ಮುಂಬೈ[ಫೆ.07]: ಸಲ್ಲಾಪದ ದೃಶ್ಯಗಳು ಹೆಚ್ಚಿವೆ ಎನ್ನುವ ಕಾರಣಕ್ಕಾಗಿ, ಖ್ಯಾತ ನಟ ಬ್ರಾಡ್‌ ಪಿಟ್‌ ಅಭಿನಯಿಸಿದ್ದ ಬಾಲಿವುಡ್‌ನ ಪ್ರಖ್ಯಾತ ಸಿನೆಮಾ ಟ್ರಾಯ್‌ನಲ್ಲಿ ನಟಿಸುವುದರಿಂದ ತಾವು ಹಿಂದೆ ಸರಿದಿದ್ದಾಗಿ ನಟಿ ಐಶ್ವರ್ಯಾ ರೈ ಹೇಳಿದ್ದಾರೆ.

ಸಿನೆಮಾದಲ್ಲಿ ಹೀರೋ ಪಾತ್ರ ನಿರ್ವಹಿಸಿದ ನಟ ಬ್ರಾಡ್‌ ಪಿಟ್‌ ಜೊತೆ ತೀರಾ ಸರಸ-ಸಲ್ಲಾಪದ ಸೀನ್‌ಗಳಿದ್ದವು. ಅವುಗಳ ಪಾತ್ರ ನಿರ್ವಹಿಸುವುದರಿಂದ ಮುಜುಗರವಾಗಬುದಾದ ಆಫರ್‌ ತಿರಸ್ಕರಿಸಿದ್ದೆ ಎಂದು ಐಶ್ವರ್ಯಾ ರೈ ಅವರು ಹೇಳಿಕೊಂಡಿದ್ದಾರೆ ಎಂದು ಬಾಲಿವುಡ್‌ ನ್ಯೂಸ್‌ ಮತ್ತು ಗಾಸಿಪ್‌ ಬಗ್ಗೆ ವರದಿ ಮಾಡುವ ‘ಪಿಂಕ್‌ವಿಲ್ಲಾ’ ವೆಬ್‌ಸೈಟ್‌ ವರದಿ ತಿಳಿಸಿದೆ. ಟ್ರಾಯ್‌ 2004ರಲ್ಲಿ ತೆರೆ ಕಂಡಿತ್ತು.