Asianet Suvarna News Asianet Suvarna News

Name Astro: ಈ ಹೆಸರಿನ ಹುಡುಗರಿಗೆ ಹುಡುಗಿಯರು ಬೇಗ ಆಕರ್ಷಿತರಾಗ್ತಾರೆ!

ಈ ಹೆಸರುಗಳನ್ನು ಹೊಂದಿರುವ ಹುಡುಗರು ತುಂಬಾ ತೀಕ್ಷ್ಣವಾದ ಮನಸ್ಸು ಹೊಂದಿರುತ್ತಾರೆ. ಇದರಿಂದಾಗಿ ಹುಡುಗಿಯರು ತಕ್ಷಣವೇ ಅವರಿಂದ ಪ್ರಭಾವಿತರಾಗುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬಿರುತ್ತದೆ ಮತ್ತು ಅವರ ಕಣ್ಣುಗಳಲ್ಲಿ ಯಾವಾಗಲೂ ವಿಭಿನ್ನವಾದ ಹೊಳಪು ಇರುತ್ತದೆ. ಯಾವ ಹೆಸರಿನ ಹುಡುಗರು ತಿಳ್ಕೋಬೇಕಾ?

Boys with these letter names impress girls immediately they are virtuous skr
Author
First Published Dec 12, 2022, 3:05 PM IST | Last Updated Dec 12, 2022, 3:05 PM IST

ಜ್ಯೋತಿಷ್ಯದಲ್ಲಿ ನಮ್ಮ ಹೆಸರಿಗೂ, ನಮ್ಮ ಹುಟ್ಟಿದ ನಕ್ಷತ್ರ, ರಾಶಿಗೂ ಅವಿನಾಭಾವ ಸಂಬಂಧವಿದೆ. ಹೆಸರನ್ನು ಜನ್ಮ ಸಮಯಕ್ಕೆ ಅನುಗುಣವಾಗಿ ಇಡಲಾಗುತ್ತದೆ. ಹೆಸರು ವ್ಯಕ್ತಿಯ ಬದುಕಿನಲ್ಲಿ ಮಹತ್ತರ ಪಾತ್ರ ಹೊಂದಿದೆ. ಹೆಸರು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಮಕ್ಕಳಿಗೆ ಹೆಸರಿಡುವುದನ್ನು ಬಹಳ ಜತನದಿಂದ, ಯೋಚಿಸಿ ಇಡಬೇಕು.

ಹೆಸರಿನ ಜ್ಯೋತಿಷ್ಯದ ಪ್ರಕಾರ, ಕೆಲವೊಂದು ಅಕ್ಷರದ ಹೆಸರಿನೊಂದಿಗೆ ಪ್ರಾರಂಭವಾಗುವ ಹುಡುಗರು ಹುಡುಗಿಯರನ್ನು ಮೆಚ್ಚಿಸುವಲ್ಲಿ ಪರಿಣಿತರು. ಈ ಕೆಲ ಅಕ್ಷರಗಳಿಂದ ಹೆಸರು ಆರಂಭವಾಗುವ ಹುಡುಗರು ತಕ್ಷಣವೇ ಯಾವುದೇ ಹುಡುಗಿಯ ಹೃದಯವನ್ನು ಗೆಲ್ಲುತ್ತಾರೆ. ಅವರ ಸಂವಹನ ಕೌಶಲ್ಯವು ಸಾಕಷ್ಟು ಪ್ರಭಾವಶಾಲಿಯಾಗಿರುತ್ತದೆ. ಅವರು ಎಲ್ಲರ ಮೇಲೆ ಆಳವಾದ ಪ್ರಭಾವ ಬೀರಬಲ್ಲರು. ಅವರು ಯಾವುದೇ ವ್ಯಕ್ತಿಯನ್ನು ತಮ್ಮ ಕಡೆಗೆ ಆಕರ್ಷಿಸುತ್ತಾರೆ. ಈ ಹುಡುಗರ ವ್ಯಕ್ತಿತ್ವವು ತುಂಬಾ ಪ್ರಬಲವಾಗಿದೆ. ಇಂಥ ವಿಶೇಷ ವ್ಯಕ್ತಿತ್ವದ ಹುಡುಗರ ಹೆಸರು ಏನು ಎಂದು ತಿಳಿಯೋಣ..

ಈ ಅಕ್ಷರದ ಹೆಸರಿನ ಹುಡುಗರು ಹುಡುಗಿಯರನ್ನು ತಕ್ಷಣವೇ ಮೆಚ್ಚಿಸುತ್ತಾರೆ, ಅವರು ಸದ್ಗುಣಶೀಲರು..

