ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಆಡಿದ ಮಾತು ಈಗ ಎಲ್ಲರಿಗೂ ಕುತೂಹಲ ಮೂಡಿಸುವಂತಿದೆ.
ಬೆಂಗಳೂರು(ಜ. 07): ಈ ಸೀಸನ್’ನ ಕನ್ನಡ ಬಿಗ್’ಬಾಸ್ ಮುಗಿಯಲು ಕೆಲವೇ ದಿನಗಳು ಉಳಿದಿವೆ. ಉಳಿದುಕೊಂಡಿರುವ ಏಳು ಸ್ಪರ್ಧಿಗಳ ಪೈಕಿ ಭುವನ್ ಅಥವಾ ಪ್ರಥಮ್ ಈ ವಾರ ಔಟ್ ಆಗಬಹುದು ಎಂಬ ಸುದ್ದಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಆಡಿದ ಮಾತು ಈಗ ಎಲ್ಲರಿಗೂ ಕುತೂಹಲ ಮೂಡಿಸುವಂತಿದೆ.
ಪ್ರಥಮ್ ಹೇಳಿದ್ದೇನು?
ಕೀರ್ತಿಕುಮಾರ್ ಜೊತೆ ಮಾತನಾಡುವ ವೇಳೆ ಪ್ರಥಮ್ ಅವರು ಈ ಬಾರಿ ಫೈನಲ್’ಗೆ ಹೋಗುವ ಮೂವರು ಸ್ಪರ್ಧಿಗಳ ಹೆಸರನ್ನು ಹೇಳಿದ್ದರು. ಕೀರ್ತಿ ಈ ಬಾರಿ ಫೈನಲ್’ಗೆ ಹೋಗೋದು ಗ್ಯಾರಂಟಿ ಎಂದು ಪ್ರಥಮ್ ತಿಳಿಸಿದ್ದರು. ಕೆಆರ್’ಎಂ – ಕೀರ್ತಿ, ರೇಖಾ ಮತ್ತು ಮಾಳವಿಕಾ ಅವರು ಫೈನಲ್’ಗೆ ಹೋಗುವ ಮೂವರು ವ್ಯಕ್ತಿಗಳು ಎಂದು ಕೀರ್ತಿಗೆ ಪ್ರಥಮ್ ತಿಳಿಸಿದ್ದರು. ತಾನು ಫೈನಲ್’ಗೆ ಹೋಗೋದಿಲ್ಲ. ಮೋಹನ್ ಮತ್ತು ಭುವನ್ ಕೂಡ ಹೋಗೋದಿಲ್ಲ ಎಂದು ಪ್ರಥಮ್ ಖಚಿತವಾಗಿ ಹೇಳಿದ್ದು ಬಹಳಷ್ಟು ವೀಕ್ಷಕರಿಗೆ ಅಚ್ಚರಿ ಮೂಡಿಸಿತ್ತು. ಅಷ್ಟೇ ಅಲ್ಲ, ಕೀರ್ತಿಕುಮಾರ್ ಸೆಕೆಂಡ್ ರನ್ನರ್ ಅಪ್ ಆಗಬಹುದೆಂದೂ ಪ್ರಥಮ್ ಭವಿಷ್ಯ ನುಡಿದರು.
ಪ್ರಥಮ್ ಸುಮ್ಮನೆ ತಲೆಹರಟೆ ಮಾಡುತ್ತಿದ್ದಿರಬಹುದೆಂದುಕೊಂಡವರಿಗೆ ಈ ವಾರ ಅಚ್ಚರಿಯಾಗಬಹುದು. ಮಾಳವಿಕಾ ಸೀಕ್ರೆಟ್ ರೂಮಿಗೆ ಕಳುಹಿಸುತ್ತಿರುವುದು ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ರಂಗೇರಲು ಕಾರಣವಾಗಲಿದೆ. ಪ್ರಥಮ್ ಮಾತನ್ನು ನಂಬುವುದಾದರೆ ರೇಖಾ ಅಥವಾ ಮಾಳವಿಕಾ ಇಬ್ಬರಲ್ಲೊಬ್ಬರು ಈ ಬಾರಿಯ ಬಿಗ್ ಬಾಸ್ ವಿಜೇತರಾಗುವ ಸಾಧ್ಯತೆ ಇದೆ.
