ಡಿಸೆಂಬರ್​ನಲ್ಲಿ ನಟ ಯಶ್​ -ರಾಧಿಕಾ ಮದುವೆ ನಡೆಯಲಿದೆ

ಸ್ಯಾಂಡಲ್​ವುಡ್​ನ ನಟ ಯಶ್​ ಹಾಗೂ ನಟಿ ರಾಧಿಕಾ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿಗೆ ಇಂದು ರಾಮನಗರದಲ್ಲಿ ನಟ ಯಶ್​ ನೀಡಿದ್ದಾರೆ. ಬೆಳಿಗ್ಗೆ ಆದಿಚುಂಚನಗಿರಿ ಮಠದ ರಾಮನಗರದ ಶಾಖಾ ಮಠಕ್ಕೆ ನಟ ಯಶ್​ ಭೇಟಿ ನೀಡಿದ್ರು. ತಮ್ಮ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ನಟ ಯಶ ಸಸಿ ನೆಡುವ ಮೂಲಕ ನಿರ್ಮಲಾನಂದ ಶ್ರೀಗಳಿಗೆ ನೀಡಿದರು . ನಂತರ ಕೆಲ ಕಾಲ ಮಠದಲ್ಲಿನ ಅಂಧ ಮಕ್ಕಳ ಜೊತೆ ಯಶ್​ ಕಾಲ ಕಳೆದರು . ಡಿಸೆಂಬರ್​ನಲ್ಲಿ ನಟ ಯಶ್​ -ರಾಧಿಕಾ ಮದುವೆ ನಡೆಯಲಿದೆ