ಅಂಬರೀಶ್ ಪುತ್ರ ಅಭಿಷೇಕ್ ಮೊದಲ ಚಿತ್ರಕ್ಕೆ ನಾಯಕಿ ಯಾರು..?

First Published 14, May 2018, 4:08 PM IST
Who will romance Abishek Ambareesh in his debut film?
Highlights

ಹಿರಿಯ ನಟ ಅಂಬರೀಶ್ ಪುತ್ರ ಪುತ್ರ ಅಭಿಷೇಕ್ ಅವರ  ಮೊದಲ ಚಿತ್ರಕ್ಕಾಗಿ ಫೊಟೊ ಶೂಟ್ ಮಾಡಲಾಗಿದೆ. ಪ್ರಸಿದ್ಧ ಸಿನಿಮಾಟೋಗ್ರಾಫರ್ ಭುವನ್ ಗೌಡ ಅವರಿಂದ ಚಿತ್ರ ಫೊಟೊ ಶೂಟ್ ಮಾಡಲಾಗಿದೆ. ಆದರೆ ಈ ಚಿತ್ರಕ್ಕೆ ನಾಯಕಿ ಯಾಋಉ ಎನ್ನುವುದು ಮಾತ್ರ ಎಲ್ಲರಿಗೂ ಕಾಡುತ್ತಿರುವಂತಹ ಕುತೂಹಲವಾಗಿದೆ. 
 

ಬೆಂಗಳೂರು [ಮೇ.14] : ಹಿರಿಯ ನಟ ಅಂಬರೀಶ್ ಪುತ್ರ ಪುತ್ರ ಅಭಿಷೇಕ್ ಅವರ  ಮೊದಲ ಚಿತ್ರಕ್ಕಾಗಿ ಫೊಟೊ ಶೂಟ್ ಮಾಡಲಾಗಿದೆ. ಪ್ರಸಿದ್ಧ ಸಿನಿಮಾಟೋಗ್ರಾಫರ್ ಭುವನ್ ಗೌಡ ಅವರಿಂದ ಚಿತ್ರ ಫೊಟೊ ಶೂಟ್ ಮಾಡಲಾಗಿದೆ. 

ಅಲ್ಲದೇ ಈಗಾಗಲೇ ಈ ಚಿತ್ರಕ್ಕೆ ಅಮರ್ ಎಂದು ಹೆಸರನ್ನು ಇಡಲಾಗಿದೆ. ಅಂಬರೀಶ್ ಪುತ್ರ ಅಭಿಷೇಕ್ ಚಿತ್ರಕ್ಕಾಗಿ ಸಂಪೂರ್ಣ ಸ್ಯಾಂಡಲ್ ವುಡ್ ಕಾಯುತ್ತಿದೆ.  

ಪ್ರಸಿದ್ಧ ನಿರ್ದೇಶಕ ನಾಗಶೇಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು,  ಜೂನ್ ವೇಳೆಗೆ ಈ ಚಿತ್ರದ ಚಿತ್ರೀಕರಣವನ್ನು ಆರಂಭ ಮಾಡಲಾಗುತ್ತದೆ.  ಆದರೆ ಈ ಚಿತ್ರಕ್ಕಿನ್ನೂ ನಾಯಕ ನಟಿಯ  ಆಯ್ಕೆ  ಮಾಡಲಾಗಿಲ್ಲ.

ಇನ್ನುಈ  ಅಭಿಷೇಕ್ ಜೊತೆ ಯಾವ ನಟಿ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನುವ ವಿಚಾರ ಸಸ್ಪೆನ್ಸ್ ಆಗಿಯೇ ಉಳಿದಿದೆ. ಆದರೆ ಕನ್ನಡ ಅಥವಾ ಪರಭಾಷೆಯಿಂದ ಚಿತ್ರಕ್ಕೆ ನಾಯಕ ನಟಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇನ್ನು ತೆಲುಗಿನಿಂದ ಹೀರೋಯಿನ್ ಬರಬಹುದು ಎನ್ನುವ ಗುಸುಗುಸು ಕೂಡ ಕೇಳಿ ಬಂದಿದೆ.  

ಆದರೆ  ಈ ಬಗ್ಗೆ ಮಾತನಾಡಿರುವ ನಿರ್ದೇಶಕ ನಾಗಶೇಖರ್ ಮಾತ್ರ ಇನ್ನೂ ಕೂಡ ಈ ಚಿತ್ರಕ್ಕೆ ನಟಿಯನ್ನು ಫೈನಲ್ ಮಾಡಿಲ್ಲ ಎಂದು ಹೇಳಿದ್ದಾರೆ. 

loader