Asianet Suvarna News Asianet Suvarna News

Budh Asta June 2023: ವೃಷಭ ಸೇರಿದಂತೆ 3 ರಾಶಿಗಳಿಗೆ ಬುಧ ಅಸ್ತ ತರಲಿದೆ ನಷ್ಟ

ಜೂನ್ 7 ರಂದು, ಗ್ರಹಗಳ ರಾಜಕುಮಾರ ಬುಧವು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಕೇವಲ 11 ದಿನಗಳ ನಂತರ ಅದು ಅಸ್ತಮಿಸಲಿದೆ. ಇದು ಅನೇಕ ರಾಶಿಚಕ್ರದ ಚಿಹ್ನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅವರಿಗೆ ಅದೃಷ್ಟದ ಬೆಂಬಲ ಸಿಗುವುದಿಲ್ಲ. ಬುಧಗ್ರಹದ ಅಸ್ತದಿಂದ ಯಾರಿಗೆ ಹಾನಿಯಾಗಲಿದೆ ಎಂದು ತಿಳಿಯೋಣ.

Budh Asta June 2023 these zodiacs luck will set with Mercury setting skr
Author
First Published Jun 11, 2023, 10:59 AM IST | Last Updated Jun 11, 2023, 10:59 AM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು, ನಕ್ಷತ್ರಪುಂಜಗಳು ಮಾನವ ಜೀವನದ ಮೇಲೆ ಅಪಾರ ಪರಿಣಾಮ ಬೀರುತ್ತವೆ. ಅದರಲ್ಲೂ ಶುಭ ಗ್ರಹಗಳು ಅಸ್ತವಾದರೆ ಅದರ ಪರಿಣಾಮದಲ್ಲಿ ನಕಾರಾತ್ಮಕತೆ ಹೆಚ್ಚಿರುತ್ತದೆ.

ಗ್ರಹಗಳ ರಾಜಕುಮಾರ ಬುಧವು ಜೂನ್ 7ರಂದು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಕೇವಲ 11 ದಿನಗಳ ನಂತರ ಅಂದರೆ, ಸೋಮವಾರ, ಜೂನ್ 19, 2023 ರಂದು ಬೆಳಿಗ್ಗೆ 7.16 ಕ್ಕೆ ವೃಷಭ ರಾಶಿಯಲ್ಲಿ ಆತ ಅಸ್ತಮಿಸುತ್ತಿದ್ದಾನೆ. ಇದು ಅನೇಕ ರಾಶಿಚಕ್ರದ ಚಿಹ್ನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅವರಿಗೆ ಅದೃಷ್ಟದ ಬೆಂಬಲ ಸಿಗುವುದಿಲ್ಲ. ಜಾತಕದಲ್ಲಿ ಬುಧ ಬಲವಾಗಿದ್ದರೆ ವ್ಯಕ್ತಿಯು ಚುರುಕಾದ ಬುದ್ದಿವಂತಿಕೆಯ ಜೊತೆಗೆ ಉತ್ತಮ ಆರೋಗ್ಯವನ್ನು ಪಡೆಯುತ್ತಾನೆ. ಮತ್ತೊಂದೆಡೆ, ಬುಧವು ಅಸ್ತಮಿಸುತ್ತಿದ್ದರೆ ವೃತ್ತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಇತ್ಯಾದಿ ವಿಷಯಗಳಲ್ಲಿ ನಕಾರಾತ್ಮಕ ಪರಿಣಾಮ ಎಂದರ್ಥ. ಬುಧಗ್ರಹದ ಅಸ್ತದಿಂದಾಗಿ ಕೆಲವು ರಾಶಿಚಕ್ರದವರು ಜೂನ್ ಅಂತ್ಯದವರೆಗೆ ಉದ್ಯೋಗ, ವ್ಯವಹಾರ ಇತ್ಯಾದಿಗಳಲ್ಲಿ ಸಮಸ್ಯೆಗಳನ್ನು ಎದುರಿಸಬಹುದು.

ಈ ರಾಶಿಗಳು ಬುಧ ಅಸ್ತಮಿಸುವ ಕಾರಣದಿಂದ ಜಾಗ್ರತೆ ವಹಿಸಬೇಕಾಗಿದೆ.  

Purse Color Astrology: ರಾಶಿಗೆ ಹೊಂದುವ ಬಣ್ಣದ ಪರ್ಸ್ ಬಳಸಿದ್ರೆ ಅದೆಂದೂ ಖಾಲಿಯಾಗೋಲ್ಲ!