K, C, G, H, E ಮತ್ತು Vಯಿಂದ ಪ್ರಾರಂಭವಾಗುವ ಹುಡುಗರು ನೋಡಲು ತುಂಬಾ ಆಕರ್ಷಕವಾಗಿರುತ್ತಾರೆ. ಹುಡುಗಿಯರು ಅವರ ಕಡೆಗೆ ಬಹು ಬೇಗ ಆಕರ್ಷಿತರಾಗುತ್ತಾರೆ. ಈ ಹೆಸರಿನ ಹುಡುಗರು ನೋಟದಲ್ಲಿ ಚುರುಕಾಗಿರುತ್ತಾರೆ. ಜೊತೆಗೆ ಅವರ ಮಾತನಾಡುವ ಕೌಶಲ್ಯವೂ ತುಂಬಾ ಚೆನ್ನಾಗಿರುತ್ತದೆ. ಅವರ ಮನಸ್ಸು ಚುರುಕಾಗಿರುತ್ತದೆ. ಇದರಿಂದಾಗಿ ಹುಡುಗಿಯರು ತಕ್ಷಣವೇ ಅವರಿಂದ ಪ್ರಭಾವಿತರಾಗುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬಿರುತ್ತದೆ ಮತ್ತು ಅವರ ಕಣ್ಣು ಮತ್ತು ಮುಖದಲ್ಲಿ ಯಾವಾಗಲೂ ವಿಭಿನ್ನವಾದ ಹೊಳಪು ಇರುತ್ತದೆ. ಈ ಆತ್ಮವಿಶ್ವಾಸದ ಹೊಳಪೇ ಸಾಕು, ಎಂಥವರನ್ನೂ ಆಕರ್ಷಿಸಲು. 

Colour Astrology: ಶುಭ ಕಾರ್ಯದಲ್ಲಿ ಕಪ್ಪು ಬಟ್ಟೆ ಯಾಕೆ ಧರಿಸ್ಬಾರದು?

ಈ 6 ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನ ಹುಡುಗರು ಹುಡುಗಿಯರನ್ನು ತಕ್ಷಣವೇ ತಮ್ಮ ಕಡೆ ಸೆಳೆದುಕೊಳ್ಳುತ್ತಾರೆ. ಒಬ್ಬರ ಹೃದಯವನ್ನು ಗೆಲ್ಲಲು ಅವರು ಕಷ್ಟಪಡಬೇಕಾಗಿಲ್ಲ. ಬದಲಿಗೆ ಹುಡುಗಿಯರು ಅವರತ್ತ ಆಕರ್ಷಿತರಾಗುತ್ತಾರೆ. ಎಲ್ಲೇ ಹೋದರೂ ತಮ್ಮದೇ ಆದ ಐಡೆಂಟಿಟಿ ಮಾಡಿಕೊಳ್ಳುತ್ತಾರೆ. ಅವರು ತಮ್ಮ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ.

ಕೆ, ಸಿ, ಜಿ, ಎಚ್, ಇ ಮತ್ತು ವಿ ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನ ಹುಡುಗರು ತುಂಬಾ ರೋಮ್ಯಾಂಟಿಕ್ ಸ್ವಭಾವದವರು. ಅವರು ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಅವರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ವಿವಿಧ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಅವರು ತಮ್ಮ ಸಂಗಾತಿಯೊಂದಿಗೆ ಪ್ರಯಾಣಿಸಲು ಇಷ್ಟಪಡುತ್ತಾರೆ. ಅವರ ಸ್ವಭಾವವು ಹೆಚ್ಚು ಕಾಳಜಿಯುಳ್ಳದ್ದಾಗಿದೆ. ಈ ವಿಷಯವು ಹುಡುಗಿಯರನ್ನು ಅವರ ಕಡೆಗೆ ಮತ್ತಷ್ಟು ಆಕರ್ಷಿಸುತ್ತದೆ.

Palmistry: ನಿಮ್ಮ ಕೈಯ್ಯಲ್ಲಿ ಈ ಅದೃಷ್ಟರೇಖೆ ಇದೆಯಾ? ನೋಡಿಕೊಳ್ಳಿ..

ಇಂಥ ಹುಡುಗರು ನಿಜವಾಗಿಯೂ ಹುಡುಗಿಯರ ಪಾಲಿಗೆ ಉತ್ತಮ ಪಾಲುದಾರರಾಗುತ್ತಾರೆ. ಅವರ ತತ್ವ, ಆದರ್ಶ, ಆತ್ಮವಿಶ್ವಾಸ, ಮಾತಾಡಲು ಹಿಂದುಳಿಯದಿರುವ ರೀತಿಯಿಂದಾಗಿ ಪಾಲುದಾರರ ಬದುಕೂ ಸುಲಭವಾಗುತ್ತದೆ. ಈ ಹುಡುಗರು ನಟನೋ, ಕಲಾವಿದನೋ ಆಗಿದ್ದಾಗ ಕೂಡಾ ಇಂಥವರಿಗೆ ಫೀಮೇಲ್ ಫ್ಯಾನ್ಸ್ ಸಂಖ್ಯೆ ಹೆಚ್ಚಾಗಿರುತ್ತದೆ. 
ಈ ಹೆಸರಿನ ಹುಡುಗರು ತಮ್ಮ ಆತ್ಮವಿಶ್ವಾಸ ಅಹಂಕಾರವಾಗದಂತೆ ಎಚ್ಚರ ವಹಿಸಬೇಕು. ಜೊತೆಗೆ, ಹುಡುಗಿಯರು ಹಿಂದೆ ಬಿದ್ದರೆಂದ ಮಾತ್ರಕ್ಕೆ ತಮ್ಮ ಲಯ ತಪ್ಪದಂತೆ ನೋಡಿಕೊಂಡು ಅವರನ್ನು ಗೌರವಿಸುವ ಮನೋಭಾವ ಇಟ್ಟುಕೊಳ್ಳಬೇಕು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios