ರಾಜ್ಯಾದ್ಯಕ್ಷ ಬಿಎಸ್​​ವೈ, ಕೇಂದ್ರ ಸಚಿವರಾದ ಅನಂತ್​ ಕುಮಾರ್​​, ಸದಾನಂದ ಗೌಡ, ಆರ್​​ ಅಶೋಕ್​​, ಜಗದೀಶ್​ ಶೆಟ್ಟರ್​ , ಆರ್​ ಅಶೋಕ್​ ಸೇರಿ ಹಲವು ಬಿಜೆಪಿ ಮುಖಂಡರಿಗೆ ......

ರಾಕಿಂಗ್​ ಸ್ಟಾರ್​​ ಯಶ್ ಇಂದು ಬಿಜೆಪಿ ಕಚೇರಿಗೆ ಆಗಮಿಸಿ ರಾಜ್ಯ ಬಿಜೆಪಿ ನಾಯಕರನ್ನು ತಮ್ಮ ಮದುವೆ ಆಮಂತ್ರಣ ನೀಡಿದ್ರು. ರಾಜ್ಯಾದ್ಯಕ್ಷ ಬಿಎಸ್​​ವೈ, ಕೇಂದ್ರ ಸಚಿವರಾದ ಅನಂತ್​ ಕುಮಾರ್​​, ಸದಾನಂದ ಗೌಡ, ಆರ್​​ ಅಶೋಕ್​​, ಜಗದೀಶ್​ ಶೆಟ್ಟರ್​ , ಆರ್​ ಅಶೋಕ್​ ಸೇರಿ ಹಲವು ಬಿಜೆಪಿ ಮುಖಂಡರಿಗೆ ವಿವಾಹ ಆಮಂತ್ರಣ ಪತ್ರಿಕೆ ನೀಡಿದರು. ವಿಶೇಷ ಅಂದ್ರ, ಆಮಂತ್ರಣ ಪತ್ರಿಕೆಯ ಜೊತೆಗೆ ಒಂದು ಸಸಿ ನೀಡುವ ಮೂಲಕ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ನಾಯಕರ ಮನೆಗಳಿಗೆ ಖುದ್ದಾಗಿ ಹೋಗುವುದನ್ನು ಬಿಟ್ಟು ಕಚೇರಿಗೆ ಆಗಮಿಸಿ ತಮ್ಮ ಕೆಲಸವನ್ನು ಸುಲಭ ಮಾಡಿಕೊಂಡು ಬಿಟ್ರು.