Asianet Suvarna News Asianet Suvarna News

Koppal: ಮುಸ್ಲಿಂ ಕುಟುಂಬದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸಾಮರಸ್ಯ ಕಡಿಮೆ ಆಗಿದೆ.‌ ಇಂತಹ ಸಂದರ್ಭದಲ್ಲಿ ಇಲ್ಲೊಂದು ಮುಸ್ಲಿಂ‌ ಕುಟುಂಬ ಹಿಂದುಗಳು ಆಚರಣೆ ಮಾಡುವ ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡುವ ಮೂಲಕ ಸಮಾಜದಲ್ಲಿ ಸಾಮರಸ್ಯದ ಸಂದೇಶ ಸಾರಿದ್ದಾರೆ.‌ 

a muslim family in koppal celebrates varamahalakshmi festival friday at koppal gvd
Author
Bangalore, First Published Aug 6, 2022, 4:45 PM IST

ಕೊಪ್ಪಳ (ಆ.06): ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸಾಮರಸ್ಯ ಕಡಿಮೆ ಆಗಿದೆ.‌ ಇಂತಹ ಸಂದರ್ಭದಲ್ಲಿ ಇಲ್ಲೊಂದು ಮುಸ್ಲಿಂ‌ ಕುಟುಂಬ ಹಿಂದುಗಳು ಆಚರಣೆ ಮಾಡುವ ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡುವ ಮೂಲಕ ಸಮಾಜದಲ್ಲಿ ಸಾಮರಸ್ಯದ ಸಂದೇಶ ಸಾರಿದ್ದಾರೆ.‌ ಅಷ್ಟಕ್ಕೂ ಯಾವುದು ಆ ಮುಸ್ಲಿಂ ಕುಟುಂಬ ನೋಡೋಣ ಈ ವರದಿಯಲ್ಲಿ.

ಎಲ್ಲಿ ಮುಸ್ಲಿಂ ಕುಟುಂಬ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ್ದು: ಇತ್ತೀಚಿನ ವರ್ಷಗಳಲ್ಲಿ ಕೊಪ್ಪಳ ಜಿಲ್ಲೆ ಗವಿಮಠದಿಂದ ನಾಡಿನಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಹೊಂದುತ್ತಿದೆ.‌ ಪೂಜ್ಯ ಗವಿಸಿದ್ದೇಶ್ವರ ಸ್ವಾಮೀಜಿಗಳ ಸಮಾಜಮುಖಿ ಕಾರ್ಯದಿಂದ ಕೊಪ್ಪಳವನ್ನು ಜನರು ತಿರುಗಿ ನೋಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿಯೂ ಸಹ ಸಮಾಜದಲ್ಲಿ ಸಹೋದರತೆ,ಸಾಮರಸ್ಯ ಮೂಡುವಂತಹ ಕಾರ್ಯವೊಂದು ನಡೆದಿದೆ. ಅಳವಂಡಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬವೊಂದು ವರ ಮಹಾಲಕ್ಷ್ಮಿ ಪೂಜೆ ಮಾಡುವ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

Koppal: ಟೊಮೆಟೊ ಬೆಲೆ ಕುಸಿತ: ರಸ್ತೆಗೆ ಸುರಿದು ರೈತರ ಆಕ್ರೋಶ

ವರಮಹಾಲಕ್ಷ್ಮೀ ಹಬ್ಬ ಮಾಡಿದ ಮುಸ್ಲಿಂ ಕುಟುಂಬ ಯಾವುದು: ಅಳವಂಡಿ ಗ್ರಾಮ ಯಾವಾಗಲೂ ಸುಶಿಕ್ಷಿತರನ್ನು ಹೊಂದಿರುವ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಅತೀ ಹೆಚ್ಚು ಶಿಕ್ಷಕರು ಇರುವುದನ್ನು ನಾವು ಕಾಣಬಹುದಾಗಿದೆ. ಇಂತಹ ಗ್ರಾಮದ ನಜೀರುದ್ದಿನ್ ಬಿಸರಳ್ಳಿ ಕುಟುಂಬ ಮುಸ್ಲಿಂ ಸಮುದಾಯದಕ್ಕೆ ಸೇರಿದವರಾಗಿದ್ದರೂ ಸಹ ಹಿಂದೂಗಳು ಆಚರಣೆ ಮಾಡುವಂತೆ ವರಮಹಾಲಕ್ಷ್ಮೀ ಆಚರಣೆ ಮಾಡುವ ಮೂಲಕ ಗ್ರಾಮದಲ್ಲಿ ಹಿಂದೂ - ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಇರುವಂತೆ ಆಚರಣೆ ತ್ತಾ ಬಂದಿದ್ದಾರೆ. 

ಯಾವ ರೀತಿ ಆಚರಣೆ ಮಾಡಿದರು: ಸದ್ಯ ನಜೀರುದ್ದೀನ್ ಬಿಸರಳ್ಳಿ‌ ಕುಟುಂಬ ವರಮಹಾಲಕ್ಷ್ಮೀ ಹಬ್ಬದ ಹಿನ್ನಲೆಯಲ್ಲಿ ಮನೆಯನ್ನು ವಿದ್ಯುತ್ ದೀಪ ಹಾಗೂ ತಳೀರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಬಳಿಕ ಹೋಳಿಗೆ ನೈವೇದ್ಯ ಮಾಡೊ, ವಿವಿಧ ತರಹದ ಹಣ್ಣುಗಳು ಲಕ್ಷ್ಮೀಗೆ ಸಮರ್ಪಿಸಿ, ಹಣತೆ ಹಚ್ಚಿ ಭಾವೈಕ್ಯತೆ ಮೆರೆದ್ದಾರೆ. 
 
ಮಳೆಗಾಲದ ತುರ್ತುಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಿ: ಕೊಪ್ಪಳ ಜಿಲ್ಲಾಧಿಕಾರಿ ಸೂಚನೆ

ಇನ್ನು ನಜೀರುದ್ದೀನ್ ಬಿಸರಳ್ಳಿ ಕುಟುಂಬ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಇತರ ಧರ್ಮದ ಸ್ನೇಹಿತರನ್ನು ಆಹ್ವಾನಿಸಿರುವುದು ವಿಶೇಷ.‌ ಕಳೆದ ಮೂರು ವರ್ಷಗಳಿಂದ ನಜಿರುದ್ದೀನ್ ಈ ಆಚರಣೆ ಮಾಡುತ್ತಾ ಬಂದಿದ್ದು, ಅವರಿಗೆ ಒಳ್ಳೆಯದಾಗಿದೆಯಂತೆ. ಒಟ್ಟಿನಲ್ಲಿ ಧರ್ಮ-ಧರ್ಮ ಎಂದು ಬಡಿದಾಡುವವರ ಮಧ್ಯೆ ಧರ್ಮ‌ ಮೀರಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿರುವ ನಜೀರುದ್ದೀನ್ ಅವರ ಕಾರ್ಯ ನಿಜಕ್ಕೂ ಶ್ಲಾಘನಿಯವೇ ಸರಿ.

Follow Us:
Download App:
  • android
  • ios