Powerful Mantras: ದುರ್ಗೆಯ ಈ ಒಂಬತ್ತು ಪವರ್ ಫುಲ್ ಮಂತ್ರಗಳನ್ನು ಪ್ರತಿದಿನ ಪಠಿಸಿದರೆ ನೀವೆ ಧನ್ಯರು.. ಈ ಮಂತ್ರ ಬಡತನ ಹೋಗಲಾಡಿಸಲು, ಸಮೃದ್ಧಿಯನ್ನು ತರಲು ಹಾಗೂ ರೋಗಗಳು ಮತ್ತು ಶತ್ರುಗಳನ್ನು ನಾಶಮಾಡಲು ಸಹಾಯ ಮಾಡುತ್ತವೆ. ಇವುಗಳನ್ನು ಪಠಿಸುವವರು ವಿವಿಧ ಕಾಯಿಲೆಗಳು ಮತ್ತು ಅಸ್ವಸ್ಥತೆಗಳಿಂದ ಪರಿಹಾರ ಪಡೆಯುತ್ತಾರೆ.

ನವರಾತ್ರಿಯಲ್ಲಿ ಪಠಿಸಿ ಪವರ್ ಫುಲ್ ಮಂತ್ರಗಳು

ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾದೇವಿಯ ವಿವಿಧ ಸ್ವರೂಪಗಳನ್ನು ಪೂಜಿಸಲಾಗುತ್ತದೆ. ದೇವಿಯ ವಿವಿಧ ರೂಪಗಳನ್ನು ಆರಾಧಿಸುವುದರಿಂದ ಜೀವನದ ಅಡೆತಡೆಗಳು ದೂರವಾಗಿ ಸುಖ-ಸಮೃದ್ಧಿ ಲಭಿಸುತ್ತದೆ. ದೇವೀ ಭಾಗವತ ಪುರಾಣದ ಪ್ರಕಾರ, ನವರಾತ್ರಿಯ ಪವಿತ್ರ ದಿನಗಳಲ್ಲಿ ದೇವಿಯ ಅನುಗ್ರಹ ಪಡೆಯಲು ಯಾವ ಮಂತ್ರ ಪಠಿಸಬೇಕು ಅನ್ನೋದನ್ನು ನೋಡೋಣ.

ದುರ್ಗಾದೇವಿಯ ಶಕ್ತಿಶಾಲಿ ಮಂತ್ರಗಳು

  1. ವಿವಾಹದ ಅಡೆತಡೆ ನಿವಾರಣೆಗೆ ಮಂತ್ರ : ಓಂ ಕ್ರೀಂ ಕ್ಲೀಂ ವಿವಾಹ ಬಾಧಾ ನಿವಾರಣಾಯ ಫಟ್॥

ವಿವಾಹಕ್ಕೆ ಸಂಬಂಧಿಸಿದ ಅಡೆತಡೆಗಳು ದೂರವಾಗಲಿ ಎಂಬ ಉದ್ದೇಶದಿಂದ ಈ ಮಂತ್ರವನ್ನು ಪಠಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಈ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿದರೆ ಶೀಘ್ರ ವಿವಾಹ ಭಾಗ್ಯ ಕೂಡಿ ಬರುತ್ತದೆ.

2. ಆರೋಗ್ಯಕ್ಕಾಗಿ ದುರ್ಗಾದೇವಿಯ ಮಂತ್ರ : ಓಂ ಹ್ರೀಂ ನಮೋ ಭಗವತಿ ರೋಗ ನಾಶಾಯ ಹ್ರೀಂ ಓಂ ಫಟ್॥

ಈ ಮಂತ್ರವನ್ನು ರೋಗ ನಿವಾರಣೆಗೆ ಪಠಿಸಲಾಗುತ್ತದೆ. ಭಕ್ತರು ಆರೋಗ್ಯ ಮತ್ತು ಕ್ಷೇಮಕ್ಕಾಗಿ ದೇವಿಯನ್ನು ಪ್ರಾರ್ಥಿಸುವಾಗ ಈ ಮಂತ್ರವನ್ನು ಪಠಿಸುತ್ತಾರೆ.

3. ಧನ ಮತ್ತು ಐಶ್ವರ್ಯಕ್ಕಾಗಿ ಮಂತ್ರ: ಓಂ ಹ್ರೀಂ ಕಮಲೇ ಮೋಕ್ಷಂ ಸಾಧಯ ಐಶ್ವರ್ಯಂ ದೇಹಿ ಶ್ರೀಂ ಓಂ ನಮಃ॥

ಈ ಮಂತ್ರವನ್ನು ಧನ, ಐಶ್ವರ್ಯ ಮತ್ತು ಸಮೃದ್ಧಿಗಾಗಿ ಪಠಿಸಲಾಗುತ್ತದೆ. ಮಹಾಲಕ್ಷ್ಮಿಯ ಅನುಗ್ರಹವನ್ನು ಕೋರುವ ಪ್ರಾರ್ಥನೆ ಇದು. ಆರ್ಥಿಕ ಸಂಕಷ್ಟಗಳು ದೂರವಾಗಿ ಜೀವನದಲ್ಲಿ ಸಮೃದ್ಧಿ ನೆಲೆಸಲು ಇದನ್ನು ಪಠಿಸಬಹುದು.

