Puja Aarti Rules: ಆರತಿ ತಟ್ಟೆಗೆ ಹಣ ಹಾಕುವುದು ಏಕಾಗಿ?

ಆರತಿ ಮಾಡಿದ ನಂತರ ತಟ್ಟೆಯಲ್ಲಿ ಸ್ವಲ್ಪ ಹಣವನ್ನು ಇಡುವ ಸಂಪ್ರದಾಯವಿದೆ. ಪೂಜೆ ಆರತಿ ತಟ್ಟೆಯಲ್ಲಿ ಹಣವನ್ನು ಏಕೆ ಇಡಬೇಕು ಎಂಬುದಕ್ಕೆ ಹಿಂದೂ ಆರಾಧನಾ ಸಂಪ್ರದಾಯ ಮತ್ತು ನಂಬಿಕೆಯ ಕಾರಣ ತಿಳಿದಿದೆಯೇ?

3 main reasons to keep money in the plate after taking Aarti skr

ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಪ್ರಾಮುಖ್ಯತೆ ಇದೆ ಮತ್ತು ಯಾವುದೇ ಪೂಜಾ ವಿಧಿಯ ನಂತರ ಆರತಿ ಮಾಡುವ ಸಂಪ್ರದಾಯವಿದೆ. ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿದ ಮನೆಯಾಗಲಿ ಅಥವಾ ದೇವಾಲಯವಾಗಲಿ ಅಲ್ಲಿ ಆರತಿಯನ್ನು ಖಂಡಿತವಾಗಿಯೂ ಮಾಡಲಾಗುತ್ತದೆ. ಯಾವುದೇ ದೇವಾಲಯದಲ್ಲಿ ಅಥವಾ ಮನೆಯಲ್ಲಿ ಗಂಟೆಯ ಸದ್ದು ಕೇಳುತ್ತಿದೆ ಎಂದರೆ ಅಲ್ಲಿ ದೇವರಿಗೆ ಆರತಿಯಾಗುತ್ತಿದೆ ಎಂದರ್ಥ. 

ಆರತಿ ಎಂಬ ಪದವನ್ನು ಸಂಸ್ಕೃತದ ಆರಾತ್ರಿಕಾದಿಂದ ತೆಗೆದುಕೊಳ್ಳಲಾಗಿದೆ. ಇದರರ್ಥ ಕತ್ತಲನ್ನು ನೀಗಿಸುವಂಥದ್ದು ಎಂದು. ಆರತಿಯು ಅಗ್ನಿ ಆಚರಣೆಗಳು ಅಥವಾ ಹೋಮ/ಯಜ್ಞದ ವೈದಿಕ ಪರಿಕಲ್ಪನೆಯಿಂದ ಬಂದಿದೆ. ಸಾಂಪ್ರದಾಯಿಕ ಆರತಿ ಸಮಾರಂಭದಲ್ಲಿ, ಹೂವು ಭೂಮಿಯನ್ನು ಪ್ರತಿನಿಧಿಸುತ್ತದೆ, ತೀರ್ಥ ನೀರಿನ ಅಂಶಕ್ಕೆ , ತುಪ್ಪ ಅಥವಾ ಎಣ್ಣೆ ದೀಪವು ಬೆಂಕಿಯ ಘಟಕವನ್ನು ಪ್ರತಿನಿಧಿಸುತ್ತವೆ. ಗಾಳಿಯ ಸಹಕಾರದಿಂದ ಆರತಿ ಉರಿಯುತ್ತದೆ. ಧೂಪದ್ರವ್ಯವು ಶುದ್ಧೀಕರಿಸಿದ ಮನಸ್ಸಿನ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಹೀಗೆ, ಒಬ್ಬನ ಸಂಪೂರ್ಣ ಅಸ್ತಿತ್ವ ಮತ್ತು ವಸ್ತು ಸೃಷ್ಟಿಯ ಎಲ್ಲಾ ಅಂಶಗಳನ್ನು ಸಾಂಕೇತಿಕವಾಗಿ ಆರತಿ ಸಮಾರಂಭದ ಮೂಲಕ ದೇವರಿಗೆ ಅರ್ಪಿಸಲಾಗುತ್ತದೆ.  ಆರತಿಯನ್ನು ದೇವರ ಸುತ್ತ ಪ್ರದಕ್ಷಿಣಾಕಾರವಾಗಿ ವೃತ್ತಾಕಾರದಲ್ಲಿ ಬೀಸಲಾಗುತ್ತದೆ.

