ಮುಂಬೈ(ಡಿ.20): ಬಾಲಿವುಡ್​ನ ಅತಿ ಶ್ರೀಮಂತ ನಟರು ಯಾರು? ಈ ಪ್ರಶ್ನೆಗೆ ಯಾರಾದರೂ ಹೇಳ್ತಾರೆ ಅದು ಒಂದು ಶಾರೂಖ್ ಮತ್ತೊಂದು ಸಲ್ಮಾನ್ ಖಾನ್ .  ಇವರಿಬ್ಬರಲ್ಲದೆ ಹೋದರೆ ಅದು ಬಿಗ್ ಬಿ ಅಮಿತಾಭ್ ಕುಟುಂಬ ಎಂದು.  ಆದರೆ, ಈ ಮೂವರಲ್ಲಿ ನಂಬರ್​ ಒನ್ ಶ್ರೀಮಂತ ಯಾರು ಎಂದರೆ ಸ್ವಲ್ಪ ಯೋಚನೆ ಮಾಡುತ್ತಾರೆ.  ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಹೌದು 2016ರ ನಂ.1 ಬಾಲಿವುಡ್ ಶ್ರೀಮಂತ ನಟ ಯಾರು ಎನ್ನುವ ಬಗ್ಗೆ ಬಾಲಿವುಡ್`​ನ ಪ್ರತಿಷ್ಟಿತ ಮ್ಯಾಗಜಿನ್  ನಡೆಸಿದ ಸಮೀಕ್ಷೆಯಲ್ಲಿ ಈ ಸತ್ಯ ಹೊರಬಿದ್ದಿದೆ. ಈ ಮ್ಯಾಗಜಿನ್​ನಲ್ಲಿ ಶಾರೂಖ್​`ಗಿಂತ ಶ್ರೀಮಂತ ನಟ ಸಲ್ಮಾನ್ ಎನ್ನಲಾಗಿದೆ. ಈ ಮೂಲಕ ಬಾಲಿವುಡ್​ನ 2016ರ ನಂ.1 ಶ್ರೀಮಂತ ನಟ ಸಲ್ಮಾನ್ ಎಂದು ಘೋಷಿಸಿದೆ.  ಶಾರೂಖಾನ್​ ಸಿನಿಮಾ ಜಾಹೀರಾತುಗಳಿಗಿಂತ ಹೆಚ್ಚು ಸಂಪಾದನೆ ಸಲ್ಮಾನ್ ಈ ವರ್ಷ ತಮ್ಮ ಸಿನಿಮಾ ಜಾಹೀರಾಥು ಮತ್ತು ಬಿಗ್ ಬಾಸ್ ನಿಂದ ಗಳಿಸಿದ್ದಾರೆ. ಈ ಮೂಲಕ 2016ರಲ್ಲಿ ಶಾರೂಖ್`​ರನ್ನ ಹಿಂದಿಕ್ಕಿದ್ದಾರೆ ಸಲ್ಮಾನ್ ಖಾನ್