ನಮ್ಮ ದೈನಂದಿನ ಕೆಲಸದಲ್ಲಿ ಕೆಲವೊಮ್ಮೆ ಕೆಲವು ವಸ್ತುಗಳು ಅಥವಾ ಪದಾರ್ಥಗಳು ನಮ್ಮ ಕೈಯಿಂದ ನೆಲಕ್ಕೆ ಬೀಳುತ್ತವೆ. ಅದರಲ್ಲಿ ವಿಶೇಷವೇನೂ ಇಲ್ಲದಿದ್ದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೈಯಿಂದ ಬಿದ್ದರೆ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

ನಮ್ಮ ದೈನಂದಿನ ಕೆಲಸದಲ್ಲಿ ಕೆಲವೊಮ್ಮೆ ಕೆಲವು ವಸ್ತುಗಳು ಅಥವಾ ಪದಾರ್ಥಗಳು ನಮ್ಮ ಕೈಯಿಂದ ನೆಲಕ್ಕೆ ಬೀಳುತ್ತವೆ. ಅದರಲ್ಲಿ ವಿಶೇಷವೇನೂ ಇಲ್ಲದಿದ್ದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೈಯಿಂದ ಬಿದ್ದರೆ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

ನಮ್ಮ ಕೈಯಿಂದ ಕೆಲವು ವಸ್ತುಗಳು ಅಥವಾ ಪದಾರ್ಥಗಳು ಬೀಳುವುದು ಅಶುಭ. ಇದರಿಂದ ಕೆಲವು ದುಷ್ಟ ಶಕ್ತಿಯ ಆಗಮನದ ಸಂಕೇತ ಎಂದು ಹೇಳಲಾಗುತ್ತದೆ. ಅಂತಹ ವಸ್ತುಗಳು ಯಾವುವು ಮತ್ತು ಅವು ನಮಗೆ ಏನು ಸೂಚಿಸುತ್ತವೆ ಎಂಬುದನ್ನು ಕಂಡುಹಿಡಿಯೋಣ.

ಪ್ರಸಾದ ಬೀಳುವುದು

ಕೆಲವೊಮ್ಮೆ ಕೈಯಿಂದ ಪ್ರಸಾದ ಬೀಳುತ್ತದೆ. ಜ್ಯೋತಿಷ್ಯಶಾಸ್ತ್ರ (Astrology) ದ ಪ್ರಕಾರ, ಇದು ನಮ್ಮ ಯಾವುದೇ ಆಸೆಗಳು ಈಡೇರುವುದಿಲ್ಲ ಎಂಬ ಸಂಕೇತವಾಗಿದೆ. ಇದರರ್ಥ ದೇವರು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮನೆಯಲ್ಲಿ ಹೆಚ್ಚು ತೊಂದರೆ ಉಂಟುಮಾಡುತ್ತದೆ ಎಂದು ಸೂಚಿಸುತ್ತದೆ. ಇದನ್ನು ತಪ್ಪಿಸಲು, ಬಿದ್ದ ಪ್ರಸಾದವನ್ನು ಎತ್ತಿಕೊಂಡು ತಕ್ಷಣ ಹಣೆಯ ಮೇಲೆ ಹಚ್ಚಿ. ಅಲ್ಲದೆ, ಅದನ್ನು ಹರಿಯುವ ನೀರಿನಲ್ಲಿ ಹಾಕಿ ಅಥವಾ ಶುದ್ಧವಾದ ಪಾತ್ರೆಯಲ್ಲಿ ಹಾಕಿ, ಇದರಿಂದ ಅವಮಾನವಾಗುವುದಿಲ್ಲ.

ನೆಲದ ಮೇಲೆ ಬಿದ್ದಿರುವ ದೇವರ ವಿಗ್ರಹ

ದೇವರ ವಿಗ್ರಹ (Idol of God) ವು ಒಬ್ಬರ ಕೈಯಿಂದ ಬೀಳುವುದು ಅಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಕುಟುಂಬದಲ್ಲಿ ಬಿಕ್ಕಟ್ಟು ಉಂಟಾಗುತ್ತದೆ ಎಂದರ್ಥ. ಇದು ಕುಟುಂಬದಲ್ಲಿನ ಒತ್ತಡವನ್ನು ಹೆಚ್ಚಿಸಬಹುದು ಮತ್ತು ಮನೆಯಲ್ಲಿ ಬಡತನವನ್ನು ಸಹ ಹೆಚ್ಚಾಗಬಹುದು. ಅಂತಹ ಅನಾಹುತವನ್ನು ತಪ್ಪಿಸಲು ಮುರಿದ ವಿಗ್ರಹವನ್ನು ಹರಿಯುವ ನೀರಿನಲ್ಲಿ ಮುಳುಗಿಸಬೇಕು ಅಥವಾ ಗೌರವದಿಂದ ನೆಲದಲ್ಲಿ ಹೂಳಬೇಕು. ಇದು ವಿಗ್ರಹವನ್ನು ಭಂಗ ದೋಷದಿಂದ ರಕ್ಷಿಸುತ್ತದೆ.

