ಅಮೇರಿಕಾದ ಮಾಜಿ ಅಧ್ಯಕ್ಷರಿಗೆ ಸೇರಿದ 200 ವರ್ಷ ಹಳೆಯ ಸ್ಫಟಿಕದ ಕೊಳಲು ನುಡಿಸಿದ ವಾದಕಿ
ಪ್ರಸಿದ್ಧ ಕೊಳಲು ವಾದಕಿ ಲಿಝೋ, ವಾಷಿಂಗ್ಟನ್‌ನ ಹಳೆಯ ಲೈಬ್ರರಿಯಲ್ಲಿ ಐತಿಹಾಸಿಕ ವಾದ್ಯ, ಅಮೂಲ್ಯವಾದ ಸ್ಫಟಿಕ ಕೊಳಲು ನುಡಿಸುವ ಅವಕಾಶವನ್ನು ಪಡೆದರು. ಇದು 200 ವರ್ಷಗಳಷ್ಟು ಹಳೆಯ ಕೊಳಲಾಗಿದ್ದು, ಅಮೇರಿಕಾದ ಮಾಜಿ ಅಧ್ಯಕ್ಷ ಜೇಮ್ಸ್ ಮ್ಯಾಡಿಸನ್ ಅವರಿಗೆ ಸೇರಿದ್ದಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಅಮೇರಿಕಾದ ನಾಲ್ಕನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜೇಮ್ಸ್ ಮ್ಯಾಡಿಸನ್‌ಗೆ ಸೇರಿದ ಬೆಲೆಬಾಳುವ ಕೊಳಲನ್ನು ಪ್ರಖ್ಯಾತ ಕೊಳಲು ವಾದಕಿ ಲಿಝೋ ನುಡಿಸಿದ್ದಾರೆ. ಲಿಝೋ ಸಂಗೀತ ಕಚೇರಿಯಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಜೇಮ್ಸ್ ಮ್ಯಾಡಿಸನ್ ಅವರ 200 ವರ್ಷಗಳ ಹಳೆಯ ಕೊಳಲು (Flute) ನುಡಿಸುವ ಮೂಲಕ ಇತಿಹಾಸವನ್ನು (History) ನಿರ್ಮಿಸಿದರು. 34 ವರ್ಷದ ಗಾಯಕಿ ಪ್ರತಿಭಾವಂತ ಫ್ಲೌಟಿಸ್ಟ್ ಎಂದು ಹೆಸರುವಾಸಿಯಾಗಿದ್ದಾರೆ. ವಾಷಿಂಗ್ಟನ್‌ನ ಹಳೆಯ ಲೈಬ್ರರಿಯಲ್ಲಿ ಲಿಝೋ ಐತಿಹಾಸಿಕ ವಾದ್ಯ, ಅಮೂಲ್ಯವಾದ ಸ್ಫಟಿಕ ಕೊಳಲು (Crystal flute) ನುಡಿಸುವ ಅವಕಾಶವನ್ನು ಪಡೆದರು. ಲೈಬ್ರರಿ ಆಫ್ ಕಾಂಗ್ರೆಸ್, ರಾಷ್ಟ್ರದ ಅತ್ಯಂತ ಹಳೆಯ ಸಾಂಸ್ಕೃತಿಕ ಸಂಸ್ಥೆ ಮತ್ತು ಕಾಂಗ್ರೆಸ್‌ನ ಸಂಶೋಧನಾ ವಿಭಾಗವು ವಿಶ್ವದ ಅತ್ಯಂತ ಹಳೆಯ ಕೊಳಲು ಸಂಗ್ರಹಕ್ಕೆ ನೆಲೆಯಾಗಿದೆ.
