ಪುರುಷರು ಮೈ ಚಳಿ ಬಿಟ್ಟು ಸೆಕ್ಸಿ ಡ್ಯಾನ್ಸ್ ಮಾಡಿದ್ರೆ ಹೇಗಿರತ್ತೆ? ಮಹಿಳೆಯರಿಂದ ಹಾರ್ಟ್ ಇಮೋಜಿಗಳ ಸುರಿಮಳೆ!
ರವೀನಾ ಟಂಡನ್ ಮಳೆಯಲ್ಲಿ ನೆನೆದು ಮಾಡಿದ್ದ ಸೆಕ್ಸಿ ಡ್ಯಾನ್ಸನ್ನು ಈಗ ಕೊರಿಯೋಗ್ರಾಫರ್ ನೀರಜ್ ಪಟೇಲ್ ಮಾಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.

ಸೆಕ್ಸಿ, ಹಾಟ್ (Sexy, Hot) ಎಂದಾಗಲೆಲ್ಲಾ ಕಣ್ಣ ಮುಂದೆ ಬರುವುದು ಯುವತಿಯರೇ. ಇನ್ನು ಇಂಥ ಡ್ಯಾನ್ಸ್ಗಳ ಬಗ್ಗೆ ವರ್ಣಿಸುವಾಗ ನಟಿಯರ ನೃತ್ಯಗಳು ಕಣ್ಮುಂದೆ ಬರುತ್ತವೆ. ಆದರೆ ಎಷ್ಟೋ ಸಿನಿಮಾಗಳಲ್ಲಿ ನಟಿಯರಿಗೂ ಇಂಥ ಸೆಕ್ಸಿ ಡ್ಯಾನ್ಸ್ ತರಬೇತು ಮಾಡುವ ಕೊರಿಯೋಗ್ರಫರ್ ಪುರುಷರೇ ಆಗಿರುತ್ತಾರೆ ಎನ್ನುವುದೂ ಅಷ್ಟೇ ನಿಜ. ಈಗ ನಟಿಯರ ಮಾತು ಬಿಡಿ. ಇಲ್ಲೊಬ್ಬ ಕೋರಿಯೋಗ್ರಫರ್ ಬಾಲಿವುಡ್ನ ಟಿಪ್ ಟಿಪ್ ಬರಸಾ ಪಾನಿ (Tip tip Barsa pani) ಹಾಡಿಗೆ ಮಾಡಿರುವ ಸೆಕ್ಸಿ ಡ್ಯಾನ್ಸ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅದರಲ್ಲಿಯೂ ಮಹಿಳೆಯರಂತೂ ಹಾರ್ಟ್ ಇಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿಸಿದ್ದಾರೆ. ಈ ವಿಡಿಯೋ ಇದಾಗಲೇ ಹತ್ತಿರತ್ತಿರ ಎರಡು ಲಕ್ಷದಷ್ಟು ಲೈಕ್ಸ್ ಪಡೆದಿವೆ. ಇಂಥದ್ದೊಂದು ಮೋಡಿ ಮಾಡಿರುವವರ ಹೆಸರು ನೀರಜ್ ಪಟೇಲ್ (Neeraj Patel). ಡ್ಯಾನ್ಸ್ ತರಬೇತುದಾರರಾಗಿರುವ ಇವರ ಇನ್ಸ್ಟಾಗ್ರಾಮ್ ಪುಟದಲ್ಲಿ ಇಂಥದ್ದೇ ಹಲವಾರು ನೃತ್ಯಗಳಿದ್ದು, ಅದರಲ್ಲಿ ಈಗ ಟಿಪ್ ಟಿಪ್ ಬರಸಾ ಪಾನಿ ಹಾಡಿನ ವಿಡಿಯೋ ವೈರಲ್ ಆಗಿದೆ.
ಪ್ಯಾಂಟಿನ ಮೇಲೆ ಸೀರೆ ಉಟ್ಟು ಈ ಹಾಡಿಗೆ ಅವರು ನರ್ತಿಸುತ್ತಿದ್ದರೆ, ಅವರ ಹಿಂದೆ ಇದ್ದ ಮಹಿಳಾ ವಿದ್ಯಾರ್ಥಿಗಳು ತದೇಕಚಿತ್ತದಿಂದ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಂದಹಾಗೆ ಟಿಪ್ ಟಿಪ್ ಬರಸಾ ಪಾನಿ ಹಾಡು 1994ರಲ್ಲಿ ಬಿಡುಗಡೆಯಾಗಿದ್ದ ಮೊಹ್ರಾ (Mohra) ಬಾಲಿವುಡ್ನ ಸೂಪರ್ ಹಿಟ್ ಹಾಡು. ಈ ಹಾಡಿಗೆ ನಟರಾದ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಡ್ಯಾನ್ಸ್ ಮಾಡಿದ್ದರು. ರವೀನಾ ಅವರು ಮಳೆಯಲ್ಲಿ ಮಾಡಿದ್ದ ಈ ಹಾಡನ್ನು ನೋಡಿ ಉಫ್ ಎಂದು ಹೇಳಿದ್ದರು ಫ್ಯಾನ್ಸ್. ಅವರು ಕೂಡ ಅಷ್ಟೇ ಸೆಕ್ಸಿಯಾಗಿ ಈ ಡ್ಯಾನ್ಸ್ ಮಾಡಿದ್ದರು. ನಟ ಅಕ್ಷಯ್ ಕುಮಾರ್ ಅವರ ಜೊತೆ ರವೀನಾ ಟಂಡನ್ ಮೈ ಚಳಿಬಿಟ್ಟು ನಟಿಸಿದ್ದರು.