ಶನಿಯ 8 ವಾಹನಗಳ ಬಗ್ಗೆ ಗೊತ್ತಾ? ಯಾವುದು ಅದೃಷ್ಟ ತರಲಿದೆ?

ಸಿಂಧೂರ

ಮಾಂಗಲ್ಯ ಹಾಗೂ ಸಿಂಧೂರ ಯಾವುದೇ ಮಹಿಳೆಯ ಪತಿಗೆ ದೀರ್ಘಾಯುಷ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಲವು ಬಾರಿ ಮೇಕಪ್ ಮಾಡುವಾಗ ಸಿಂಧೂರದ ಪೆಟ್ಟಿಗೆ ಕೈಯಿಂದ ಜಾರಿ ಕೆಳಗೆ ಬೀಳುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಸ್ಥಿತಿಯು ಗಂಡನ ಜೀವನದಲ್ಲಿ ಕೆಲವು ತೊಂದರೆಗಳನ್ನು ಸೂಚಿಸುತ್ತದೆ. ಇದು ಸಂಭವಿಸಿದಲ್ಲಿ, ಆಕಸ್ಮಿಕವಾಗಿ ಬಿದ್ದ ಸಿಂಧೂರವನ್ನು ಪೊರಕೆಯಿಂದ ಸ್ವಚ್ಛಗೊಳಿಸಬೇಡಿ. ಬದಲಾಗಿ, ಅದನ್ನು ಸ್ವಚ್ಛವಾದ ಬಟ್ಟೆಯಿಂದ ಸಂಗ್ರಹಿಸಿ ಹರಿಯುವ ನೀರಿನಲ್ಲಿ ಎಸೆಯಿರಿ. ಅಲ್ಲದೆ ಪತಿ ದೀರ್ಘಾಯುಷ್ಯಕ್ಕಾಗಿ ದುರ್ಗಾ ದೇವಿಯನ್ನು ಪ್ರಾರ್ಥಿಸಿ.

ಮಡಕೆ

ಅನೇಕ ಬಾರಿ ನೀರು ತುಂಬಿದ ಮಡಕೆ (pot) ನಿಮ್ಮ ಕೈಯಿಂದ ಜಾರಿಕೊಳ್ಳುತ್ತದೆ. ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಇದರರ್ಥ ದೇವರುಗಳು ಮತ್ತು ಪೂರ್ವಜರು ನಿಮ್ಮ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಮತ್ತು ತಮ್ಮ ಗಮನವನ್ನು ಸೆಳೆಯಲು ಈ ಸಂಕೇತವನ್ನು ನೀಡುತ್ತಾರೆ. ಇದರಿಂದ ನಿಮ್ಮ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಅಂತಹ ಸಮಯದಲ್ಲಿ ಹವನ ಮಾಡಿ ಪೂರ್ವಜರಿಗೆ ಪ್ರತ್ಯೇಕ ಪ್ರಸಾದ ತೆಗೆದುಕೊಂಡು ಕೈಜೋಡಿಸಿ ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಬೇಕು.

ಇವರು ತಮ್ಮ ಗುಟ್ಟನ್ನು ಎಂದಿಗೂ ರಟ್ಟು ಮಾಡಲ್ಲ: ನೀವು ಕೂಡ ಅವರಲ್ಲಿ ಒಬ್ಬರಾ?

ಕೈಯಿಂದ ಬೀಳುವ ಪೂಜೆಯ ದೀಪ

ದೇವರ ಪೂಜೆಯ ನಂತರ ದೀಪವನ್ನು ಹಚ್ಚುವುದು ಸನಾತನ ಧರ್ಮದ ಕಡ್ಡಾಯ ಸಂಪ್ರದಾಯವಾಗಿದೆ. ಅನೇಕ ಬಾರಿ ಪೂಜೆಯ ನಂತರ ಬೆಳಗಿದ ದೀಪವು ಕೈಯಿಂದ ಬೀಳುತ್ತದೆ. ಈ ರೀತಿ ಕೈಯಿಂದ ಬೀಳುವ ದೀಪವು ಯಾವುದೋ ಒಂದು ಅಹಿತಕರ ಲಕ್ಷಣವಾಗಿದೆ. ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ಏನಾದರೂ ಕೆಟ್ಟದು ಸಂಭವಿಸಲಿದೆ ಎಂದು ನಂಬಲಾಗಿದೆ. ಹೀಗಾದರೆ ಎರಡೆರಡು ದೀಪ ಹಚ್ಚಿ ನಮ್ಮ ತಪ್ಪಿಗೆ ದೇವರಲ್ಲಿ ಕ್ಷಮೆ (forgiveness) ಯಾಚಿಸಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.