ಲೈಬ್ರರಿಯನ್ ಕಾರ್ಲಾ ಹೇಡನ್, ಲಿಝೋ ಅವರು ಪ್ರದರ್ಶನ ನೀಡಲು ವಾಷಿಂಗ್ಟನ್ ಡಿಸಿಗೆ ಬರುತ್ತಿರುವುನ್ನು ತಿಳಿದುಕೊಂಡು ಅತ್ಯಂತ ಹಳೆಯ ಕೊಳಲಿನ ಕುರಿತಾದ ಮಾಹಿತಿಯನ್ನು ಟ್ವೀಟ್ ಮಾಡಿದ್ದರು. 'ಲೈಕ್ ಯುವರ್ ಸಾಂಗ್ ದೆ ಆರ್ ಗುಡ್ ಏಸ್ ಹೆಲ್' ಎಂದು ಕಾರ್ಲಾ ಹೇಡನ್ ಕೊಳಲಿನ ಬಗ್ಗೆ ಟ್ವೀಟ್‌ನಲ್ಲಿ ಲಿಝೋಗೆ ತಿಳಿಸಿದ್ದರು. ಲಿಝೋ ಅವರ ನಿಜವಾದ ಹೆಸರು ಎಂದು ಮೆಲಿಸ್ಸಾ ಜೆಫರ್ಸನ್ ಎಂದಾಗಿದ್ದು ಅವರು ಲೈಬ್ರರಿಯನ್ ಟ್ವೀಟ್‌ಗೆ ಮರುಟ್ವೀಟ್ ಮಾಡಿದ್ದಾರೆ. ಕೊಳಲಿನ ಸಂಗ್ರಹವನ್ನು (Collection) ನೋಡುವ ಪ್ರಸ್ತಾಪವನ್ನು ಸ್ವೀಕರಿಸಿದ್ದಾರೆ.
India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್
'ಐಮ್ ಕಮಿಂಗ್ ಕಾರ್ಲ ಮತ್ತು ನಾನು ಆ ಕ್ರಿಸ್ಟಲ್ ಕೊಳಲು ನುಡಿಸುತ್ತಿದ್ದೇನೆ' ಎಂದು ಲಿಝೋ ಟ್ವೀಟ್ ಮಾಡಿದ್ದಾರೆ. ಲಿಝೋ ಲೈಬ್ರರಿ ಆಫ್ ಕಾಂಗ್ರೆಸ್‌ನಲ್ಲಿ ಕಾಣಿಸಿಕೊಂಡರು ಮತ್ತು ಕೊಳಲು ಸಂಗ್ರಹವನ್ನು ವೀಕ್ಷಿಸಿದರು. ಕೊಳಲುಗಳಲ್ಲಿ ಆಸಕ್ತಿಯನ್ನು (Interest0 ಹೊಂದಿದ್ದ ಅವರು ಈ ಸ್ಪಟಿಕದ ಕೊಳಲಿನ ಬಗ್ಗೆ ಮೆಚ್ಚುಗೆ (Praise) ವ್ಯಕ್ತಪಡಿಸಿದರು.
ಹೆಚ್ಚಾಗಿ ಕೊಳಲುಗಳನ್ನು ಮರ (Wood) ಅಥವಾ ದಂತದಿಂದ ಮಾಡಲಾಗುತ್ತದೆಯಾದರೂ ಲಾರೆಂಟ್ ಸ್ಫಟಿಕದಿಂದ ಕೊಳಲನ್ನು ತಯಾರಿಸಿದ್ದರು. ಅದರ ಪಿಚ್ ಮತ್ತು ಟೋನ್ ಅನ್ನು ಉತ್ತಮವಾಗಿ ಹಿಡಿದಿಟ್ಟುಕೊಂಡಿದ್ದರಿಂದ, ಅದು ಜನಪ್ರಿಯವಾಯಿತು. ಆದರೆ ಲಾರೆಂಟ್ ಗಾಜಿನ ಕೊಳಲುಗಳನ್ನು ತಯಾರಿಸುವ ಏಕೈಕ ವ್ಯಕ್ತಿಯಾಗಿರುವುದರಿಂದ, ಅವರು ಅಂತಿಮವಾಗಿ ಜನಪ್ರಿಯತೆ (Famous)ಯನ್ನು ಕಳೆದುಕೊಂಡರು ಮತ್ತು ಕೇವಲ 185 ಮಾತ್ರ ಇಂದು ಅಸ್ತಿತ್ವದಲ್ಲಿವೆ ಎಂದು ತಿಳಿದುಬಂದಿದೆ.
