ಸೋಲು ಎಲ್ಲರನ್ನೂ ಕಂಗೆಡಿಸುತ್ತೆ. ಆದರೆ, ಕೆಲ ಸಮಯದಲ್ಲೇ ಅದರಿಂದ ಹೊರ ಬಂದು ಭವಿಷ್ಯದ ದಾರಿ ನೋಡಿಕೊಳ್ಳುವವರು ಜಾಣರು. ಆದರೆ, ಕೆಲವರು ಮಾತ್ರ ಸೋಲಿನಿಂದ ಸಂಪೂರ್ಣ ಕಂಗೆಟ್ಟು ಹೋಗುತ್ತಾರೆ, ಒಮ್ಮೆ ಎದುರಿಸಿದ ಸೋಲು ಅವರಿಗೆ ಜೀವನದ ಪ್ರತಿ ಹಂತದಲ್ಲೂ ಕಾಡುತ್ತದೆ. ಹೀಗೆ ಸೋಲಿನಿಂದ ಹೊರಬರಲು ಒದ್ದಾಡುವವರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?

ಯಾವ ಕಾಲದಲ್ಲೋ ಒಂದು ಅವಕಾಶ ಕೈ ಬಿಟ್ಟು ವರ್ಷಗಳೇ ಕಳೆದಿದ್ದರೂ ಅದನ್ನು ನೆನೆಸಿಕೊಂಡು ಕೈ ಕೈ ಹಿಸುಕಿಕೊಳ್ಳುವವರಿದ್ದಾರೆ. ಮತ್ತೆ ಕೆಲವರಿಗೆ ಹಿಂದೆಂದೋ ಸೋತ ನೆನಪು ಇಂದಿಗೂ ಸಂದರ್ಶನಗಳನ್ನೆದುರಿಸುವಾಗ ಕಾಲು ನಡುಗಿಸುತ್ತದೆ. ಇನ್ನೂ ಕೆಲವರಿಗೆ ಪ್ರೀತಿಯಲ್ಲಿ ಸೋತ ನೆನಪು ಇಡೀ ಜನುಮಕ್ಕೆ ಕಾಡುತ್ತಲೇ ಇರುತ್ತದೆ. 
ಸೋಲಿನ ರುಚಿಯನ್ನು ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ನೋಡಿರುತ್ತಾರೆ. ಕೆಲವರು ಅದರಿಂದ ಬೇಗ ಹೊರ ಬರುತ್ತಾರೆ. ಕೆಲವರಿಗೆ ಸೋಲು ಮುಂದಿನ ಬಾರಿ ಗೆಲ್ಲಲೇಬೇಕೆಂಬ ಛಲ ಹುಟ್ಟಿಸುತ್ತದೆ. ಗೆಲುವಿಗೂ ಕಾರಣವಾಗುತ್ತದೆ.
 ಮತ್ತೆ ಕೆಲವರಿಗೆ ಸೋಲು ಅವರ ಆತ್ಮವಿಶ್ವಾಸವನ್ನೇ ಕಸಿಯುತ್ತದೆ. ಎಷ್ಟೇ ವರ್ಷಗಳು ಕಳೆದರೂ ಹಿಂದಿನ ಸೋಲುಗಳು ನೆರಳಂತೆ ಅವರನ್ನು ಹಿಂಬಾಲಿಸುತ್ತಿರುತ್ತವೆ. ಆ ಸೋಲನ್ನು ಅತಿಯಾಗಿ ಮನಸ್ಸಿಗೆ ತೆಗೆದುಕೊಂಡ ಕಾರಣಕ್ಕೆ ಮತ್ತಷ್ಟು ಸೋಲುಗಳನ್ನು ಎದುರಿಸಬೇಕಾಗುತ್ತದೆ. ಸೋಲುಗಳು ಕೆಲವರಿಗೆ ಕೆಲಸ ಮಾಡುವ ಆಸಕ್ತಿಯನ್ನೇ ಕಸಿಯುತ್ತವೆ. ಸೋಲು ಅವರ ವ್ಯಕ್ತಿತ್ವವನ್ನೇ ಬದಲಿಸಿದರೂ ಅಚ್ಚರಿಯಿಲ್ಲ. ಹೀಗೆ ಸೋಲಿನಿಂದ ಹೊರ ಬರಲು ಸಿಕ್ಕಾಪಟ್ಟೆ ಒದ್ದಾಡುವ ನಾಲ್ಕು ರಾಶಿಗಳು ಯಾವೆಲ್ಲ ಗೊತ್ತಾ?

ತುಲಾ ರಾಶಿ(Libra)
ತುಲಾ ರಾಶಿಯವರು ವೈಫಲ್ಯದಿಂದ ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ವೈಫಲ್ಯಗಳ ಬಗ್ಗೆ ನಿರಂತರವಾಗಿ ಯೋಚಿಸುವ ಮೂಲಕ ಅವರು ತಮ್ಮನ್ನು ತಾವು ನಿಭಾಯಿಸಲೇ ಕಷ್ಟ ಪಡುತ್ತಾರೆ. ಅವರು ತಮ್ಮ ಕೈಲಾದದ್ದನ್ನು ಮಾಡದಿದ್ದಕ್ಕಾಗಿ, ಸೋಲಿಗಾಗಿ ನಿರಂತರವಾಗಿ ತಮ್ಮನ್ನು ತಾವು ದೂಷಿಸಿಕೊಳ್ಳುತ್ತಾರೆ. ಅವರು ತಮ್ಮ ಹಿಂದಿನ ವೈಫಲ್ಯವನ್ನು ನೆನಪಿಸಿಕೊಳ್ಳುತ್ತಾ ಅದೇ ವಿಷಯವಾಗಿ ಮತ್ತೊಮ್ಮೆ ಪ್ರಯತ್ನಿಸಲು ಹೆದರುತ್ತಾರೆ. ಸೋಲು ಅವರ ಆತ್ಮವಿಶ್ವಾಸ ಕಸಿಯುತ್ತದೆ. 

ಮೇಷ ರಾಶಿ(Aries)
ಮೇಷ ರಾಶಿಯ ಜನರಿಗೆ ಸಹ ವೈಫಲ್ಯಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಅವರು ತಮ್ಮ ಬಗ್ಗೆ ಹೆಚ್ಚಿನ ನಿರೀಕ್ಷೆ(expectations)ಗಳನ್ನು ಹೊಂದಿರುತ್ತಾರೆ. ಮತ್ತು ಅವುಗಳನ್ನು ಪೂರೈಸಲು ವಿಫಲವಾದಾಗ ಸ್ವಂತ ಬಲದ ಮೇಲೆ, ತಮ್ಮ ಪ್ರತಿಭೆ, ಕೌಶಲ್ಯಗಳ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ವೈಫಲ್ಯಗಳು ಇವರ ಆತ್ಮವಿಶ್ವಾಸದ ಮೇಲೆ ಬೀಳುವ ಪೆಟ್ಟಾಗಿರುತ್ತವೆ. ಅದರಲ್ಲೂ ಸಂಬಂಧಗಳ ವಿಚಾರದಲ್ಲಿ ಸೋಲು ಎದುರಾದರೆ ಪೂರ್ತಿ ಕುಸಿದು ಬಿಡುತ್ತಾರೆ. ಸಾಮಾನ್ಯವಾಗಿ ಗೆಲ್ಲುವ ಕುದುರೆಯೇ ಆಗಿರುವ ಇವರಿಗೆ ಅಪ್ಪಿತಪ್ಪಿ ಸೋಲಾದರೆ ಅದೊಂದು ದೊಡ್ಡ ಅವಮಾನದಂತೆ ಕಾಡುತ್ತದೆ. 

ಅಬ್ಬಬ್ಬಾ ಇದೆಂತಹ ಹಬ್ಬ ಸತ್ತವನು ಮತ್ತೆ ಎದ್ದು ಬರುವ ಬಲಿ ಹಬ್ಬ

ಕರ್ಕಾಟಕ(Cancer)
ವೈಫಲ್ಯಗಳನ್ನು ನಿಭಾಯಿಸುವುದು ಕರ್ಕಾಟಕ್ಕೆ ತುಂಬಾ ಕಷ್ಟ. ಅವರು ಯಾವಾಗಲೂ ಉತ್ತಮರಾಗಲು ಗುರಿ ಹೊಂದಿರುತ್ತಾರೆ. ಅದಕ್ಕಾಗಿ ಪ್ರಯತ್ನ ಹಾಕುತ್ತಾರೆ. ಹಾಗಿದ್ದೂ ಸೋತಾಗ ಕಂಗೆಟ್ಟು ಕೂರುತ್ತಾರೆ. ಅವರ ದೊಡ್ಡ ಸಮಸ್ಯೆಯೆಂದರೆ ಜೀವನದ ಪ್ರಾಯೋಗಿಕತೆಯನ್ನು ಮರೆತುಬಿಡುತ್ತಾರೆ. ತಾವು ಯೋಜಿಸಿದಂತೆ ವಿಷಯಗಳು ಸಂಭವಿಸದಿದ್ದಾಗ ಮೊದ ಮೊದಲು ಅದೃಷ್ಟವನ್ನು ಹಳಿಯುತ್ತಾರೆ. ಬಳಿಕ ತಾವೊಬ್ಬ ದೊಡ್ಡ ಫೇಲ್ಯೂರ್ ಎಂದುಕೊಳ್ಳುತ್ತಾರೆ. ಸೋಲು ಅವರ ಗುರಿ, ಕನಸುಗಳನ್ನೇ ಬದಲಿಸಿ ಬಿಡಬಲ್ಲದು. 

ವರ್ಷದ ಮೊದಲ ಚಂದ್ರಗ್ರಹಣ; ಈ ರಾಶಿಗಳು ಪಡೆಯಲಿವೆ ಭಾರೀ ಲಾಭ!

ಧನು ರಾಶಿ(Sagittarius)
ಧನು ರಾಶಿಯ ಜನರಿಗೆ ಹಿನ್ನಡೆಗಳನ್ನು ಜಯಿಸಲು ಅಥವಾ ನಿಭಾಯಿಸಲು ಕಷ್ಟವಾಗುತ್ತದೆ. ಅವರು ಹಿಂದಿನ ಸೋಲುಗಳ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ವಿಷಯಗಳನ್ನು ಬದಲಾಯಿಸುವ ಬದಲು, ಅವರು ಏನು ತಪ್ಪಾಗಿದೆ ಎಂದು ಯೋಚಿಸುತ್ತಾರೆ. ವೈಫಲ್ಯಗಳನ್ನು ಸ್ವೀಕರಿಸಲು ಮತ್ತು ಮುಂದುವರಿಯಲು ಅವರಿಗೆ ಸಾಕಷ್ಟು ಸಮಯ ಮತ್ತು ಧೈರ್ಯ ಬೇಕಾಗುತ್ತದೆ. ಕೆಲವೊಮ್ಮೆ ಅವರು ತಮ್ಮ ವೈಫಲ್ಯಕ್ಕೆ ಇತರರನ್ನು ದೂಷಿಸಬಹುದು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.