ರಣವೀರ್ ಸಿಂಗ್- ಆಲಿಯಾ ಈ ಪರಿ ರೊಮ್ಯಾನ್ಸ್! ಸಿನಿಮಾದಲ್ಲೂ ಕತ್ತರಿ ಹಾಕಿದ್ದ ವಿಡಿಯೋ ವೈರಲ್
ಅಷ್ಟಕ್ಕೂ ಈ ಹಾಡಿನ ಶೂಟಿಂಗ್ ಸಮಯದಲ್ಲಿ ಆಗಿದ್ದ ಒಂದು ಘಟನೆಯನ್ನು ಇತ್ತೀಚಿಗೆ ರವೀನಾ ಟಂಡನ್ ಹೇಳಿಕೊಂಡಿದ್ದರು. ಸೀರೆಯಲ್ಲಿ ಚಿತ್ರೀಕರಿಸಿದ 'ಟಿಪ್ ಟಿಪ್ ಬರ್ಸಾ ಪಾನಿ' ಬಗ್ಗೆ ಅವರಿಗೆ ಪ್ರಶ್ನೆ ಕೇಳಿದ್ದಾಗ, ನಟಿ ಆ ದಿನ ನಡೆದ ಘಟನೆಯನ್ನು ಮೆಲುಕು ಹಾಕಿದ್ದರು. ಅದೇನೆಂದರೆ ಈ ಹಾಡನ್ನು ಚಿತ್ರೀಕರಿಸುವಾಗ, ರವೀನಾ ಕೆಲವು ಷರತ್ತುಗಳನ್ನು ಚಿತ್ರ ನಿರ್ಮಾಪಕರ (Producer) ಮುಂದೆ ಹಾಕಿದ್ದರಂತೆ. ಮಳೆಯಲ್ಲಿ ತಾವು ಪಾರದರ್ಶಕ ಸೀರೆಯುಟ್ಟು ನಟನ ಜೊತೆ ನರ್ತಿಸಲು ರೆಡಿ ಇದ್ದರೂ, ಕೆಲ ಕಂಡೀಷನ್ ಅದರಲ್ಲಿ ಇತ್ತು ಎಂದು ನಟಿ ರವೀನಾ ಬಹಿರಂಗಪಡಿಸಿದ್ದರು. ಅಷ್ಟಕ್ಕೂ ಅವರು ಹಾಕಿದ್ದ ಕಂಡೀಷನ್ ಏನೆಂದರೆ, ಹಾಡಿನಲ್ಲಿ ಯಾವುದೇ ಕಾರಣಕ್ಕೂ ಸೀರೆ ತೆಗೆಯಬಾರದು ಮತ್ತು ಚುಂಬಿಸಬಾರದು ಎಂಬುದು. ಆ ಹಾಡು ಉನ್ಮಾದದಂತೆ ತೋರುತ್ತಿತ್ತು. ಅದನ್ನು ಚಿತ್ರೀಕರಿಸಲು ನನಗೆ ಹಿಂಜರಿಕೆ ಆಯಿತು. ಆದರೆ ಅಸಲಿಗೆ ಆ ಹಾಡಿನಲ್ಲಿ ಬಹಿರಂಗವಾಗಿ ಲೈಂಗಿಕತೆ ಏನೂ ಇರಲಿಲ್ಲ. ಲೈಂಗಿಕತೆ (Sexuality) ಮತ್ತು ಉನ್ಮಾದದ ನಡುವೆ ತೆಳುವಾದ ಗೆರೆ ಇದೆ. ಎಂದು ನಾನು ಯಾವಾಗಲೂ ನಂಬುತ್ತೇನೆ. ಅದರಂತೆಯೇ ಷರತ್ತು ವಿಧಿಸಿಯೇ ಈ ಹಾಡಿನ ಚಿತ್ರೀಕರಣಕ್ಕೆ ಒಪ್ಪಿಕೊಂಡಿದ್ದೆ ಎಂದು ಹೇಳಿಕೊಂಡಿದ್ದರು.
ಅಕ್ಷಯ್ ಕುಮಾರ್ (Akshay Kumar) ಜೊತೆ ನಟಿಸುವಾಗ ನನ್ನ ಸೀರೆ ಮಳೆಯಲ್ಲಿ ನೆನೆಯುವಾಗ ಯಾವುದೇ ಕಾರಣಕ್ಕೂ ಬಿಚ್ಚುವಂತೆ ಮಾಡಬಾರದು. ಕಿಸ್ ಗಿಸ್ ಎನ್ನೋ ಸೀನ್ ಇರಬಾರದು ಎಂದೆ. ಇದಕ್ಕೆ ನಿರ್ದೇಶಕರೂ ಒಪ್ಪಿಕೊಂಡರು. ಅದರಂತೆಯೇ ಚಿತ್ರೀಕರಣ ನಡೆದು ಅದು ಸಕತ್ ಹಿಟ್ ಆಯಿತು. ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನದಾಗಿ ಹಿಟ್ಸ್ ಬಂದಿತು. ಜನರು ಅದನ್ನು ಸಿಕ್ಕಾಪಟ್ಟೆ ಇಷ್ಟಪಟ್ಟರು ಎಂದು ನಟಿ ರವೀನಾ ಹೇಳಿದ್ದರು. ಇದೀಗ ಕೋರಿಯೊಗ್ರಫರ್ ಇದೇ ಹಾಡಿಗೆ ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ್ದು ಸಕತ್ ಹಿಟ್ ಆಗಿದೆ.
ಮದುವೆ ಮುಂಚಿನ ಸೆಕ್ಸ್, ಕನ್ಯತ್ವ ಕಳೆದುಕೊಳ್ಳುವ ವಯಸ್ಸಿನ ಕುರಿತು ನಟಿ ಅತುಲ್ಯಾ ಬೋಲ್ಡ್ ಹೇಳಿಕೆ!