Asianet Suvarna News Asianet Suvarna News

ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಗಣ್ಯಾತಿಗಣ್ಯರಿಗೇ ಸಿಗದ ಆಹ್ವಾನ ಈ ಬಾಲಕನಿಗೆ ಸಿಕ್ಕಿದ್ದು ಹೇಗೆ?

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕೆಲ ಗಣ್ಯರಿಗೇ ಇಲ್ಲದ ಆಹ್ವಾನ ಈ 12 ವರ್ಷದ ಪುಟ್ಟ ಬಾಲಕನಿಗಿತ್ತು. ಯಾರೀತ? ಸ್ವಾಮಿ ವಿವೇಕಾನಂದರಂತೆ ವೇಷಭೂಷಣ ಮಾಡಿಕೊಳ್ಳುವ ಈ ಬಾಲಕನ ವಿಶೇಷತೆಯೇನು?

Ayodhya Ram Mandir who is 12 year old Suraj Das Maharaj skr
Author
First Published Jan 22, 2024, 5:02 PM IST | Last Updated Jan 22, 2024, 5:02 PM IST

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ದೇಶದ ಕೆಲ ಪ್ರಮುಖ ಗಣ್ಯರಿಗೆ ಆಹ್ವಾನವಿತ್ತು. ಆದರೆ, ಕಾರಣಾಂತರಗಳಿಂದ ಆಹ್ವಾನವಿಲ್ಲದವರ ಸಂಖ್ಯೆಯೂ ದೊಡ್ಡದಿದೆ. ಆಹ್ವಾನ ಸಿಕ್ಕಿಯೂ ತಿರಸ್ಕರಿಸಿದವರದು ಬೇರೆ ಮಾತು. ಆದರೆ, ಅದೆಷ್ಟೋ ಗಣ್ಯಾತಿಗಣ್ಯರಿಗೇ ಆಹ್ವಾನ ಸಿಗದಿದ್ದ ಈ ಕಾರ್ಯಕ್ರಮಕ್ಕೆ 12 ವರ್ಷದ ಪುಟ್ಟ ಬಾಲಕನಿಗೆ ಆಹ್ವಾನ ಸಿಕ್ಕಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಇಷ್ಟಕ್ಕೂ ಅಯೋಧ್ಯೆಯಲ್ಲಿ ಸುದ್ದಿವಾಹಿನಿಗಳ ಗಮನ ಸೆಳೆಯುತ್ತಿರುವ, ದೊಡ್ಡ ದೊಡ್ಡ ಮಾತುಗಳನ್ನಾಡುವ ಈ ಪುಟ್ಟ ಬಾಲಕ ಯಾರು? ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಜ್ಞಾನ ಸಂಪಾದಿಸಿದ್ದು ಹೇಗೆ ಎಂದು ಅವರ ವೀಡಿಯೋಗಳನ್ನು ನೋಡಿ ಜನರು ಆಶ್ಚರ್ಯ ಪಡುತ್ತಿದ್ದಾರೆ.

ಈತ 12 ವರ್ಷದ ಮಹಂತ್ ಸೂರಜ್ ದಾಸ್. ಅಯೋಧ್ಯೆಯ ಜನಪ್ರಿಯ ದೇವಾಲಯ, ಹನುಮಂತನಿಗೆ ಸ್ವತಃ ರಾಮ ಅಯೋಧ್ಯೆಯಲ್ಲಿ ಕೊಟ್ಟ ಜಾಗ ಎಂದು ನಂಬಲಾದ ಹನುಮಾನ್ ಗರ್ಹಿ ದೇವಾಲಯದ ಮಹಂತ ಈತ!

ಹೌದು, ಇಷ್ಟು ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ದೇವಾಲಯವೊಂದರ ಮಹಂತರಾಗಿದ್ದಾರೆ ಸೂರಜ್ ದಾಸ್. 12ರ ವಯಸ್ಸಿನಲ್ಲಿ ಆಟವಾಡಿಕೊಂಡು, ತುಂಟಾಟವಾಡಿಕೊಂಡು, ಓದಿಕೊಂಡಿರಬೇಕಾಗಿದ್ದ ಬಾಲಕ ಮಹಾಂತನಾಗಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆಯಲ್ಲವೇ? 

ಐಪಿಎಸ್ ಅಧಿಕಾರಿಯಾಗಲು ಒಂದಲ್ಲ, ಎರಡಲ್ಲ, 16 ಸರ್ಕಾರಿ ನೌಕರಿ ಆಫರ್ ತಿರಸ್ಕರಿಸಿದ ದಿಟ್ಟೆ ಈಕೆ

ಅನೇಕ ಸಂದರ್ಶನಗಳಲ್ಲಿ ಬಾಲ ಮಹಾಂತ್ ಅವರೇ ಹೇಳುವಂತೆ, 'ನಾವು ಶಾಲೆಯಿಂದ ಬರುವಾಗ ನಮ್ಮ ಸಹೋದರರು ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗುತ್ತಿದ್ದರು, ಕೆಲವರು ಮೊಬೈಲ್ ಬಳಸುತ್ತಿದ್ದರು ಮತ್ತು ಕೆಲವರು ಇನ್ನೇನೋ ಮಾಡುತ್ತಿದ್ದರು. ಆದರೆ ನಾವು ಲವಕುಶ ನೋಡುತ್ತಿದ್ದೆವು. ಇಷ್ಟು ಚಿಕ್ಕ ವಯಸ್ಸಿನ ಮಕ್ಕಳು ಮಹತ್ತರವಾದುದನ್ನು ಮಾಡಲು ಸಾಧ್ಯವಾದಾಗ ನಾವೇಕೆ ಅದನ್ನು ಮಾಡಬಾರದು ಎಂದೆನಿಸಿತು. ಹಾಗಾಗಿ ಅಂದಿನಿಂದ ನಾವು ಮನೆ ಬಿಟ್ಟು ದೇವರನ್ನು ಆಶ್ರಯಿಸಿದೆವು.'

