ಬೆಂಗಳೂರು : ಪ್ರಿಯಾ ಪ್ರಕಾಶ್ ವಾರಿಯರ್’ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹೈದ್ರಾಬಾದ್ ಮೂಲದ 2 ಪಕ್ಷಗಳು ಪ್ರಿಯಾ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಶಾಲಾ ಮಕ್ಕಳಿಬ್ಬರು ಕಣ್ ಸನ್ನೆ ಮೂಲಕ ಇಬ್ಬರು ಮಾತನಾಡಿಕೊಳ್ಳುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ ಮುಸ್ಲಿಂ ಸಾಂಪ್ರದಾಯಿಕತೆಗೆ ಸಂಪೂರ್ಣ ವಿರುದ್ಧವಾದುದಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನವೇ ಚಿತ್ರತಂಡದ ವಿರುದ್ಧ ಸುಪ್ರೀಂಕೋರ್ಟ್ ಪ್ರಕರಣವೊಂದರ ವಿಚಾರಣೆಯನ್ನು ಕಾಯ್ದಿರಿಸಿದೆ.

ಪ್ರಿಯಾ ಪ್ರಕಾಶ್ ವಾರಿಯರ್ ಹಾಗೂ ರೋಶನ್ ಅಭಿನಯದ ಒರು ಅಡರ್ ಲವ್ ಚಿತ್ರದ ಮಾಣಿಕ್ಯ ಮಲರೈ ಪುವ್ವಿ ಹಾಡಿನಲ್ಲಿ ಮುಸ್ಲಿಂ ಭಾವನೆಗಳಿಗೆ ಹಾಡಿನಲ್ಲಿ ಧಕ್ಕೆ ತರಲಾಗಿದೆ ಎಂದು ಆರೋಪ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಪ್ರಿಯಾ ಚಿತ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಲಾಗಿದೆ.