Asianet Suvarna News Asianet Suvarna News

‘ಸಾರ್ವಜನಿಕರಲ್ಲಿ ವಿನಂತಿ' ಮಾಡಿಕೊಂಡ್ರು ಯೋಗರಾಜ್ ಭಟ್ರು!

ಯೋಗರಾಜ್ ಭಟ್ ಸಿನಿಮಾಗಳೆಂದರೆ ಏನಾದರೊಂದು ವಿಶೇಷ ಇದ್ದೇ ಇರುತ್ತೆ. ವಿಭಿನ್ನ ಟೈಟಲ್, ಸ್ಪೆಷಲ್ ಕಥೆ, ಪಂಚಿಂಗ್ ಡೈಲಾಗ್ ಏನಾದರೊಂದು ಇರುತ್ತದೆ. ಅಂತದ್ದೆ ಒಂದು ಟೈಟಲ್ ಇಟ್ಕೊಂಡು ಬರ್ತಾ ಇದ್ದಾರೆ ಯೋಗರಾಜ್ ಭಟ್ರು. 

Yogaraj Bhat direct sandalwood movie 'Sarvajanikaralli Vinanthi'
Author
Bengaluru, First Published Oct 4, 2018, 3:17 PM IST
  • Facebook
  • Twitter
  • Whatsapp

ಬೆಂಗಳೂರು (ಅ. 04): ಪ್ರಯಾಣಿಕರ ಗಮನಕ್ಕೆ, ಮುಂದಿನ ಬದಲಾವಣೆ, ಒಂದು ಸಣ್ಣ ಬ್ರೇಕ್‌ನ ನಂತರ -ಹೀಗೆ ಉದ್ದ ಮತ್ತು ಯೂನಿಕ್ ಟೈಟಲ್‌ಗಳ ಜತೆಗೆ ‘ಸಾರ್ವಜನಿಕರಲ್ಲಿ ವಿನಂತಿ’ ಎನ್ನುವ ಹೆಸರು ಸೇರಿಕೊಳ್ಳುತ್ತಿದೆ.

ಈ ಹೆಸರಿನಲ್ಲೊಂದು ಸಿನಿಮಾ ತಯಾರಾಗಿದ್ದು, ಇದರ ಮೋಷನ್ ಪೋಸ್ಟರ್ ಅನ್ನು ನಿರ್ದೇಶಕ ಯೋಗರಾಜ್ ಭಟ್ ಬಿಡುಗಡೆ ಮಾಡಿದ್ದಾರೆ. ಚಿತ್ರದ ನಿರ್ದೇಶಕರು ಕೃಪಾ ಸಾಗರ್. ಚಿತ್ರದ ನಾಯಕನಾಗಿ ಮದನ್‌ರಾಜ್, ನಾಯಕಿಯಾಗಿ ಅಮೃತಾ ಕೆ ಹಾಗೂ ರಮೇಶ್ ಪಂಡಿತ್, ಮಂಡ್ಯ ರಮೇಶ್, ನಾಗೇಶ್ ಮಯ್ಯಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ನಟಿಸಿದ್ದಾರೆ.

ಅಪರಾಧಕ್ಕೆ ಕಡಿವಾಣ ಹಾಕುವ ಕತೆಯಲ್ಲಿ ಕೊಲೆಗಡುಕರು, ಕಳ್ಳತನ ಮಾಡುವವರು ಮಾತ್ರ ಕ್ರಿಮಿನಲ್ಸ್ ಆಗಿರುವುದಿಲ್ಲ. ನಮ್ಮ ಎದುರು ವಿನಯದಿಂದ ವರ್ತಿಸುತ್ತಾ, ಬೆನ್ನ ಹಿಂದೆ ಮೋಸ ಮಾಡುವವರು ನಿಜವಾದ ಅಪರಾಧಿಗಳು ಆಗಿರುತ್ತಾರೆ. ಇಂತಹವರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಸಂದೇಶ ಹೇಳುವ ಸಿನಿಮಾ ಇದು.

Follow Us:
Download App:
  • android
  • ios