ವೃಷಭ ರಾಶಿ (taurus)
ಬುಧವು ಅಸ್ತಮಿಸಿದ ನಂತರ, ವೃಷಭ ರಾಶಿಯ ಜನರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಏಕೆಂದರೆ ಈ ರಾಶಿಚಕ್ರದಲ್ಲಿಯೇ ಈ ಬದಲಾವಣೆಯು ಸಂಭವಿಸುತ್ತದೆ. ವೃಷಭ ರಾಶಿಯ ಜನರ ಜೀವನದಲ್ಲಿ ಅನೇಕ ತೊಂದರೆಗಳು ಉಂಟಾಗಬಹುದು. ಇದರಿಂದ ವೃಷಭ ರಾಶಿಯವರಿಗೆ ಖರ್ಚು-ವೆಚ್ಚಗಳು ಹೆಚ್ಚಾಗಬಹುದು. ಇದರಿಂದ ಮನೆಯ ಬಜೆಟ್‌ಗೆ ತೊಂದರೆಯಾಗಬಹುದು. ವೃಷಭ ರಾಶಿಯವರು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಬಹುದು. ಈ ಅವಧಿಯಲ್ಲಿ, ಕೆಲಸದ ಸ್ಥಳದಲ್ಲಿ ಬಡ್ತಿಯ ಸಾಧ್ಯತೆಗಳು ಸಹ ಕಡಿಮೆಯಾಗುತ್ತವೆ. ಮನೆಯಲ್ಲಿ ತೊಂದರೆಗಳು ಹೆಚ್ಚಾಗುತ್ತವೆ ಮತ್ತು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ.

ಕರ್ಕಾಟಕ ರಾಶಿ (Cancer)
ಜೂನ್ 19ರಂದು, ಬುಧವು ಕರ್ಕಾಟಕ ರಾಶಿಯ ಹನ್ನೊಂದನೇ ಮನೆಯಲ್ಲಿ ಅಸ್ತಮಿಸುತ್ತಾನೆ. ಪರಿಣಾಮವಾಗಿ, ಕರ್ಕಾಟಕ ರಾಶಿಯವರು ವ್ಯಾಪಾರ ಮತ್ತು ಉದ್ಯೋಗದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪ್ರೀತಿಯ ಸಂಬಂಧವೂ ಪರಿಣಾಮ ಬೀರಬಹುದು. ಸಂಬಂಧವನ್ನು ಉಳಿಸಲು, ತಿಳುವಳಿಕೆಯನ್ನು ತೋರಿಸಬೇಕು. ಸಂಗಾತಿಯನ್ನು ಅತಿಯಾಗಿ ಅಡ್ಡಿಪಡಿಸುವುದು ಕೆಲವು ಸಮಸ್ಯೆಯನ್ನು ಸೃಷ್ಟಿಸುತ್ತದೆ. ಕೆಲಸದ ಕ್ಷೇತ್ರದಿಂದ ಬಡ್ತಿ ಮತ್ತು ಆದಾಯದ ಬೆಳವಣಿಗೆ ಎರಡರಲ್ಲೂ ಸಮಸ್ಯೆ ಇರುವುದು. ನೀವು ವ್ಯಾಪಾರದಲ್ಲಿದ್ದರೆ, ಅದರಲ್ಲಿಯೂ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ಕರ್ಕಾಟಕ ರಾಶಿಯವರ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮಗಳಿಂದ ಉಳಿತಾಯವೂ ಸಾಧ್ಯವಾಗುವುದಿಲ್ಲ.

Weekly Horoscope: ಈ ರಾಶಿಗೆ ವೃತ್ತಿ, ವೈವಾಹಿಕ ಜೀವನದಲ್ಲಿ ವಿಪರೀತ ಒತ್ತಡ

ಸಿಂಹ ರಾಶಿ (Leo)
ಸಿಂಹ ರಾಶಿಯವರ ಜಾತಕದಲ್ಲಿ ಬುಧನು ಹತ್ತನೇ ಮನೆಯಲ್ಲಿ ಅಸ್ತಮಿಸಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಇದು ಸಿಂಹ ರಾಶಿಯ ವ್ಯಕ್ತಿಯ ಜೀವನದಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆ. ಅದೃಷ್ಟ ನಿಮಗೆ ಒಲವು ತೋರುವುದಿಲ್ಲ. ನೀವು ಯಾವುದಾದರೂ ಒಂದು ಕೆಲಸದಲ್ಲಿ ಯಶಸ್ವಿಯಾಗಲು ಬಯಸಿದರೆ, ನೀವು ಮೊದಲು ಉತ್ತಮವಾಗಿ ಯೋಜಿಸಬೇಕು. ಈ ಹಂತದಲ್ಲಿ ಆರ್ಥಿಕ ಸ್ಥಿತಿಯೂ ಹದಗೆಡಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios