ಮುಂಬೈ(ಅ.17): ಬಾಲಿವುಡ್ ಬಿಟ್ಟು ಹಾಲಿವುಡ್ ಅಂಗಳದಲ್ಲಿ ಬಿಡುಬಿಟ್ಟಿರುವ ದೀಪಿಕಾ ಪಡುಕೋಣೆ ಅಭಿನಯದ ಟ್ರಿಪಲ್ ಏಕ್ಸ್ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದ್ದು, ಇದರಲ್ಲಿ ದೀಪಿಕಾ ಹವಾ ಜೋರಾಗಿದೆ. 

ಚಿತ್ರದಲ್ಲಿ ದೀಪಿಕಾ ಭರ್ಜರಿ ಆಕ್ಷನ್ ಮಾಡಿದ್ದು, ವಾನ್ ಡೀಸಲ್ ಗೆ ಎದುರಾಗಿ ಖಡಕ್ ಡೈಲಾಗ್ ಹೊಡೆಯುವ ಮೂಲಕ ಮಿಂಚಿದ್ದಾರೆ. ಈ ಚಿತ್ರದ ಮೂಲಕ ದೀಪಿಕಾಗೆ ಹಾಲಿವುಡ್ ನಲ್ಲಿ ಮತಷ್ಟು ಅವಕಾಶಗಳು ಹುಡುಕಿಕೊಂಡು ಬರಲಿದೆ ಎನ್ನವುದರಲ್ಲಿ ಯಾವುದೇ ಸಂಶಯವಿಲ್ಲ.