ಕನ್ನಡ ಪ್ರೇಕ್ಷಕ ಕಂಡ ಮೋಹಕ ನಟಿಯರಲ್ಲೊಬ್ಬರಾದ ಮಹಾಲಕ್ಷ್ಮೀ ಬಹುಬೇಡಿಕೆಯಲ್ಲಿದ್ದಾಗಲೇ ಚಿತ್ರರಂಗದಿಮದ ದೂರಕ್ಕೆ ಸರಿದರು. ಅಷ್ಟಕ್ಕೂ ಮಹಾಲಕ್ಷ್ಮೀ ಚಿತ್ರರಂಗದ ಮೇಲೆ ಮುನಿಸಿಕೊಳ್ಳಲು ಕಾರಣವೇನು ಎಂಬುದಕ್ಕೆ ಯಾರ ಬಳಿಯೂ ಸರಿಯಾದ ಉತ್ತರವಿಲ್ಲ. ಕೆಲ ಕಾಲ ತಮಿಳು ಚಿತ್ರರಂಗದಲ್ಲಿದ್ದರು. ಬಳಿಕ ಮದುವೆಯಾದರು, ಎಲ್ಲರಂತೆ ಸಂಸಾರ ಜೀವನ ನಡೆಸಿದರು. ಕೆಲಕಾಲ ಅಮೆರಿಕದಲ್ಲಿದ್ದರು ಎಂಬ ಮಾತುಗಳೂ ಇವೆ. ಇದರ ಜೊತೆಗೆ ಇಲ್ಲಸಲ್ಲದ ವದಂತಿಗಳೂ ಹಬ್ಬಿದ್ದಿದೆ.
ಮಹಾಲಕ್ಷ್ಮೀ.. ಈ ಹೆಸರು ಕೇಳಿದ ಕೂಡಲೇ ನಮಗೆ ಜ್ಞಾಪಕಕ್ಕೆ ಬರುವುದು ದೂರದ ಊರಿಂದ ಹಮ್ಮೀರ ಬಂದ ಜರತಾರಿ ಸೀರೆ ತಂದ ಎಂಬ ಹಾಡು. ಮೋಹಕ ನೋಟ, ಕಣ್ಣಿನಲ್ಲೇ ರಸಿಕರನ್ನ ಕೆರಳಿಸುವ ತಾಕತ್ತು ಇದ್ದ ನಟಿ. ಸ್ವಾಭಿಮಾನ, ಜಯಸಿಂಹ, ಸ್ವಾಭಿಮಾನ, ಮನೆಯಲ್ಲಿ ಇಲಿ ಬೀದಿಯಲ್ಲಿ ಹುಲಿ ಹೀಗೆ ಹತ್ತು ಹಲವು ಹಿಟ್ ಚಿತ್ರಗಳನ್ನ ಕೊಟ್ಟ ನಟಿ ಮಹಾಲಕ್ಷ್ಮೀ.

ಕನ್ನಡ ಪ್ರೇಕ್ಷಕ ಕಂಡ ಮೋಹಕ ನಟಿಯರಲ್ಲೊಬ್ಬರಾದ ಮಹಾಲಕ್ಷ್ಮೀ ಬಹುಬೇಡಿಕೆಯಲ್ಲಿದ್ದಾಗಲೇ ಚಿತ್ರರಂಗದಿಮದ ದೂರಕ್ಕೆ ಸರಿದರು. ಅಷ್ಟಕ್ಕೂ ಮಹಾಲಕ್ಷ್ಮೀ ಚಿತ್ರರಂಗದ ಮೇಲೆ ಮುನಿಸಿಕೊಳ್ಳಲು ಕಾರಣವೇನು ಎಂಬುದಕ್ಕೆ ಯಾರ ಬಳಿಯೂ ಸರಿಯಾದ ಉತ್ತರವಿಲ್ಲ. ಕೆಲ ಕಾಲ ತಮಿಳು ಚಿತ್ರರಂಗದಲ್ಲಿದ್ದರು. ಬಳಿಕ ಮದುವೆಯಾದರು, ಎಲ್ಲರಂತೆ ಸಂಸಾರ ಜೀವನ ನಡೆಸಿದರು. ಕೆಲಕಾಲ ಅಮೆರಿಕದಲ್ಲಿದ್ದರು ಎಂಬ ಮಾತುಗಳೂ ಇವೆ. ಇದರ ಜೊತೆಗೆ ಇಲ್ಲಸಲ್ಲದ ವದಂತಿಗಳೂ ಹಬ್ಬಿದ್ದಿದೆ.
ಇತ್ತೀಚಿನ ಕೆಲ ಮಾಧ್ಯಮಗಳು, ಜಾಲತಾಣಗಳು ಮಾಡಿರುವ ವರದಿಗಳ ಪ್ರಕಾರ ಮಹಾಲಕ್ಷ್ಮೀ ಚೆನ್ನೈನಲ್ಲಿದ್ದಾರೆ ಎನ್ನಲಾಗಿದೆ. ಹಿಂದೂ ಧರ್ಮಕ್ಕೆ ಗುಡ್ ಬೈ ಹೇಳಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ಮಹಾಲಕ್ಷ್ಮೀ ಚೆನ್ನೈನ ಚರ್ಚ್`ವೊಂದರಲ್ಲಿ ಸನ್ಯಾಸಿನಿಯಾಗಿದ್ದಾರೆ ಎನ್ನಲಾಗಿದೆ.