ನಂತರ ಮಹಾಂತ್ ಸೂರಜ್ ದಾಸ್ ಅವರು ಭಗವಾನ್ ಹನುಮಂತನನ್ನು ಪೂಜಿಸಲು ಪ್ರಾರಂಭಿಸಿದರು. ಹನುಮಂತನಲ್ಲಿಯ ಈ ಭಕ್ತಿ ಅವರನ್ನು ಹನುಮಾನ್ ಗರ್ಹಿಯ ಮಹಾಂತರನ್ನಾಗಿ ಮಾಡುವ ಮಟ್ಟಕ್ಕೆ ಕೊಂಡೊಯ್ಯಿತು. 

ಯೋಗಿ ಆದಿತ್ಯನಾಥ್ ಮಾದರಿ
ಪ್ರಶ್ನೆಯೊಂದರಲ್ಲಿ, ಅವರು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತಮ್ಮ ಮಾರ್ಗದರ್ಶಕ ಎಂದು ಹೇಳಿದ್ದಾರೆ ಮತ್ತು ಅವರು ಬೆಳೆದ ನಂತರ ಅವರಂತೆ ಆಗಬೇಕೆಂದು ಕನಸಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಹಲವು ಬಾರಿ ಸಿಎಂ ಯೋಗಿ ಅವರನ್ನು ಭೇಟಿ ಮಾಡಿದ್ದಾರೆ. ಮಹಂತ್ ಅವರ ಭಕ್ತಿಯನ್ನು ನೋಡಿ ಯೋಗಿ ಮೆಚ್ಚಿದ್ದಾರೆ.

ಸನ್ಯಾಸಿಯಾಗುವ ನಿಶ್ಚಯ
ಸನ್ಯಾಸಿಯಾಗುವ ಬಗ್ಗೆ ಕುಟುಂಬದ ಸದಸ್ಯರ ಅಭಿಪ್ರಾಯವೇನು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ನಾವು ಆರು ಜನ ಸಹೋದರರು. ನನ್ನ ಪೋಷಕರು ಆರಂಭದಲ್ಲಿ ನಿರಾಕರಿಸಿದರು. ಆದರೆ ನಾನು ಒತ್ತಾಯಿಸಿದಾಗ ಅವರು ನನ್ನನ್ನು ಇಲ್ಲಿಗೆ ಕಳುಹಿಸಿದರು. ನನ್ನ ತಾಯಿ ತುಂಬಾ ಸಮಯ ದುಃಖದಲ್ಲಿದ್ದರು. ಆದರೆ ನಂತರ ಅವರು ಸುಧಾರಿಸಿಕೊಂಡರು' ಎನ್ನುತ್ತಾರೆ. 

ಸೂರಜ್ ದಾಸ್ ಪ್ರಕಾರ, ಹಿಂದೂ ಕುಟುಂಬಗಳ ಒಂದು ಮಗುವನ್ನು ದೇವರ ಭಕ್ತನಾಗಲು ಸಮರ್ಪಿಸಬೇಕು!

ರಾಮ್ ಆಯೇಂಗೆ.. ಲತಾ ಮಂಗೇಶ್ಕರ್ ಧ್ವನಿಯಲ್ಲಿ ಎಐ ಸೃಷ್ಟಿಸಿದ ಹಾಡು ಫುಲ್ ವೈರಲ್

ಸೂರಜ್ ಶಿಕ್ಷಣ
ಸೂರಜ್ ಮೂರನೇ ತರಗತಿಯವರೆಗೆ ಹಿಂದಿ ಓದಿದ್ದಾರೆ. ಅವರಿಗೆ ಗಣಿತ ಚೆನ್ನಾಗಿ ತಿಳಿದಿದೆ. ಆದರೆ ಅವರಿಗೆ ಇಂಗ್ಲಿಷ್ ತಿಳಿದಿಲ್ಲ ಮತ್ತು ಅವರು ಮುಂದೆ ಓದಲು ಬಯಸುವುದಿಲ್ಲ. ಈಗ ಅವರು ಮಹಂತ್ ಜೊತೆಗೆ ಸಂಸ್ಕೃತವನ್ನು ಕಲಿಯುತ್ತಿದ್ದಾರೆ. ಮಹಂತ್ ಸೂರಜ್ ದಾಸ್ ಜಿ ಹನುಮಾನ್ ಚಾಲೀಸಾ ಮತ್ತು ರಾಮಚರಿತ್ರೆ ಗೀತೆಯ ಪದ್ಯಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಬೆಳಿಗ್ಗೆ ಮತ್ತು ಸಂಜೆ ಪೂಜೆ ಮಾಡುತ್ತಾರೆ. ಅವರ ಇಡೀ ದಿನವನ್ನು ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಹನುಮಾನ್ ಜಿ ಸೇವೆಯಲ್ಲಿ ಕಳೆಯಲಾಗುತ್ತದೆ.

Latest Videos
Follow Us:
Download App:
  • android
  • ios