್ಲಿದ್ದರೆ ಖಂಡಿತಾ ಮದುವೆಯಾಗುತ್ತಾರೆ, ಆದರೆ 2023ಕ್ಕೂ ಮುಂಚೆ ಅಂಥ ಸುದ್ದಿಯಿರುವುದಿಲ್ಲ. ಸಿದ್ಧಾರ್ಥ್ ಹಾಗೂ ಕಿಯಾರಾ ಇಬ್ಬರಿಗೂ ತಾವು ವೈಯಕ್ತಿಕವಾಗಿ ಬೆಳೆಯಲು ಬೇಕಾಗಿರುವ ಸ್ಥಳಾವಕಾಶದ ಬಗ್ಗೆ ಅರಿವಿದೆ. ಹಾಗಾಗಿ, ಈ ಅವಕಾಶ ನೀಡುತ್ತಲೇ ಸಂಬಂಧ ಕಾಯ್ದುಕೊಳ್ಳಲು ಅವರು ನಿರ್ಧರಿಸಿದ್ದಾರೆ. ಅವರಿಬ್ಬರ ವೈವಾಹಿಕ ಭವಿಷ್ಯದ ಬಗ್ಗೆ ಎರಡೇ ಪದದಲ್ಲಿ ಹೇಳುವುದಾದರೆ- ನೈಸ್ ಆ್ಯಂಡ್ ಸ್ವೀಟ್(nice and sweet) ಎನ್ನಬಹುದು' ಎಂದಿದ್ದಾರೆ. 

ಮದುವೆಯ ನಂತರ ಕೆರಿಯರ್
ಸಿದ್ಧಾರ್ಥ್ ಮಲ್ಹೋತ್ರಾಗೆ ಚಿತ್ರೋದ್ಯಮ(film industry)ದಲ್ಲಿ ಯಾವುದೇ ಗಾಡ್‌ಫಾದರ್ ಇಲ್ಲ. ಬಾಲಿವುಡ್‌ನಲ್ಲಿ ಹೆಸರು ಕಂಡುಕೊಳ್ಳಲು ಆತ ವೈಯಕ್ತಿಕವಾಗಿ ಸಾಕಷ್ಟು ಒದ್ದಾಡಿದ್ದಾನೆ. ಕಿಯಾರಾ ಅದ್ವಾನಿ ವಿಷಯಕ್ಕೆ ಬಂದರೆ ಆಕೆಯ ಮುತ್ತಜ್ಜ ದಿ. ಅಶೋಕ್ ಕುಮಾರ್ ಆಗಿದ್ದರೆ, ಸಯೀದ್ ಜಾಫ್ರಿ ಆಕೆಯ ಮಾವ. ಅವರಿಬ್ಬರ ಭವಿಷ್ಯವನ್ನು ಯೋಚಿಸಿದ್ರೆ- ಕಿಯಾರಾ ಬಹಳ ಪ್ರತಿಭಾನ್ವಿತೆ. ಇಬ್ಬರೂ ಕಷ್ಟ ಪಟ್ಟು ಕೆಲಸ ಮಾಡುವವರು. ಕೆಲಸದ ವಿಷಯದಲ್ಲಿ ಶ್ರದ್ದೆ ಹೊಂದಿದ್ದಾರೆ. ಹಾಗಾಗಿ, ಯಾವಾಗಲೂ ವೃತ್ತಿ ಸಂಬಂಧ ಬದ್ಧತೆ ಉಳಿಸಿಕೊಳ್ಳುತ್ತಾರೆ. ಆದರೆ, ವಿವಾಹದ ಬಳಿಕ ಸಿದ್ಧಾರ್ಥ್ ಪ್ರೊಡಕ್ಷನ್ ಕೆಲಸಗಳು ಹಾಗೂ ಉದ್ಯಮಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಕಿಯಾರಾ ಚಿತ್ರೋದ್ಯಮದಲ್ಲಿ ನಟಿಯಾಗಿ ಮುಂದುವರಿಯಲಿದ್ದಾರೆ ಎಂದಿದ್ದಾರೆ ಗುರೂಜಿ. 