4. ಜ್ಞಾನ ಮತ್ತು ವಿದ್ಯೆಗಾಗಿ ಮಂತ್ರ : ಓಂ ಐಂ ವಾಗ್ದೇವ್ಯೈ ವರದಾಯೈ ಓಂ ನಮಃ॥

ಈ ಮಂತ್ರವನ್ನು ವಿದ್ಯೆ, ಜ್ಞಾನ ಮತ್ತು ವಾಕ್ಚಾತುರ್ಯಕ್ಕಾಗಿ ಪಠಿಸಲಾಗುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳು ಏಕಾಗ್ರತೆ, ಜ್ಞಾನಾರ್ಜನೆ ಮತ್ತು ಉತ್ತಮ ಕಲಿಕೆಯ ಸಾಮರ್ಥ್ಯಕ್ಕಾಗಿ ದೇವಿಯ ಆರಾಧನೆ ಮಾಡುವ ಸಂದರ್ಭದಲ್ಲಿ ಈ ಮಂತ್ರವನ್ನು ಜಪಿಸಬಹುದು.

5. ಮನೋಕಾಮನೆಗಳಿಗಾಗಿ ಮಂತ್ರ : ಓಂ ಕ್ಲೀಂ ಹುಂ ಮಾತಂಗ್ಯೈ ಮನೋವಾಂಛಿತಂ ಸಿದ್ಧಯೈ ಫಟ್॥

ಈ ಮಂತ್ರವನ್ನು ತಮ್ಮ ಮನದ ಇಷ್ಟಾರ್ಥಗಳ ಈಡೇರಿಕೆಗಾಗಿ ಪಠಿಸಲಾಗುತ್ತದೆ. ನಿರ್ದಿಷ್ಟವಾದ ಸಂಕಲ್ಪವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಕ್ತಿಯಿಂದ ಮಂತ್ರವನ್ನು ಕನಿಷ್ಠ 11 ಬಾರಿ ಜಪಿಸಬೇಕು.

6. ಶತ್ರುಗಳಿಂದ ರಕ್ಷಣೆಗಾಗಿ ಮಂತ್ರ : ಓಂ ಹ್ಲೀಂ ಶತ್ರು ನಾಶಾಯ ಫಟ್॥

ಶತ್ರುಗಳಿಂದ ಎದುರಾಗುವ ಅಡೆತಡೆಗಳು ದೂರವಾಗಲಿ ಎಂಬ ಉದ್ದೇಶದಿಂದ ಈ ಮಂತ್ರವನ್ನು ಪಠಿಸಲಾಗುತ್ತದೆ. ಈ ಮಂತ್ರವನ್ನು 11 ಅಥವಾ 21 ಬಾರಿ ಜಪಿಸಬಹುದು.

7. ದುರ್ಗಾದೇವಿಯ ನವರ್ಣ ಮಂತ್ರ : ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ॥

ಇದು ದುರ್ಗಾದೇವಿಯ ಪ್ರಸಿದ್ಧ ನವರ್ಣ ಮಂತ್ರವಾಗಿದೆ. ಚಂಡ ಮತ್ತು ಮುಂಡ ಎಂಬ ರಾಕ್ಷಸರನ್ನು ಸಂಹರಿಸಿದ ಚಾಮುಂಡೇಶ್ವರಿಯ ಶಕ್ತಿಯನ್ನು ಸ್ಮರಿಸುವ ಮಂತ್ರ ಇದಾಗಿದೆ. ಇದು ದುಷ್ಟಶಕ್ತಿಗಳಿಂದ ರಕ್ಷಣೆ, ಆತ್ಮಬಲ ಮತ್ತು ಆಧ್ಯಾತ್ಮಿಕ ಪ್ರಗತಿಗಾಗಿ ದೇವಿಯನ್ನು ಪ್ರಾರ್ಥಿಸುವ ಮಂತ್ರವಾಗಿದೆ.

8. ಏಕಾಗ್ರತೆ ಹೆಚ್ಚಿಸಲು ದುರ್ಗಾದೇವಿಯ ಧ್ಯಾನ ಮಂತ್ರ :

ಓಂ ಜಟಾ-ಜೂಟ-ಸಮಾಯುಕ್ತಮರ್ಧೇಂದು-ಕೃತ-ಲಕ್ಷಣಾಮ್।

ಲೋಚನತ್ರಯ-ಸಂಯುಕ್ತಾಂ ಪದ್ಮೇಂದುಸದೃಶಾನನಾಮ್॥

ಇದು ದುರ್ಗಾದೇವಿಯ ಧ್ಯಾನ ಮಂತ್ರ. ಈ ಮಂತ್ರವನ್ನು ಕನಿಷ್ಠ 11 ಬಾರಿ ಪಠಿಸಬೇಕು. ಓದಿನಲ್ಲಿ ಅಥವಾ ಯಾವುದೇ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಕಷ್ಟವಾಗುತ್ತಿದ್ದರೆ, ಮನಸ್ಸನ್ನು ಶಾಂತವಾಗಿಟ್ಟುಕೊಂಡು ಈ ಮಂತ್ರವನ್ನು ಭಕ್ತಿಯಿಂದ ಪಠಿಸಬಹುದು.

9. ದುರ್ಗಾದೇವಿಯ ಗಾಯತ್ರಿ ಮಂತ್ರ:

ಓಂ ಗಿರಿಜಾಯೈ ಚ ವಿದ್ಮಹೇ ಶಿವಪ್ರಿಯಾಯೈ ಚ ಧೀಮಹಿ।

ತನ್ನೋ ದುರ್ಗಾ ಪ್ರಚೋದಯಾತ್॥

ಇದು ದುರ್ಗಾದೇವಿಯ ಗಾಯತ್ರಿ ಮಂತ್ರ. ದೇವಿಯ ಅನುಗ್ರಹ, ಜ್ಞಾನ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಕೋರಿ ಈ ಮಂತ್ರವನ್ನು ಪಠಿಸಲಾಗುತ್ತದೆ. ಈ ಮಂತ್ರವನ್ನು ಕನಿಷ್ಠ 11, 21, 51 ಅಥವಾ 108 ಬಾರಿ ಭಕ್ತಿಯಿಂದ ಜಪಿಸಬಹುದು.