- ಗಣೇಶ್, ರಶ್ಮಿಕಾ ಅಭಿನಯದ ಚಮಕ್ ಬಿಡುಗಡೆ- ಚಿತ್ರ ಅದ್ಭುತವೆಂದ ರಕ್ಷಿತ್ ಶೆಟ್ಟಿ- ಗಣೇಶ್ ನಟನೆ, ಸಿಂಪಲ್ ಸುನಿ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ನೀಡಿದ ಕಿರಿಕ್ ನಟ.

ಬೆಂಗಳೂರು: ಬಹು ನಿರೀಕ್ಷಿತ 'ಚಮಕ್' ಚಿತ್ರ ಬಿಡುಗಡೆಗೊಂಡಿದೆ. ನಿರೀಕ್ಷೆಯಂತೆ ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 'ಕಿರಿಕ್ ಪಾರ್ಟಿ' ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ರಶ್ಮಿಕಾ, ಅದೇ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಚಿತ್ರದ ಬಗ್ಗೆ ರಕ್ಷಿತ್ ಅಭಿಪ್ರಾಯವೇನು ಎಂಬ ಕುತೂಹಲ ಎಲ್ಲರಿಗೂ ಸಹಜ.

'ರಶ್ಮಿಕಾ ಬೆರಗುಗೊಳಿಸುವಂತೆ ಕಾಣಿಸುತ್ತಿದ್ದು, ಅಭಿನಯವೂ ಚೆನ್ನಾಗಿದೆ,' ಎಂದು ರಕ್ಷಿತ್, ತಮ್ಮ ಫೇಸ್‌ಬುಕ್ ಪುಟದಲ್ಲಿ ಹೇಳಿದ್ದಾರೆ.

ಚಿತ್ರದ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳುವುದಾದರೆ, 'ಅದ್ಭುತ,' ಎಂದ ರಕ್ಷಿತ್, ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸಿಂಪಲ್ ಸುನಿಯವರ ಬೆಸ್ಟ್ ಫಿಲ್ಮ್ ಎಂದೂ ಹೇಳಿರುವ ಕಿರಿಕ್ ನಟ, ಅತ್ಯುತ್ತಮ ಕೌಟುಂಬಿಕ ಮನೋರಂಜನೆ ನೀಡುವ ಈ ಚಿತ್ರವನ್ನು ತಪ್ಪದೇ ನೋಡಿ ಎಂದಿದ್ದಾರೆ.