ನಿರ್ಮಾಣ ಕಾರ್ಯದಲ್ಲಿ ವಿಘ್ನ ಬರಬಾರದೆಂದರೆ ಪಾಲಿಸಬೇಕಾದ 10 Vastu tips

ಜುಲೈ 31ರಂದು ಜನಿಸಿದ ಕಿಯಾರಾ ಸಿಂಹ ರಾಶಿಗೆ ಸೇರಿದ್ದಾಳೆ. ಸಿಂಹ ರಾಶಿಗೆ ತಕ್ಕ ಹಾಗೆ ಆಕೆ ಪ್ರಾಮಾಣಿಕಳು ಹಾಗೂ ಸ್ನೇಹಶೀಲಳು. ಅವಳಲ್ಲಿ ಚಾರ್ಮ್ ಇದೆ. ಜೀವನವನ್ನು ಆಸ್ವಾದಿಸುವ ಕಲೆ ಗೊತ್ತಿದೆ. ಸಾಹಸ ತಿರುಗಾಟಗಳನ್ನು ಬಯಸುವಾಕೆ. ಮಹತ್ವಾಕಾಂಕ್ಷಿ, ನಾಟಕೀಯತೆ, ಚಿನ್ನದ ಹೃದಯ ಹೊಂದಿದಾಕೆ. ಇನ್ನೊಂದೆಡೆ ಜನವರಿ 16ರಂದು ಜನಿಸಿದ ಸಿದ್ಧಾರ್ಥ್ ಮಲ್ಹೋತ್ರಾ ಮಕರ(Capricorn) ರಾಶಿಗೆ ಸೇರುತ್ತಾನೆ. ಆತ ಸಿಕ್ಕಾಪಟ್ಟೆ ಮಹತ್ವಾಕಾಂಕ್ಷಿ ಹಾಗೂ ಪರಿಶ್ರಮಿ. ಮಕರ ರಾಶಿಯವರು ತಮ್ಮ ವಾಸ್ತವಿಕ ಮನೋಭಾವಕ್ಕಾಗಿ ಹೆಸರಾದವರು. ಪ್ರೇಮಿಯಾಗಿ ಮಕರ ರಾಶಿಯವರು ಸಂಬಂಧದಲ್ಲಿ ಸ್ಥಿರತೆ ಬಯಸುತ್ತಾರೆ. 

Holi 2022: ಅದೃಷ್ಟ ಬದಲಾಗ್ಬೇಕೆಂದ್ರೆ ರಾಶಿಗನುಗುಣವಾಗಿ ಬಳಸಿ ಬಣ್ಣ

ಮಕರ ಮತ್ತು ಸಿಂಹ ರಾಶಿ ಕೊಂಚ ವಿಶೇಷ ಹೊಂದಾಣಿಕೆ. ಇಬ್ಬರೂ ಮಹತ್ವಾಕಾಂಕ್ಷಿಗಳಾದ್ದರಿಂದ ಹಾಗೂ ತಮ್ಮ ಕನಸುಗಳನ್ನು ಬೆನ್ನತ್ತುವವರಾದ್ದರಿಂದ ಇಬ್ಬರೂ ಹತ್ತಿರವಾಗಲು ಸಾಧ್ಯವಾಗಿದೆ. ಸಿಂಹ ರಾಶಿಯವರು ಹೆಚ್ಚು ಬಹಿರ್ಮುಖಿಗಳಾದರೆ, ಮಕರದವರು ತಮ್ಮ ವೈಯಕ್ತಿಕ ವಲಯದಲ್ಲಿ ಎಲ್ಲರನ್ನೂ ಬಿಟ್ಟುಕೊಳ್ಳುವವರಲ್ಲ. ಆದರೆ, ಇವರಿಬ್ಬರೂ ಒಟ್ಟಾದಾಗ ಒಬ್ಬರ ಸ್ವಭಾವದ ಬಗ್ಗೆ ಮತ್ತೊಬ್ಬರಲ್ಲಿ ಹೆಮ್ಮೆಯಿರುತ್ತದೆ. ಆ ರೀತಿಯಲ್ಲಿ ಸಿದ್ಧಾರ್ಥ್ ಹಾಗೂ ಕಿಯಾರಾ ಜೋಡಿ ಸ್ವೀಟ್ ಕಪಲ್ ಎನಿಸಿಕೊಳ್ಳಲಿದೆ. 

Latest Videos
Follow Us:
Download App:
  • android
  • ios