1812ರ ಯುದ್ಧದ ಸಮಯದಲ್ಲಿ ಬ್ರಿಟಿಷರು ವಾಷಿಂಗ್ಟನ್ ಪ್ರವೇಶಿಸಿದಾಗ, 1814ರ ಏಪ್ರಿಲ್‌ನಲ್ಲಿ ಲೈಬ್ರರಿ ಆಫ್ ಕಾಂಗ್ರೆಸ್ ಸಂಗ್ರಹದಲ್ಲಿದ್ದ ಗಾಜಿನ ಕೊಳಲು ಬಹುತೇಕ ನಾಶವಾಯಿತು. ಹೀಗಿದ್ದೂ ಪ್ರಥಮ ಮಹಿಳೆ (First woman) ಡಾಲಿ ಮ್ಯಾಡಿಸನ್ ಅದನ್ನು ಶ್ವೇತಭವನದಿಂದ ರಕ್ಷಿಸಿದರು. ಲಿಝೋ ಲೈಬ್ರರಿಯ ಗ್ರೇಟ್ ಹಾಲ್‌ನಲ್ಲಿ ಸಾಂಪ್ರದಾಯಿಕ (Traditional) ಕೊಳಲು ನುಡಿಸುವುದನ್ನು ಅಭ್ಯಾಸ ಮಾಡಿದರು. ಮರುದಿನ, ಕ್ಯಾಪಿಟಲ್ ಒನ್ ಅರೆನಾದಲ್ಲಿ ತನ್ನ ಸಾವಿರಾರು ಅಭಿಮಾನಿಗಳ ಮುಂದೆ ಕೊಳಲು ನುಡಿಸಿದರು.
Vastu Tips : ಪತಿ – ಪತ್ನಿ ಮಧ್ಯೆ ಸರಸ ಹೆಚ್ಚಿಸುವ ಕೊಳಲು
ಕೊಳಲನ್ನು ಎಚ್ಚರಿಕೆಯಿಂದ ಮತ್ತು ಸುರಕ್ಷಿತವಾಗಿ ಅಖಾಡಕ್ಕೆ ಸಾಗಿಸಲಾಯಿತು ಮತ್ತು ಲೈಬ್ರರಿ ಕ್ಯುರೇಟರ್ ಕರೋಲ್ ಲಿನ್ ವಾರ್ಡ್-ಬ್ಯಾಮ್‌ಫೋರ್ಡ್ ಅದನ್ನು ವೇದಿಕೆಯ ಮೇಲೆ ಹೊರನಡೆದರು. ಹಿಂದಿನ ವೃತ್ತಿಪರರ ತಂಡದ ಈ ಕೆಲಸವು ಉತ್ಸಾಹಭರಿತ ಪ್ರೇಕ್ಷಕರಿಗೆ ಲೈಬ್ರರಿಯ ಸಂಪತ್ತುಗಳ ಬಗ್ಗೆ ಅತ್ಯಾಕರ್ಷಕ ರೀತಿಯಲ್ಲಿ ಕಲಿಯಲು ಅನುವು ಮಾಡಿಕೊಟ್ಟಿತು ಎಂದು ಲೈಬ್ರರಿ ಆಫ್ ಕಾಂಗ್ರೆಸ್ ಹೇಳಿದೆ. ಲಿಜ್ಜೋ ಕೊಳಲಿಗೆ ಹಿಂದಿನ ಕಥೆಯನ್ನು ತಿಳಿದ ಬಳಿಕ ಕೊಳಲನ್ನು ನುಡಿಸಲು ಹೇಗೆ ಭಯಗೊಂಡಿದ್ದೆ ಎಂಬುದನ್ನು ವಿವರಿಸಿದರು. ಜನರ ಮುಂದೆ ಕೊಳಲನ್ನು ಯಶಸ್ವಿಯಾಗಿ ನುಡಿಸಿದ್ದಕ್ಕೆ ಖುಷಿಯಾಗಿದೆ ಎಂಬುದಾಗಿ ಹೇಳಿದರು.