ಆರತಿಯ ನಂತರ ಆರತಿ ತಟ್ಟೆಯನ್ನು ಪೂಜೆಯಲ್ಲಿ ಹಾಜರಿದ್ದ ಎಲ್ಲರಿಗೂ ನೀಡುವುದನ್ನು ನೀವು ನೋಡಿರಬೇಕು. ಆರತಿ ಪಡೆದುಕೊಳ್ಳುವಾಗ ಎಲ್ಲರೂ ಖಂಡಿತವಾಗಿಯೂ ಆರತಿ ತಟ್ಟೆಯಲ್ಲಿ ಸ್ವಲ್ಪ ಹಣವನ್ನು ಇಡುತ್ತಾರೆ. ನಮ್ಮ ಹಿರಿಯರು ಕೂಡ ಯಾವಾಗಲೂ ಆರತಿಯನ್ನು ಬರಿಗೈಯಲ್ಲಿ ತೆಗೆದುಕೊಳ್ಳಬಾರದು ಎಂದು ಹೇಳುತ್ತಾರೆ. ಆರತಿ ತೆಗೆದುಕೊಂಡ ನಂತರ ತಟ್ಟೆಯಲ್ಲಿ ಸ್ವಲ್ಪ ಹಣವನ್ನು ಇಡಬೇಕು. ಆದರೆ ಆರತಿ ತಟ್ಟೆಯಲ್ಲಿ ಹಣ ಇಡಲು ಕಾರಣವೇನು ಗೊತ್ತಾ. ಇದಕ್ಕೆ ಒಂದಲ್ಲ ಮೂರು ಮುಖ್ಯ ಕಾರಣಗಳಿವೆ, ಅದು ಈ ಕೆಳಗಿನಂತಿದೆ.

ದಿನಕ್ಕೆರಡು ಬಾರಿ ಅದೃಶ್ಯವಾಗಿ ಪ್ರತ್ಯಕ್ಷವಾಗುವ ಶಿವ ದೇವಾಲಯ!

ಪ್ರಾಥಮಿಕ ಕಾರಣ
ಶ್ರೀಮದ್ ಭಗವತ್ಗೀತೆಯಲ್ಲಿ ಒಂದು ಶ್ಲೋಕವಿದೆ -
ದಾತ್ವಮಿತಿ ಯದ್ದಾನಾಂ ದೀಯತೇ'ನುಪಕಾರಿಣೇ ।
ದೇಶೇ ಕಾಲೇ ಚ ಪಾತ್ರೇ ಚ, ತದ್ವಾನಂ ಸಾತ್ವಿಕಂ ಸ್ಮೃತಮ್ ।

ಅರ್ಥ- ದಾನ ಮಾಡುವುದು ಕರ್ತವ್ಯ. ದಾನಕ್ಕೆ ಯೋಗ್ಯವಾದ ದೇಶ, ಸಮಯ ನೋಡಿ ಯೋಗ್ಯ ವ್ಯಕ್ತಿಗೆ ಅದನ್ನು ನೀಡಬೇಕು. ಪ್ರತಿಫಲವನ್ನು ನಿರೀಕ್ಷಿಸದ ದಾನವನ್ನು ಸಾತ್ವಿಕವೆಂದು ಪರಿಗಣಿಸಲಾಗಿದೆ.

