ಗಡ್ಡ ತೆಗೆಯಲು ರೆಡಿಯಾದ ರಾಕಿಂಗ್ ಸ್ಟಾರ್ ಯಶ್

Yash completes shoot for KGF; starts dubbing for it
Highlights

ರಾಂಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಪ್ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಹೀಗಾಗಿ ಯಶ್ ಹಲವು ದಿನಗಳಿಂದ ಬಿಟ್ಟಿದ್ದ ಗಡ್ಡ ತೆಗೆಯಲು ಸಜ್ಜಾಗಿದ್ದಾರೆ.

ಬೆಂಗಳೂರು (ಮೇ.29): ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಯಾವಾಗ ಗಡ್ಡ ತೆಗೆಯುತ್ತಾರೆ? ಯಶ್ ಅಭಿನಯದ ಕೆಜಿಎಫ್ ಚಿತ್ರದ ಶೂಟಿಂಗ್ ಯಾವಾಗ ಮುಗಿಯುತ್ತೆ ಅಂತಾ ಅಭಿಮಾನಿಗಳು ಕಾಯುತ್ತಿದ್ರು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಯಶ್ ಅಭಿನಯದ ಕೆಜಿಎಪ್ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ. ಹೀಗಾಗಿ ಚಿತ್ರಕ್ಕಾಗಿ ಹಲವು ದಿನಗಳಿಂದ ಬಿಟ್ಟಿದ್ದ ಗಡ್ಡ ತೆಗೆಯಲು ಯಶ್ ಸಜ್ಜಾಗಿದ್ದಾರೆ. ಇದೀಗ ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ನಿರತವಾಗಿದೆ. ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ತೊಡಗಿರುವ ಯಶ್, ಇನ್ನೆರಡು ವಾರದಲ್ಲಿ ಗಡ್ಡ ತೆಗೆಯಲಿದ್ದಾರೆ ಅನ್ನೋ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬರುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಪ್ ಶೂಟಿಂಗ್ ಶುರುವಾಗಿ ವರ್ಷಗಳೇ ಉರುಳಿದೆ. ಬಹುದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಶುರುಮಾಡಿರುವ ಚಿತ್ರ ತಂಡ, ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡೋ ವಿಶ್ವಾಸ ವ್ಯಕ್ತಪಡಿಸಿದೆ. ಯಶ್ ಅವರ ವಿಭಿನ್ನ ಗೆಟಪ್ ಹಾಗು ಚಿತ್ರದ ಪೋಸ್ಟರ್‌ಗಳು ಅಭಿಮಾನಿಗಳ ಕುತೂಹಲನ್ನ ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಕೆಜಿಎಪ್ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.
 

loader