ಹಿಂದೂ ಧರ್ಮದಲ್ಲಿ ದಾನದ ಸಂಪ್ರದಾಯವು ಶತಮಾನಗಳಿಂದಲೂ ಇದೆ. ಆದರೆ ದಾನವನ್ನು ಯಾವಾಗಲೂ ಅರ್ಹರಿಗೆ ನೀಡಬೇಕು. ವಾಸ್ತವವಾಗಿ ಅರ್ಚಕರು ತಮ್ಮ ಸಮಯವನ್ನು ದೇವಸ್ಥಾನದಲ್ಲಿ ಕಳೆಯುತ್ತಾರೆ ಮತ್ತು ದೇವರ ಸೇವೆಯಲ್ಲಿ, ಭಕ್ತಿಯಲ್ಲಿ ಮುಳುಗಿರುತ್ತಾರೆ. ಅದಕ್ಕಾಗಿಯೇ ಭಕ್ತರು ದೇವಸ್ಥಾನಕ್ಕೆ ಹೋದಾಗ ಅರ್ಚಕರಿಗೆ ಕಾಣಿಕೆಯಾಗಿ ಆರತಿ ತಟ್ಟೆಯಲ್ಲಿ ಹಣ ಹಾಕುತ್ತಾರೆ.

ಎರಡನೇ ಕಾರಣ
ಆರತಿ ತಟ್ಟೆಯಲ್ಲಿ ಹಣ ಇಡಲು ಇನ್ನೊಂದು ಕಾರಣವೆಂದರೆ ಅರ್ಚಕರು ಪೂಜೆ ಬಿಟ್ಟು ಬೇರೆ ಕೆಲಸ ಮಾಡುವುದಿಲ್ಲ. ಅದಕ್ಕಾಗಿಯೇ ಅವರಿಗೆ ಯಾವುದೇ ಸ್ಥಿರ ಆದಾಯವಿಲ್ಲ. ದೇವಸ್ಥಾನ ಅಥವಾ ಜನರಿಂದ ಸಿಗುವ ದೇಣಿಗೆಯೇ ಇವರಿಗೆ ಮತ್ತು ಅವರ ಕುಟುಂಬಕ್ಕೆ ಜೀವನಾಧಾರ. ಅದಕ್ಕಾಗಿಯೇ ಹಿಂದಿನ ಕಾಲದಲ್ಲಿ ದೇವಸ್ಥಾನದಲ್ಲಿ ಆರತಿ ತಟ್ಟೆಯಲ್ಲಿ ದಾನದ ರೂಪದಲ್ಲಿ ಹಣವನ್ನು ಇಡುವ ಸಂಪ್ರದಾಯವನ್ನು ಮಾಡಲಾಯಿತು, ಇದರಿಂದ ಅರ್ಚಕ ಮತ್ತು ಅವರ ಕುಟುಂಬವನ್ನು ಕಾಪಾಡಿಕೊಳ್ಳಬಹುದು ಮತ್ತು ದೇವಾಲಯದ ವ್ಯವಸ್ಥೆಯೂ ಚೆನ್ನಾಗಿರುತ್ತದೆ. ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ.

ರುದ್ರಾಕ್ಷಿ ಧರಿಸಿ ಈ 5 ಸ್ಥಳಗಳಿಗೆ ಹೋಗಬೇಡಿ, ಅಪಾರ ನಷ್ಟ ಎದುರಿಸಬೇಕಾದೀತು!

ಮೂರನೇ ಕಾರಣ
ಆರತಿ ತಟ್ಟೆಯಲ್ಲಿ ಹಣ ಇಡುವ ಸಂಪ್ರದಾಯವನ್ನು ತಾಯಿ ಹಸುವಿನ ಸೇವೆಗಾಗಿ ಮಾಡಲಾಗಿದೆ ಎಂಬ ಪ್ರತೀತಿಯೂ ಇದೆ. ಇದರ ಪ್ರಕಾರ ಆರತಿ ತಟ್ಟೆಯಲ್ಲಿ ಸಂಗ್ರಹಿಸಿದ ಹಣವನ್ನು ತಾಯಿ ಹಸುವಿನ ಸೇವೆಗೆ ಬಳಸಬೇಕು.

Latest Videos
Follow Us:
Download App:
  • android
  • ios